Sunday, 15th December 2024

ಎರಡನೇ ಟೆಸ್ಟ್: ಜೆಮೀಸನ್‌ ದಾಳಿಗೆ ಕಂಗೆಟ್ಟ ಪಾಕಿಸ್ತಾನ

ಕ್ರೈಸ್ಟ್‌ಚರ್ಚ್‌: ನ್ಯೂಜಿಲ್ಯಾಂಡ್‌ ಮತ್ತು ಪ್ರವಾಸಿ ಪಾಕ್‌ ನಡುವೆ ನೂತನ ವರ್ಷಾರಂಭದ ಮೊದಲ ಟೆಸ್ಟ್‌ ಪಂದ್ಯ ಭಾನುವಾರ ಕ್ರೈಸ್ಟ್‌ಚರ್ಚ್‌ನಲ್ಲಿ ಆರಂಭವಾಗಿದೆ.

ಮೊದಲು ಬ್ಯಾಟಿಂಗ್ ನಡೆಸಿದ ಪಾಕಿಸ್ಥಾನ ತಂಡ ಕೈಲ್ ಜಾಮಿಸನ್ ದಾಳಿಗೆ ನಲುಗಿ ಕೇವಲ 83 ರನ್ ಗೆ ನಾಲ್ಕು ವಿಕೆಟ್ ಕಳೆದುಕೊಂಡಿತ್ತು. ಇತ್ತೀಚಿನ ವರದಿ ಪ್ರಕಾರ, ಪಾಕಿಸ್ತಾನ ಒಂಬತ್ತು ವಿಕೆಟ್‌ ಕಳೆದುಕೊಂಡು 293 ರನ್‌ ಗಳಿಸಿದೆ. ಅಜರ್ ಅಲಿ (93 ರನ್) ಮತ್ತು ನಾಯಕ ಹಾಗೂ ಕೀಪರ್‌ ರಿಜ್ವಾನ್ (61 ರನ್ ) ಉತ್ತಮ ಜೊತೆಯಾಟ ಆಡಿದರು. ಬಳಿಕ ಫಾಹಿಮ್‌ ಅಶ್ರಫ್‌ 48 ರನ್‌ ಗಳಿಸಿ ತಮ್ಮ ಕಾಣಿಕೆ ನೀಡಿದರು

ಪಂದ್ಯವನ್ನು ಗೆದ್ದರೆ ಅಥವಾ ಡ್ರಾ ಮಾಡಿಕೊಂಡರೆ ನ್ಯೂಜಿಲ್ಯಾಂಡ್‌ ಮೊದಲ ಬಾರಿಗೆ ಐಸಿಸಿ ಟೆಸ್ಟ್‌ ಟೀಮ್‌ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಅಲಂಕರಿಸಲಿದೆ. ಮೊದಲ ಪಂದ್ಯವನ್ನು 101 ರನ್ನುಗಳ ಅಂತರದಿಂದ ಗೆದ್ದಿರುವ ನ್ಯೂಜಿಲ್ಯಾಂಡ್‌, ದ್ವಿತೀಯ ಹಾಗೂ ಅಂತಿಮ ಟೆಸ್ಟ್‌ ಪಂದ್ಯವನ್ನೂ ಗೆಲ್ಲುವ ನೆಚ್ಚಿನ ತಂಡವಾಗಿದೆ.

ನ್ಯೂಜಿಲ್ಯಾಂಡ್‌ ತಂಡದ ನಾಯಕ ಕೇನ್‌ ವಿಲಿಯಮ್ಸನ್‌ 5 ವರ್ಷಗಳ ಬಳಿಕ ಮೊದಲ ಸಲ ನಂ.1 ಟೆಸ್ಟ್‌ ಬ್ಯಾಟ್ಸ್‌ಮನ್‌ ಆಗಿಯೂ ಮೂಡಿಬಂದಿದ್ದಾರೆ.