Thursday, 28th November 2024

ಖಾಸಗಿ ತಂತ್ರ – 200 ವೈದ್ಯ ವಿದ್ಯಾರ್ಥಿಗಳು ಅತಂತ್ರ

ನಾಳೆ ಪರೀಕ್ಷೆ, ಇನ್ನೂ ಪ್ರವೇಶಪತ್ರವೇ ಬಂದಿಲ್ಲ

ಖಾಸಗಿ ಕಾಲೇಜುಗಳ ಬಣ್ಣ ಬಯಲು

ವಿಶೇಷ ವರದಿ: ಶಿವಕುಮಾರ್ ಬೆಳ್ಳಿತಟ್ಟೆೆ

ಬೆಂಗಳೂರು: ರಾಜ್ಯಾದ್ಯಂತ ವೈದ್ಯಕೀಯ ಕೋರ್ಸ್ಗಳ ವಾರ್ಷಿಕ ಪರೀಕ್ಷೆ ಮಂಗಳವಾರ ಆರಂಭವಾಗಲಿದ್ದು, 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲು ಸಾಧ್ಯವಿಲ್ಲದೆ ಅತಂತ್ರರಾಗಿದ್ದಾರೆ.

ಸುಮಾರು 10 ದಿನಕ್ಕೂ ಹೆಚ್ಚು ಕಾಲ ನಡೆಯುವ ಈ ಪರೀಕ್ಷೆಗೆ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಜರಾಗುತ್ತಿದ್ದು ಇವರ ಕಿ
250ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರವೇಶ ಪತ್ರದ ಇಲ್ಲದೆ ಪರೀಕ್ಷೆಯಿಂದ ದೂರ ಉಳಿಯುವಂತಾಗಿದೆ. ಅಂದಹಾಗೆ ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಅಭ್ಯಾಸ ಮಾಡುತ್ತಿರುವ ಪೇಮೆಂಟ್ ಸೀಟುಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಈ ಸಮಸ್ಯೆ ಉಂಟಾ ಗಿದ್ದು ಇದರಿಂದ ಸರ್ಕಾರ ಮತ್ತು ಖಾಸಗಿ ಸಂಸ್ಥೆೆಗಳು ಸೇರಿ ಅಕ್ರಮ ನಡೆಸಿರುವುದು ಬೆಳಕಿಗೆ ಬಂದಿದೆ.

ಎರಡು ವರ್ಷಗಳ ಹಿಂದೆ ವಿದ್ಯಾರ್ಥಿಗಳಿಂದ ಹಣ ಪಡೆದು ಸೀಟು ಹಂಚಿಕೆ ಮಾಡಿದ್ದ ಖಾಸಗಿ ವೈದ್ಯಕೀಯ ಕಾಲೇಜುಗಳು ಅದನ್ನು ಸರ್ಕಾರ ಮಟ್ಟದಲ್ಲಿ ಅನುಮೋದಿಕೊಳ್ಳುವಲ್ಲಿ ವಿಫಲವಾಗಿರುವ ಪರಿಣಾಮ ವಿದ್ಯಾಾರ್ಥಿಗಳು ಪರೀಕ್ಷೆಯಿಂದ ದೂರ ಉಳಿಯುವಂತಾಗಿದೆ.

ಅಂದರೆ ಖಾಸಗಿ ಮತ್ತು ಸರಕಾರಿ ಸೀಟು ಹಂಚಿಕೆ ಗಳ ನಂತರ ಉಳಿಯುವ ಎನ್‌ಆರ್‌ಐ ಮತ್ತು ಇತರ ಸೀಟುಗಳನ್ನು ಖಾಸಗಿ ಕಾಲೇಜುಗಳು ಮ್ಯಾನೇಜ್ಮೆಂಟ್ ಸೀಟುಗಳಾಗಿ ಪರಿವರ್ತಿಸಿ ಹಂಚಿಕೆ ಮಾಡಿಕೊಳ್ಳುತ್ತವೆ. ಆದರೆ, 2018 ಸಾಲಿನ ಸೀಟುಗಳನ್ನು ಖಾಸಗಿ ವೈದ್ಯಕೀಯ ಕಾಲೇಜುಗಳು ಸರಕಾರ ಮಟ್ಟದಲ್ಲಿ ಅನುಮೋದಿಸಿಕೊಳ್ಳದೆ ಮಾಡಿರುವ ತಪ್ಪಿನಿಂದ ಈಗ ವಿದ್ಯಾರ್ಥಿಗಳು ಶಿಕ್ಷೆ ಅನುಭವಿಸುವಂತಾಗಿದೆ.

ಪರೀಕ್ಷೆಗೆ ಇನ್ನೂ 24 ಗಂಟೆಗಳು ಮಾತ್ರ ಉಳಿದಿದ್ದು ವಿದ್ಯಾರ್ಥಿಗಳು ಪ್ರದೇಶ ಪತ್ರಕ್ಕಾಗಿ ಕಚೇರಿಯಿಂದ ಕಚೇರಿಗೆ  ಅಲೆಯು ತ್ತಿದ್ದಾರೆ. ಕಾಲೇಜು ಆಡಳಿತ ಮಂಡಳಿ ಕೇಳಿದರೆ ವಿಶ್ವವಿದ್ಯಾಲಯ ಕಡೆ ಎರಡು ತೋರಿಸುತ್ತಿದ್ದಾರೆ. ವಿಶ್ವವಿದ್ಯಾಲಯ ದವರನ್ನು ಕೇಳಿದರೆ ಸರ್ಕಾರದ ಕಡೆ ಬೊಟ್ಟು ಮಾಡುತ್ತಿದ್ದಾರೆ. ಇದರಿಂದ ಅತಂತ್ರಕ್ಕೆ ಈಡಾಗಿರುವ ವಿದ್ಯಾರ್ಥಿಗಳು ತಮ್ಮ ಭವಿಷ್ಯ ಏನಾಗುವುದು ಎನ್ನುವ ಆತಂಕ ಎದುರಿಸುತ್ತಿದ್ದಾರೆ.

ಏನಿದು ಅಕ್ರಮ?: ಹಿಂದಿನ ಸರಕಾರದಲ್ಲಿ 2018-19 ಸಾಲಿನಲ್ಲಿ ರಾಜ್ಯದಲ್ಲಿ ಸುಮಾರು 250 ವೈದ್ಯಕೀಯ ಸೀಟುಗಳು ಉಳಿದಿ ದ್ದವು. ಇವುಗಳನ್ನು ಖಾಸಗಿ ಕಾಲೇಜುಗಳು ಮ್ಯಾನೇಜ್ಮೆಂಟ್ ಕೋಟಾ ದಡಿ ಹಣ ಪಡೆದು ಹಂಚಿಕೆ ಮಾಡಿಕೊಂಡವು. ಆನಂತರ ದಲ್ಲಿ ಖಾಸಗಿ ಕಾಲೇಜುಗಳು ಈ ಪೇಮೆಂಟ್ ಸೀಟುಗಳನ್ನು ಸರಕಾರ ಮಟ್ಟದಲ್ಲಿ ಅನುಮೋದಿಸಿ ಎಂಸಿಐ ಮಾನ್ಯತೆ ಪಡೆಯ ಬೇಕಿತ್ತು. ಅಂದು ವೈದ್ಯಕೀಯ ಶಿಕ್ಷಣ ಸಚಿವರಾಗಿದ್ದ ಡಿ.ಕೆ.ಶಿವಕುಮಾರ್ ಅವರ ಮೇಲೆ ಒತ್ತಡ ತಂದು ಈ ಕೆಲಸ ಮಾಡಿಸುವಲ್ಲಿ ಕಾಲೇಜುಗಳು ವಿಫಲವಾಗಿದ್ದವು. ನಂತರ ತುಕಾರಾಂ ಸಚಿವರಾದಾಗಲೂ ಇದಕ್ಕೆ ಸಂಬಂಧಿಸಿದ ಕಡತ ಮುಂದೆ ಹೋಗಲಿಲ್ಲ.

ಇನ್ನು ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸರಕಾರ ಬರುತ್ತಿದ್ದಂತೆ ಕಡತ ಇನ್ನೂ ಮೂಲೆಗುಂಪಾಯಿತು. ಇದೀಗ ಸುಧಾಕರ್ ಅವರು ವೈದ್ಯಕೀಯ ಶಿಕ್ಷಣ ಸಚಿವರಾಗಿದ್ದ ಈ ಸಮಸ್ಯೆೆ ಇನ್ನೂ ಬಗೆಹರಿದಿಲ್ಲ. ಈ ಬಗ್ಗೆ ಸರಕಾರದ ಗಮನ ಸೆಳೆದು ವಿದ್ಯಾರ್ಥಿಗಳ ಸಮಸ್ಯೆ ತಪ್ಪಿಸಬೇಕಾದ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ನಿಟ್ಟಿನಲ್ಲಿ ಮಾಡಿದ ಪ್ರಯತ್ನ ಶೂನ್ಯ. ಎಲ್ಲ ಕಾಲೇಜುಗಳ ಪ್ರಾಂಶುಪಾಲರು ಮತ್ತು ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ತಟ್ಟುತ್ತಿದ್ದು ಇದಕ್ಕೆ ವಿವಿ ಪ್ರತಿಕ್ರಿಯೆ ನೀಡು ತ್ತಿಲ್ಲ. ಈ ಬಗ್ಗೆ ಕುಲಪತಿ ಡಾಕ್ಟರ್ ಸಚ್ಚಿದಾನಂದರನ್ನು ಸಂಪರ್ಕಿಸಲು ಯತ್ನಿಸಿದರೆ ಯಾರಿಗೂ ಸಿಗುತ್ತಿಲ್ಲ ಎನ್ನುತ್ತಿದ್ದಾರೆ ಪೋಷಕರು.

ಏನಿದು ಪೇಮೆಂಟ್ ಸಮಸ್ಯೆೆ ?
ಪ್ರತಿವರ್ಷ ರಾಜ್ಯದಲ್ಲಿ ವೈದ್ಯಕೀಯ ಸೀಟು ಹಂಚಿಕೆ ಮಾಡುವಾಗ ಎನ್‌ಆಐ ( ವಿದೇಶಿಯರಿಗೆ) ಹಾಗೂ ಇತರ ಕ್ಷೇತ್ರಗಳಿಗೆ ಶೇಕಡ 10 ರಷ್ಟು ಸೀಟುಗಳನ್ನು ಮೀಸಲಿಡಲಾಗುತ್ತದೆ. ಆದರೆ ಆ ಸೀಟುಗಳಿಗೆ ವಿದೇಶದ ವಿದ್ಯಾರ್ಥಿಗಳು ಕೋರ್ಸ್ ಪೂರ್ಣಾವಧಿಗೆ ಸುಮಾರು ನಾಲ್ಕು ಕೋಟಿ ಪಾವತಿಸಬೇಕಾಗುತ್ತದೆ. ಇಂಥ ಸೀಟುಗಳನ್ನು ಪಡೆಯಲು ಬಹುತೇಕ ವಿದ್ಯಾರ್ಥಿಗಳು ಹಿಂದೆ ಸರಿಯುತ್ತಾರೆ. ಆ ಸಂದರ್ಭದಲ್ಲಿ ಖಾಸಗಿ ವೈದ್ಯಕೀಯ ಕಾಲೇಜುಗಳು ಉಳಿದ ಸೀಟುಗಳನ್ನು ತಮ್ಮದೇ ಮ್ಯಾನೇಜ್ಮೆಂಟ್ ಸೀಟು ಗಳಾಗಿ ಪರಿವರ್ತಿಸಿಕೊಳ್ಳುತ್ತವೆ. ಹಾಗೆಯೇ ಅವುಗಳನ್ನು ವಿದ್ಯಾರ್ಥಿಗಳಿಂದ ಹಣ ಪಡೆದು ಹಂಚಿಕೆ ಮಾಡುತ್ತವೆ.

ನಂತರ ಈ ಸೀಟುಗಳ ಹಂಚಿಕೆ ಬಗ್ಗೆೆ ಕಾಲೇಜು ಗಳು ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಮೂಲಕ ಸರಕಾರಕ್ಕೆ  ಕಳುಹಿಸಿ ಅನುಮೋದನೆ ಪಡೆಯುತ್ತದೆ. ಪರಿಣಾಮ ಆ ಸೀಟುಗಳಿಗೆ ಕೇಂದ್ರದ ವೈದ್ಯಕೀಯ ಶಿಕ್ಷಣ ಪರಿಷತ್ತಿನ ಮಾನ್ಯತೆ
ಸಿಗುತ್ತದೆ. ಆದರೆ ಈ ಎಲ್ಲಾ ಹಂತಗಳನ್ನು ರಾಜ್ಯ ಸರಕಾರ ಪಾಲಿಸದೆ ಈಗ ವಿದ್ಯಾರ್ಥಿಗಳು ಅತಂತ್ರರಾಗಿದ್ದಾರೆ.

***

ವಿದ್ಯಾರ್ಥಿಗಳಿಗೆ ಪ್ರವೇಶ ಪತ್ರ ಬಂದಿಲ್ಲ ಎಂದರೆ ಕಾಲೇಜಿನ ವರಾದ ನಾವು ಏನೂ ಮಾಡಲಾಗದು. ಇದು ವಿಶ್ವವಿದ್ಯಾಲಯದ ಜವಾಬ್ದಾರಿ. ಇದರ ಹಿಂದೆ ಏನಿದೆಯೋ ನನಗೆ ಗೊತ್ತಿಲ್ಲ.
– ಡಾ.ಉಮೇಶ್ ಚಂದ್ರ, ಮಹಾದೇವಪ್ಪ ರಾಂಪುರೆ ವೈದ್ಯಕೀಯ ಕಾಲೇಜು, ಡೀನ್, ಕಲಬುರಗಿ

ನನ್ನಂತೆ ಅನೇಕ ವಿದ್ಯಾರ್ಥಿಗಳಿಗೆ ಕಳೆದ ವರ್ಷವೂ ಇದೇ ರೀತಿ ಸಮಸ್ಯೆ ಆಗಿತ್ತು. ಈಗ ಪರೀಕ್ಷೆಗೆ 24ಗಂಟೆ ಉಳಿದಿದೆ.
ಪ್ರವೇಶಪತ್ರ ಬರೆದಿದ್ದರೆ ನನ್ನ ಭವಿಷ್ಯವೇನು. ನಾವು ನಿಯಮ ಪಾಲಿಸಿ ಶುಲ್ಕ ಪಾವತಿಸಿದ್ದೇವೆ ಆದರೂ ಏಕೆ ತೊಂದರೆ.
– ಅನಘ ದ್ವಿತೀಯ ವರ್ಷದ ವಿದ್ಯಾರ್ಥಿನಿ