ತುಮಕೂರು : ತಾಲೂಕಿನ ಹೆಬ್ಬೂರು ಗ್ರಾಪಂನ ಕಲ್ಕೆರೆ ಮತ್ತು ದೊಡ್ಡಗುಣಿ ಕ್ಷೇತ್ರದಿಂದ ಸ್ಪರ್ಧಿಸಿ ಕರಪತ್ರದ ಮೂಲಕ ವೈರಲ್ ಆಗಿದ್ದ ಗಂಗಮ್ಮ ದೊಡ್ಡಗುಣಿ ಕ್ಷೇತ್ರದಲ್ಲಿ 2 ಮತ್ತು ಕಲ್ಕೆರೆ ಕ್ಷೇತ್ರದಲ್ಲಿ 6 ಮತಗಳನ್ನು ಪಡೆದು ಸೋತಿದ್ದಾರೆ.
ಚಪ್ಪಲಿ ಗುರುತನ್ನು ಹೊಂದಿದ್ದ ಈಕೆ ಚುನಾವಣೆಯಲ್ಲಿ ಗೆದ್ದರೆ ಏನು ಮಾಡಬಹುದು? ಸೋತರೆ ಏನು ಮಾಡುತ್ತೇನೆ ಎಂದು ಕರಪತ್ರದಲ್ಲಿ ಮುದ್ರಿಸಿ ಭಾರಿ ಚರ್ಚೆಗೆ ಗ್ರಾಸವಾಗಿ ದ್ದರು. ಕದನದಲ್ಲಿ ಠೇವಣಿ ಕಳೆದುಕೊಂಡಿರುವ ಗಂಗಮ್ಮ, ಸೋತಾಗ ಮಾಡುವ ಕಾರ್ಯಗಳನ್ನು ಹೇಗೆ ನಿರ್ವಹಿಸುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.
ಸೋತರೆ 25 ಕುಟುಂಬಗಳ ಅನರ್ಹ ಪಡಿತರ ಚೀಟಿ ರದ್ದು, 40 ಕುಟುಂಬಗಳ ಅಕ್ರಮ ಮಾಸಿಕ ಭತ್ಯೆ, 11 ಕುಟುಂಬಗಳು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವುದನ್ನು ನಿಲ್ಲಿಸುತ್ತೇನೆ ಎಂದು ಭರವಸೆ ನೀಡಿದ್ದರು.
ಇವರ ಪತಿ ಶ್ರೀನಿವಾಸ್ ಕೂಡ ಪ್ರತಿ ಚುನಾವಣೆಯಲ್ಲಿಯೂ ಸ್ಪರ್ಧಿಸಿ ಠೇವಣಿ ಕಳೆದುಕೊಳ್ಳುತ್ತಿದ್ದಾರೆ. ಸೋಲು, ಗೆಲುವು ಮುಖ್ಯವಲ್ಲ ಸ್ಪರ್ಧೆ ಮುಖ್ಯ ಎಂಬುದು ಗಂಗಮ್ಮನ ಅಭಿಪ್ರಾಯ.