ಫೆ. 27, 28ರಂದು ಎರಡು ದಿನಗಳ ಕಾಲ ವರ್ಚುವಲ್ ಮೂಲಕ ಟೈಕಾನ್ ಸಮಾವೇಶ
ವಿಶೇಷ ವರದಿ: ವಿಶಾಲ ನಾಡಗೌಡ
ಹುಬ್ಬಳ್ಳಿ: ಉತ್ತರ ಕರ್ನಾಟಕದಾಗ ಹುಬ್ಬಳ್ಳಿ ಸುಪ್ರಸಿದ್ಧ ಊರುಅನ್ನೋದರಾಗ ಸಂಶಯ ಇಲ್ಲ. ಕಲೆ ಸಾಹಿತ್ಯದ ತವರಾದ ಧಾರವಾಡ ಜಿಲ್ಲಾದಾಗಿನ ಸಮೃದ್ಧ ವ್ಯಾಪಾರಿ ನಗರ ಇದು. ಛೋಟಾ ಮುಂಬಯಿ ಅಂತನೂ ಅಂತಾರ ಹುಬ್ಬಳ್ಳಿಗೆ ಕನ್ನಡ ನಾಡಿನ ಹೆಚ್ಚಿನ ಪ್ರತಿಭೆಗಳಿಗೆ ಕಾರಣವಾದ ಹುಬ್ಬಳ್ಳಿ ನೆಲದಾಗ ಹಿಂದುಸ್ಥಾನಿ ಸಂಗೀತ ಲೋಕದ ಗಾನ ವಿದೂಷಿಗಳು ಪದ್ಮಶ್ರೀ ಗಂಗೂಬಾಯಿ ಹಾನಗಲ್ ಬಾಳಿದರು.
ಭಾರತರತ್ನ ಪಂಡಿತ ಭೀಮಸೇನ ಜೋಶಿ ಅವರಿಗೆ, ಜ್ಞಾನಪೀಠ ಪುರಸ್ಕಾರ ವಿಜೇತರಾದ ವರಕವಿ ದ. ರಾ. ಬೇಂದ್ರೆಯವರು, ದಿ. ವಿ. ಕೃ. ಗೋಕಾಕರು, ಡಾ.ಗಿರಿಶ ಕಾರ್ನಾಡರು ಮತ್ತಿತರ ಹಲವಾರು ದಿಗ್ಗಜರಿಗೆ ಹುಬ್ಬಳ್ಳಿ ನಗರ ಒಡನಾಟ ಇದ್ದದ್ದು. ವ್ಯಾಪಾರಿ ಮನೋಭಾವದ ಹುಬ್ಬಳ್ಳಿ ಮಂದಿಯ ಕ್ರಿಯಾಶೀಲ ಮನಸ್ಸಿನ್ಯಾಗ ಕಂಪ್ಯೂಟರ್ ಕ್ಷೇತ್ರದಾಗ ಹೆಸರು ಮಾಡಿದ ವಿ.ಆರ್.ಎಲ್ ಖ್ಯಾತಿಯ ವಿಜಯ ಸಂಕೇಶ್ವರ್ ಅವರು, ಡಾ.ಸುಧಾ ಮೂರ್ತಿಯವರು, ದೇಶಪಾಂಡೆಯವರು ತುಂಬಿಕೊಂಡಾರ.
ಜಗತ್ತಿನ ನಕ್ಷೆಯೊಳಗ ಹುಬ್ಬಳ್ಳಿ ಹೆಸರನ್ನ ಅಜರಾಮರ ಮಾಡಿದ ಮಹಾನುಭಾವರು ಇವರು. ಕ್ರೀಮ್ ಆಫ್ ಹುಬ್ಬಳ್ಳಿ-ಧಾರವಾಡ ಕೆನಿನ ಇಷ್ಟು ಗಟ್ಟಿ ಮತ್ತು ರುಚಿ ಇರಬೇಕಾದರ, ಹಾಲು ಎಷ್ಟು ರುಚಿ ಮತ್ತ ಪೌಷ್ಟಿಕವಾಗಿರಬೇಕು ಅನ್ನೋ ವಿಷಯ ವಿಚಾರ ಮಾಡುವಂತಹದ್ದು. ಜಾಗತಿಕ ಮಟ್ಟದಾಗ ಹೆಸರು ಮಾಡಬಲ್ಲಂತಹ ಹಲವಾರು ಪ್ರತಿಭೆಗಳು ಯುವ ಶಕ್ತಿಗಳು ಹುಬ್ಬಳ್ಳಿ-ಧಾರವಾಡದ ತುಂಬ ತುಂಬ್ಯಾವ. ಅವುಗಳಿಗೆ ಸೂಕ್ತ ಮಾರ್ಗದರ್ಶನ ಮತ್ತ ಅವಕಾಶಗಳು ಬೇಕು.
ಬೆಂಗಳೂರು-ಮುಂಬಯಿ, ಗೋವಾಗಳಂತಹ ದೊಡ್ಡ ಊರಗಳೊಳಗ ಇದ್ದಂತಹ ಅವಕಾಶಗಳು, ತರಬೇತಿ ಕೇಂದ್ರಗಳು, ಶಿಕ್ಷಣ ವ್ಯವಸ್ಥೆ ಇರಲಿಕ್ಕಿಲ್ಲ ಇಲ್ಲಿ. ಆದರ ಆ ಎಲ್ಲ ವ್ಯವಸ್ಥೆಗಳನ್ನ ಮಾಡಬೇಕು, ಹುಬ್ಬಳ್ಳಿ-ಧಾರವಾಡ ಮಂದಿ ಎತ್ತರಕ್ಕ ಬೆಳಿಬೇಕು
ಅಂತ ಅದಮ್ಯ ಚೇತನದಿಂದ ದುಡಿಯುವ ಒಂದು ಸಂಸ್ಥಾ ಇಲ್ಲೇ ಅದ… ಅದ ಟೈ… ಪ್ರತಿವರ್ಷ ಎರಡು-ಮೂರು ದಿನದ ಸಮಾವೇಶ ಮಾಡಿ ಅದರಾಗ ಅಂತಾರಾಷ್ಟ್ರೀಯ ಮಟ್ಟದಾಗ ಸಾಧನೆ ಮಾಡಿದ ಸಾಧಕರೊಂದಿಗೆ ಸಂವಾದ ಮಾಡತಾರ
ಅಷ್ಟೇ ಅಲ್ಲ, ಹೊಸ ಎಂಟಪ್ರಿನರ್ಸ್ ಗೆ ಅವಕಾಶ ಮತ್ತ ಅವಾರ್ಡ್ ಕೊಡತಾರ… ಹೊಸ ಉದ್ಯೋಗಿಗಳಿಗೆ ಸೂಕ್ತ ಮಾರ್ಗದರ್ಶನ ನೀಡೋದಲ್ಲದ, ಆರ್ಥಿಕ ಬಲ ಒದಗಿಸೋ ವ್ಯವಸ್ಥಾ ಮಾಡತಾರ.
48 ರಿಂದ 72 ತಾಸುಗಳ ಕಾಲದೇಶದ ವಿವಿಧ ಮೂಲೆಗಳಿಂದ ಈ ಸಮಾವೇಶದಾಗ ಭಾಗವಹಿಸುವ ಉದ್ಯಮಿಗಳು ವಿಚಾರ ವಿನಿಮಯ ಮಾಡೋದರಿಂದ ಹೊಸ ಜೀವನಕ್ಕ ನಾಂದಿ ಹಾಡತಾರ ಅನ್ನೋದು ಸಂಶಯವಿಲ್ಲ… 12 ವರ್ಷದಿಂದ ಯಶಸ್ವಿಯಾಗಿ ನಡಕೊಂಡ ಬಂದು ಈ ವರ್ಷ 13ನೇ ಸಮಾವೇಶ ಹುಬ್ಬಳ್ಳಿಯೊಳಗ ಫೆ. 27,28 ರಂದು ನಡೆಯುತ್ತದ.
ಈ ವರ್ಷದ ವಿಶೇಷತೆ ಏನಂದ್ರ ಕರೋನಾದಿಂದ ಸಂತ್ರಸ್ತವಾಗಿದ್ದ ಜಗತ್ತಿಗೆ ಕೀಲಿ ಬಿದ್ದ ಕಾಲ! ಮಾರಿ ಮುಚಗೊಂದ
ಓಡಾಡೋ ಕಾಲ, ಯಾರು ಯಾನ್ನು ಭೆಟ್ಟಿ ಆಗೋ ಹಂಗಿಲ್ಲ, ಮಾತಾಡೋ ಹಂಗಿಲ್ಲ ಆದರ ಸಮಾವೇಶ ನಿಂದರಿಸೋ ಹಂಗಿಲ್ಲ. ಉತ್ತರ ಕರ್ನಾಟಕದ ಯುವ ಪ್ರತಿಭೆಗಳಿಗೆ ಅನ್ಯಾಾಯ ಆಗೋಹಂಗಿಲ್ಲ ಅಂತ ಟೈ ಸಂಸ್ಥಾ ತಿರ್ಮಾನಿಸಿತು. ಆನ್ಲೈನ್ ವೆಬ್ನಾರ್ ಮಾಡೋದು ಸರಳ ಇತ್ತು. ಖರೇ… ಆದರ ಲಕ್ಷಾಂತರ ಮಂದಿ ಮಾಡಿದ್ದ ನಾವು ಮಾಡಿದರ ಏನ್ ಮಾಡಿದಹಂಗ ಆತು… ಹ್ತರಾಗ ಹನ್ನೊಂದು ಆಗತದ ಅಷ್ಟ.ಅಂದು ಹೊಸಾದನ್ನ ವಿಚಾರ ಮಾಡಿದರು ಅಜಯ ಹಹೊಂಡ ಅಧ್ಯಕ್ಷರು,
ವಿಜಯ ಮಾನೆ ರನ್ವಿನರ್ ಮತ್ತ ವಿಶಾಲ ನಾಡಗೌಡ ಅನ್ನೋ ನಿರ್ದೇಶಕರು.
ಹೆಚ್ಚು ಆಕರ್ಷಕ, ಹೆಚ್ಚು ಇಂಟರೆಸ್ಟಿಂಗ್ ಮತ್ತ ಹೆಚ್ಚು ಪ್ರಯೋಜನಕಾರಿ ಆಗಬಲ್ಲ ಉಪಾಯ ಕಂಡ ಹಿಡಿದರು, ಅದು ಏನಂದರ ಎಲ್ಲ ಚಟುವಟಿಕೆಗ ನ್ನು ಅಡಿಯೊ-ವಿಡಿಯೊ ದಾಖಲೆ ಮಾಡಿ, ಅದನ್ನ ಆಹ್ವಾನಿತ ಸದಸ್ಯರಿಗೆ ಬಿತ್ತರ ಮಾಡೋದು ಅಂತ, ತಯಾರಿ ಶುರು ಆತು… ನಾಡಿನಾದ್ಯಂತ ಸಾಧನೆ ಮಾಡಿದ ಸಾಧಕರ ಪಟ್ಟಿ ಮಾಡಿದರು. ಕ್ರಿಯಾಶೀಲ ನಿರ್ದೇಶಕ ಯಶವಂತ ಸರದೇಶಪಾಂಡೆ (ಹುಬ್ಬಳ್ಳಿ ಪ್ರತಿಭೆ ಅನ್ನೋದು ಇಂಪಾರಟೆಂಟ್) ಅವರನ್ನ ಸಂಪರ್ಕಿಸಿ ಸ್ಪಷ್ಟಬರದ ನಿರ್ದೇಶಿಸರಿ ಅಂದರು. ಸ್ಕ್ರಿಪ್ಟ್ ತಯಾರಾದ ಮ್ಯಾಲೆ ಸಾಧಕರನ್ನ ಸಂಪರ್ಕಿಸಿ ವಿಡಿಯೋ ಮಾಡಲಾಯಿತು.
ಸ್ಥಳೀಯ ಉದ್ಘೋಷಕರನ್ನ ಹುಡುಕಲಾಯಿತು. 3 ತಿಂಗಳ ಶೂಟಿಂಗ್ ಆತು… ಜನವರಿ 30 2021ಕ್ಕೆ ಯುವ ಟೈಕಾನ್ ಅನ್ನೋ ಸಮಾವೇಶ ಯಶಸ್ವಿಯಾಗಿ ಬಿತ್ತರ ಆತು. 70,000ಕ್ಕೂ ಹೆಚ್ಚು ಮಂದಿ ವೀಕ್ಷಿಸಿದರು. ಈ ಹೊಸ ಮಾದರಿಯ ಸಮಾವೇಶವನ್ನು ಸ್ಥಳಿಯ ಪತ್ರಿಕೆಗಳು ಹಾಡಿ ಹೊಗಳಿದರ… ದೂರದ ಅಮೆರಿಕಾದ ಖಾಸಗಿ ವಾಹಿನಿಯೊಂದು ಪ್ರಸಾರದ ಹಕ್ಕು ಕೇಳಿತು.
ಇಂಥಾ ಅದ್ಭುತ ಆಯೋಜನೆಯ ಎರಡನೆ ಹಂತದ ಸಮಾವೇಶ 27, 28 ಫೆಬ್ರವರಿ 2021 ಎರಡ ದಿನಾ ಪ್ರಸಾರ ಆಗಲಿಕತ್ತದ. ಕರೋನಾ ಸಂಬಂಧಿತ ಎಲ್ಲ ಕಾಳಜಿಗಳನ್ನ ವಹಿಸಿ ಒಂದು ದಿನ ಹುಬ್ಬಳ್ಳಿ ಡೆನಿಸನ್ ಹೊಟೇಲದಾಗ ಆಹ್ವಾನಿತ ಸದಸ್ಯರ ಸಭೆ
ನಡೆಯೋದದ. ಮತ್ತ ಎರಡೂ ದಿನ ವಿಶ್ವದಾದ್ಯಂತ ಪ್ರಸಾರ ಆಗೋದದ. ಗಣಪತಿಯಿಂದ ಆರಂಭ ಆಗತಿರೋ ಈ ಸಮಾವೇಶ ಒಟ್ಟ 18 ತಾಸು ಪ್ರಸಾರ ಆಗೋದದ. 20ಕ್ಕೂ ಹೆಚ್ಚು ಸಾಧಕರ ಮಾತುಗಳು ಅದರಾಗ ಮಿಲ್ಕಾಸಿಂಗ್, ನೊನಮ ವಾಂಗಚುಕ್,
ದೇಶಪಾಂಡೆಗಳಂತಹವರು, 20ಕ್ಕೂ ಹೆಚ್ಚು ಪಿಚ್ ಹಬ್ಗಳು ಅಂದರ ಹೊಸ ಎಂಟರ್ಪ್ರಿನರ್ಗಳ ಉದ್ಯೋಗ ಸಾಹಸಗಳು, ಮತ್ತ ಉತ್ತರ ಕರ್ನಾಟಕ ಪ್ರತಿಭಾ ಪ್ರದರ್ಶನ ಕಾರ್ಯಕ್ರಮಗಳು ಅವ. ಜಗತ್ತಿನಾದ್ಯಂತ 1,00,000 ವಿಕ್ಷಕರು ಭಾಗವಹಿಸುವ ನೀರಿಕ್ಷ ಆದ, ನಂ, ನಿರ್ದೇಶಕ ಯಶವಂತ ಸರದೇಶಪಾಂಡೆಯವರ ಸ್ಕ್ರಿಪ್ಟ್, ನಿರ್ದೇಶನ, ಹುಬ್ಬಳ್ಳಿ ಸಂಗೀತ ನಿರ್ದೇಶಕ ಸಮರ್ಥ ದೇಸಾಯಿ ಸಂಗೀತ ಸಂಯೋಜನೆ, ಕಿಶನ್ ಮತ್ತು ತಂಡದ ಚಿತ್ರಿಕರಣ ಮತ್ತು ಸಂಕಲನ, ಉದ್ಘೋಶಕಿ ಪ್ರಿಯಾ ಕುಲಕರ್ಣಿ ಅವರ ಮಾತುಗಾರಿಕೆ, ಇಬ್ರಾಹಿಂ ಅವರ ಅನಿಮೇಷನ್ ಗ್ರಾಫಿಕ್ ವರ್ಕ್ಸ್ನಿಂದ ಶ್ರೀಮಂತವಾಗಿರೋ ಈ ಆಯೋಜನೆಗೆ 60ಕ್ಕೂ ಹೆಚ್ಚು
ಯುವಕರು ಹಗಲು ರಾತ್ರಿ ಶ್ರಮಿಸಲಿಕತ್ತಾರ…
ಕರ್ನಾಟಕ ನೆಲ-ಜಲ ಅಭಿವೃದ್ಧಿಯನ್ನ ಬಯಸುವ ಸಹೋದರಿಯರು ನಿಮ್ಮ ನಿಮ್ಮ ಮನ್ಯಾಗಿದ್ದಕೊಂಡು ಟೈಕಾನ್ ಸಮಾವೇಶವನ್ನ ಸವಿಯಬೇಕು ಅಂತ ಆಗ್ರಹಪೂರ್ವಕ ವಿನಂತಿ.
ಸಮಾವೇಶ ನಾಳೆಯಿಂದ
ಹುಬ್ಬಳ್ಳಿ: ಟೈಕಾನ್ ವತಿಯಿಂದ ಫೆ. 27 ಮತ್ತು 28 ರಂದು ಎರಡು ದಿನಗಳ ಕಾಲ ವರ್ಚುವಲ್ ಮೂಲಕ ಟೈಕಾನ್ ಸಮಾವೇಶ ಹಮ್ಮಿಿಕೊಳ್ಳಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಹುಬ್ಬಳ್ಳಿ ಶಾಖೆಯ ಅಧ್ಯಕ್ಷ ಅಜಯ್ ಹಂಡಾ ಹಾಗೂ ಸಂಯೋಜಕ ವಿಜಯ ಮಾನೆ ಮಾತನಾಡಿ, ಕೋವಿಡ್-19 ಹಿನ್ನೆಲೆಯಲ್ಲಿ ಸಮ್ಮೇಳನವನ್ನು ವರ್ಚುವಲ್ ಆಗಿ ಆಯೋಜಿಸಲಾಗಿದೆ. ಈಗಾಗಲೇ ದೇಶ, ವಿದೇಶದಲ್ಲಿರುವ 8 ಸಾವಿರ ಜನ ನೋಂದಣಿ ಮಾಡಿಕೊಂಡಿದ್ದಾರೆ ಎಂದರು. ಫೆ.27 ರಂದು ಬೆಳಗ್ಗೆ 10 ಗಂಟೆಗೆ ನಡೆಯುವ ಮಹಿಳಾ ಸಮ್ಮೇಳನದಲ್ಲಿ
ಮಹಿಳೆ ಮತ್ತು ಕನಸುಗಳು ಕುರಿತು ಫೆಮಿನಾ ಆ್ಯಂಡ್ ಹಲೊ ಮ್ಯಾಗಜಿನ್ ಸಂಪಾದಕಿ ರುಚಿಕಾ ಮೆಹ್ತಾ, ಉದ್ಯಮಶೀಲತೆಯಲ್ಲಿ ಸಾಧನೆ ಕುರಿತು ಪಾರ್ಕ್ ಹೋಟೆಲ್ಸ್ ಅಧ್ಯಕ್ಷೆ ಪ್ರಿಯಾ ಪಾಲ್, ಪ್ರತಿಕೂಲ ಪರಿಸ್ಥಿತಿ ಎದುರಿಸುವ ಕುರಿತು ಕ್ರೀಡಾ ಸಾಧಕಿ ಡಾ.
ಕೋಮಲ ರಾವ್ ಹಾಗೂ ನವಭಾರತ ನಿರ್ಮಾಣದಲ್ಲಿ ಮೂಲಸೌಕರ್ಯಗಳ ಪಾತ್ರ ಕುರಿತು ಬ್ರಿಡ್ಜ್ ಗ್ರೂಪ್ ವ್ಯವಸ್ಥಾಪಕ ನಿರ್ದೇಶಕಿ ನಿರುಪಾ ಶಂಕರ ಮಾತನಾಡಲಿದ್ದಾರೆ ಎಂದರು.