ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Rishab Shetty: ಕಾಮಿಡಿ ಕಿಲಾಡಿಗಳು ಖ್ಯಾತಿಯ ರಾಕೇಶ್​ ವಿಧಿವಶ- ನಟ ರಿಷಬ್ ಶೆಟ್ಟಿ ಭಾವುಕ ಪೋಸ್ಟ್​

ಹಾಸ್ಯ ನಟ ರಾಕೇಶ್ ಪೂಜಾರಿ ಅವರ ಅಕಾಲಿಕ ನಿಧನವು ಕನ್ನಡ ಚಿತ್ರರಂಗಕ್ಕೆ ಅಘಾತವನ್ನುಂಟು ಮಾಡಿದೆ. ಹಲವು ಸಿನಿಮಾ ಗಳಲ್ಲಿ ನಟಿಸಿದ್ದ ರಾಕೇಶ್‌ ಕಾಂತಾರ -1ʼ ಸಿನಿಮಾದಲ್ಲೂ ನಟಿಸುತ್ತಿದ್ದರು. ಇದೀಗ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ (Rishab Shetty) ರಾಕೇಶ್ ನಿಧನಕ್ಕೆ ಕಂಬನಿ ಮಿಡಿದಿದ್ದು, ಈ ಬಗ್ಗೆ ಭಾವುಕರಾಗಿ ಟ್ವೀಟ್​ ಮಾಡಿದ್ದಾರೆ. ನೀನು ನನ್ನ ಮನಸ್ಸಿನಲ್ಲಿ ಎಂದೆಂದಿಗೂ ಅದ್ಭುತ ಕಲಾವಿದ, ಕಾಂತಾರ ಚಾಪ್ಟರ್ 1’ರಲ್ಲಿ ನಿನ್ನ ಪಾತ್ರ ಎಂದೆಂದಿಗೂ ಶಾಶ್ವತ, ಎಂದು ರಾಕೇಶ್ ನಿಧನಕ್ಕೆ ರಿಷಬ್ ಶೆಟ್ಟಿ ಸಂತಾಪ ಸೂಚಿಸಿದ್ದಾರೆ.

ರಾಕೇಶ್ ಪೂಜಾರಿ ನಿಧನ; ನಟ ರಿಷಭ್ ಶೆಟ್ಟಿ ಫಸ್ಟ್‌ ರಿಯಾಕ್ಷನ್‌!

Profile Pushpa Kumari May 13, 2025 4:13 PM

ಬೆಂಗಳೂರು: ಕಾಮಿಡಿ ಕಿಲಾಡಿಗಳು ಖ್ಯಾತಿಯ ಹಾಸ್ಯ ನಟ ರಾಕೇಶ್ ಪೂಜಾರಿ (Rakesh Poojary) ಅವರ ಅಕಾಲಿಕ ನಿಧನವು ಕನ್ನಡ ಚಿತ್ರರಂಗಕ್ಕೆ ಅಘಾತ ಉಂಟು ಮಾಡಿದೆ. ಹಲವು ಸಿನಿಮಾಗಳಲ್ಲಿ ನಟಿಸಿದ್ದ ರಾಕೇಶ್‌ ಕಾಂತಾರ -1ʼ ಸಿನಿಮಾದಲ್ಲೂ ನಟಿಸುತ್ತಿದ್ದರು. ಇದೀಗ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ (Rishab Shetty) ರಾಕೇಶ್ ನಿಧನಕ್ಕೆ ಕಂಬನಿ ಮಿಡಿದಿದ್ದು ಈ ಬಗ್ಗೆ ಭಾವುಕರಾಗಿ ಟ್ವೀಟ್​ ಮಾಡಿದ್ದಾರೆ. ನೀನು ನನ್ನ ಮನಸ್ಸಿನಲ್ಲಿ ಎಂದೆಂದಿಗೂ ಅದ್ಭುತ ಕಲಾವಿದ, ಕಾಂತಾರ ಚಾಪ್ಟರ್ 1’ರಲ್ಲಿ ನಿನ್ನ ಪಾತ್ರ ಎಂದೆಂದಿಗೂ ಶಾಶ್ವತ, ಎಂದು ರಾಕೇಶ್ ನಿಧನಕ್ಕೆ ರಿಷಬ್ ಶೆಟ್ಟಿ ಸಂತಾಪ ಸೂಚಿಸಿದ್ದಾರೆ.

ಈಗಾಗಲೇ ಕಾಮಿಡಿ ಕಿಲಾಡಿಗಳು ತಂಡ ಸೇರಿದಂತೆ ಹಲವಾರು ಮಂದಿ ರಾಕೇಶ್​ ಜೊತೆಗಿನ ಒಡನಾಟವನ್ನು ಸೋಷಿ ಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದೀಗ ರಿಷಬ್ ಶೆಟ್ಟಿ, ಭಾವುಕರಾಗಿ ಪೋಸ್ಟ್ ವೊಂದನ್ನು ಶೇರ್ ಮಾಡಿದ್ದಾರೆ. ನೀನು ನನ್ನ ಮನಸ್ಸಿನಲ್ಲಿ ಎಂದೆಂದಿಗೂ ಅದ್ಭುತ ಕಲಾವಿದ. ಕಾಂತಾರದಲ್ಲಿ ನಿನ್ನ ಪಾತ್ರ ಮತ್ತು ಅದನ್ನು ನೀನು ನಿರ್ವಹಿಸು ವಾಗ ನಿನ್ನ ಮುಖದ ನಗು ನನ್ನ ಕಣ್ಣಲ್ಲಿ ಎಂದೆಂದಿಗೂ ಶಾಶ್ವತ. ಕಲಾವಿದರ ಕುಟುಂಬಕ್ಕೆ ಇದೊಂದು ತುಂಬಲಾರದ ನಷ್ಟ. ಹೋಗಿ ಬಾ ಗೆಳೆಯ. ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ. ನಿನ್ನ ಕುಟುಂಬದವರಿಗೆ ಆ ದೇವರು ಸಹಿಸಿಕೊಳ್ಳುವ ಶಕ್ತಿ ಕೊಡಲಿ'  ಎಂದು ಬರೆದು ಕೊಂಡಿದ್ದಾರೆ.



ಇನ್ನು ಕಾಂತಾರ ಚಿತ್ರ ನಿರ್ಮಿಸುತ್ತಿರುವ ಹೊಂಬಾಳೆ ಫಿಲ್ಮ್ಸ್​ಕೂಡ ಈ ಬಗ್ಗೆ ಸಂತಾಪ ಸೂಚಿಸಿದೆ. ನಟ ರಾಕೇಶ್ ಪೂಜಾರಿ ನಿಧನಕ್ಕೆ ತೀವ್ರ ಸಂತಾಪಗಳು. ಈ ನೋವನ್ನು ಭರಿಸುವ ಶಕ್ತಿ ಕುಟುಂಬಸ್ಥರಿಗೆ ಹಾಗೂ ಹಿತೈಷಿಗಳಿಗೆ ದೇವರು ಕರುಣಿಸಲಿ ಎಂದು ಪ್ರಾರ್ಥಿಸುತ್ತೇವೆ. ಈ ದುಃಖದ ಸಮಯದಲ್ಲಿ ನಾವೆಲ್ಲರೂ ಅವರ ಕುಟುಂಬದೊಂದಿಗೆ ಇದ್ದೇವೆ ಎಂದು ಎಕ್ಸ್ ಖಾತೆ ಯಲ್ಲಿ ಬರೆದುಕೊಳ್ಳಲಾಗಿದೆ. ರಾಕೇಶ್‌ ಪೂಜಾರಿ ಕಳೆದ ಏಪ್ರಿಲ್‌ ಕೊನೆಯ ವಾರದಲ್ಲಿ ‘ಕಾಂತಾರ -1 ಸಿನಿಮಾ ಚಿತ್ರೀಕರಣ ದಲ್ಲಿ ಭಾಗಿಯಾಗಿ, ಸಣ್ಣ ಪಾತ್ರದಲ್ಲಿ ನಟಿಸಿದ್ದರು.

ಇದನ್ನು ಓದಿ: Rakesh Poojary: ಹೃದಯಾಘಾತಕ್ಕೂ ಮುನ್ನ ರಾಕೇಶ್ ಅವರ ಕೊನೆಯ ಕ್ಷಣದ ವಿಡಿಯೋ

ಮೇ 12ರಂದು ರಾಕೇಶ್ ಉಡುಪಿಯಲ್ಲಿ ಸ್ನೇಹಿತರ ಮೆಹಂದಿ ಕಾರ್ಯಕ್ರಮದಲ್ಲಿ ಕುಸಿದು ಬಿದ್ದು ಹೃದಯಾಘಾತದಿಂದ ನಿಧನರಾದರು.ಕಾಮಿಡಿ ಕಿಲಾಡಿಗಳು' ಸೀಸನ್ 3ರ ವಿನ್ನರ್ ಎನಿಸಿಕೊಂಡಿದ್ದ ರಾಕೇಶ್ ಪೂಜಾರಿ ಸುದೀಪ್ ನಟನೆಯ 'ಪೈಲ್ವಾನ್' ಸಿನಿಮಾದಲ್ಲಿ ನಟಿಸಿದ್ದರು. ಆನಂತರ ಸ್ಪೂಕಿ ಕಾಲೇಜ್, ಕೆರೆಬೇಟೆ, ಕರಟಕ ದಮನಕ, ಇದು ಎಂಥಾ ಲೋಕ ವಯ್ಯ ಮುಂತಾದ ಸಿನಿಮಾಗಳಲ್ಲಿ ನಟಿಸಿ ಖ್ಯಾತಿ ಗಳಿಸಿದ್ದರು‌.ಆ ಬಳಿಕ 'ಹಿಟ್ಲರ್ ಕಲ್ಯಾಣ' ಧಾರಾವಾಹಿಯಲ್ಲೂ ರಾಕೇಶ್ ಪೂಜಾರಿ ಪಾತ್ರ ವಹಿಸಿದ್ದರು‌. ಸದ್ಯ ನಟ ರಾಕೇಶ್ ಪೂಜಾರಿ ನಿಧನದ ಸುದ್ದಿ ಕೇಳಿ ಚಿತ್ರತಂಡವೇ ಕಂಬನಿ ಮಿಡಿದಿದೆ.