Saturday, 27th July 2024

ಪತ್ರಕರ್ತರು ಮತ್ತು ರಾಜಕಾರಣಿಗಳು

ಪತ್ರಕರ್ತರಿಲ್ಲದ ದೇಶ ಪ್ರಜಪ್ರಭುತ್ವವಾಗಿರಲು ಸಾಧ್ಯವೇ ಇಲ್ಲ ಎಂಬ ಮಾತಿದೆ. ಹಾಗೆಯೆ ಚುನಾಯಿತ ರಾಜಕೀಯ ನಾಯಕರುಗಳಿಲ್ಲದ ದೇಶವೂ ಪ್ರಜಪ್ರಭುತ್ವವಲ್ಲ ಎಂಬುದನ್ನು ಬೇರೆ ಹೇಳಬೇಕಾಗಿಲ್ಲ.

ಭಾರತದಲ್ಲಿ ಪತ್ರಕರ್ತರೂ ಇzರೆ. ಪತ್ರಿಕಾ ಸ್ವಾತಂತ್ರ್ಯವೂ ಸಾಕಷ್ಟಿದೆ. ರಾಜಕೀಯ ನಾಯಕರೂ ಇದ್ದಾರೆ. ಅವರನ್ನು ಜನರೇ ಆರಿಸಿದ್ದಾರೆ. ಈಗ ಪ್ರಶ್ನೆ ಪತ್ರಕರ್ತರು ಮತ್ತು ರಾಜಕಾರಣಿಗಳ ಸಂಬಂಧದ ಬಗ್ಗೆ. ಇವರಿಬ್ಬರ ಉತ್ತಮ ಸಂಬಂಧ ಸಮಾಜದ ಉತ್ತಮ ಬೆಳೆವಣಿಗೆಗೆ ಸಹಕಾರಿಯಾಗುತ್ತದೆ. ಆದರೆ ಇಬ್ಬರಿಗೂ ಅವರವರದೇ ಆದ ಜವಾಬ್ದಾರಿ, ಕರ್ತವ್ಯಗಳಿವೆ. ಅದನ್ನು ಮರೆಯದೇ ಎರಡೂ ಕ್ಷೇತ್ರದ ಕಾರ್ಯಪ್ರವೃತ್ತರು ಪ್ರಜಹಿತವನ್ನೇ ಧ್ಯೇಯವಾಗಿ ಟ್ಟುಕೊಂಡು ಮಾರ್ಗ ತುಳಿಯಬೇಕು. ಈ ವಿಚಾರಕ್ಕೆ ಪುಷ್ಟಿ ಕೊಡುವ ಮಾತುಗಳನ್ನೇ ವಿಧಾನಸಭೆ ಯಲ್ಲಿ ಜೆ.ಎಚ್.ಪಟೇಲರು ಹಿಂದೊಮ್ಮೆ ಆಡಿದ್ದಾರೆ. ಅದು ಜೂನ್ ೨೯, ೧೯೮೨. ಆಗ ಪಟೇಲರು ಪ್ರತಿಪಕ್ಷದ ಶಾಸಕರು.

ಮಾತು ಹೀಗೆ ಆರಂಭವಾಗುತ್ತದೆ: ಪತ್ರಿಕಾ ಮಿತ್ರರು ತಮ್ಮ ಕೈಯ್ಯಲ್ಲಿ ಲೇಖನಿ ಇದೆ ಎಂದು, ತಮಗೆ ತಿಳಿದಂತೆ ಬರೆಯುವುದಾಗಲಿ, ತಮಗೆ ತೋಚಿದಂತೆ ವರದಿ ಮಾಡುವುದಾಗಲಿ ಸರಿಯಲ್ಲ. ಪ್ರಜೆಗಳು ಕಳುಹಿಸಿದ್ದರಿಂದ ನಾವು ಇಲ್ಲಿದ್ದೇವೆ. ಈ ಭಯ ನಮಗಿರಬೇಕು. ಸಂಯಮ ಅವರಿಗಿರ ಬೇಕು. ನಾವು ಸಂಯಮ ಮೀರಿ ವರ್ತಿಸಿದಾಗ ಪತ್ರಕರ್ತರ ಲೇಖನ ಕೂಡ ಉದ್ದುದ್ದಕ್ಕೆ ಬೆಳೆಯುತ್ತದೆ. ಇದನ್ನು ನಾವು ನೂರಾರು ಬಾರಿ ನೋಡಿದ್ದೇವೆ, ಅನು ಭವಿಸಿದ್ದೇವೆ. ಅಭಿರುಚಿಯಿಂದ ಅಭಿರುಚಿ ಬೆಳೆಯಬೇಕು. ಇದು ಇಬ್ಬರಲ್ಲೂ ಆಗಬೇಕು.

ಪತ್ರಕರ್ತರಲ್ಲಿಯೂ ಪ್ರಬುದ್ಧರಿದ್ದಾ, ಪಂಡಿತರಿದ್ದಾರೆ, ಅವರಿಗೆ ಸ್ವಾತಂತ್ರ್ಯವಿದೆ. ನಾವೂ ಹೀಗೆಯೇ. ಜನರ ಮನಸ್ಸನ್ನು ಇಬ್ಬರೂ ರೂಢಿಸಿಕೊಳ್ಳಬೇಕು.
ಪ್ರಜನಿಷ್ಠರಾಗಿರಬೇಕು. ವಸ್ತುನಿಷ್ಠರಾಗಿರಬೇಕು. ರಾಜಕಾರಣಿ-ಪತ್ರಕರ್ತರ ಸಂಬಂಧ ಎಷ್ಟು ಮುಖ್ಯವೋ ಅಷ್ಟೇ ಮುಖ್ಯವಾಗಿ ಇಬ್ಬರೂ ತಮ್ಮ ಪಾಲಿನ
ಜವಾಬ್ದಾರಿಯನ್ನು ನಿರ್ವಹಿಸಬೇಕು. ಇದೇ ಪರಸ್ಪರ ನಿರೀಕ್ಷೆ.

ಪಟೇಲರ ಈ ನಿರೀಕ್ಷೆಯಲ್ಲಿ ತಪ್ಪೇನಿದೆ? ಶಾಸಕಾಂಗ ಮತ್ತು ಪತ್ರಿಕಾರಂಗ ಎರಡರಲ್ಲಿ ಒಂದು ನೀತಿಗೆಟ್ಟರೂ ಅದರ ನೇರ ಪರಿಣಾಮ ನಾಡಿನ ಪ್ರಜೆಗಳ
ಮೇಲಾಗುತ್ತದೆ. ಇವತ್ತು ಶಾಸಕಾಂಗವೂ ಪತ್ರಿಕಾರಂಗವೂ ಎಷ್ಟರ ಮಟ್ಟಿಗೆ ಜನಹಿತ ಲಕ್ಷ್ಯವನ್ನು ಪರಮ ಧ್ಯೇಯವಾಗಿಟ್ಟುಕೊಂಡಿವೆ ಎನ್ನುವುದನ್ನು ಅವರವರುಗಳೇ ಅವಲೋಕನ ಮಾಡಿಕೊಳ್ಳಬೇಕು. ಶಾಸಕಾಂಗ ಸದಸ್ಯರು ಅಧಿಕಾರ ಬೆನ್ನಟ್ಟಿದರೆ, ಪತ್ರಿಕಾ ಕ್ಷೇತ್ರ SP, ಪ್ರಸರಣ ಸಂಖ್ಯೆ, ಕೈಮ, ಫ್ಯಾಶನ್, ಗ್ಲಾಮರ್, oಛ್ಞಿoZಠಿಜಿಟ್ಞZಜಿoಞ ಇತ್ಯಾದಿಗಳ ಜೋತು ಬಿದ್ದಿದೆ. ಬದಲಾದ ಕಾಲಮಾನದಲ್ಲಿ ಇದು ಸರಿಯೇ ಎಂದು ಅನೇಕರು ವಾದಿಸಬಹುದು.

ಆದರೆ ಇದರಿಂದ ಪತ್ರಿಕಾ ಆದರ್ಶಕ್ಕೆ ಕುಂದಾಗುತ್ತಿಲ್ಲವೆ? ಎಂದರೆ ಅದಕ್ಕೆ ಉತ್ತರ ಮಾತ್ರ ಇಲ್ಲ. ಅನೂಚಾನವಾಗಿ ಬಂದ ಶ್ರೇಷ್ಠ ಶಾಸಕಾಂಗ ಮತ್ತು ಪತ್ರಿಕಾರಂಗದ ಪರಂಪರೆ ಆಧುನೀಕರಣದ ಹೆಸರಿನಲ್ಲಿ ಮಾಸಿಹೊಗದಿರಲಿ ಎನ್ನುವುದೊಂದೇ ಕಳಕಳಿ. ಕನ್ನಡ ಪತ್ರಿಕೋದ್ಯಮದ ಭೀಷ್ಮ ಪಿತಾಮಹ ಎಂಬ ನೆಚ್ಚಿಗೆ ಪಡೆದ ಡಿ. ವಿ. ಗುಂಡಪ್ಪನವರು ಹೇಳುತ್ತಾರೆ: ಊರಿನವರೆಲ್ಲ ರಾತ್ರಿ ನಿಶ್ಚಿಂತೆಯಿಂದ ನಿದ್ರಿಸಲೆಂದು ಪೋಲಿಸಿನವನು ಅಕಾಲದಲ್ಲಿ ಎದ್ದಿರುವಂತೆ- ದೇಶದವನು ಕ್ಷೇಮದಿಂದ ಬಾಳಲೆಂದು ಯೋಧನು ರಣರಂಗದಲ್ಲಿ ನಿಲ್ಲುವಂತೆ- ಸಕಲ ಜನರೂ ಸುಖದಿಂದ ಬದುಕುವುದಕ್ಕೋಸ್ಕರ
ಪತ್ರಿಕೋದ್ಯೋಗಿಯು ಆ ಸುಖದ ಆಶೆಯನ್ನು ಬಿಟ್ಟು ದುಡಿಯುತ್ತಿರಬೇಕು.

ವಿಶೇಷ ಸೂಚನೆ: ನಾವು ಆದರ್ಶ ಶಾಸಕರು ನಾವು ಆದರ್ಶ ಪತ್ರಿಕಾಕರ್ತರು ಎಂದು ಕೊಚ್ಚಿಕೊಳ್ಳುವವರಿಗೆ ಈ ಬರಹವಲ್ಲ.
-ಹೃತಿಕ್ ಕುಲಕರ್ಣಿ

ಕಾಯ್ದಿರಿಸಲಾಗಿದೆಯೇ ಭಾರತ ರತ್ನ ?
ಕೇಂದ್ರ ಸರಕಾರದಿಂದ ದೇಶದಲ್ಲಿ ಆದಂತಹ, ಧನಾತ್ಮಕ ಬದಲಾವಣೆಗಳ ಸಾಧನೆಯಲ್ಲಿ ಪದ್ಮ ಪ್ರಶಸ್ತಿ ಘೋಷಣೆಯೂ ಒಂದು. ನಿಜವಾದ
ಸಾಧಕರಿಗೆ, ಎಲೆಮರೆಯ ಕಾಯಿಯಂತಿರುವ, ಅನರ್ಘ್ಯ ರತ್ನಗಳಿಗೆ ಪ್ರಶಸ್ತಿ ಘೋಷಣೆ ಆಗುತ್ತಿರುವುದು ಸಂತಸದ ಸಂಗತಿ. ಆದರೆ, ಈ ಬಾರಿಯ ಪದ್ಮ  ಪ್ರಶಸ್ತಿಗಳ ಘೋಷಣೆಯಲ್ಲಿ ನಡೆದಾಡುವ ದೇವರು ಶ್ರೀಸಿದ್ಧಗಂಗಾ ಮಹಾಸ್ವಾಮಿಗಳಿಗೆ ‘ಭಾರತ ರತ್ನ’ ಪ್ರಶಸ್ತಿ, ಹಾಗೆ, ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ಅವರಿಗೆ ‘ಪದ್ಮ ಪ್ರಶಸ್ತಿ’ ಘೋಷಣೆ ಆಗುತ್ತದೆ, ಎಂಬ ನಿರೀಕ್ಷೆ ಹುಸಿಯಾಗಿದೆ.

ಮುಖ್ಯಮಂತ್ರಿಗಳು ಪುನೀತ್ ಹೆಸರನ್ನು ಶಿಫಾರಸು ಮಾಡುತ್ತೇನೆ ಎಂದಿದ್ದರೂ ಅದರ ಫಲ ಈ ಬಾರಿ ದೊರೆಯದಿದ್ದದ್ದು ನಿರಾಸೆ ಮೂಡಿಸಿದೆ. ಈ ಹಿಂದೆ ಪ್ರಣಬ್ ಮುಖರ್ಜಿ, ನಾನಾಜಿ ದೇಶಮುಖ್, ಭೂಪೇನ್ ಹಜರಿಕಾ ಅಂತಹ ಮಹನೀಯರಿಗೆ ಭಾರತ ರತ್ನ ಘೋಷಣೆ ಆದ ಸಮಯವೂ – ಲೋಕಸಭಾ ಚುನಾವಣಾ ತಾಲೀಮು ಶುರು ಆದ ಸಮಯವೂ ಒಂದೇ ಆಗಿತ್ತು. ಇದು ಅತ್ಯುತ್ತಮ ಮತ್ತು ಯೋಗ್ಯ ಆಯ್ಕೆಯೇ ಆಗಿದ್ದರೂ, ಇದನ್ನು ಚುನಾವಣಾ ಪೂರ್ವದಲ್ಲಿ ಘೋಷಿಸಿದ್ದು, ಪಶ್ಚಿಮ ಬಂಗಾಳ, ಮಹಾರಾಷ್ಟ್ರ ಹಾಗೂ ಆಸ್ಸಾಂ ರಾಜ್ಯಗಳ ದೃಷ್ಟಿಕೋನದಲ್ಲಿ, ಸರಕಾರದ ನಡೆಯ ಬಗ್ಗೆ ಸಂಶಯ
ಎದ್ದಿತ್ತು.

ಹೀಗಾಗಿ, ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಗಾದಿಯಿಂದ ಕೆಳಗಿಳಿಸಿದ ಮೇಲೆ ಒಂದು ಸಮುದಾಯವನ್ನು (ನಡೆದಾಡುವ ದೇವರು ಸಿದ್ಧಗಂಗಾ
ಶ್ರೀಗಳು ಯಾವತ್ತೂ ಒಂದೇ ಸಮುದಾಯಕ್ಕೆ ಸೀಮಿತವಲ್ಲ) ಹಾಗೆ ಭಕ್ತವೃಂದವನ್ನು ಗಮನದಲ್ಲಿಟ್ಟುಕೊಂಡು ಸಿದ್ಧಗಂಗೆಯ ಮಹಾಚೇತನ ಕ್ಕೆ ‘ಭಾರತ ರತ್ನ’ವನ್ನು ಮತ್ತು ಕರ್ನಾಟಕದ ಯುವಜನತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಪುನೀತ್ ರಾಜಕುಮಾರ್ ಅವರಿಗೆ ಪದ್ಮ ಪ್ರಶಸ್ತಿಯನ್ನು ಘೋಷಿಸಲು ಕರ್ನಾಟಕ ವಿಧಾನಸಭಾ ಚುನಾವಣಾ ವರ್ಷವಾದ ೨೦೨೩ ರವರೆಗೂ ನಾವು ಕಾಯಬೇಕಾ..? ಗೊತ್ತಿಲ್ಲ.

ಅಷ್ಟಕ್ಕೂ, ನಡೆದಾಡುವ ದೇವರು ಶ್ರೀ ಸಿದ್ಧಗಂಗಾ ಮಹಾಸ್ವಾಮೀಜಿಗಳು, ಭಾರತ ರತ್ನ ಆಗಿ, ಲಕ್ಷಾಂತರ ಜೀವಗಳಿಗೆ ದೇವರಾಗಿ ಎಷ್ಟೋ ವರ್ಷ ಗಳಾಗಿವೆ. ಹಾಗೆ, ಕರುನಾಡಿನ ಅಪ್ಪು ನಾಡಿನ ಜನರ ಮನಸ್ಸಿನ ಪದ್ಮ ಸಿಂಹಾಸನದಲ್ಲಿ ಸ್ಥಾನ ಪಡೆದು ಬಹಳ ವರ್ಷಗಳಾಗಿವೆ. ಗೊತ್ತಿಲ್ಲ, ಪ್ರಶಸ್ತಿ ಘೋಷಣೆಯು, ವ್ಯೂಹಾತ್ಮಕ ರಾಜಕೀಯದ ಒಂದು ಅಂಶವಾ? ಎಂದು. ಉತ್ತರ ಪ್ರದೇಶದ ಈ ಬಾರಿಯ ವಿಧಾನಸಭಾ ಚುನಾವಣಾ ಕಾವು ಏರುತ್ತಿದ್ದಂತೆ, ಆ ರಾಜ್ಯದ ಮಾಜಿ ಮುಖ್ಯಮಂತ್ರಿಗಳಾಗಿದ್ದ, ಕಲ್ಯಾಣ್ ಸಿಂಗ್ ಅವರಿಗೆ ಪದ್ಮ ಪ್ರಶಸ್ತಿಯು ಮರಣೋತ್ತರವಾಗಿ ಘೋಷಣೆ ಆಗಿರುವುದು,
ಇದೇ ಅಂಶವನ್ನು ಪುಷ್ಟೀಕರಿಸುತ್ತಿದೆ. ಕಾಲಾಯ ತಸ್ಮೈ ನಮಃ.
– ಯತೀಶ್ ಬಳ್ಕೂರ್

error: Content is protected !!