Met Gala 2025: ಮೆಟ್ ಗಾಲಾ 2025ರಲ್ಲಿ ಮಿಂಚಿದ ಭಾರತೀಯ ತಾರೆಗಳು; ಕಿಂಗ್ ಖಾನ್ ಎಂಟ್ರಿಗೆ ಎಲ್ಲರೂ ಫಿದಾ
ಭಾರತೀಯ ಫ್ಯಾಷನ್ ಮತ್ತು ಸಿನಿಮಾ ಜಗತ್ತಿಗೆ ಐತಿಹಾಸಿಕ ದಿನವಾಗಿ ಶಾರುಖ್ ಖಾನ್ ಮತ್ತು ಪ್ರಿಯಾಂಕಾ ಚೋಪ್ರಾ ಅವರು ಮೆಟ್ ಗಾಲಾ 2025ರ ರೆಡ್ ಕಾರ್ಪೆಟ್ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಪ್ರತಿಷ್ಠಿತ ಕಾರ್ಯಕ್ರಮದಲ್ಲಿ ಭಾರತದ ಅತ್ಯಂತ ಪ್ರಮುಖ ಉಪಸ್ಥಿತಿ ಫ್ಯಾನ್ಸ್ ಮುಖದಲ್ಲಿ ಮಂದಹಾಸ ತರಿಸಿದೆ.

ಮೆಟ್ ಗಾಲಾ 2025


ನ್ಯೂಯಾರ್ಕ್: ಭಾರತೀಯ ಫ್ಯಾಷನ್ ಮತ್ತು ಸಿನಿಮಾ ಜಗತ್ತಿಗೆ ಐತಿಹಾಸಿಕ ದಿನವಾಗಿ ಶಾರುಖ್ ಖಾನ್ ಮತ್ತು ಪ್ರಿಯಾಂಕಾ ಚೋಪ್ರಾ ಮೆಟ್ ಗಾಲಾ 2025ರ (MET Gala 2025) ರೆಡ್ ಕಾರ್ಪೆಟ್ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಪ್ರತಿಷ್ಠಿತ ಕಾರ್ಯಕ್ರಮದಲ್ಲಿ ಭಾರತದ ಅತ್ಯಂತ ಪ್ರಮುಖ ಉಪಸ್ಥಿತಿ ಫ್ಯಾನ್ಸ್ಮುಖದಲ್ಲಿ ಮಂದಹಾಸ ತರಿಸಿದೆ. ಮೊದಲ ಬಾರಿಗೆ ಮೆಟ್ ಗಾಲಾಕ್ಕೆ ಎಂಟ್ರಿ ಕೊಟ್ಟ ಶಾರುಖ್ ಖಾನ್ ‘ಕಿಂಗ್’ ಶೈಲಿಯಲ್ಲೇ ಮಿಂಚಿದರು. ರೆಡ್ ಕಾರ್ಪೆಟ್ನಲ್ಲಿ ತಮ್ಮ ಸಿಗ್ನೇಚರ್ ಪೋಸ್ನೊಂದಿಗೆ ಅಭಿಮಾನಿಗಳನ್ನು ರಂಜಿಸಿದರು. ಸಂಪೂರ್ಣ ಕಪ್ಪು ಬಣ್ಣದ ಬಟ್ಟೆ ಧರಿಸಿದ್ದ ಅವರು, ಚಿನ್ನದ ಆಭರಣಗಳು ಮತ್ತು ‘K’ ಎಂಬ ಅಕ್ಷರದ ನೆಕ್ಲೇಸ್ನೊಂದಿಗೆ ಎಲ್ಲರ ಗಮನ ಸೆಳೆದರು.

ಪ್ರಿಯಾಂಕಾ ಚೋಪ್ರಾ ತಮ್ಮ ಪತಿ ನಿಕ್ ಜೋನಸ್ ಕೈ ಹಿಡಿದು ರೆಡ್ ಕಾರ್ಪೆಟ್ಗೆ ಆಗಮಿಸಿದರು. ಕಪ್ಪು-ಬಿಳುಪು ಬಣ್ಣದ ಉಡುಪುಗಳನ್ನು ಧರಿಸಿದ್ದ ಈ ಜೋಡಿ ಹಳೆಯ ಹಾಲಿವುಡ್ ಶೈಲಿಯನ್ನು ಮರುಸೃಷ್ಠಿಸಿದರು. ಫ್ಯಾಷನ್ ಲೋಕದ ಅತಿದೊಡ್ಡ ರಾತ್ರಿಯಲ್ಲಿ ಈ ಜೋಡಿ ಸೊಗಸಾಗಿ ಎಂಟ್ರಿ ಕೊಟ್ಟಿತು.

ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ನಟಿ ಕಿಯಾರಾ ಅಡ್ವಾಣಿ ಗರ್ಭಿಣಿಯ ಆಕರ್ಷಣೆಯೊಂದಿಗೆ ಮೆಟ್ ಗಾಲಾದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡರು. ಗೌರವ್ ಗುಪ್ತಾ ವಿನ್ಯಾಸದ ಕಪ್ಪು-ಬಿಳುಪು ಗೌನ್ ಧರಿಸಿ ರೆಡ್ ಕಾರ್ಪೆಟ್ನಲ್ಲಿ ಆಕರ್ಷಕವಾಗಿ ಕಾಣಿಸಿಕೊಂಡರು.

ಪಂಜಾಬಿ ಸೂಪರ್ಸ್ಟಾರ್ ದಿಲ್ಜಿತ್ ದೋಸಾಂಝ್, ಕೇಪ್ನೊಂದಿಗೆ ರಾಜಮನೆತನದ ಮಹಾರಾಜ-ಪ್ರೇರಿತ ಉಡುಪು ಧರಿಸಿ ಎಲ್ಲರನ್ನೂ ಆಶ್ಚರ್ಯಗೊಳಿಸಿದರು. ವಿಶೇಷವೆಂದರೆ, ಅವರಿಗೆ ಗಾಯಕಿ ಶಕೀರಾ ಅವರಿಂದ ವಿಶೇಷ ಶಹಬ್ಬಾಸ್ಗಿರಿ ದೊರೆತಿದೆ. ಕಳೆದ ವರ್ಷ ರಾಹುಲ್ ಮಿಶ್ರಾ ಅವರ ಕೌಚರ್ ಲುಕ್ನಲ್ಲಿ ಎಲ್ಲರ ಗಮನ ಸೆಳೆದ ಫ್ಯಾಷನ್ ಐಕಾನ್ ನತಾಶಾ ಪೂನಾವಾಲಾ, ಮೋನಾ ಪಟೇಲ್ ಮತ್ತು ಈಶಾ ಅಂಬಾನಿ ಎಲ್ಲರ ಗಮನ ಸೆಳೆದರು.

ಕಳೆದ ವರ್ಷ ರಾಹುಲ್ ಮಿಶ್ರಾ ಅವರ ಕೌಚರ್ ಲುಕ್ನಲ್ಲಿ ಎಲ್ಲರ ಗಮನ ಸೆಳೆದ ಫ್ಯಾಷನ್ ಐಕಾನ್ ನತಾಶಾ ಪೂನಾವಾಲಾ, ಮೋನಾ ಪಟೇಲ್ ಮತ್ತು ಈಶಾ ಅಂಬಾನಿ ಎಲ್ಲರ ಗಮನ ಸೆಳೆದರು. ಮೆಟ್ ಗಾಲಾ 2025ರಲ್ಲಿ ಭಾಗವಾಗಿದ್ದ ಬಾಲಿವುಡ್ ಸೆಲೆಬ್ರಿಟಿಗಳು, ನಟಿ ಪ್ರಿಯಾಂಕಾ ಚೋಪ್ರಾ ಮತ್ತು ಗಾಯಕ ದಿಲ್ಜಿತ್ ದೋಸಾಂಜ್ ಒಟ್ಟಿಗೆ ಫೋಟೊಕ್ಕೆ ಪೋಸ್ ನೀಡಿದರು. ಮಂಗಳವಾರ ತಮ್ಮ ಇನ್ಸ್ಟಾಗ್ರಾಮ್ ಸ್ಟೋರೀಸ್ನಲ್ಲಿ, ಪ್ರಿಯಾಂಕಾ ಅವರ ಪತಿ-ಗಾಯಕ ನಿಕ್ ಜೋನಾಸ್ ಮತ್ತು ಗಾಯಕಿ ಶಕೀರಾ ಅವರ ಫೋಟೋವನ್ನು ದಿಲ್ಜಿತ್ ಹಂಚಿಕೊಂಡಿದ್ದಾರೆ.