ಬಳಿಕ, ಹಸಿರು ಪ್ರವಾಸೋದ್ಯಮ, ಡಿಜಿಟಲೀಕರಣ, ಕೌಶಲ, ಪ್ರವಾಸೋದ್ಯಮದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಹಾಗೂ ಡೆಸ್ಟಿನೇಷನ್ ಮ್ಯಾನೇಜ್‌ಮೆಂಟ್ ವಿಷಯ ಗಳ ಕುರಿತು ಗೋಷ್ಠಿಗಳು ನಡೆಯಲಿವೆ. ಕೇಂದ್ರ ಪ್ರವಾಸೋದ್ಯಮ ಸಚಿವ ಜಿ.ಕೃಷ್ಣ ರೆಡ್ಡಿ ಅವರು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಫೆ.7ರಂದು ಸಾಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಸಭೆಗೆ ಭಾಗವಹಿಸ ಲಿರುವ ಇಂಡೊನೇಷ್ಯಾ, ಇಟಲಿ, ದಕ್ಷಿಣ ಆಫ್ರಿಕಾ, ಸ್ಪೇನ್, ಜಪಾನ್, ಸೌದಿ ಅರೇಬಿಯಾ ಹಾಗೂ ಅರ್ಜೆಂಟೀನಾದ ಅತಿಥಿಗಳು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.
ಫೆ.9ರಂದು ಅತಿಥಿಗಳು ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗಾಗಿ ಯೋಗ ಗೋಷ್ಠಿ ನಡೆಯಲಿದೆ. ನಂತರ ರಾಜ್ಯ ಹಲವು ಐತಿಹಾಸಿಕ, ಪ್ರಸಿದ್ಧ ಪ್ರವಾಸೋದ್ಯಮ ಸ್ಥಳಗಳಿಗೆ ಅತಿಥಿಗಳು ಭೇಟಿ ನೀಡಲಿದ್ದಾರೆ.