Sunday, 8th September 2024

ಜಾತಿ ಸೂಚಕ ರಿಸ್ಟ್​ ಬ್ಯಾಂಡ್: ಹಿಂಸಾತ್ಮಕ ವಾಗ್ವಾದ, ಪ್ರಕರಣ ದಾಖಲು

ಚೆ್ನೈ: ತಿರುನೆಲ್ವೇಲಿ ಜಿಲ್ಲೆಯ ಶಾಲೆಯೊಂದರಲ್ಲಿ ವಿದ್ಯಾರ್ಥಿಯೋರ್ವ ಜಾತಿ ಸೂಚಿ ಸುವ ರಿಸ್ಟ್​ ಬ್ಯಾಂಟ್ ಧರಿಸಿ ವಿಚಾರವಾಗಿ ಶಾಲೆಯ ಸಹಪಾಠಿಗಳೊಂದಿಗೆ ಹಿಂಸಾತ್ಮಕ ವಾಗ್ವಾದ ನಡೆಸಿ ಬಳಿಕ ಮೃತಪಟ್ಟಿದ್ದಾನೆ. ಘಟನೆ ಸಂಬಂಧ ಮೂವರು ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.

 

ಸೆಲ್ವ ಸೂರ್ಯ (17) ಮೃತ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ. ಬಾಲಕ ಜಾತಿಯನ್ನು ಸೂಚಿಸುವ ರಿಸ್ಟ್​ ಬ್ಯಾಂಡ್​ ಧರಿಸಿ ಶಾಲೆಗೆ ಆಗಮಿಸಿದ್ದನು. ಇದೇ ವಿಚಾರವಾಗಿ ಕಿರಿಯ ವಿದ್ಯಾರ್ಥಿಗಳು ಮತ್ತು ಬಾಲಕ ಸೂರ್ಯನ ನಡುವೆ ಜಗಳ ವಾಗ್ವಾದ ನಡೆದಿತ್ತು. ಹಿಂಸಾತ್ಮಕ ಘರ್ಷಣೆಯಾಗಿ , ಸೂರ್ಯನ ಕಿವಿಗೆ ಕಲ್ಲಿನಿಂದ ವಿದ್ಯಾರ್ಥಿಗಳು ಹೊಡೆ ದಿದ್ದಾರೆ.

ತಕ್ಷಣ ಎಚ್ಚೆತ್ತುಕೊಂಡ ಶಿಕ್ಷಕರು ಮಧ್ಯಪ್ರವೇಶಿಸಿ ಗುಂಪನ್ನು ಬೇರ್ಪಡಿಸುವಲ್ಲಿ ಯಶಸ್ವಿ ಯಾಗಿದ್ದರು. ಬಳಿಕ ಬಾಲಕ ಸೂರ್ಯ ಶಾಲೆ ಮುಗಿಸಿ ಮನೆಗೆ ತೆರಳಿದ್ದನು. ಆದರೆ ರಾತ್ರಿಯಿಡಿ ತೀವ್ರವಾದ ನೋವಿನಿಂದ ಬಾಳಕ ಬಳಲುತ್ತಿದ್ದನು.

ಈ ಹಿನ್ನೆಲೆಯಲ್ಲಿ ಮಗನನ್ನು ಪೋಷಕರು ತಿರುನಲ್ವೇಲಿ ವೈದ್ಯಕೀಯ ಆಸ್ಪತ್ರೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೆ ಬಾಲಕ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.

error: Content is protected !!