Saturday, 23rd November 2024

Benefits of Salts : ಉಪ್ಪುಅಡುಗೆಗೆ ಮಾತ್ರ ಎಂದರೆ ತಪ್ಪು; ಇನ್ನೂ ಇವೆ ಹಲವು ಪ್ರಯೋಜನಗಳು…

Bathroom Cleaning

ಬೆಂಗಳೂರು: ಉಪ್ಪಿಗಿಂತ ರುಚಿ ಬೇರೆ ಇಲ್ಲ ಎನ್ನುವಂತೆ ಉಪ್ಪು ( Benefits of Salts ) ಇರದ ಅಡುಗೆ ರುಚಿ ನೀಡುವುದಿಲ್ಲ. ಹಾಗಾಗಿ ಉಪ್ಪು ಅಡುಗೆಯ ಕಡ್ಡಾಯ ವಸ್ತುವಾಗಿದೆ. ಇದು ಅಡುಗೆಯ ರುಚಿಯ ಜೊತೆಗೆ ಆಹಾರದ ಸ್ವಾದವನ್ನು ಹೆಚ್ಚಿಸುತ್ತದೆ. ಆದರೆ ಈ ಉಪ್ಪನ್ನು ಇತರ ಕೆಲಸಗಳಿಗೂ ಬಳಸಬಹುದು. ಇತ್ತೀಚೆಗೆ, ವ್ಯಕ್ತಿಯೊಬ್ಬರು ಶೌಚಾಲಯದಲ್ಲಿ (Bathroom Cleaning) ಉಪ್ಪಿನ ನೆರವಿನಿಂದ ನಡೆಸಿದ ವಿಶಿಷ್ಟ ಪ್ರಯೋಗವು ಸಾಮಾಜಿಕ ಮಾಧ್ಯಮದಲ್ಲಿ ಸಖತ್ ವೈರಲ್ ಆಗಿದೆ.

ಅವರು ನಡೆಸುವ ಪ್ರಯೋಗದಲ್ಲಿ ಉಪ್ಪನ್ನು ಕೇವಲ ಅಡುಗೆಗೆ ಮಾತ್ರವಲ್ಲ ಬೇರೆ ರೀತಿಯಲ್ಲಿ ಬಳಸಬಹುದು ಎಂದು ತೋರಿಸಿದ್ದಾರೆ. ಹಾಗಾದರೆ ಅವರು ಮಾಡಿದ ಅತ್ಯಂತ ಆಶ್ಚರ್ಯಕರ ಉಪಯೋಗವೇನೆಂದರೆ ಶೌಚಾಲಯದಲ್ಲಿ ಉಪ್ಪನ್ನು ಹಾಕುವುದು. ಈ ಪ್ರಯೋಗವನ್ನು ನೋಡಿದರೆ ನಂಬಲು ಕಷ್ಟವಾಗುತ್ತದೆ. ಆದರೆ ನೀವು ಅದನ್ನು ಒಮ್ಮೆ ಪ್ರಯತ್ನಿಸಿ ನೋಡಬಹುದು.

@ScienceGuys_ ಟ್ವಿಟ್ಟರ್ ಖಾತೆಯಲ್ಲಿ ಇತ್ತೀಚೆಗೆ ಪೋಸ್ಟ್ ಮಾಡಲಾದ ವಿಡಿಯೊದಲ್ಲಿ ವ್ಯಕ್ತಿಯೊಬ್ಬರು ಉಪ್ಪಿನ ಉಪಯೋಗಗಳನ್ನು ವಿವರಿಸಿದ್ದಾರೆ. ವಿಡಿಯೊದಲ್ಲಿ, ಅಡುಗೆಗೆ ಹೊರತುಪಡಿಸಿ ಉಪ್ಪನ್ನು ಅನೇಕ ಉದ್ದೇಶಗಳಿಗಾಗಿ ಬಳಸಬಹುದು ಎಂದು ಅವರು ತೋರಿಸಿದ್ದಾರೆ. ಬಟ್ಟೆಯಲ್ಲಿ ಕಲೆಯಾದರೆ, ಅದರ ಮೇಲೆ ಉಪ್ಪನ್ನು ಸಿಂಪಡಿಸಿ ಸ್ವಲ್ಪ ಹೊತ್ತು ಬಿಟ್ಟು ಅದನ್ನು ತೊಳೆದರೆ ಕಲೆಯನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ ಎಂದು ಅವರು ಮೊದಲು ವಿವರಿಸಿದ್ದಾರೆ.

ನಂತರ ಕೊಳಕು ಪಾತ್ರೆಗಳನ್ನು ಸ್ವಚ್ಛಗೊಳಿಸಲು ಉಪ್ಪನ್ನು ಬಳಸಬಹುದು ಎಂದು ಅವರು ತಿಳಿಸಿದ್ದಾರೆ. ಪಾತ್ರೆಗಳಿಗೆ ಉಪ್ಪನ್ನು ಹಚ್ಚಿ ಮತ್ತು ಸ್ವಲ್ಪ ಸಮಯ ಬಿಟ್ಟು ನಂತರ ಪಾತ್ರೆಗಳನ್ನು ಸ್ವಚ್ಛಗೊಳಿಸಿದರೆ ಪಾತ್ರೆಗಳು ಪಳಪಳ ಹೊಳೆಯುವಂತೆ ಮಾಡುತ್ತದೆ. ಹಾಗೇ ಬಾಟಲಿಯಲ್ಲಿ ಉಪ್ಪನ್ನು ಹಾಕಿ ಸ್ವಲ್ಪ ಹೊತ್ತು ಬಿಟ್ಟು ಅದನ್ನು ನೀರಿನಿಂದ ತೊಳೆದರೆ ಇದರಿಂದ ಬಾಟಲಿ ಒಳಗಿನಿಂದ ಸ್ವಚ್ಛವಾಗುತ್ತದೆ ಮತ್ತು ಅದರಿಂದ ಯಾವುದೇ ವಾಸನೆ ಬರುವುದಿಲ್ಲ. ಅಂತೆಯೇ, ಅಡುಗೆಮನೆಯ ಸಿಂಕ್‍ಗಳು ಮತ್ತು ಬಾತ್ ರೂಂನ ನೀರು ಹೋಗುವ ಪೈಪ್‍ಗಳಲ್ಲಿ ಉಪ್ಪನ್ನು ಸುರಿಯುವುದರಿಂದ ಅವುಗಳನ್ನು ಸ್ವಚ್ಛಗೊಳಿಸಬಹುದು ಎಂದು ಅವರು ತೋರಿಸಿದ್ದಾರೆ.

ಇದನ್ನೂ ಓದಿ: ನೀವು ಕೂಡ ನೀಳವೇಣಿಯಾಗಬೇಕೆ? ಸ್ಟಾರ್ ಹೂವನ್ನು ಹೀಗೆ ಬಳಸಿ!

ಅಂತಿಮವಾಗಿ, ಅವರು ಉಪ್ಪಿನಿಂದ ಇನ್ನೊಂದು ಅತ್ಯಂತ ಆಶ್ಚರ್ಯಕರ ಪ್ರಯೋಜನವನ್ನೂ ಹೇಳಿದ್ದಾರೆ. ಅದರಲ್ಲಿ ಅವರು ಶೌಚಾಲಯಕ್ಕೆ ಹಿಡಿಯಷ್ಟು ಉಪ್ಪನ್ನು ಹಾಕಿ ನೀರನ್ನು ಹಾಕದೆ ರಾತ್ರಿಯಿಡೀ ಹಾಗೇ ಬಿಟ್ಟಿದ್ದಾರೆ. ಇದರಿಂದ ಶೌಚಾಲಯದಲ್ಲಿ ವಾಸನೆ ಬರುವುದು ಮತ್ತು ಬ್ಯಾಕ್ಟೀರಿಯಾಗಳು ನಿವಾರಣೆಯಾಗುತ್ತದೆ. ಮತ್ತು ಶೌಚಾಲಯ ಮತ್ತು ಬಾತ್ ರೂಂ ಸಂಪೂರ್ಣವಾಗಿ ಸ್ವಚ್ಛವಾಗುತ್ತದೆ ಎಂಬುದಾಗಿ ತಿಳಿಸಿದ್ದಾರೆ.