Mouni Roy: ಕೇನ್ಸ್ ಫಿಲ್ಮ್ ಫೆಸ್ಟಿವಲ್ನಲ್ಲಿ ಬಾಲಿವುಡ್ ನಟಿ ಮೌನಿ ರಾಯ್ ಲುಕ್ಗೆ ನೆಟ್ಟಿಗರು ಫಿದಾ
ಫ್ರಾನ್ಸ್ನಲ್ಲಿ ನಡೆಯುತ್ತಿರುವ 78ನೇ ಅಂತಾರಾಷ್ಟ್ರೀಯ ಕೇನ್ಸ್ ಚಲನಚಿತ್ರೋತ್ಸವವು ದಿನೇ ದಿನೆ ಸೆಲೆಬ್ರಿಟಿಗಳ ಸಂಗಮದಿಂದ ಹೆಚ್ಚು ಸುದ್ದಿಯಲ್ಲಿದೆ. ಈ ಸಿನಿಮಾ ಹಬ್ಬ ಮೇ 13ರಂದು ಆರಂಭವಾಗಿದ್ದು ಅದ್ಧೂರಿಯಾಗಿ ಚಾಲನೆ ನೀಡಲಾಗಿದೆ. ಚಲನಚಿತ್ರೋತ್ಸವಕ್ಕೆ ದೇಶ ವಿದೇಶದ ನಟ-ನಟಿಯರು, ನಿರ್ಮಾಪಕರು, ಸೆಲೆಬ್ರಿಟಿಗಳು ಭಾಗಿಯಾಗಿದ್ದಾರೆ. ಮೇ 24ರವರೆಗೆ ಈ ಕಾರ್ಯಕ್ರಮ ನಡೆಯಲಿದ್ದು, ʼಕೆಜಿಎಫ್ʼ ಹಾಡಿನಲ್ಲಿ ಪಡ್ಡೆ ಹುಡುಗರ ನಿದ್ದೆ ಕದ್ದ ಬೆಡಗಿ ಮೌನಿ ರಾಯ್ ಗ್ರ್ಯಾಂಡ್ ಆಗಿ ಎಂಟ್ರಿ ನೀಡಿದ್ದಾರೆ.

Mouni Roy


ಬಾಲಿವುಡ್ ನಟಿ ಮೌನಿ ರಾವ್ ಅವರಿಗೆ ಕೇನ್ಸ್ ಫಿಲ್ಮ್ ಫೆಸ್ಟಿವಲ್ಗೆ ಆಹ್ವಾನ ನೀಡಲಾಗಿದೆ. ಇತ್ತೀಚೆಗಷ್ಟೆ ಸ್ಯಾಂಡಲ್ವುಡ್ ನಟಿ ದಿಶಾ ಮದನ್ ಇತ್ತೀಚೆಗಷ್ಟೇ ಈ ಫಿಲ್ಮ್ ಫೆಸ್ಟಿವಲ್ನಲ್ಲಿ ಹಳೆ ಕಾಲದ ಕಾಚಿಪುರಂ ರೇಷ್ಮೆ ಸೀರೆಯನ್ನು ವಿಭಿನ್ನವಾಗಿ ಧರಿಸಿ ಫೇಮಸ್ ಆಗಿದ್ದರು. ಇದೀಗ ನಟಿ ಮೌನಿ ರಾವ್ ಕೂಡ ಶೋಲ್ಡರ್ಲೆಸ್ ಬ್ಲ್ಯಾಕ್ ಡ್ರೆಸ್ನಲ್ಲಿ ಮೌನಿ ಕಂಗೊಳಿಸಿದ್ದಾರೆ.

ಬಾಲಿವುಡ್ ನಟಿ ಮೌನಿ ರಾಯ್ ಸಖತ್ ಬೋಲ್ಡ್ ನಟಿಯಾಗಿದ್ದು, ಫ್ಯಾಷನ್ ಪ್ರಿಯರೂ ಹೌದು. ಹೀಗಾಗಿ ಕೇನ್ಸ್ ಫಿಲ್ಮ್ ಫೆಸ್ಟಿವಲ್ಗೆ ಭಾಗಿಯಾಗಲು ಫ್ರಾನ್ಸ್ಗೆ ತೆರಳಿದ್ದಾರೆ. ಬ್ಲ್ಯಾಕ್ ಕಲರ್ ಡ್ರೆಸ್ಗೆ ನೀಲಿ ಬಣ್ಣದ ಕಸೂತಿ ಮಾಡಿರುವ ವಿಭಿನ್ನವಾದ ವಿನ್ಯಾಸದ ಬಟ್ಟೆ ಧರಿಸಿದ್ದಾರೆ. ಅವರ ಬಟ್ಟೆಗೆ ಹೊಂದಿಕೊಳ್ಳುವಂತಹ ದುಬಾರಿ ನೆಕ್ಲೆಸ್ ಅನ್ನು ತೊಟ್ಟಿದ್ದು ಶೋಲ್ಡರ್ಲೆಸ್ ಡ್ರೆಸ್ನಲ್ಲಿ ನಟಿ ಮೌನಿ ಬಹಳ ಮಾಡರ್ನ್ ಲುಕ್ನಲ್ಲಿ ಮಿಂಚಿದ್ದಾರೆ.

ನಟಿ ಮೌನಿ ರಾಯ್ ತೊಟ್ಟ ಬಟ್ಟೆಯೂ ಶೋಲ್ಡರ್ ಲೆಸ್ ಡ್ರಸ್ ಇವರಿಗೆ ಫ್ರಿನ್ಸೆಸ್ ಲುಕ್ ನೀಡಿದೆ. ಇದು ಕ್ರಾಪ್ಡ್ ಗೌನ್ ಆಗಿದ್ದು ಮೌನಿ ಅವರ ಲುಕ್ಗೆ ಮತ್ತಷ್ಟು ಮೆರುಗು ನೀಡುವಂತಿದೆ. ಇವರು ದುಬಾರಿ ವಜ್ರಾಭರಣ ಧರಿಸಿದ್ದು, ನೆಕ್ಲೆಸ್ ಮತ್ತು ಉಂಗುರ ಹೆಚ್ಚು ಹೈಲೈಟ್ ಆಗಿದೆ. ಅದರ ಜತೆಗೆ ಸಿಂಪಲ್ ಮೇಕಪ್ ಹಾಗೂ ಹೇರ್ ಸ್ಟೈಲ್ ಮೂಲಕ ನಟಿ ಮೌನಿ ಅವರು ಹಾಟ್ ಆಗಿ ಪೋಸ್ ನೀಡಿದ್ದಾರೆ.

ಕೇನ್ಸ್ ಚಲನಚಿತ್ರೋತ್ಸವದ ಹೊರ ಭಾಗದಲ್ಲಿ ನಟಿ ಮೌನಿ ರಾಯ್ ಫೋಟೊಕ್ಕೆ ಪೋಸ್ ನೀಡಿದ್ದಾರೆ. ಬೀಚ್ ಸೈಡ್ನಲ್ಲಿ ಫೋಟೊ ಶೂಟ್ ಮಾಡಿಸಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಇನ್ನೊಂದು ಫೋಟೊದಲ್ಲಿ ಹಸಿರ ಹುಲ್ಲಿನ ಮೇಲೆ ನಟಿ ಮೌನಿ ರಾಯ್ ಮಲಗಿ ಬಿಸಿಲಿಗೆ ಮುಖಕ್ಕೆ ಅಡ್ಡ ಇಟ್ಟು ಪೋಸ್ ನೀಡಿ ನೆಟ್ಟಿಗರ ಗಮನ ಸೆಳೆಯುತ್ತಿದ್ದಾರೆ.

ನಟಿ ಮೌನಿ ರಾಯ್ ಎರಡು ವರ್ಷದ ಹಿಂದೆ ಸೂರಜ್ ನಂಬಿಯಾರ್ ಅವರನ್ನು ಮದುವೆ ಆಗಿದ್ದಾರೆ. ಹಾಗಿದ್ದರೂ ನಟಿ ಮೌನಿ ಅವರಿಗೆ ಕೈ ತುಂಬಾ ಸಿನಿಮಾ ಆಫರ್ ಸಿಗುತ್ತಿದೆ. ʼಸುಲ್ತಾನ್ ಆಫ್ ದೆಹಲಿʼ ವೆಬ್ ಸಿರೀಸ್ನಲ್ಲಿ ಕಾಣಿಸಿಕೊಂಡಿದ್ದ ಮೌನಿ ರಾಯ್ ʼದಿ ವರ್ಜಿನ್ ಟ್ರೀʼ ಎಂಬ ಚಿತ್ರವನ್ನು ಕೂಡ ಮುಗಿಸಿದ್ದಾರೆ. ಸದ್ಯ ಅವರು ವರುಣ್ ಧವನ್ ನಟನೆಯ ಸಿನಿಮಾದಲ್ಲಿಯೂ ಅಭಿನಯಿದ್ದಾರೆ.