ಸೋನ್ ಭದ್ರಾ : ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಉತ್ತರ ಪ್ರದೇಶದ ವಿಂಧ್ಯಾ ಪ್ರದೇಶದ ಸೋನ್‌ಭದ್ರ ಮತ್ತು ಮಿರ್ಜಾಪುರಕ್ಕಾಗಿ ‘ಹರ್ ಘರ್ ನಲ್ ಯೋಜನೆ’ ಬಿಡುಗಡೆ ಮಾಡಿದರು. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೋನ್‌ಭದ್ರದಲ್ಲಿ ಉಪಸ್ಥಿತರಿದ್ದರು.
ಈ ಯೋಜನೆ ಎರಡು ಜಿಲ್ಲೆಗಳ 41 ಲಕ್ಷ ಗ್ರಾಮಸ್ಥರಿಗೆ ನೀರು ಒದಗಿಸುವ ಗುರಿ ಹೊಂದಿದೆ. ‘ಹರ್ ಘರ್ ನಲ್ ಯೋಜನೆ’ ಅಡಿ ಯಲ್ಲಿ, ಯೋಗಿ ಆದಿತ್ಯನಾಥ್ ಸರ್ಕಾರ ಈ ಪ್ರದೇಶದ ಎರಡು ಜಿಲ್ಲೆಗಳ 2,995 ಹಳ್ಳಿಗಳಿಗೆ ಪೈಪ್‌ಲೈನ್ ಮೂಲಕ ನೀರು ಸರಬ ರಾಜು ಮಾಡುವುದನ್ನು ಖಚಿತಪಡಿಸುತ್ತದೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಾತನಾಡಿ, ಜಲ್ ಜೀವನ್ ಮಿಷನ್ ಅಡಿಯಲ್ಲಿ 2,995 ಗ್ರಾಮಗಳಿಗೆ ‘ಹರ್ ಘರ್ ನಲ್ ಯೋಜನೆ’ ಪ್ರಯೋಜನ ವಾಗಲಿದೆ.
ಯೋಜನೆಯಿಂದ ಮಿರ್ಜಾಪುರದ 21,87,980 ಗ್ರಾಮಸ್ಥರಿಗೆ ಅನುಕೂಲವಾಗ ಲಿದೆ. ಸೋನ್‌ಭದ್ರದಲ್ಲಿ 19,53,458 ಕುಟುಂಬಗಳಿಗೆ ಈ ಯೋಜನೆಯ ಲಾಭ ವಾಗಲಿದೆ. ಸರೋವರಗಳು ಮತ್ತು ನದಿಯ ನೀರನ್ನು ಶುದ್ಧೀಕರಿಸಿ ಸೋನ್‌ಭದ್ರ ಕುಟುಂಬಗಳಿಗೆ ಸರಬರಾಜು ಮಾಡಲಾಗುತ್ತದೆ ಎಂದರು.