ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vaishnavi Gowda: ಅನುಕೂಲ್ ಜೊತೆ ವೈಷ್ಣನಿ ಗೌಡ ಲವ್​ನಲ್ಲಿ ಬಿದ್ದಿದ್ದು ಹೇಗೆ?: ಇಲ್ಲಿದೆ ಸೀಕ್ರೆಟ್

ವೈಷ್ಣವಿ ಗೌಡ- ಅನುಕೂಲ್ ಮಿಶ್ರಾ ನಿಶ್ಚಿತಾರ್ಥದ ಫೋಟೋ ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಕಳೆದ ಕೆಲವು ದಿನಗಳಿಂದ ಭರ್ಜರಿ ವೈರಲ್ ಆಗುತ್ತಿದೆ. ಆದರೆ, ಅಭಿಮಾನಿಗಳಿಗಿರುವ ಪ್ರಶ್ನೆ ಎಂದರೆ ಛತ್ತೀಸಗಢದವರನ್ನು ವೈಷ್ಣವಿ ಮದುವೆ ಆಗ್ತಿರೋದು ಯಾಕೆ? ಹೇಗೆ ಇಬ್ಬರೂ ಲವ್ನಲ್ಲಿ ಬಿದ್ದರು?. ಇದಕ್ಕೆಲ್ಲ ಸ್ವತಃ ವೈಷ್ಣವಿ ಅವರೇ ಉತ್ತರ ಕೊಟ್ಟಿದ್ದಾರೆ.

ಅನುಕೂಲ್ ಜೊತೆ ವೈಷ್ಣನಿ ಗೌಡ ಲವ್​ನಲ್ಲಿ ಬಿದ್ದಿದ್ದು ಹೇಗೆ?

vaishnavi gowda engagement

Profile Vinay Bhat Apr 22, 2025 7:01 AM

ಸೀತರಾಮ ಧಾರಾವಾಹಿಯ ಸೀತೆಗೆ ಕೊನೆಗೂ ಕಂಕಣಭಾಗ್ಯ ಕೂಡಿ ಬಂದಿದೆ. ಮನ ಮೆಚ್ಚಿದ ಹುಡುಗ ವೈಷ್ಣವಿಯ (Vaishnavi Gowda) ಕೈ ಹಿಡಿಯಲಿದ್ದಾನೆ. ಸದ್ದಿಲ್ಲದೇ ಅಗ್ನಿಸಾಕ್ಷಿ ಸನ್ನಿಧಿಯ ನಿಶ್ಚಿತಾರ್ಥ ಅದ್ಧೂರಿಯಾಗಿ ನೇರವೇರಿದೆ. ಭಾರತೀಯ ವಾಯುಸೇನೆಯಲ್ಲಿ ಇರುವ ಅನುಕೂಲ್ ಮಿಶ್ರಾ ಜೊತೆ ವೈಷ್ಣವಿ ಗೌಡ ಎಂಗೇಜ್​​ಮೆಂಟ್ ಮಾಡಿಕೊಂಡಿದ್ದಾರೆ. ಇವರ ನಿಶ್ಚಿತಾರ್ಥದ ಫೋಟೋ ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಕಳೆದ ಕೆಲವು ದಿನಗಳಿಂದ ಭರ್ಜರಿ ವೈರಲ್ ಆಗುತ್ತಿದೆ. ಆದರೆ, ಅಭಿಮಾನಿಗಳಿಗಿರುವ ಪ್ರಶ್ನೆ ಎಂದರೆ, ಛತ್ತೀಸಗಢದವರನ್ನು ವೈಷ್ಣವಿ ಮದುವೆ ಆಗ್ತಿರೋದು ಯಾಕೆ? ಹೇಗೆ ಇಬ್ಬರೂ ಲವ್​ನಲ್ಲಿ ಬಿದ್ದರು? ಲವ್​ ಮಾಡ್ತಾ ಎಷ್ಟು ವರ್ಷವಾಯ್ತು? ಎಂಬುದು. ಇದಕ್ಕೆಲ್ಲ ಸ್ವತಃ ವೈಷ್ಣವಿ ಅವರೇ ಉತ್ತರ ಕೊಟ್ಟಿದ್ದಾರೆ.

ನಾವಿಬ್ಬರು ಪರಿಚಯವಾಗಿ ಒಂದು ವರ್ಷ ಆಗುತ್ತಾ ಬಂತು. ಆದರೆ ನಾನು ಯಾರಿಗೂ ಹೇಳಿರಲಿಲ್ಲ, ಯಾವ ಸೋಶಿಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ನಲ್ಲೂ ಪೋಸ್ಟ್ ಹಂಚಿಕೊಂಡಿರಲಿಲ್ಲ. ಇದು ಅರೇಂಜ್ಡ್‌ ಮ್ಯಾರೇಜ್‌ ಆಗಿರುವುದರಿಂದ ನಮಗೆ ಒಬ್ಬರೊನೊಬ್ಬರನ್ನು ಅರ್ಥ ಮಾಡಿಕೊಳ್ಳಲು ಟೈಮ್‌ ಬೇಕಾಗಿರುತ್ತದೆ ಅಲ್ವಾ? ಹಾಗಾಗಿ ನಾವು ಸಮಯ ತೆಗೆದುಕೊಂಡಿದ್ದೆವು ಎಂದು ವೈಷ್ಣವಿ ಕ್ಲಾರಿಟಿ ಕೊಟ್ಟಿದ್ದಾರೆ.

ಮನೆಯವರು ಮೊದಲು ಮಾತನಾಡಿ, ಜಾತಕ ನೋಡಿ ಓಕೆ ಆದ ಬಳಿಕ ನಮ್ಮಿಬ್ಬರ ಭೇಟಿ ಆಯಿತು. ಪ್ರತಿಯೊಬ್ಬ ಹೆಣ್ಣೂ ತಮ್ಮ ಗಂಡನಾಗುವವ ಹೀಗೆ ಇರಬೇಕು ಎಂದು ಇರುತ್ತದೆ. ಅರೇಂಜ್ಡ್‌ ಮ್ಯಾರೇಜ್‌ನಲ್ಲಿ ನಾರ್ಥ್ ಮತ್ತು ಸೌಥ್ ಹೇಗೆ ಬ್ಲೆಂಡ್‌ ಆಗುತ್ತೆ ಅಂತ ಎಲ್ರ ಡೌಟ್. ಆದ್ರೆ ಅವರ ಆಚರಣೆ ಅವರ ಯೋಚನೆ ಎಲ್ಲವೂ ನಮ್ಮಂತೆಯೇ ಇದೆ. ಅನುಕೂಲ್​ ಅವರ ಬಳಿ ಮಾತನಾಡಿದಾಗ ನಾನು ಹುಡುಕುತ್ತಿರುವವರು ಇವರೇ ಎನ್ನಿಸಿತು. ನಮ್ಮಿಬ್ಬರ ಮೈಂಡ್​ಸೆಟ್​ ಒಂದೇ ರೀತಿ ಇದೆ. ಆದ್ದರಿಂದ ನಾನು ಒಪ್ಪಿಕೊಂಡೆ ಎಂದು ವೈಷ್ಣವಿ ಹೇಳಿದ್ದಾರೆ.

Gauthami Jadav: ಪತಿ ಅಭಿಷೇಕ್ ಹುಟ್ಟುಹಬ್ಬವನ್ನು ಭರ್ಜರಿ ಆಗಿ ಸೆಲೆಬ್ರೆಟ್ ಮಾಡಿದ ಗೌತಮಿ ಜಾಧವ್

ಕುಟುಂಬಸ್ಥರು, ಆಪ್ತರು ಮತ್ತು ತಾರೆಯರ ಸಮ್ಮುಖದಲ್ಲಿ ವೈಷ್ಣವಿ ಗೌಡ ಮತ್ತು ಅನುಕೂಲ್‌ ಮಿಶ್ರಾ ಅವರ ನಿಶ್ಚಿತಾರ್ಥ ಅದ್ಧೂರಿಯಾಗಿ ನೆರವೇರಿತು. ಶಾಸ್ತ್ರೋಕ್ತವಾಗಿ ಉಂಗುರವನ್ನು ಬದಲಾಯಿಸಿಕೊಂಡರು. ಈ ಸಂಭ್ರಮದ ಕ್ಷಣಕ್ಕೆ ತಾರೆಯರು ಕೂಡ ಮೆರಗು ಹೆಚ್ಚಿಸಿದರು. ವೈಷ್ಣವಿ ಗೌಡ ಬೆಸ್ಟ್ ಫ್ರೆಂಡ್​ ನಟಿ ಅಮೂಲ್ಯ ಸೇರಿದಂತೆ ಅನೇಕ ತಾರೆಯರೂ ಆಗಮಿಸಿ ನವಜೋಡಿಗೆ ಶುಭ ಹಾರೈಸಿದರು. ಮದುವೆ ಬಗ್ಗೆ ಮಾತನಾಡಿದ ವೈಷ್ಣವಿ, ಅರೇಂಜ್‌ಮೆಂಟ್ಸ್‌ ಎಲ್ಲವೂ ನಡೆಯುತ್ತಿದೆ. ನಮ್ಮ ಜಾತಕಕ್ಕೆ ಯಾವ ಮುಹೂರ್ತ ಸೆಟ್‌ ಆಗುತ್ತದೆಯೋ ಆ ದಿನ ಮದುವೆಯಾಗುತ್ತೇವೆ ಎಂದು ಹೇಳಿದ್ದಾರೆ.