Saturday, 27th July 2024

ಸಂಸ್ಕೃತ ಬಿಟ್ಟು ಕನ್ನಡ ಭಾಷೆಯೇ ಇಲ್ಲ

ಒಂದು ವಿಷಯದ ಗಂಭೀರ ಚರ್ಚೆಗೆ ಅದರ ಅಧ್ಯಯನ ತಳಸ್ಪರ್ಶಿ ಅರಿವು ಅಗತ್ಯ. ಈಗ ಸಂಸ್ಕೃತ ವಿಶ್ವದ್ಯಾಲಯ ಸ್ಥಾಪನೆಗೆ ಸರಕಾರ ಮುಂದಾಗಿರುವದರ ಬಗ್ಗೆ ಟೀಕೆಗಳು ಕೇಳಿ ಬರುತ್ತವೆ. ಸಂಸ್ಕೃತ ಇಲ್ಲದೆ ಕನ್ನಡ ಭಾಷೆ ಇಲ್ಲ, ಭಾಷಣವಿಲ್ಲ. ಪ್ರತಿಭಟನೆ ಇಲ್ಲ. ಆಕ್ರೋಶವಿಲ್ಲ. ರಕ್ಷಣಾ ವೇದಿಕೆ ಇಲ್ಲ.

ಘಟಕವೂ ಇಲ್ಲ. ವಿರೋಧಲ್ಲ ಆಭಿಯಾನವೂ ಇಲ್ಲ. ಇನ್ನು ಆರೋಗ್ಯವೂ ಇಲ್ಲ ಪುಸ್ತಕವು ಇಲ್ಲ. ವಿದ್ಯಾಭ್ಯಾಸವೂ ಇಲ್ಲ ಉದ್ಯೋಗವಿಲ್ಲ. ಜನನ ಮರಣಗಳೂ ಇಲ್ಲ. ಹೀಗಾಗಿ ಕನ್ನಡ ಹಾಗೂ ಸಂಸ್ಕೃತ ಎಂದು ಗದ್ದಲ ಎಬ್ಬಿಸುವ ಬದಲು, 2018 ರಿಂದ 2021ರವರೆಗೂ ಪ್ರಕಟವಾದ ಸಾವಿರ ಸಾವಿರ ಕನ್ನಡ ಗ್ರಂಥಗಳು ಖರೀದಿಸಲು ಆಯ್ಕೆಯಾಗಿವೆ. ಆದರೆ ಅವುಗಳನ್ನು ಖರೀದಿಸಲು ಗ್ರಂಥಾಲಯ ಇಲಾಖೆಗೆ ಹಣ ಬಿಡುಗಡೆಯಾಗಿಲ್ಲ. ಹೀಗಾಗಿ ಅವುಗಳನ್ನು ಪ್ರಕಟಿಸಿದ ಪ್ರಕಾಶಕರು ಲೇಖಕರು ಕನ್ನಡ ಪುಸ್ತಕ ಪ್ರಕಟಿಸಿ ಕೈಸುಟ್ಟುಕೊಂಡೆವು ಎಂದು ಪಶ್ಚಾತ್ತಾಪ ಪಡುವಂತಾಗಿದೆ.

ಇದನ್ನು ರಕ್ಷಣಾ ವೇದಿಕೆಗಳು ಗಮನಿಸಿ ಗ್ರಂಥಾಲಯಗಳಿಗಾಗಿ ಸೆಸ್ ಎಂದು ಸಂಗ್ರಸಿದ ತೆರಿಗೆ ಹಣವನ್ನು ಬಿಡುಗಡೆ ಮಾಡಿ ಎಂದು ಸರ್ಕಾರದ ಮೇಲೆ ಒತ್ತಡ ತರಲು ಅಭಿಯಾನ ಮಾಡುವುದು ನಿಜದಲ್ಲಿ ಕನ್ನಡ ರಕ್ಷಣೆಯಾಗುತ್ತದೆ.

– ಸತ್ಯಬೋಧ, ಬೆಂಗಳೂರು

ನಿತ್ಯವೂ ಹೊಸತು ನೀಡುವ ವಿಶ್ವವಾಣಿ

ವಿಶ್ವವಾಣಿ ಎಂಬ ಮಿಂಚು ಕನ್ನಡ ಪತ್ರಿಕೋದ್ಯಮದಲ್ಲಿ ಮೂಡಿ ಏಳು ವರ್ಷವಾಯಿತು. ಇದರ ವಿಷೇಷತೆ ಇರುವುದು ಏಕತಾನತೆಯಿಂದ ದೂರವಾಗಿರುವದು. ವಿಶ್ವವಾಣಿ ನಿತ್ಯವೂ ಒಂದೇ ರೀತಿಯಲ್ಲಿ ಇರದೇ, ಒಂದು ಹೊಸ ಆಯಾಮವನ್ನು ಹೊಂದಿರುವುದರಿಂದ ಎಲ್ಲ ಪತ್ರಿಕೆಗಳ ಸಾಲಿನಲ್ಲಿ ಭಿನ್ನವಾಗಿ ಕಾಣುತ್ತದೆ. ಅನೇಕ ಹೊಸ ಬರಹಗಾರಿಗೆ, ಓದುಗರಿಗೆ ಅವಕಾಶ ನೀಡುತ್ತಿರುವುದು ಕೂಡಾ ಇದರ ವಿಶೇಷತೆ.

ಹೊಸ ಸಾಹಸಕ್ಕೆ ಕೈ ಹಾಕಲು ಹಿಂಜರಿಯದ ಸಂಪಾದಕರಾದ ವಿಶ್ವೇಶ್ವರ ಭಟ್‌ರವರ ನೇತೃತ್ವ ವಿಶ್ವ ವಾಣಿಯನ್ನು ಹುಬ್ಬೇರಿಸಿ ನೋಡುವಂತೆ ಮಾಡಿದೆ. ಯಾವುದೇ ಒಂದು ಸಿದ್ಧಾಂತಕ್ಕೆ ಗಂಟು ಬೀಳದೆ ಒಂದು ವಿಷಯದ ಎರಡೂ ಆಯಾಮಗಳನ್ನು ಓದುಗರಿಗೆ ತಲುಪಿಸುವ ಕೆಲಸವನ್ನು ವಿಶ್ವ ವಾಣಿ ಮಾಡುತ್ತಿದೆ.
ಸಾಮಾಜಿಕ ಜಾಲ ತಾಣಗಳಲ್ಲಿನ ಒಳ್ಳೆಯ ತುಣುಕುಗಳನ್ನು ಪ್ರಕಟಿಸಲು ಪ್ರತ್ಯೇಕ ವಿಭಾಗವನ್ನು ತೆರೆದಿದ್ದು ನಿಜಕ್ಕೂ ಒಂದು ಅದ್ಭುತ ಯೋಜನೆ. ವಿಶ್ವ ವಾಣಿಗೆ ಏಳು ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ಶುಭಾಶಯಗಳು ಮತ್ತು ಮುಂದಿನ ದಿನಗಳಲ್ಲಿ ಇನ್ನಷ್ಟು ಹೊಸತನ ಮೂಡಿಬರಲಿ ಎಂದು ಆಶಿಸುವೆ.
ವಿದ್ಯಾ ಶಂಕರ್ ಶರ್ಮ ಬೆಂಗಳೂರು

error: Content is protected !!