ಒಂದೊಳ್ಳೆ ಮಾತು
ರೂಪಾ ಗುರುರಾಜ್
ರಾಮೇಶ್ವರದಲ್ಲಿ ಶಿವನನ್ನು ಆರಾಧಿಸುವ ಸಲುವಾಗಿ ರಾಮನು ತನ್ನ ಬಂಟನಾದ ಹನುಮಂತನನ್ನ ಕರೆದು ರಾಮೇಶ್ವರದಲ್ಲಿ ಪ್ರತಿಷ್ಠಾಪಿಸಲು ಕೈಲಾಸದಿಂದ ಶಿವಲಿಂಗ ತರಲು ಹೇಳುತ್ತಾನೆ. ಆಗ ಹನುಮಂತನು ಬಹಳ ಹೆಮ್ಮೆಯಿಂದ ’ಆಯ್ತು ಪ್ರಭು ಅದು ನನಗೆ ದೊಡ್ಡ ಕೆಲಸವೇ? ಇಲ್ಲ, ನಾನು ಅದನ್ನು ಬಹಳ ಸುಲಭವಾಗಿ ಮಾಡಬ’ ಎಂದು ನುಡಿದು ಕೈಲಾಸಕ್ಕೆ ಹಾರಿದನು. ಹನುಮ ಕೈಲಾಸ ತಲುಪಿ ಶಿವಲಿಂಗವನ್ನು ಕೇವಲ ಒಂದು ಅಂಗೈಯಿಂದ ಮೇಲಕ್ಕೆತ್ತಿ ರಾಮೇಶ್ವರಕ್ಕೆ ಮರಳಿ ಹಾರಿ ಬಂದನು.
ಆದರೆ ಅಷ್ಟರಲ್ಲಾಗಲೇ ಶ್ರೀರಾಮ ಮರಳಿನಿಂದ ಒಂದು ಶಿವಲಿಂಗವನ್ನು ಮಾಡಿ ಪ್ರತಿಷ್ಠಾಪಿಸಿ ಅದನ್ನು ಪೂಜಿಸಲು ಪ್ರಾರಂಭಿಸಿರುತ್ತಾನೆ. ರಾಮನು ಪ್ರತಿಷ್ಠಾಪಿಸಿದ ಅಮುಖ್ಯ ದೇವತೆಯೇ ರಾಮಲಿಂಗೇಶ್ವರ. ಮರಳಿ ಬಂದ ಹನುಮಂತನಿಗೆ ಇದನ್ನು ಕಂಡು ನಿರಾಸೆ ಯಾಯಿತು. ಹನುಮಂತನನ್ನು ಕಂಡ ಶ್ರೀರಾಮ ಮುಗುಳ್ನಗುತ್ತಾ, ‘ನಿನ್ನಿಂದ ತಡವಾಗಿದೆ ಈಗ ಆಗಲೇ ಪ್ರಾಣ ಪ್ರತಿಷ್ಠಾಪನೆಯಾಗಿದೆ ನೀನು ತಂದ ಲಿಂಗವನ್ನು ದೇವಾಲಯದ ಮತ್ತೊಂದು ಸ್ಥಳದಲ್ಲಿ ಪ್ರತಿಷ್ಠಾಪಿಸು’ ಎಂದು ಹೇಳಿದನು.
ಹನುಮಂತನಿಗೆ ಆ ಮಾತು ಒಪ್ಪಿಗೆಯಾಗಲಿಲ್ಲ. ‘ದೇವ ನೀನು ನನಗೆ ಆeಪಿಸಿ ನಾನು ಬರುವ ಮೊದಲೇ
ಮತ್ತೊಂದು ಲಿಂಗವನ್ನು ಪ್ರತಿಷ್ಠಾಪಿಸಿರುವುದು ನನಗೆ ಬಹಳ ದುಃಖವಾಗಿದೆ. ಆದ್ದರಿಂದ ದಯವಿಟ್ಟು ಈ
ಲಿಂಗವನ್ನು ಇ ಪ್ರತಿಷ್ಠಾಪಿಸಲು ಅವಕಾಶ ಮಾಡಿಕೊಡು ಇದಕ್ಕೆ ಮುಖ್ಯದೇವತೆಯಾಗಿ ಪೂಜೆಯಾಗಬೇಕು’ ಎಂದು
ಕೇಳಿಕೊಂಡನು. ಆಗ ಶ್ರೀರಾಮ ಮುಗುಳ್ನಗುತ್ತ ಹನುಮನಿಗೆ, ‘ನಿನ್ನ ಇಚ್ಛೆಯಂತೆ ಆಗಲಿ. ನಾನು ಈಗಾಗಲೇ
ಪ್ರತಿಷ್ಠಾಪಿಸಿರುವ ರಾಮಲಿಂಗವನ್ನು ಸರಿಸಿ ನೀನು ಕೈಲಾಸದಿಂದ ತಂದ ಲಿಂಗವನ್ನು ಇರಿಸಬಹುದು.
ನೀನು ಅದನ್ನು ಮಾಡಲು ಸಾಧ್ಯವಾದರೆ, ನೀನು ತಂದ ಶಿವಲಿಂಗ ಮುಖ್ಯ ದೇವತೆಯಾಗಿ ಪೂಜಿಸಲ್ಪಡುತ್ತದೆ’ ಎಂದನು. ‘ಹನುಮಂತ ಅಷ್ಟೇ ತಾನೇ ಇದು ನನಗೆ ಬಹಳ ಸುಲಭದ ಕೆಲಸ. ನನಗಿರುವ ಅಗಾಧ ಶಕ್ತಿಯಲ್ಲಿ ನಾನು
ನನ್ನ ಬಾಲದಿಂದಲೇ ಈ ಕೆಲಸವನ್ನು ಮಾಡಬಹುದು’ ಎಂದು ಬೀಗುತ್ತಾ, ರಾಮಲಿಂಗೇಶ್ವರವನ್ನು ಬಾಲದಿಂದ
ಸುತ್ತಿದನು. ನಂತರ ಅದನ್ನು ತಮ್ಮೆಲ್ಲ ಶಕ್ತಿಯಿಂದ ಎಳೆಯಲು ಪ್ರಾರಂಭಿಸಿದನು.
ಅದೆಷ್ಟೇ ಪ್ರಯತ್ನಿಸಿದರು ಸರಿಸುದಿರಲಿ ರಾಮಲಿಂಗವನ್ನು ಒಂದಿಂಚು ಕದಲಿಸಲು ಹನುಮಂತನಿಗೆ ಸಾಧ್ಯ ವಾಗಲಿಲ್ಲ. ಅವನು ಮತ್ತಷ್ಟು ಬಲಪ್ರಯೋಗ ಮಾಡಿ ಎಳೆದಾಗ ಹನುಮಂತನ ಬಾಲವೇ ತುಂಡಾಯಿತು. ತನ್ನ ತಪ್ಪನ್ನು ಅರಿತುಕೊಂಡ ಹನುಮಂತ ರಾಮನ ಮುಂದೆ ಕೈಮುಗಿದು ‘ಪ್ರಭು ಎಲ್ಲ ನಿನ್ನ ಲೀಲೆ’ ಎಂದು ನಿಂತು ಬಿಟ್ಟನು.
ಆಗ ರಾಮ ‘ಕೈಲಾಸದಿಂದ ಶಿವಲಿಂಗ ತರುವುದು ನಿನ್ನ ಶಕ್ತಿಗೆ ಸುಲಭವಾದ ಕೆಲಸ ಎಂದು ನೀನು ಹೇಳಿದೆ.
ಶಿವಲಿಂಗವನ್ನು ಭಗವಂತನ ಅನುಗ್ರಹವಿಲ್ಲದೆ ಹೋದರೆ ಅಂಗೈಯಲ್ಲಿ ಹಿಡಿದು ತರುವುದು ದೊಡ್ಡ ಕೆಲಸ ಅಲ್ಲವೇ
ಅಲ್ಲ. ಅ ನಿನ್ನಿಂದ ತಪ್ಪಾಗಿದ್ದು, ಆದ್ದರಿಂದಲೇ ಆ ಶಿವಲಿಂಗಕ್ಕೆ ಪೂಜೆಯ ಅರ್ಹತೆ ತಪ್ಪಿದ್ದು’ ಎಂದನು. ಮಾತು ಮುಂದುವರೆಸುತ್ತಾ ಶೀರಾಮ ‘ನಿನ್ನ ಶಕ್ತಿ ಮತ್ತು ಸಾಮರ್ಥ್ಯವು ದೇವರ ಚಿತ್ತವನ್ನು ಮೀರಲು ಸಾಧ್ಯವಿಲ್ಲ ಇದನ್ನು ನಿನಗೆ ತಿಳಿಸುವುದಕ್ಕಾಗಿಯೇ ನಾನು ಹೀಗೆ ಮಾಡಿದೆ’ ಎಂದ.
ಆಗ ಹನುಮಂತ ಶ್ರೀರಾಮನ ಪಾದಕ್ಕೆ ಬಿದ್ದು ಕ್ಷಮೆಯಾಚಿಸಿದನು. ಹನುಮಂತನಿಗೆ ತನ್ನ ತಪ್ಪಿನ ಅರಿವಾಗಿ ಮೊದಲಿನಂತೆಯೇ ವಿನಮ್ರವಾಗಿ ಉಳಿದನು. ಮುಂದೆ ರಾಮೇಶ್ವರದಲ್ಲಿ ರಾಮಲಿಂಗದ ಜೊತೆ ಶಿವಲಿಂಗವನ್ನೂ
ಒಟ್ಟಿಗೆ ಪೂಜಿಸಲಾಯಿತು. ನಮ್ಮ ಶಕ್ತಿ, ಅಧಿಕಾರ ಏನಿದ್ದರೂ ಅದು ಭಗವಂತನ ಕರುಣೆ. ಭಗವಂತನನ್ನು ಒಲಿಸಿ
ಕೊಳ್ಳಲು ಇರುವುದು ಒಂದೇ ಮಾರ್ಗ ಅದು ಭಕ್ತಿ ಮತ್ತು ಸಮರ್ಪಣೆ. ಅನೇಕರು ದೇವಸ್ಥಾನಗಳಿಗೆ ಹೋದಾಗ
ಅವರ ಅಽಕಾರದ ಶಕ್ತಿಯನ್ನು ಬಳಸಿ ಭಗವಂತನನ್ನು ಸರದಿ ಇಲ್ಲದೆ ಮುಂದೆ ಹೋಗಿ ನೋಡುವ ಅವಕಾಶ ಕಲ್ಪಿಸಿ
ಕೊಳ್ಳುತ್ತಾರೆ. ಅವರಿಗೆ ವಿಶೇಷ ಸವಲತ್ತುಗಳು ಕೂಡ ಸಿಗುತ್ತವೆ. ಆದರೆ ಭಗವಂತನ ಅನುಗ್ರಹದ ಬಗ್ಗೆ ಯಾವ ಖಾತ್ರಿ
ಯೂ ಇಲ್ಲ. ಎಂದಿಗೂ ಅಽಕಾರದಿಂದ ಮೆರೆಯಬೇಡಿ.
ಇದನ್ನೂ ಓದಿ: #kamaroopa