Bhavya Gowda: ಬಂಗಾರದ ಗೊಂಬೆ ಭವ್ಯಾ ಗೌಡ ಹೊಸ ಫೋಟೋ ಶೂಟ್
ಭವ್ಯಾ ಗೌಡ ಹೊಸ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಡಿಫರೆಂಟ್ ಲುಕ್ನಲ್ಲಿ ಕಾಣಿಸಿಕೊಂಡು ನೆಟ್ಟಿಗರ ಕಣ್ಮನ ಸೆಳೆದಿದ್ದಾರೆ. ಭಿನ್ನ ವಿಭಿನ್ನವಾದ ಬಂಗಾರವನ್ನು ತೊಟ್ಟು ಭವ್ಯಾ ಫೋಟೋಕ್ಕೆ ಪೋಸ್ ಕೊಟ್ಟಿದ್ದಾರೆ. ಸದ್ಯ ಭವ್ಯಾ ಅವರ ಈ ಹೊಸ ಲುಕ್ ಅನ್ನು ಜನ ಇಷ್ಟಪಟ್ಟಿದ್ದು ಕಾಮೆಂಟ್ ಮೂಲಕ ಪ್ರೀತಿ ತೋರಿಸಿದ್ದಾರೆ.

Bhavya Gowda


ಗೀತಾ ಸೀರಿಯಲ್ ಮೂಲಕ ಸಖತ್ ಫೇಮಸ್ ಆಗಿದ್ದ ನಟಿ ಭವ್ಯಾ ಗೌಡ ಬಿಗ್ ಬಾಸ್ಗೆ ಹೋಗಿ ಬಂದು ತಮ್ಮ ಕೀರ್ತಿಯನ್ನು ಮತ್ತಷ್ಟು ಹೆಚ್ಚಿಸಿದರು. ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಎಲ್ಲರ ಅಚ್ಚುಮೆಚ್ಚಿನ ಸ್ಪರ್ಧಿಯಾಗಿದ್ದ ಭವ್ಯಾ ಫಿನಾಲೆವರೆಗೂ ಬಂದಿದ್ದರು. ಈಗ ಇವರ ಅಭಿಮಾನಿಗಳ ಬಳಗ ದೊಡ್ಡದಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ ಕೂಡ ಭವ್ಯಾ ಸಖತ್ ಆ್ಯಕ್ಟಿವ್ ಆಗಿದ್ದಾರೆ. ಮೊನ್ನೆಯಷ್ಟೆ ಥೈಲ್ಯಾಂಡ್ಗೆ ತೆರಳಿ ಸುದ್ದಿಯಲ್ಲಿದ್ದರು. ಬ್ಯಾಂಕಾಕ್ ಟ್ರಿಪ್ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಇದು ಸಖತ್ ವೈರಲ್ ಆಗಿತ್ತು. ಇದೀಗ ಭವ್ಯಾ ಹೊಸ ಫೋಟೋ ಒಂದನ್ನು ಹಂಚಿಕೊಂಡಿದ್ದು, ಇದಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ಭವ್ಯಾ ಗೌಡ ಹೊಸ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಡಿಫರೆಂಟ್ ಲುಕ್ನಲ್ಲಿ ಕಾಣಿಸಿಕೊಂಡು ನೆಟ್ಟಿಗರ ಕಣ್ಮನ ಸೆಳೆದಿದ್ದಾರೆ. ಭಿನ್ನ ವಿಭಿನ್ನವಾದ ಬಂಗಾರವನ್ನು ತೊಟ್ಟು ಭವ್ಯಾ ಫೋಟೋಕ್ಕೆ ಪೋಸ್ ಕೊಟ್ಟಿದ್ದಾರೆ. ಸದ್ಯ ಭವ್ಯಾ ಅವರ ಈ ಹೊಸ ಲುಕ್ ಅನ್ನು ಜನ ಇಷ್ಟಪಟ್ಟಿದ್ದು ಕಾಮೆಂಟ್ ಮೂಲಕ ಪ್ರೀತಿ ತೋರಿಸಿದ್ದಾರೆ.

ಬಿಗ್ ಬಾಸ್ನಿಂದ ಹೊರಬಂದ ಬಳಿಕ ಭವ್ಯಾ ಇದೀಗ ಹೊಸ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಝೀ ಕನ್ನಡದಲ್ಲಿ ಪ್ರಸಾರವಾಗಲಿರುವ ಕರ್ಣ ಸೀರಿಯಲ್ ನಲ್ಲಿ ಭವ್ಯಾ ಗೌಡ ವೈದ್ಯೆಯಾಗಿ ಕಿರಣ್ ರಾಜ್ಗೆ ನಾಯಕಿಯಾಗಿ ನಟಿಸುತ್ತಿದ್ದಾರೆ.

ಇತ್ತೀಚೆಗಷ್ಟೆ ಭವ್ಯಾ ಅವರು ಕರ್ಣ ಧಾರಾವಾಹಿಯ ಪ್ರೊಮೋ ಶೂಟ್ನಲ್ಲಿ ಕೂಡ ಭಾಗವಹಿಸಿದ್ದರು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿತ್ತು. ಇದರಲ್ಲಿ ಎರಡನೇ ನಾಯಕಿ ಕೂಡ ಇದ್ದು, ನಾಗಿಣಿ ಸೀರಿಯಲ್ ಮೂಲಕ ಸೂಪರ್ ಸಕ್ಸಸ್ ಕಂಡಿದ್ದ ನಮ್ರತಾ ಗೌಡ ಆಗಿದ್ದಾರೆ.

ಈ ಸೀರಿಯಲ್ನಲ್ಲಿ ನಿಧಿ ಹೆಸರಿನ ವೈದ್ಯಕೀಯ ವಿದ್ಯಾರ್ಥಿಯಾಗಿ ಭವ್ಯಾ ಕಾಣಿಸಿಕೊಂಡಿದ್ದಾರೆ. ಪ್ರೋಮೋದಲ್ಲಿ ನಿಧಿ ಮತ್ತು ಕರ್ಣನ ಕೆಮಿಸ್ಟ್ರಿಗೆ ನೋಡುಗರಿಂದ ಪೂರ್ಣಾಂಕ ಸಿಕ್ಕಿದೆ. ಇನ್ನೇನು ಜೂನ್ ಮೊದಲ ವಾರದಲ್ಲಿ ಕರ್ಣ ಸೀರಿಯಲ್ ಶುರುವಾಗುವ ಸಾಧ್ಯತೆ ಇದೆ.