ಗ್ರಾಮೀಣಾಭಿವೃದ್ಧಿ ಸಚಿವರೇ ಇತ್ತ ಗಮನಿಸಬಹುದೇ?

ಗ್ರಾಮೀಣಾಭಿವೃದ್ಧಿ ಸಚಿವರೇ ಇತ್ತ ಗಮನಿಸಬಹುದೇ?

image-c0c36993-074d-4af4-bccd-1dfb0a3e2842.jpg
Profile Vishwavani News Nov 23, 2021 1:13 PM
image-9718b100-889a-4ba6-a358-bcb70d6cd9d0.jpg
ನಮ್ಮ ಕರ್ನಾಟಕ ರಾಜ್ಯದಲ್ಲಿ ಇದುವರೆಗೆ ಬಂದು ಹೋದ ಎಷ್ಟೋ ಸರ್ಕಾರಗಳು ಗ್ರಾಮ ಲೆಕ್ಕಿಗರು ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲವಾಗಿವೆ ಎಂದು ಹೇಳಿದರೆ ಅತಿಶಯೋಕ್ತಿಯಲ್ಲ. ಏಕೆಂದರೆ ಗ್ರಾಮಗಳಲ್ಲಿಯೇ ವಾಸಮಾಡಬೇಕೆಂದು ಕಳೆದ ಎಲ್ಲ ಸರ್ಕಾರಗಳು ಹೇಳಿದರೂ ಸಹ ಇದುವರೆಗೆ ಬಹುತೇಕ ಗ್ರಾಮ ಪಂಚಾಯಿತಿಗಳು ಇರುವ ಗ್ರಾಮಗಳಲ್ಲಿ ಯಾವೊಬ್ಬ ಗ್ರಾಮಲೆಕ್ಕಿಗರೂ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳೂ ಸಂಬಂಧಿಸಿದ ಗ್ರಾಮಪಂಚಾಯಿತಿ ಕೇಂದ್ರ ಸ್ಥಾನಗಳಲ್ಲಿ ವಾಸಮಾಡುತ್ತಿಲ್ಲವೆಂಬ ವಿಷಯ ತಮಗೆ ತಿಳಿದಿದೆ. ಆದರೂ ಯಾವುದೇ ಸುತ್ತೋಲೆ ಹೊರಡಿಸಿರುವುದು ಸಾರ್ವಜನಿಕರ ಗಮನಕ್ಕೆ ಬಂದಿರುವುದಿಲ್ಲ ಗ್ರಾಮಲೆಕ್ಕಿಗರು ಪ.ಅ. ಅಧಿಕಾರಿಗಳು ತಾಲ್ಲೂಕು ಕೇಂದ್ರಗಳಲ್ಲಿ, ಜಿಲ್ಲಾ ಕೇಂದ್ರಗಳಲ್ಲಿ ವಾಸಮಾಡುತ್ತಾ, ಮನಸ್ಸಿಗೆ ಬಂದರೆ ಪಂಚಾಯಿತಿ ಕೇಂದ್ರಕ್ಕೆ ಬರುತ್ತಾರೆಂದು ತಿಳಿಸಲು ವಿಷಾದ ಪಡುತ್ತೇನೆ. ತಾಲ್ಲೂಕು ಕೇಂದ್ರಗಳಲ್ಲಿ ವಾಸಿಸುತ್ತಾ ಇರುವ ಗ್ರಾಮಲೆಕ್ಕಿಗರು ಒಂದು ಸಣ್ಣಕೊಠಡಿ ಯನ್ನು ಬಾಡಿಗೆಗೆ ಪಡೆದು, ತಮ್ಮಲ್ಲಿಗೆ ಬರುವ ಸಾರ್ವಜನಿಕರನ್ನು ಭೇಟಿ ಮಾಡುತ್ತಾ ರೆಯೇ ವಿನಃ ಗ್ರಾಮಗಳಿಗೆ ಭೇಟಿಮಾಡುವುದು ಬಹಳ ವಿರಳ. ಅವರ ಕೊಠಡಿ ಯೊಳಕ್ಕೆ ಪ್ರವೇಶಿಸ ಬೇಕಾದರೆ, ಸಾರ್ವಜನಿಕರು ತಾವು ಧರಿಸಿದ ಚಪ್ಪಲಿ-ಜೋಡು -ಗಳನ್ನು ಹೊರಗಡೆ ಬಿಟ್ಟು ಪ್ರವೇಶಿಸ ಬೇಕಾಗಿದೆ. ಕುಳಿತು ಕೊಳ್ಳಲು ಯಾವುದೇ ಸೌಲಭ್ಯ ವಿರುವುದಿಲ್ಲ. ಒಂದು ಹರುಕು- ಮುರುಕು ಚಾಪೆಯನ್ನು ಹಾಸಿರುತ್ತಾರೆ. ಅದರ ಮೇಲೆ ಕುಳಿತುಕೊಳ್ಳಲು ಮುಜುಗರವೇನಿಲ್ಲ,ಬಂದ ಸಾರ್ವಜನಿಕರನ್ನು ಮಾತನಾಡಿಸುವ ರೀತಿ ಬೇರೆಯದೇ ಇದೆ. ಇನ್ನು ಪಿ.ಡಿ.ಓ ಗಳ ಬಗೆಗೆ ಹೇಳಬೇಕೆಂದರೆ, ಪಂಚಾಯಿತಿ ಕಚೇರಿಗೆ ಹಾಜರಾಗುವುದೇ ವಿರಳ, ಕೆಲವರು ಜಿಕೇಂದ್ರಗಳಲ್ಲಿ, ಮತ್ತೆ ಕೆಲವರು ತಾಲೂಕು ಕೇಂದ್ರಗಳಲ್ಲಿ ವಾಸಮಾಡುತ್ತಿದ್ದಾರೆ. ಸಾರ್ವಜನಿಕರು ಪಂಚಾಯಿತಿ ಕೇಂದ್ರಕ್ಕೆ ಹೋದರೆ ಪಿ.ಡಿ.ಓ ಗಳು ಹಳ್ಳಿಗಳಿಗೆ ಇನ್ಸ್ಪೆರ್ಕ್ಟಗೆ ಹೋಗಿದ್ದಾರೆ, ’ಮೀಟಿಂಗ’ಗೆ ಹೋಗಿದ್ದಾರೆ ಎಂಬುದು ಸಾಮಾನ್ಯವಾದ ಸಬೂಬು. ನನಗೆ ತಿಳಿದ ಮಟ್ಟಿಗೆ, ಅಧಿಕಾರಿಗಳು ತಮ್ಮ ಮೇಲಧಿಕಾರಿಗಳಿಗೆ ಟಿ.ಟಿ.ಪಿ. -ತಾತ್ಕಾಲಿಕ ಪ್ರವಾಸ ಪಟ್ಟಿಯನ್ನು ಕಳುಹಿಸಿಕೊಡುವ ಸಂಪ್ರದಾಯವಿದೆ. ಹೀಗೆ ಕಳುಹಿಸಿದ ಪ್ರವಾಸಪಟ್ಟಿಯನ್ನು ಸಂಬಂಧಿಸಿದ ಪಂಚಾ ಯಿತಿ ಕೇಂದ್ರಗಳಲ್ಲಿ ಸಾರ್ವಜನಿಕರ ಗಮನಕ್ಕೆ ತರುವುದಿಲ್ಲ. ಗ್ರಾಮಪಂಚಾಯಿತಿ ನೌಕರರಿಗೆ ಯಾವುದೇ ‘ಹಾಜರಾತಿ ವಹಿ’ ಇದೆ ಎಂಬುದು ಸಾರ್ವಜನಿಕರಿಗೆ ಗೊತ್ತೇ ಇಲ್ಲ ಎಂದರೆ ನಿಮಗೆ ಅಚ್ಚರಿಯಾಗಬಹುದು. ಇದರಲ್ಲಿ ಸಂಬಂಧಿಸಿದ ನೌಕರ ಸಹಿ ಹಾಕಿದ್ದಾರೆಯೋ ಇಲ್ಲವೋ ಎಂಬುದನ್ನು ಯಾವ ಗ್ರಾಮ ಪಂಚಾ ಯಿತಿ ಅಧ್ಯಕ್ಷರಾಗಲೀ, ತಾಲೂಕು ಪಂಚಾಯಿತಿಯ ಮೇಲಧಿಕಾರಿಯೂ ಗಮನಿಸಿರುವುದಿಲ್ಲ. ಇನ್ನು ಪಂಚಾಯಿತಿ ಕಚೇರಿಗಳಲ್ಲಿ ರುವ ಸಿಬ್ಬಂದಿ ಎಂದರೆ ಒಬ್ಬ ಡಾಟಾಎಂಟ್ರಿಆಪರೇರ್ಟ(ಹೊರ ಗುತ್ತಿಗೆ ನೌಕರ) ಇನ್ನೊಬ್ಬ ’ಬಿಲ್ ಕಲೆಕ್ಟರ್‌’, ಪಂಚಾಯಿತಿ ಅಧ್ಯಕ್ಶರು ಮೀಟಿಂಗ್ ಇರುವ ದಿನ ಬಂದು ಹೋಗುತ್ತಾರೆ. ಕೆಲವು ಪಂಚಾಯಿತಿ ಸದಸ್ಯರು,/ಅಧ್ಯಕ್ಷರು ಬೆಂಗಳೂರಿನಲ್ಲಿ ವಾಸ ಮಾಡುತ್ತಿರುವ ಸಂಗತಿ ತಮಗೆ ತಿಳಿದೆ ಎಂದು ಭಾವಿಸುತ್ತೇನೆ. ಗ್ರಾಮ ಪಂಚಾಯಿತಿಗೆ ಯಾವ ಸೌಲಭ್ಯಕ್ಕಾಗಿ ಎಷ್ಟು ಅನುದಾನ ಬಂದಿದೆ ಎಂಬುದು ಪಂಚಾಯಿತಿ ಸದಸ್ಯರಿಗೂ ಗೊತ್ತಿರುವು ದಿಲ್ಲ, ಬಂದ ಅನುದಾನವನ್ನು ಮುಚ್ಚಿಟ್ಟು ತಮಗೆ ತೋಚದೆ ಹಾಗೆ ಖರ್ಚು ಮಾಡುತ್ತಿದ್ದಾರೆ. ಪಂಚಾಯಿತಿಗಳನ್ನು ತಪಾಸಣೆ ಮೂಡುತ್ತಿರುವರು ಯಾರೆಂಬುದೂ ಸಹ ಸಾರ್ವಜನಿಕರಾದ ನಮಗೆ ತಿಳಿದಲ್ಲ. ಪ್ರತಿವರ್ಷ ಮಳೆಗಾಲಕ್ಕೆ ಮುಂಚೆ ಪ್ರತಿ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳ ರೈತರಿಗೆಂದೇ ಪ್ರತ್ಯೇಕವಾದ ಅರಣ್ಯ ಯೋಜನೆಯಡಿ ಸಸಿಗಳನ್ನು ಪಹಣಿ ಆಧಾರದ ಮೇಲೆ ಹಂಚುತ್ತಾರೆ. ಸಿಕ್ಕಿದವರಿಗೆ ಸೀರುಂಡೆ ಯಂತಾಗುತ್ತದೆ. ಸದಸ್ಯರೇ ಹಂಚು ಕೊಳ್ಳುತ್ತಾರೆ ಅಕ್ರಮಗಳ ಸರಮಾಲೆಯೇ ಇವೆ. ಸದ್ಯಕ್ಕೆ ಇಷ್ಟೇ ಸಾಕು. - ಹರ್ಷವರ್ಧನ ಬಸವೇಶ್ವರ ನಗರ, ಬೆಂಗಳೂರು ರೈತರ ಬದುಕಿಗೆ ಕುತ್ತು ತರಬೇಡಿ ಅವಶ್ಯಕ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರುತ್ತಿದೆ. ಪ್ರಮುಖವಾಗಿ ಅಡುಗೆ ಅನಿಲದ ಬೆಲೆ ದುಪ್ಪಟ್ಟಾಗಿದೆ. ಒಂದೇ ದಿನದಲ್ಲಿ 385 ರು. ಏರಿಸಿದ್ದಾರೆ. ಬೇಳೆಕಾಳು ವಾಣಿಜ್ಯ ಬಳಕೆ ಪದಾರ್ಥಗಳು ಶ್ರೀಮಂತರು ಮಾತ್ರ ಕೊಂಡುಕೊಳ್ಳುವ ಬೆಲೆಗೆ ದೊರಕುತ್ತಿವೆ. ಜಿಎಸ್‌ಟಿ ನೆಪದಲ್ಲಿ ದಿನಸಿ ಅಂಗಡಿಗಳು ಬೆಲೆ ಏರಿಸಿ ಗ್ರಾಹಕರನ್ನು ಎದುರಿಸಿದ್ದರು. ಇದರಿಂದ ಗ್ರಾಹಕರಿಗೆ ಆಗುವ ಲಾಭ ತಲುಪಲೇ ಇಲ್ಲ. ಒಂದು ಕಡೆ ಮಳೆಯ ಅಬ್ಬರ ಕೈಗೆ ಬಂದ ಬೆಳೆಗಳು ನೀರಿನಲ್ಲಿ ತೇಲುತ್ತಿವೆ. ಇಷ್ಟುದಿನದ ಪರಿಶ್ರಮಕ್ಕೆ ಕಣ್ಣೀರೊಂದೇ ರೈತನ ಫಲವಾಗಿದೆ. ಇನ್ನೊಂದು ಕಡೆ ಪ್ರತಿಯೊಂದು ವಸ್ತು ಹಾಗೂ ದಿನಸಿ ಪದಾರ್ಥಗಳ ಬೆಲೆ ಕೈಗೆಟುಕದ ಹಾಗೆ ಏರಿಕೆಯಾಗಿವೆ. ಬೆಳೆ ಸಿಕ್ಕಾಗ ಬೆಂಬಲ ಬೆಲೆ ಇಲ್ಲದೆ ಹೊಟ್ಟೆಗೆ ಕುತ್ತೂ ಬಂದಿದೆ. ದೇಶದಲ್ಲಿ ಎಲ್ಲರಿಗೂ ಒಂದು ದಾರಿ ಇದೆ ಆದರೆ ರೈತರಿಗಿಲ್ಲ. ಇದ್ದದನ್ನು ಕೂಡ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಈ ನಿಟ್ಟಿನಲ್ಲಿ ಬೆಲೆ ನಿಯಂತ್ರಣಕ್ಕೆ ಸರಕಾರ ಗಮನ ಹರಿಸಬೇಕಾಗಿದೆ. ಇತಿಹಾಸದಲ್ಲಿ ರೈತರಿಗೆ ನ್ಯಾಯ ದೊರಕಿಲ್ಲ. ಆದರೆ ಸಮಾಧಾನದ ದೃಷ್ಟಿಯಿಂದಾದರೂ ಸರಕಾರ ಬೆಲೆ ಏರಿಕೆ ಕ್ರಮ ವಹಿಸಬೇಕು. ರೈತನ ಬದಕು ನೀರಿನಲ್ಲಿದೆ ನೆನಪಿರಲಿ. -ಗಾಯತ್ರಿ ಮಾಲಿಪಾಟೀಲ್ ಸಿಂಧನೂರು ಕ್ಷಮೆಗೆ ಈಗಲೂ ಕಾಲ ಮಿಂಚಿಲ್ಲ ವಿಜಯಪ್ರಕಾಶ್, ರಾಜೇಶ ಕೃಷ್ಣನ್, ಅರ್ಜುನ್ ಜನ್ಯ, ಅನುಶ್ರೀ, ಝೀ ವಾಹಿನಿಯ ಸರಿಗಮಪದ ಎಲ್ಲ ತೀರ್ಪುಗಾರರು, ಎ ಮೇರಿ ಹಂಸಲೇಖರವರನ್ನು ಹೊಗಳಿ ಅವರ ಇಂದಿನ ಪರಿಸ್ಥಿತಿಗೆ ಪರೋಕ್ಷವಾಗಿ ಕಾರಣರಾಗಿದ್ದಾರೆ ಎಂದರೆ ತಪ್ಪಾಗಲಾರದು. ದೇಸೀ ಪ್ರತಿಭೆಯೊಂದರ ಅಂತರಂಗದಲ್ಲಡಗಿದ ಅರಿಷಡ್ವರ್ಗವೊಂದರ ಕಿಡಿಯೊಂದು, ಕೆಟ್ಟ ಗಳಿಗೆಯೊಂದರಲ್ಲಿ, ಭಗ್ಗನೆ ಹೊತ್ತಿ ಕೊಂಡು ಬೃಹತ್ ಬೆಂಕಿಯಾಗಿ, ಬೆಳಕಿನ ಬದಲು ತಾಪ ಹೆಚ್ಚಿಸುತ್ತಿರುವಾಗ, ಬೆಂಕಿ ನಂದಿಸುವ ಕೆಲಸವನ್ನು ಈ ಎಲ್ಲ ಮಿತ್ರರು ಮಾತ್ರ ಮಾಡಬಹುದು ಮತ್ತು ಮಾಡಬೇಕು. ಏಕೆಂದರೆ ಹಂಸಲೇಖರವರನ್ನು ಬಹಳ ಹತ್ತಿರದಿಂದ ಬಲ್ಲ ಇವರಿಗೆ ಅವರ ಗುಣಗಳು ಹಾಗೂ ಮಿತಿಗಳ ಪರಿಚಯ ಬೇರೆಲ್ಲರಿ  ಗಿಂತ ಹೆಚ್ಚಾಗಿದೆ ಎಂದು ನನ್ನ ಭಾವನೆ. ವಿಷಪೂರಿತ ವಾತಾವರಣ ಉಂಟುಮಾಡಿರುವ ಘಟನೆ ಇನ್ನಷ್ಟು ಹಾನಿ ಮಾಡುವ ಮೊದಲು ಅವರು ಸೂಕ್ತವಾಗಿ ಕಾರ್ಯೊನ್ಮುಖರಾಗಬೇಕು. ಪೇಜಾವರ ಶ್ರೀಗಳ ಆಹಾರ ಪದ್ಧತಿಯ ಬಗ್ಗೆ ಆಕ್ಷೇಪಾರ್ಹ ಧಾಟಿ ಯಲ್ಲಿ, ಅವಹೇಳನಕಾರಿಯಾದ ಮಾತುಗಳನ್ನು ಆಡಿದ ಹಂಸಲೇಖರವರು ಸ್ಪಷ್ಟವಾದ ಮಾತುಗಳಲ್ಲಿ ಕ್ಷಮೆಯಾಚನೆ ಮಾಡಲು ಇನ್ನೂ ಕಾಲ ಮಿಂಚಿಲ್ಲ. Zee ಕನ್ನಡ ಸರಿಗಮಪ ಸಹೋದ್ಯೋಗಿಗಳು ನೀಡುವ ಹೊನ್ನ ಶೂಲಗಳನ್ನು ಕೆಳಗಿಟ್ಟು , ಕ್ಷಮೆಯಾಚನೆಯ ಏಣಿ ಬಳಸಿ, ತಮ್ಮ ವ್ಯಕ್ತಿತ್ವದ ಭಾಗವಾದ ಸಜ್ಜನತೆ ಮತ್ತು ಘನತೆಯನ್ನು ಮೆರೆಯಲಿ. - ಡಾ. ಎಂ. ರವೀಂದ್ರ ಬೆಂಗಳೂರು
Kichcha Sudeep and Rajath Kishan
7:31 AM January 29, 2025

Rajath BBK 11: ಫಿನಾಲೆಯಲ್ಲಿ ಯುವನ್​ಗೆ ಸುದೀಪ್ ಗಿಫ್ಟ್ ಕೊಟ್ಟ ಚೈನ್ ಬೆಲೆ ಎಷ್ಟು?, ರಜತ್ ಏನಂದ್ರು?

Bus accident
6:06 PM January 25, 2025

Bus Accident: ಬಸ್‌ನಿಂದ ತಲೆ ಹೊರ ಹಾಕಿದ ಮಹಿಳೆ; ಲಾರಿ ಡಿಕ್ಕಿಯಾಗಿ ತುಂಡಾಗಿ ಬಿದ್ದ ರುಂಡ!

Robbery
3:26 PM January 28, 2025

Robbery: ತಿಪಟೂರು ಎಪಿಎಂಸಿ ಮಾರುಕಟ್ಟೆಯಿಂದ 3,635 ಕೆಜಿ ಕೊಬ್ಬರಿ ಹೊತ್ತೊಯ್ದ ಕಳ್ಳರು

Lokayukta Raid in T.Begur
10:22 PM January 24, 2025

Lokayukta Raid: 5 ಬಾರಿ ಸಸ್ಪೆಂಡ್‌ ಆದ್ರೂ ತೀರದ ಲಂಚದ ದಾಹ; 20 ಸಾವಿರ ಲಂಚ ಪಡೆಯುವಾಗ ಸಿಕ್ಕಿಬಿದ್ದ ಟಿ.ಬೇಗೂರು ಪಿಡಿಒ

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

BBK 11 Final Elimination (1)
7:49 PM January 25, 2025

BBK 11 Final: ಬಿಗ್ ಬಾಸ್ ಫಿನಾಲೆಯಲ್ಲಿ ನಡೆಯಿತು ಎರಡು ಶಾಕಿಂಗ್ ಎಲಿಮಿನೇಷನ್: ಔಟ್ ಆಗಿದ್ದು ಇವರೇ

Hanumantha BBK 11 Winner
8:44 PM January 26, 2025

BBK 11 Winner: ಅಧಿಕೃತ ಘೋಷಣೆಗು ಮುನ್ನವೇ ರಿವೀಲ್ ಆಯ್ತು ಬಿಗ್ ಬಾಸ್ ಸೀಸನ್ 11ರ ವಿನ್ನರ್ ಯಾರೆಂದು: ಇವರೇ ನೋಡಿ

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?