ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Golden Temple: ಅಮೃತಸರದ ಗೋಲ್ಡನ್​ ಟೆಂಪಲ್ ಮೇಲೆ ಪಾಕ್ ಸೇನೆ ದಾಳಿಗೆ ಯತ್ನಿಸಿತ್ತು; ಭಾರತೀಯ ಸೇನೆ ಮಾಹಿತಿ

ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಒಂಬತ್ತು ಭಯೋತ್ಪಾದಕ ತಾಣಗಳ ಮೇಲೆ ಭಾರತ ನಡೆಸಿದ ದಾಳಿಗೆ ಪ್ರತೀಕಾರವಾಗಿ ಮೇ 7-8ರ ಮಧ್ಯರಾತ್ರಿ ಪಾಕಿಸ್ತಾನ ಡ್ರೋನ್‌ಗಳು ಮತ್ತು ಕ್ಷಿಪಣಿಗಳ ಮೂಲಕ ಅಮೃತಸರದ ಸ್ವರ್ಣ ಮಂದಿರವನ್ನು ಗುರಿಯಾಗಿಸಲು ಪ್ರಯತ್ನಿಸಿತು ಎಂದು ಸೇನೆ ತಿಳಿಸಿದೆ.

ಅಮೃತಸರದ ಗೋಲ್ಡನ್​ ಟೆಂಪಲ್ ಮೇಲೆ ಪಾಕ್ ಸೇನೆ ದಾಳಿಗೆ ಯತ್ನಿಸಿತ್ತು; ಸೇನೆ

Profile Vishakha Bhat May 19, 2025 11:58 AM

ಅಮೃತಸರ: ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಒಂಬತ್ತು ಭಯೋತ್ಪಾದಕ ತಾಣಗಳ ಮೇಲೆ ಭಾರತ ನಡೆಸಿದ ದಾಳಿಗೆ ಪ್ರತೀಕಾರವಾಗಿ ಮೇ 7-8ರ ಮಧ್ಯರಾತ್ರಿ ಪಾಕಿಸ್ತಾನ ಡ್ರೋನ್‌ಗಳು ಮತ್ತು ಕ್ಷಿಪಣಿಗಳ ಮೂಲಕ ಅಮೃತಸರದ ಸ್ವರ್ಣ ಮಂದಿರವನ್ನು ಗುರಿಯಾಗಿಸಲು ಪ್ರಯತ್ನಿಸಿತು ಎಂದು 15 ನೇ ಪದಾತಿ ದಳದ ಜನರಲ್ ಆಫೀಸರ್ ಕಮಾಂಡಿಂಗ್ (ಜಿಒಸಿ) ಮೇಜರ್ ಜನರಲ್ ಕಾರ್ತಿಕ್ ಸಿ ಶೇಷಾದ್ರಿ ಸೋಮವಾರ ಬಹಿರಂಗಪಡಿಸಿದ್ದಾರೆ. ಸೇನಾ ವಾಯು ರಕ್ಷಣಾ ಗನ್ನರ್‌ಗಳು ಸುವರ್ಣ ಮಂದಿರವನ್ನು ಗುರಿಯಾಗಿಸಿಕೊಂಡು ನಡೆಸಿದ ಎಲ್ಲಾ ಡ್ರೋನ್‌ಗಳು ಮತ್ತು ಕ್ಷಿಪಣಿಗಳನ್ನು ಹೊಡೆದುರುಳಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಪಾಕಿಸ್ತಾನವು ಸ್ವರ್ಣ ಮಂದಿರದಂತಹ ಧಾರ್ಮಿಕ ಸ್ಥಳಗಳು ಸೇರಿದಂತೆ, ಸೇನಾ ಶಿಬಿರಗಳ ಮೇಲೆ ದಾಳಿ ನಡೆಸಬಹುದು ಎಂದು ಸೇನೆ ಆಗಲೇ ನಿರೀಕ್ಷಿಸಿತ್ತು, ಅದಕ್ಕೆ ಬೇಕಾದ ಕ್ರಮಗಳನ್ನು ಕೂಡ ತೆಗೆದುಕೊಂಡಿತ್ತು. ಪಾಕಿಸ್ತಾನ ಸೇನೆಯು ಯಾವುದೇ ಸಮರ್ಪಕ ಗುರಿಗಳನ್ನು ಹೊಂದಿಲ್ಲ ಎಂದು ತಿಳಿದಿದ್ದರೂ,ಕೆಲವು ನಿರೀಕ್ಷೆಗಳಿದ್ದವು ಇವುಗಳಲ್ಲಿ, ಗೋಲ್ಡನ್ ಟೆಂಪಲ್ ಅತ್ಯಂತ ಪ್ರಮುಖವಾದದ್ದು ಎಂದು ಕಂಡುಬಂದಿದೆ.

ಗೋಲ್ಡನ್ ಟೆಂಪಲ್‌ಗೆ ಸಮಗ್ರ ವಾಯು ರಕ್ಷಣಾ ಛತ್ರಿ ಹೊದಿಕೆಯನ್ನು ನೀಡಲು ನಾವು ಹೆಚ್ಚುವರಿ ಆಧುನಿಕ ವಾಯು ರಕ್ಷಣಾ ಸ್ವತ್ತುಗಳನ್ನು ಸಜ್ಜುಗೊಳಿಸಿದ್ದೇವೆ" ಎಂದು ಮೇಜರ್ ಜನರಲ್ ಶೇಷಾದ್ರಿ ತಿಳಿಸಿದ್ದಾರೆ. ಮೇ 8 ರಂದು ಪಾಕಿಸ್ತಾನವು ಮಾನವರಹಿತ ವೈಮಾನಿಕ ಶಸ್ತ್ರಾಸ್ತ್ರಗಳು, ಮುಖ್ಯವಾಗಿ ಡ್ರೋನ್‌ಗಳು ಮತ್ತು ದೀರ್ಘ-ಶ್ರೇಣಿಯ ಕ್ಷಿಪಣಿಗಳನ್ನು ಬಳಸಿಕೊಂಡು ಬೃಹತ್ ವಾಯುದಾಳಿ ನಡೆಸಿತು ಎಂದು ಅವರು ಹೇಳಿದರು.

ಇದನ್ನು ನಿರೀಕ್ಷಿಸಿದ್ದರಿಂದ ನಾವು ಸಂಪೂರ್ಣವಾಗಿ ಸಿದ್ಧರಾಗಿದ್ದೆವು, ಮತ್ತು ನಮ್ಮ ಧೈರ್ಯಶಾಲಿ ಮತ್ತು ಜಾಗರೂಕ ಸೇನಾ ವಾಯು ರಕ್ಷಣಾ ಗನ್ನರ್‌ಗಳು ಪಾಕಿಸ್ತಾನ ಸೇನೆಯ ದುಷ್ಟ ಯೋಜನೆಗಳನ್ನು ವಿಫಲಗೊಳಿಸಿದರು ಮತ್ತು ಸುವರ್ಣ ದೇವಾಲಯವನ್ನು ಗುರಿಯಾಗಿಸಿಕೊಂಡ ಎಲ್ಲಾ ಡ್ರೋನ್‌ಗಳು ಮತ್ತು ಕ್ಷಿಪಣಿಗಳನ್ನು ಹೊಡೆದುರುಳಿಸಿದರು. ಅವರು ಸ್ವರ್ಣ ಮಂದಿರಕ್ಕೆ ಒಂದು ಚೂರು ಹಾನಿಯಾಗಲು ಕೂಡ ಬಿಡಲಿಲ್ಲ.

ಈ ಸುದ್ದಿಯನ್ನೂ ಓದಿ: Viral News: ವ್ಯಕ್ತಿಗೆ ಕುಡಿಯಲು ನೀರು ಕೊಡದೆ ಕಿರುಕುಳ ನೀಡಿದ ಪಾಕಿಸ್ತಾನಿ ಯುವಕರು; ಕೊನೆಗೆ ಆಗಿದ್ದೇನು?

ಆಕಾಶ್ ಕ್ಷಿಪಣಿ ವ್ಯವಸ್ಥೆ, ಎಲ್ -70 ಏರ್ ಡಿಫೆನ್ಸ್ ಗನ್ಸ್ ಸೇರಿದಂತೆ ಭಾರತೀಯ ವಾಯು ರಕ್ಷಣಾ ವ್ಯವಸ್ಥೆಗಳು ಅಮೃತಸರದ ಸ್ವರ್ಣ ದೇವಾಲಯ ಮತ್ತು ಪಂಜಾಬ್ ನಗರಗಳನ್ನು ಪಾಕಿಸ್ತಾನದ ಕ್ಷಿಪಣಿ ಮತ್ತು ಡ್ರೋನ್ ದಾಳಿಯಿಂದ ಹೇಗೆ ರಕ್ಷಿಸಿದವು ಎಂಬುದರ ಕುರಿತು ಮಾತನಾಡಿದ್ದಾರೆ.