ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

CBSE 10th Result 2025: ಸಿಬಿಎಸ್‌ಇ 10ನೇ ತರಗತಿ ಫಲಿತಾಂಶ ಪ್ರಕಟ; ಬಾಲಕಿಯರೇ ಮೇಲುಗೈ, ಬೆಂಗಳೂರಿಗೆ 2 ನೇ ಸ್ಥಾನ

2025ನೇ ಸಾಲಿನ CBSE (ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ) 12ನೇ ತರಗತಿಯ ಫಲಿತಾಂಶ ಬಿಡುಗಡೆ ಮಾಡಿದ ಬೆನ್ನಲ್ಲೇ ಇದೀಗ 10 ನೇ ತರಗತಿಯ ಫಲಿತಾಂಶವನ್ನು ಪ್ರಕಟಿಸಿದೆ. ಈ ಬಾರಿ 93.3 ಶೇ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಬಾರಿ 23 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಅದರಲ್ಲಿ 22 ಲಕ್ಷ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಸಿಬಿಎಸ್‌ಇ 10ನೇ ತರಗತಿ ಫಲಿತಾಂಶ ಪ್ರಕಟ; ಬೆಂಗಳೂರಿಗೆ 2 ನೇ ಸ್ಥಾನ

Profile Vishakha Bhat May 13, 2025 4:58 PM

ನವದೆಹಲಿ: 2025ನೇ ಸಾಲಿನ CBSE (ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ) 12ನೇ ತರಗತಿಯ ಫಲಿತಾಂಶ ಬಿಡುಗಡೆ ಮಾಡಿದ ಬೆನ್ನಲ್ಲೇ ಇದೀಗ 10 ನೇ ತರಗತಿಯ ಫಲಿತಾಂಶವನ್ನು ಪ್ರಕಟಿಸಿದೆ. ಈ ಬಾರಿ 93.3 ಶೇ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಬಾರಿ 23 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಅದರಲ್ಲಿ 22 ಲಕ್ಷ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದು, ಶೇಕಡಾ 95 ರಷ್ಟು ಬಾಲಕಿಯರು ಹಾಗೂ ಶೇ 92. 63 ರಷ್ಟು ಬಾಲಕರು ತೇರ್ಗಡೆ ಹೊಂದಿದ್ದಾರೆ. ತಿರುವನಂತಪುರ ಹಾಗೂ ವಿಜಯವಾಡ ಜಂಟಿಯಾಗಿ ಮೊದಲ ಸ್ಥಾನವನ್ನು ಪಡೆದುಕೊಂಡಿತು.

2024 ರಲ್ಲಿ, CBSE ಮೇ 13 ರಂದು 10 ನೇ ತರಗತಿಯ ಫಲಿತಾಂಶಗಳನ್ನು ಪ್ರಕಟಿಸಿತು . CBSE 10 ನೇ ತರಗತಿಯ ಬೋರ್ಡ್ ಪರೀಕ್ಷೆಗಳನ್ನು ಫೆಬ್ರವರಿ 15 ಮತ್ತು ಮಾರ್ಚ್ 13 ರ ನಡುವೆ ನಡೆಸಲಾಗಿತ್ತು. ಈ ಬಾರಿ ಜವಾಹರ್ ನವೋದಯ ವಿದ್ಯಾಲಯಗಳು 99.49% ರಷ್ಟು ಉತ್ತೀರ್ಣತೆಯನ್ನು ದಾಖಲಿಸುವ ಮೂಲಕ ಅಗ್ರಸ್ಥಾನದಲ್ಲಿವೆ, ಕೇಂದ್ರೀಯ ವಿದ್ಯಾಲಯಗಳು (KVs) 99.45% ರಷ್ಟು ಉತ್ತೀರ್ಣತೆಯನ್ನು ದಾಖಲಿಸಿವೆ. ಖಾಸಗಿ ಉತ್ತಮ ಪ್ರದರ್ಶನ ನೀಡಿ, 94.17% ರಷ್ಟು ಉತ್ತೀರ್ಣತೆಯನ್ನು ದಾಖಲಿಸಿವೆ. ಕೇಂದ್ರೀಯ ಟಿಬೆಟಿಯನ್ ಶಾಲೆಗಳು (STSS) 91.53% ರಷ್ಟು ಉತ್ತೀರ್ಣತೆಯನ್ನು ದಾಖಲಿಸಿದ್ದರೆ, ಸರ್ಕಾರಿ ಶಾಲೆಗಳು 89.26% ರಷ್ಟು ಮತ್ತು ಸರ್ಕಾರಿ ಅನುದಾನಿತ ಶಾಲೆಗಳು 83.94% ರಷ್ಟು ಫಲಿತಾಂಶಗಳನ್ನು ದಾಖಲಿಸಿವೆ.

  • ತಿರುವನಂತಪುರ: ಶೇ. 99.79
  • ವಿಜಯವಾಡ: ಶೇ. 99.79.
  • ಬೆಂಗಳೂರು: ಶೇ. 98.90.
  • ಚೆನ್ನೈ: ಶೇ. 98.71.
  • ಪುಣೆ: ಶೇ. 96.54.
  • ಅಜ್ಮೀರ್: ಶೇ. 95.44.
  • ದೆಹಲಿ ಪಶ್ಚಿಮ: ಶೇ. 95.24.
  • ದೆಹಲಿ ಪೂರ್ವ: ಶೇ. 95.07.
  • ಚಂಡೀಗಢ: ಶೇ. 93.71.
  • ಪಂಚ್‌ಕುಲ: ಶೇ. 92.77.
  • ಭೂಪಾಲ್: ಶೇ. 92.71.
  • ಭುವನೇಶ್ವರ: ಶೇ. 92.64.
  • ಪಾಟ್ನಾ: ಶೇ. 91.90.
  • ಡೆಹ್ರಾಡೂನ್: ಶೇ. 91.60.
  • ಪ್ರಯಾಗರಾಜ್: ಶೇ. 91.01.
  • ನೋಯ್ಡಾ: ಶೇ. 89.41.
  • ಗುವಾಹಟಿ: ಶೇ. 84.14.

ರಿಸಲ್ಟ್‌ ನೋಡುವುದು ಹೇಗೆ?

CBSE 10 ನೇ ತರಗತಿಯ ಫಲಿತಾಂಶವನ್ನು ಹಲವು ರೀತಿಯ ಅವಕಾಶಗಳಿವೆ. ಆನ್‌ಲೈನ್‌, ಮೊಬೈಲ್ ಆ್ಯಪ್, SMS ಹಾಗೂ IVRS ಮೂಲಕ ನಿಮ್ಮ ಫಲಿತಾಂಶವನ್ನು ವೀಕ್ಷಿಸಬಹುದಾಗಿದೆ. ಆನ್‌ಲೈನ್ ಮೂಲಕ ಡಿಜಿಟಲ್ ಸಹಿ ಇರುವ ಮಾರ್ಕ್ಸ್‌ ಕಾರ್ಡ್‌ಗಳನ್ನು ಮಾಡಿಕೊಳ್ಳುವ ಅವಕಾಶವಿದೆ.

ಸುದ್ದಿಯನ್ನೂ ಓದಿ: CBSE Recruitment 2025: CBSEಯಲ್ಲಿ ಖಾಲಿ ಇದೆ 212 ಹುದ್ದೆ; ದ್ವಿತೀಯ ಪಿಯು ಪಾಸಾದವರು ಅರ್ಜಿ ಸಲ್ಲಿಸಿ

  • CBSE ವೆಬ್‌ಸೈಟ್‌: cbse.gov.in
  • CBSE ರಿಸಲ್ಟ್ಸ್ ಪೋರ್ಟಲ್: results.cbse.nic.in
  • ಡಿಜಿಲಾಕರ್ ಪೋರ್ಟಲ್: results.digilocker.gov.in
  • UMANG ಆ್ಯಪ್‌ನಲ್ಲೂ ಫಲಿತಾಂಶ ವೀಕ್ಷಿಸಬಹುದು
  • SMS: CBSE10 <roll number> ಅಥವಾ CBSE12 <roll number> to 7738299899
  • IVRS : STD ಕೋಡ್ ಸಹಿತ 24300699 ಕರೆ ಮಾಡಿ