Saturday, 23rd November 2024

Viral Video: ಮೊಸಳೆ ಬಾಯಿಗೇ ಆಹಾರ ಹಾಕಲು ಹೋದ ಆಸಾಮಿ! ಮುಂದೇನಾಯ್ತು? ವಿಡಿಯೊ ನೋಡಿ

Viral Video


ಮೊಸಳೆ ಒಂದು ಅಪಾಯಕಾರಿ ಪ್ರಾಣಿ. ಇದು ಆಹಾರಕ್ಕಾಗಿ ಪ್ರಾಣಿಗಳನ್ನು ಮಾತ್ರವಲ್ಲ, ಮನುಷ್ಯರ ಮೇಲೂ ದಾಳಿ ಮಾಡುತ್ತದೆ. ಈ ಮೊಸಳೆಗಳ ದಾಳಿಗೆ ಹಲವು ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಇಂತಹ ಸುದ್ದಿ ನಾವು ಹಲವು ಬಾರಿ ಸೋಶಿಯಲ್ ಮೀಡಿಯಾದಲ್ಲಿ ನೋಡಿರುತ್ತೇವೆ. ಇಷ್ಟು ತಿಳಿದಿದ್ದರೂ ಕೂಡ ಕೆಲವರು ಮೊಸಳೆಯ ಜೊತೆ ಸ್ಟಂಟ್ ಮಾಡಲು ಮುಂದಾಗುತ್ತಾರೆ. ಇತ್ತೀಚೆಗೆ ವ್ಯಕ್ತಿಯೊಬ್ಬ ಮೊಸಳೆಯ ಜೊತೆ ಅತ್ಯಂತ ಅಪಾಯಕಾರಿ ಸ್ಟಂಟ್ ಮಾಡಲು ಪ್ರಯತ್ನಿಸುತ್ತಿರುವ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಸಖತ್ ವೈರಲ್ (Viral Video)ಆಗಿದೆ.

ವೈಲ್ಡ್ ಕಂಟೆಂಟ್ ಹ್ಯಾಂಡಲ್ ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಈ ವಿಡಿಯೊದಲ್ಲಿ ಮೊಸಳೆ ಇದ್ದಕ್ಕಿದ್ದಂತೆ ಆಹಾರ ನೀಡಲು ಬಂದ ವ್ಯಕ್ತಿಯ ಮೇಲೆ ಆಕ್ರಮಣ ಮಾಡುವಂತಹ ಆಶ್ಚರ್ಯ ಮತ್ತು ಭಯಾನಕ ಕ್ಷಣವನ್ನು ಸೆರೆಹಿಡಿಯಲಾಗಿದೆ. ಮೊಸಳೆ ಮನುಷ್ಯನನ್ನೇ ತಿನ್ನಲು ಬರುವುದನ್ನು ನೋಡಿದರೆ ಮೈನಡುಗುತ್ತದೆ. ಹಾಗಾಗಿ ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ವಿಡಿಯೊದಲ್ಲಿ ವ್ಯಕ್ತಿಯೊಬ್ಬ ಆಹಾರವನ್ನು ಕೈಯಲ್ಲಿ ಹಿಡಿದುಕೊಂಡು ಮೊಸಳೆಗೆ ನೀಡಲು ಬರುತ್ತಾನೆ. ಆತ ಬಹಳ ಆತ್ಮವಿಶ್ವಾಸದಿಂದ ಆಹಾರವನ್ನು ಹಿಡಿದುಕೊಂಡ ತನ್ನ ಕೈಯನ್ನು ಮೊಸಳೆಯ ಕಡೆಗೆ ಚಾಚುತ್ತಾನೆ. ಆಗ ಮೊಸಳೆ ಆಹಾರವನ್ನು ತೆಗೆದುಕೊಳ್ಳುತ್ತದೆ. ಆದರೆ ಆ ವ್ಯಕ್ತಿ ತಕ್ಷಣ ತನ್ನ ಕೈಯನ್ನು ಹಿಂದಕ್ಕೆ ತೆಗೆದುಕೊಳ್ಳುತ್ತಿದ್ದಂತೆ ಆತನನ್ನು ತಿನ್ನಲು ಮೊಸಳೆ ಅವನ ಮೇಲೆ ಆಕ್ರಮಣ ಮಾಡಲು ಮುಂದಾಗುತ್ತದೆ. ಆತ ಅದರಿಂದ ತಪ್ಪಿಸಿಕೊಂಡು ನೀರಿನಿಂದ ಮೇಲೆ ಬಂದರೂ ಕೂಡ ಮೊಸಳೆ ಅವನನ್ನು ಬಿಡದೆ ಬೆನ್ನಟ್ಟಿ ಮೇಲಕ್ಕೆ ಬಂದಿದೆ. ಆಗ ತಕ್ಷಣ ಮತ್ತೊಬ್ಬ ವ್ಯಕ್ತಿ ಮಧ್ಯ ಪ್ರವೇಶ ಮಾಡಿ ಮೊಸಳೆಯ ದಾಳಿಯನ್ನು ತಡೆದಿದ್ದಾನೆ. ಇದರಿಂದ ಆ ವ್ಯಕ್ತಿ ಜೀವ ಉಳಿಯುತ್ತೆಂದು ನಿಟ್ಟುಸಿರು ಬಿಟ್ಟಿದ್ದಾನೆ. ಈ ಘಟನೆಯಲ್ಲಿ ಅದೃಷ್ಟವಶಾತ್, ಅವನಿಗೆ ಸಣ್ಣ ಗಾಯಗಳು ಮಾತ್ರ ಆಗಿದ್ದವು ಎಂಬುದಾಗಿ ತಿಳಿದುಬಂದಿದೆ.

ಇದನ್ನೂ ಓದಿ:ಸಮಾರಂಭದಲ್ಲಿ ಭಾಗಿಯಾಗಲು 5 ಲಕ್ಷ ರೂ. ಶುಲ್ಕ, ಸ್ಟಾರ್‌ ಹೋಟೆಲ್‌ ವಾಸ್ತವ್ಯ! ಇದು ಬೀದಿಬದಿಯ ಚಾಯ್‌ವಾಲಾನ ಡಿಮ್ಯಾಂಡ್‌!

ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ವೀಕ್ಷಕರು ಆ ವಿಡಿಯೊ ನೋಡಿ ಆಘಾತಗೊಂಡಿದ್ದಾರೆ. ಅತಿಯಾದ ನಂಬಿಕೆ ಒಳ್ಳೆಯದಲ್ಲ ಎಂಬುದು ಇದರಿಂದ ತಿಳಿಯುತ್ತದೆ. ಇದನ್ನು ನೋಡಿದವರು ಅಪಾಯಕಾರಿ ಪ್ರಾಣಿಗಳನ್ನು ನಿರ್ವಹಿಸುವಾಗ ಇಂತಹ ಅಪಾಯಕಾರಿ ಕೆಲಸಗಳನ್ನು ಮಾಡುವ ಮುನ್ನ ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂದು ಅನೇಕರು ತಿಳಿಸಿದ್ದಾರೆ. ಮೊಸಳೆಗಳಂತಹ ಪ್ರಬಲ ಪರಭಕ್ಷಕಗಳೊಂದಿಗೆ ವ್ಯವಹರಿಸುವಾಗ ಅಪಾಯದ ಬಗ್ಗೆ ಅರಿವಿರಬೇಕು ಎಂದು ಒತ್ತಿಹೇಳುವಂತಹ ದುಃಖಕರ ಘಟನೆ ಇದಾಗಿದೆ ಎನ್ನಲಾಗಿದೆ. ಆ ವ್ಯಕ್ತಿ ಮಾಡಿದ ಕೆಲಸ ತನ್ನ ಶೌರ್ಯವನ್ನು ಸಾಬೀತುಪಡಿಸುವುದಾಗಿದ್ದರೂ, ಇದೇ ರೀತಿಯ ಸಾಹಸಗಳನ್ನು ಮಾಡಲು ಬಯಸುವ ಜನರಿಗೆ ಇದು ಒಂದು ತಿಳಿವಳಿಕೆಯ ಪಾಠವಾಗಿದೆ ಎನ್ನಲಾಗಿದೆ.