Friday, 20th September 2024

ಮೀ ಟೂ ಆರೋಪ ಮಾಡಿದ ಬಗ್ಗೆ ಹೆಮ್ಮೆಯಿದೆ

ಬೆಂಗಳೂರು: ಚಿತ್ರರಂಗದಲ್ಲಿ ನನ್ನ ಮೇಲೂ ಲೈಂಗಿಕ ದೌರ್ಜನ್ಯ ಆಗಿದೆ (ಮೀಟೂ) ಎಂದು ದೂರು ಕೊಟ್ಟಿಿದ್ದಕ್ಕೆೆ ಹೆಮ್ಮೆೆ ಇದೆಯೇ ಹೊರತು ವಿಷಾದವಿಲ್ಲ ಎಂದು ನಟಿ ಶೃತಿ ಹರಿಹರನ್ ಹೇಳಿದ್ದಾರೆ.
ನಗರದ ಅಶೋಕ್ ಲಲಿತ್ ಹೋಟೆಲ್‌ನಲ್ಲಿ ಫೇಸ್ಬುಕ್ ವತಿಯಿಂದ ಹಿರಿಯ ಪತ್ರಕರ್ತೆ ಬರ್ಖಾ ದತ್ ನೇತೃತ್ವದಲ್ಲಿ ನಡೆದ ವಿ ದಿ ವುಮೆನ್ (ನಾವು ಮಹಿಳೆಯರು)ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೀ ಟೂ ಅಭಿಯಾನದಲ್ಲಿ ದೂರು ಕೊಟ್ಟಿಿದ್ದರಿಂದ ನನಗೆ ಅವಕಾಶಗಳು ಕಡಿಮೆಯಾಗಿರುವುದು ನಿಜ. ಅದಕ್ಕಾಾಗಿ ವಿಷಾದ ಪಡುವುದಿಲ್ಲ ಎಂದರು.
ನನ್ನ ಬಳಿ ಈಗಲೂ ಒಂದೇ ಒಂದು ಸಿನಿಮಾ ಇಲ್ಲ, ಆದರೆ ಅದರ ಬಗ್ಗೆೆ ಚಿಂತೆ ಇಲ್ಲ, ನನ್ನ ಮೂರು ತಿಂಗಳ ಪುತ್ರಿಿ, ಗಂಡನ ಜತೆ ಖುಷಿಯಿಂದಿದ್ದೇನೆ. ಈ ಬಾರಿ ಚಲನಚಿತ್ರ ರಾಷ್ಟ್ರೀಯ ಪ್ರಶಸ್ತಿಿ ಬಂದ ಕಾರಣ ಮತ್ತೆೆ ಅವಕಾಶ ಸಿಗುವ ನಿರೀಕ್ಷೆಯಲ್ಲಿದ್ದೇನೆ. ದೂರು ನೀಡಿ ಒಂದು ವರ್ಷವಾದ ಹಿನ್ನೆೆಲೆಯಲ್ಲಿ ಶೃತಿ ಅವರನ್ನು ಕಾರ್ಯಕ್ರಮಕ್ಕೆೆ ಕರೆಯಲಾಗಿತ್ತು. ವಿಚಾರಣೆ ವೇಳೆ ವಕೀಲರು ನನಗೊಂದು ವಿಷಯ ಹೇಳಿದ್ದರು. ಮುಟ್ಟಿಿದ್ದರೆ ಹೇಳಿ, ಕೇವಲ ಮಾತನಾಡಿದ್ದರೆ ಹೇಳಬೇಡಿ ಎಂದಿದ್ದರು. ಇದು ಭಾರತೀಯ ಕಾನೂನು ವ್ಯವಸ್ಥೆೆ. ನಿಜಕ್ಕೂ ಮೀ ಟೂ ನಂತಹ ಪ್ರಕರಣಗಳಲ್ಲಿ ಸಾಕ್ಷಿ ಇರುವುದಿಲ್ಲ. ಹೀಗಾಗಿ ಇಂತಹ ಪ್ರಕರಣಗಳನ್ನು ಧೈರ್ಯದಿಂದ ಎದುರಿಸಬೇಕು ಎಂದರು.