RCB vs PBKS: ಆರ್‌ಸಿಬಿ-ಪಂಜಾಬ್ ಪ್ಲೇ ಆಫ್/ನಾಕೌಟ್ ಸಾಧನೆ ಹೀಗಿದೆ
ಗಾಯದಿಂದ ಚೇತರಿಕೆ ಕಂಡಿರುವ ಆಸೀಸ್ ಆಟಗಾರರಾದ ಜೋಶ್ ಹ್ಯಾಜಲ್‌ವುಡ್ ಮತ್ತು ಡಿಟ್ ಡೇವಿಡ್ ಚೇತರಿಸಿಕೊಂಡಿದ್ದು ಈ ಪಂದ್ಯದಲ್ಲಿ ಕಣಕ್ಕಿಳಿಯುವುದು ಖಚಿತವಾಗಿದೆ. ಉಭಯ ಆಟಗಾರರು ಕಣಕ್ಕಿಳಿದರೆ ಇವರಿಗಾಗಿ ಲಿಯಾಂಮ್ ಲಿವಿಂಗ್‌ಸ್ಟೋನ್ ಮತ್ತು ನುವಾನ್ ತುಷಾರ ಜಾಗ ಬಿಡಬೇಕಾಗಿದೆ.


ಮುಲ್ಲಾನ್‌ಪುರ್ (ಚಂಡೀಗಢ): ಲೀಗ್ ಹಂತದಲ್ಲಿ ಮೊದಲೆರಡು ಸ್ಥಾನ ಪಡೆದಿದ್ದ ಪಂಜಾಬ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB vs PBKS) ತಂಡ ಇಂದು ನಡೆಯುವ ಐಪಿಎಲ್(IPL 2025) ಕ್ವಾಲಿಫೈಯರ್-1 ರಲ್ಲಿ ಮುಖಾಮುಖಿಯಾಗಲಿವೆ. ಇತ್ತಂಡಗಳ ಇದುವರೆಗಿನ ಐಪಿಎಲ್ ಇತಿಹಾಸದಲ್ಲಿನ ಪ್ಲೇ ಆಫ್/ನಾಕೌಟ್ ಸಾಧನೆಯ(IPL Playoffs) ಹೇಗಿದೆ ಎಂಬ ವರದಿ ಇಲ್ಲಿದೆ.
ಆರ್‌ಸಿಬಿ ಪ್ಲೇ ಆಫ್/ನಾಕೌಟ್ ಸಾಧನೆ
2009 - ಫೈನಲ್ (ಡೆಕ್ಕನ್ ಚಾರ್ಜರ್ಸ್ ವಿರುದ್ಧ 6 ರನ್ ಗಳಿಂದ ಸೋಲು)
2010 - ಸೆಮಿಫೈನಲ್ (ಮುಂಬೈ ಇಂಡಿಯನ್ಸ್ ವಿರುದ್ಧ 35 ರನ್ ಗಳಿಂದ ಸೋಲು)
2011 - ಫೈನಲ್ (ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ58 ರನ್ ಗಳಿಂದ ಸೋಲು)
2015 - ಕ್ವಾಲಿಫೈಯರ್ 2 (ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 3 ವಿಕೆಟ್‌ಗಳ ಸೋಲು)
2016 - ಫೈನಲ್ (ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 8 ರನ್‌ಗಳ ಸೋಲು)
2020 - ಎಲಿಮಿನೇಟರ್ (ಹೈದರಾಬಾದ್ ವಿರುದ್ಧ 6 ವಿಕೆಟ್‌ಗಳ ಸೋಲು)
2021- ಎಲಿಮಿನೇಟರ್ (ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 4 ವಿಕೆಟ್ ಸೋಲು)
2022 - ಕ್ವಾಲಿಫೈಯರ್ 2 (ರಾಜಸ್ಥಾನ್ ರಾಯಲ್ಸ್ ವಿರುದ್ಧ 7 ವಿಕೆಟ್‌ಗಳ ಸೋಲು)
2024 - ಎಲಿಮಿನೇಟರ್ (ರಾಜಸ್ಥಾನ್ ರಾಯಲ್ಸ್ ವಿರುದ್ಧ 4 ವಿಕೆಟ್‌ಗಳ ಸೋಲು)
ಇದನ್ನೂ ಓದಿ IPL 2025:ʻದಿಗ್ವೇಶ್ ಸಿಂಗ್ ರನ್‌ಔಟ್ ವಿವಾದʼ-ರಿಷಭ್ ಪಂತ್ ವಿರುದ್ಧ ಅಶ್ವಿನ್ ಕಿಡಿ!
ಪಂಜಾಬ್ ಪ್ಲೇ ಆಫ್/ನಾಕೌಟ್ ಸಾಧನೆ
2008 - ಎಲಿಮಿನೇಟರ್ (ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 9 ವಿಕೆಟ್‌ಗಳ ಸೋಲು)
2014 - ಫೈನಲ್ಸ್ (ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 3 ವಿಕೆಟ್‌ಗಳ ಸೋಲು)
ಪ್ಲೇಆಫ್‌ಗಳಲ್ಲಿ ಪಂಜಾಬ್ ಪರ ಅತಿ ಹೆಚ್ಚು ರನ್‌ಗಳು
ವೃದ್ಧಿಮಾನ್ ಸಾಹಾ- 156 ರನ್
ವಿರೇಂದ್ರ ಸೆಹವಾಗ್- 131 ರನ್
ಪ್ಲೇಆಫ್‌ಗಳಲ್ಲಿ ಆರ್‌ಸಿಬಿ ಪರ ಅತಿ ಹೆಚ್ಚು ರನ್‌ಗಳು
ವಿರಾಟ್ ಕೊಹ್ಲಿ- 341* ರನ್
ಎಬಿಡಿ ವಿಲಿಯರ್ಸ್- 268 ರನ್
ಕ್ರಿಸ್ ಗೇಲ್- 250