ಹೆಚ್ಚಿನ ಜನರು ತಾವು ಡ್ರೆಸ್ ಅನ್ನು ಧರಿಸಿಕೊಂಡಾಗ ಆಕರ್ಷಕವಾಗಿ ಕಾಣಬೇಕು ಎಂದು ಬಯಸುತ್ತಾರೆ. ಕೆಲವರಿಗೆ ತಮ್ಮ ಡ್ರೆಸ್ ಮೇಲೆ ಜಾಕೆಟ್ (Jacket Tips) ಧರಿಸುವ ಅಭ್ಯಾಸವಿರುತ್ತದೆ. ಜಾಕೆಟ್ಗಳನ್ನು ನಿಮ್ಮ ಡ್ರೆಸ್ಗೆ ಸರಿ ಹೊಂದುವ ರೀತಿಯಲ್ಲಿ ಧರಿಬೇಕು. ಇಲ್ಲವಾದರೆ ಇದರಿಂದ ನಿಮ್ಮ ಲುಕ್ ಚೆನ್ನಾಗಿ ಕಾಣಿಸುವುದಿಲ್ಲ. ಹಾಗಾಗಿ ನೀವು ವಿಭಿನ್ನವಾಗಿ ಡ್ರೆಸ್ ಧರಿಸುವ ಬಗ್ಗೆ ಯೋಚಿಸುವುದಾದರೆ, ಕ್ಲಾಸಿಕ್ ಜಾಕೆಟ್ ಬಹುಶಃ ನಿಮ್ಮ ಯೋಚನೆಗೆ ಅತ್ಯುತ್ತಮ ಉಡುಗೆಯಾಗಿದೆ ಮತ್ತು ಇದನ್ನು ಹೆಚ್ಚಿನ ಜನರು ಆಯ್ಕೆ ಮಾಡುತ್ತಾರೆ. ಆದ್ದರಿಂದ ಈ ಜಾಕೆಟ್ಗಳನ್ನು ಧರಿಸಿ ನಿಮ್ಮ ನೋಟವನ್ನು ಹೆಚ್ಚಿಸಿಕೊಳ್ಳಿ. ಫ್ಯಾಬ್ಅಲಿಯ ಸಹ-ಸಂಸ್ಥಾಪಕ ತನ್ವಿ ಮಲಿಕ್, ಜಾಕೆಟ್ ಧರಿಸುವ ಮೂಲಕ ನಿಮ್ಮ ಲುಕ್ ಅನ್ನು ಆಕರ್ಷಕವಾಗಿ ಕಾಣುವಂತೆ ಮಾಡಲು ಕೆಲವು ಮಾರ್ಗಗಳನ್ನು ಸೂಚಿಸಿದ್ದಾರೆ. ಅದರ ಬಗ್ಗೆ ತಿಳಿದುಕೊಳ್ಳಿ.
ಲೆದರ್ ಬೈಕರ್ ಜಾಕೆಟ್
ಹೆಚ್ಚು ಸ್ಟೈಲಿಶ್ ಆಗಿ ಕಾಣಲು ನಿಮ್ಮ ಲೆದರ್ ಬೈಕರ್ ಜಾಕೆಟ್ ಅನ್ನು ಕ್ಯಾಮಿಯೋ ಪ್ಯಾಂಟ್ ನೊಂದಿಗೆ ಧರಿಸಿ. ಫ್ಯಾಷನ್ನಲ್ಲಿ ನೀವು ಹೆಚ್ಚು ಒಲವನ್ನು ಹೊಂದಿದ್ದೀರಿ ಎಂಬುದನ್ನು ತೋರಿಸಲು ಇದರ ಜೊತೆ ಬೀನಿ ಮತ್ತು ಹೀಲ್ಸ್ ಧರಿಸಬಹುದು. ಲೇದರ್ ಜಾಕೆಟ್, ಬ್ಲಾಕ್ ಟೈಟ್ಸ್ ಮತ್ತು ಕೊಂಬ್ಯಾಟ್ ಬೂಟ್ಗಳೊಂದಿಗೆ ವೈಟ್ ಡ್ರೆಸ್ ಧರಿಸಿದರೆ ನಿಮ್ಮನ್ನು ನೋಡಿದವರು ನಿಮ್ಮ ಕಡೆಗೆ ಆಕರ್ಷಿತರಾಗುವುದಂತೂ ಖಂಡಿತ.
ಬಾಂಬರ್ ಜಾಕೆಟ್
ಚಳಿಗಾಲದ ಫ್ಯಾಷನ್ ನೋಟಕ್ಕಾಗಿ, ಬಾಂಬರ್ ಜಾಕೆಟ್ ಅನ್ನು ಸ್ಕಿನ್ನಿ ಜೀನ್ಸ್ ನೊಂದಿಗೆ ಧರಿಸಿಕೊಂಡು ಸ್ಟೈಲ್ ಆಗಿ ಕಾಣಿರಿ. ನೀವು ಬಹಳ ಸಿಂಪಲ್ ಆಗಿ ಕಾಣಲು ಲಕ್ಸುರಿ ಲೂಸ್ ಟೀಶರ್ಟ್ ಅನ್ನು ಧರಿಸಿ. ಸ್ವಲ್ಪ ಕ್ಯಾಶುಯಲ್ ಆಗಿ ಕಾಣಲು ಬಯಸುವವರು ಬಾಂಬರ್ ಜಾಕೆಟ್ಗಳನ್ನು ಆಯ್ಕೆ ಮಾಡಿ. ಬೂದು ಬಣ್ಣದ ಬಾಂಬರ್ ಜಾಕೆಟ್ ಧರಿಸಿ ಮತ್ತು ಅದನ್ನು ನಿಮ್ಮ ಜೀನ್ಸ್ ಮತ್ತು ಸ್ವೆಟರ್ ನೊಂದಿಗೆ ಧರಿಸಿದರೆ ಚೆನ್ನಾಗಿ ಕಾಣುತ್ತದೆ.
ವೆಲೌರ್ ಜಾಕೆಟ್
ಚಳಿಗಾಲದಲ್ಲಿ ಆರಾಮದಾಯಕವಾಗಿ ಕೆಲಸ ಮಾಡಲು ಆರಾಮದಾಯಕವಾದ ವೆಲ್ವೆಟ್ ಬ್ಲೇಜರ್ ನೊಂದಿಗೆ ಮ್ಯಾಕ್ಸಿ ಸ್ಕರ್ಟ್ ಅನ್ನು ಧರಿಸಿ. ವೆಲ್ವೆಟ್ ಜಾಕೆಟ್ ಯಾವುದೇ ಡ್ರೆಸ್ಗೆ ಸರಿಯಾಗಿ ಹೊಂದಿಕೊಳ್ಳುತ್ತದೆ. ಆದರೆ ಡಾರ್ಕ್ ರೆಡ್ ಕಲರ್ ವೆಲ್ವೆಟ್ ಬ್ಲೇಜರ್ ಯಾವುದೇ ಡ್ರೆಸ್ಗೆ ಬಹಳ ಉತ್ತಮವಾಗಿ ಕಾಣುತ್ತದೆ.
ಡೆನಿಮ್ ಜಾಕೆಟ್
ಈ ಜಾಕೆಟ್ ಎಲ್ಲಾ ಡ್ರೆಸ್ಗೂ ಸರಿಹೊಂದುತ್ತದೆ ಮತ್ತು ಎಲ್ಲಾ ಪಾರ್ಟಿ ಫಂಕ್ಷನಿಗೂ ಇದು ಸೂಕ್ತವಾಗಿದೆ. ನೀವು ಆಕರ್ಷಕವಾದ ನೋಟವನ್ನು ತಕ್ಷಣವೇ ಪಡೆಯಲು ಕಪ್ಪು ಬಣ್ಣದ ಡೆನಿಮ್ ಜಾಕೆಟ್ ಧರಿಸಿ.
ಕಪ್ಪು ಲೆದರ್ ಜಾಕೆಟ್
ಇದನ್ನು ನಿಮ್ಮ ಸ್ಕೇಟರ್ ಡ್ರೆಸ್ಗಳು ಮತ್ತು ಸ್ಟಾಕಿಂಗ್ಗಳೊಂದಿಗೆ ಧರಿಸಿದರೆ ಅದು ಆಕರ್ಷಕ ನೋಟವನ್ನು ನೀಡುತ್ತದೆ. ಆದರೆ ನೀವು ಅದನ್ನು ನಿಮ್ಮ ಒರಟಾದ ಡೆನಿಮ್ ಮತ್ತು ಬೂಟ್ನೊಂದಿಗೆ ಧರಿಸಿದರೆ ಅದರಲ್ಲಿ ನೀವು ಅಸಹ್ಯವಾಗಿ ಕಾಣುತ್ತೀರಿ.
ಜಾಕೆಟ್ ಲುಕ್ನಲ್ಲಿ ಗ್ಲಾಮರ್ ಆಗಿ ಕಾಣಲು ಕೆಲವು ಸುಲಭ ಮಾರ್ಗಗಳು
ಡ್ರೆಸ್ಗಳೊಂದಿಗೆ ಜಾಕೆಟ್ಗಳು:
ರಜಾದಿನದಲ್ಲಿ ಮೋಜು ಮಸ್ತಿ ಮಾಡಲು ಹೊರಗಡೆ ಹೋಗುವಾಗ ಉತ್ತಮ ನೋಟಕ್ಕಾಗಿ ನಿಮ್ಮ ಡ್ರೆಸ್ ಜೊತೆ ಜಾಕೆಟ್ಗಳನ್ನು ಧರಿಸಿ.
ಆ್ಯಂಕಲ್ ಲೆಂಥ್ ಪ್ಯಾಂಟ್ ಜೊತೆಗೆ ಜಾಕೆಟ್ಗಳು:
ಲೆದರ್ ಜಾಕೆಟ್ ಯಾವುದೇ ಡ್ರೆಸ್ಗೆ ಸೂಕ್ತವಾಗಿದೆ. ಹಾಗಾಗಿ ಲೈಟ್ವೈಟ್ ನಿಟ್ ಮತ್ತು ಕ್ಲಾಸಿಕ್ ಪಂಪ್ಗಳೊಂದಿಗೆ ಆ್ಯಂಕಲ್ ಲೆಂಥ್ ಸ್ಲಿಮ್ ಪ್ಯಾಂಟ್ ಅನ್ನು ಧರಿಸಿ.
ಇದನ್ನೂ ಓದಿ: ಬ್ರಾಗಳಲ್ಲಿ ಎಷ್ಟೊಂದು ವಿಧ? ಯಾರಿಗೆ ಯಾವುದು ಸೂಕ್ತ? ಇಲ್ಲಿದೆ ಸಚಿತ್ರ ಮಾಹಿತಿ!
ಪೆನ್ಸಿಲ್ ಸ್ಕರ್ಟ್ ಮತ್ತು ಹೀಲ್ಸ್ ನೊಂದಿಗೆ ಜಾಕೆಟ್ಗಳು: ನೈಟ್ ಡೇಟಿಂಗ್ಗೆ ಇದು ಬಹಳ ಸೂಕ್ತವಾಗಿದೆ. ಇದರ ಜೊತೆಗೆ ಮಿಡಿ ಸ್ಕರ್ಟ್ ಅಥವಾ ಮ್ಯಾಕ್ಸಿ ಸ್ಕರ್ಟ್ ಉತ್ತಮ ಆಯ್ಕೆಗಳಾಗಿವೆ.