Shefali Jariwala: ಪತ್ನಿ ಶೆಫಾಲಿ ಅಂತ್ಯ ಸಂಸ್ಕಾರ ನೆರವೇರಿಸಿ ಕಣ್ಣೀರಿಟ್ಟ ಪರಾಗ್ ತ್ಯಾಗಿ; ಇಲ್ಲಿದೆ ಭಾವುಕ ಕ್ಷಣದ ವಿಡಿಯೊ
ಪರಾಗ್ ತ್ಯಾಗಿ ಅವರಿಗೆ ಪತ್ನಿಯ ಅಕಾಲಿಕ ನಿಧನ ದೊಡ್ಡ ಆಘಾತ ಉಂಟು ಮಾಡಿದೆ. ಇದೀಗ ಪಾರಾಗ್ ತ್ಯಾಗಿ ಭಾವುಕರಾಗಿ ಶೆಫಾಲಿ ಜಾರಿವಾಲಾ ಅವರ ಚಿತಾಭಸ್ಮವನ್ನು ಸಮುದ್ರ ದರ್ಪಣ ಮಾಡುತ್ತಿರುವ ದೃಶ್ಯ ಮನಕಲಕುವಂತಿದೆ. ಪತ್ನಿ ಶೆಫಾಲಿ ಅವರ ಚಿತಾಭಸ್ಮವನ್ನು ಹಿಡಿದು ಮುಂಬೈ ಸಮುದ್ರ ತೀರಕ್ಕೆ ಕುಟುಂಬ ಸಮೇತ ತೆರಳಿದ್ದಾರೆ. ಸಮುದ್ರದ ದಡದಲ್ಲಿ ದೇವರನ್ನು ಸ್ತುತಿಸಿ ಆತ್ಮಕ್ಕೆ ಶಾಂತಿ ಕೋರಿ ಶೆಫಾಲಿ ಕುಟುಂಬದವರು ನಮಸ್ಕರಿಸುತ್ತಿರುವ ದೃಶ್ಯ ವಿಡಿಯೊದಲ್ಲಿ ಕಾಣಬಹುದು.

Parag Tyagi and Shefali Jariwala

ಮುಂಬೈ: ಬಾಲಿವುಡ್ ನಟಿ, ಬಹುಭಾಷಾ ಕಲಾವಿದೆ ಶೆಫಾಲಿ ಜರಿವಾಲಾ ಅವರಿಗೆ (Shefali Jariwala) ಜೂನ್ 27ರಂದು ಹೃದಯಾಘಾತ ಸಂಭವಿಸಿದೆ. ಅವರ ಅಕಾಲಿಕ ನಿಧನದ ಸುದ್ದಿ ಕೇಳಿ ಇಡೀ ಚಿತ್ರರಂಗವೇ ಕಂಬನಿ ಮಿಡಿದಿದೆ. ಅವರ ಅಂತ್ಯಕ್ರಿಯೆಯನ್ನು ಶನಿವಾರ ಸಂಜೆ ಮುಂಬೈಯಲ್ಲಿ ನಡೆದಿದ್ದು ಕುಟುಂಬ ಸದಸ್ಯರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ನೆರವೇರಿಸಲಾಗಿದೆ. ಅವರ ಪತಿ ಪರಾಗ್ ತ್ಯಾಗಿ (Parag Tyagi) ಧಾರ್ಮಿಕ ವಿಧಿವಿಧಾನಗಳ ಮೂಲಕ ಅಂತ್ಯಕ್ರಿಯೆ ನೆರವೇರಿಸಿದ್ದು, ಪತ್ನಿಯ ಚಿತಾಭಸ್ಮವನ್ನು ಭಾವುಕರಾಗಿ ಸಮುದ್ರ ದರ್ಪಣ ಮಾಡುತ್ತಿರುವ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.
ಪರಾಗ್ ತ್ಯಾಗಿ ಅವರಿಗೆ ಪತ್ನಿಯ ಅಕಾಲಿಕ ನಿಧನ ದೊಡ್ಡ ಆಘಾತ ಉಂಟು ಮಾಡಿದೆ. ಪರಾಗ್ ತ್ಯಾಗಿ ಭಾವುಕರಾಗಿ ಶೆಫಾಲಿ ಜಾರಿವಾಲಾ ಅವರ ಚಿತಾಭಸ್ಮವನ್ನು ಸಮುದ್ರ ದರ್ಪಣ ಮಾಡು ತ್ತಿರುವ ದೃಶ್ಯ ಮನಕಲಕುವಂತಿದೆ. ಪತ್ನಿ ಶೆಫಾಲಿ ಅವರ ಚಿತಾಭಸ್ಮವನ್ನು ಹಿಡಿದು ಮುಂಬೈ ಸಮುದ್ರ ತೀರಕ್ಕೆ ಕುಟುಂಬ ಸಮೇತ ತೆರಳಿದ್ದಾರೆ. ಸಮುದ್ರದ ದಡದಲ್ಲಿ ದೇವರನ್ನು ಸ್ತುತಿಸಿ ಆತ್ಮಕ್ಕೆ ಶಾಂತಿ ಕೋರಿ ಶೆಫಾಲಿ ಕುಟುಂಬದವರು ನಮಸ್ಕರಿಸುತ್ತಿರುವ ದೃಶ್ಯ ವಿಡಿಯೊದಲ್ಲಿ ಕಾಣಬಹುದು.
ಶೆಫಾಲಿ ಜರಿವಾಲಾ ನಿಧನದ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಆರಂಭದಲ್ಲಿ ಹೃದ ಯಾಘಾತ ಎಂದು ಹೇಳಲಾಗಿದ್ದರೂ, ಪೊಲೀಸರು ಇದೀಗ ತನಿಖೆ ಆರಂಭಿಸಿದ್ದಾರೆ. ಈಗಾಗಲೇ ನಟಿಯ ಮರಣೋತ್ತರ ಪರೀಕ್ಷೆಯನ್ನು ಕೂಪರ್ ಆಸ್ಪತ್ರೆಯಲ್ಲಿ ನಡೆಸಲಾಗಿದ್ದು ವರದಿಯನ್ನು 5 ವೈದ್ಯರ ತಂಡ ಸಿದ್ಧಪಡಿಸುತ್ತಿದೆ. ಅದರ ಪ್ರಾಥಮಿಕ ವರದಿ ಜೂನ್ 30ಕ್ಕೆ ಬರುವ ಸಾಧ್ಯತೆಯಿದೆ ಎಂದು ಅಂಬೋಲಿ ಪೊಲೀಸರು ತಿಳಿಸಿದ್ದಾರೆ.
2015ರಲ್ಲಿ ಪರಾಗ್ ತ್ಯಾಗಿ ಅವರನ್ನು ಶೆಫಾಲಿ ಜರಿವಾಲಾ ವಿವಾಹವಾಗಿದ್ದರು. ಇದಕ್ಕೂ ಮುನ್ನ ಹರ್ಮೀತ್ ಸಿಂಗ್ ಅವರನ್ನು ಮದುವೆಯಾಗಿ ಶೆಫಾಲಿ ಜರಿವಾಲಾ ವಿಚ್ಛೇದನ ಪಡೆದಿದ್ದರು. ಪತಿ ಪರಾಗ್ ತ್ಯಾಗಿ ಜತೆಗೆ ‘ನಚ್ ಬಲಿಯೇ 5’ ಹಾಗೂ ‘ನಚ್ ಬಲಿಯೇ 7’ ಡ್ಯಾನ್ಸ್ ರಿಯಾಲಿಟಿ ಶೋಗಳಲ್ಲಿ ಇವರು ಸ್ಪರ್ಧಿಸಿದ್ದರು. ಶೆಫಾಲಿ ಆಲ್ಬಮ್ ಸಾಂಗ್, ಸಿನಿಮಾಗಳಲ್ಲಿ ಕೂಡ ಹೆಜ್ಜೆ ಹಾಕಿದ್ದಾರೆ. ʼಕಾಂತಾಲಗಾʼ ರೀಮಿಕ್ಸ್ ವಿಡಿಯೊ ಮೂಲಕ ಅವರು ಹೆಚ್ಚು ಜನಪ್ರಿಯರಾಗಿದ್ದರು.