Wednesday, 18th September 2024

Roopa_Gururaj Column: ಅನಗತ್ಯವಾಗಿ ವಾದ – ವಿವಾದಗಳಲ್ಲಿ ತೊಡಗಬೇಡಿ

ಒಂದು ಸಲ, ಇಬ್ಬರು ವ್ಯಕ್ತಿಗಳ ನಡುವೆ ಜೋರಾಗಿ ಜಗಳವಾಗುತ್ತಿತ್ತು. ಇಬ್ಬರೂ ತಾವು ಮಾಡಿದ್ದೇ ಸರಿ ಎಂದು ವಾದಮಾಡುತ್ತ ತಮ್ಮ ತಪ್ಪನ್ನು ಒಪ್ಪಿಕೊಳ್ಳಲು ತಯಾರಿಲ್ಲದೆ, ವಾದಿಸುತ್ತಲೇ ಇದ್ದರು. ಇಬ್ಬರ ಜಗಳ
ತಾರಕ ಕ್ಕೇರಿತು.

ಒಬ್ಬ ವ್ಯಕ್ತಿಯಂತೂ ಬಹಳ ಕೋಪಗೊಂಡು ಹಲ್ಲು ಕಚ್ಚುತ್ತಾ, ‘ನಿನ್ನ ಕಪಾಳಕ್ಕೆ ಒಂದು ಕೊಟ್ಟರೆ, ನಿನ್ನ ಮೂವತ್ತೆರಡು ಹಲ್ಲುಗಳೂ ಉದುರಿ ಹೋದಿತು. ಬಾಯಿ ಮುಚ್ಚಿಕೊಂಡು ಸುಮ್ಮನಿರು’ ಎಂದ. ಆಗ ಇನ್ನೊಬ್ಬ ವ್ಯಕ್ತಿ, ಬಿಟ್ಟಾನೇ? ಆತ ಇನ್ನೂ ಸಿಟ್ಟಾಗಿ, ‘ನೀನು ನನ್ನನ್ನು ಏನೆಂದು ತಿಳಿದಿದ್ದೀಯಾ? ನಾನು ನಿನ್ನ ಕಪಾಳಕ್ಕೆ ಬಿಟ್ಟರೆ, ನಿನ್ನ ಅರವತ್ತನಾಲ್ಕು ಹಲ್ಲುಗಳು ಕೆಳಗೆ ಬಿದ್ದಾವು! ಹುಷಾರು’ ಎಂದ. ಇಲ್ಲಿ ತನ್ನ ವಿರೋಽ ಹೇಳಿದ ವಿಷಯಕ್ಕಿಂತ ಎರಡರಷ್ಟು ಹೇಳುವ ಭರದಲ್ಲಿ, ಮನುಷ್ಯನಿಗೆ ಬರೀ ಮೂವತ್ನಾಲ್ಕು ಹಲ್ಲು ಇರುವ
ವಿಷಯ ಅವನಿಗೆ ಮರೆತು ಹೋಯಿತು.

ಆಗ ಅ ಇದ್ದು, ಇದನ್ನೆಲ್ಲ ನೋಡುತ್ತಿದ್ದ ಮೂರನೆಯ ವ್ಯಕ್ತಿ, ಹೇಳಿದ, ಅಲ್ಲಯ್ಯಾ, ‘ದೊಡ್ಡ ಮನುಷ್ಯ! ಮನುಷ್ಯನಿಗೆ ಅರವತ್ತನಾಲ್ಕು ಹಲ್ಲುಗಳು ಹೇಗೆ ಇರುತ್ತದೆ? ಎಂಬುದನ್ನಾದರೂ ಜ್ಞಾಪಕದಲ್ಲಿಟ್ಟುಕೊಂಡು ಮಾತನಾಡಯ್ಯ’ ಎಂದ. ಆಗ ಈ ವ್ಯಕ್ತಿ, ತಾನು ತಪ್ಪು ಹೇಳಿದ್ದನ್ನು ಒಪ್ಪಿಕೊಳ್ಳಲು ತಯಾರಿಲ್ಲದೇ, ತನ್ನನ್ನು
ಸಮರ್ಥಿಸಿಕೊಳ್ಳಲು ತಿರುಗಿ ಹೇಳಿದ ‘ನನಗೆ ಅವೆಲ್ಲ ಗೊತ್ತಿದೆ, ಅದನ್ನೆಲ್ಲ ನಿನ್ನಿಂದ ಕಲಿಯಬೇಕಾಗಿಲ್ಲ.
ನೀನೊಬ್ಬ ತಲೆ ಹರಟೆ, ನಮ್ಮ ನಡುವೆ ನೀನು ನುಗ್ಗುತ್ತೀಯಾ ಎಂದು ಗೊತ್ತಿದ್ದೇ ನಾನು ನಿನ್ನ ಹಲ್ಲನ್ನೂ ಸೇರಿಸಿ ಅರವತ್ತನಾಲ್ಕು ಹಲ್ಲು ಎಂದು ಹೇಳಿದ್ದು’ ಎಂದ ಕುಹಕದಿಂದ ನಗುತ್ತಾ. ಇಂತಹ ಮುಠ್ಠಾಳರ ನಡುವೆ ನಾನು ಮಾತನಾಡಲು ಹೋದೆನಲ್ಲ ಎಂದು ಆ ಮೂರನೆಯ ವ್ಯಕ್ತಿ ಅವರಿಬ್ಬರ ಜಗಳವನ್ನು ಬಿಟ್ಟು ತನ್ನ ಪಾಡಿಗೆ ತಾನು
ನಡೆದ.

ಮೂರ್ಖರ ಜೊತೆ ವಾದ ಮಾಡಬಾರದು ಎಂದು ಅದಕ್ಕೆ ಹೇಳುವುದು. ಇಬ್ಬರು ಬೀದಿಯಲ್ಲಿ ನಿಂತು ಜಗಳವಾಡುತ್ತಿದ್ದಾರೆ ಎಂದರೆ ಇಬ್ಬರೂ ಮೂರ್ಖರು ಖಂಡಿತ. ಬುದ್ಧಿ ಇರುವ ಯಾರು ಕೂಡ ಬೀದಿಯಲ್ಲಿ ನಿಂತು ಹೀಗೆ ಜಗಳವಾಡುವುದಿಲ್ಲ. ಅಂತಹವರ ಜಗಳ ಬಿಡಿಸಲು ಹೋದವರು ಮತ್ತಷ್ಟು ಅವಮಾನ ಗೊಳ್ಳುವ ಎಲ್ಲ
ಸಾಧ್ಯತೆಯೂ ಇರುತ್ತದೆ. ಮೂರ್ಖರಿಗೆ ತಮ್ಮ ಮರ್ಯಾದೆ ಇರಲಿ ಬೇರೆಯವರ ಮರ್ಯಾದೆಯ ಕಾಳಜಿಯೂ ಇರುವುದಿಲ್ಲ. ಆದ್ದರಿಂದಲೇ ರಸ್ತೆಯಲ್ಲಿ ಯಾರಾದರೂ ಇಬ್ಬರು ಕಿತ್ತಾಡುತ್ತಿದ್ದರೆ ಒಬ್ಬರ ಪಕ್ಷ ವಹಿಸಿ ಹೋಗುವುದು ಬುದ್ಧಿವಂತರ ಲಕ್ಷಣವಲ್ಲ. ಕೆಲವೊಮ್ಮೆ ಆ ಇಬ್ಬರೂ ಮೂರನೆಯವರನ್ನು ತಪ್ಪಿತಸ್ಥರನ್ನಾಗಿಸುವ ಸಾಧ್ಯತೆ
ಇದೆ.

ಒಮ್ಮೆ ಯೋಚಿಸಿ ನೋಡಿ ರಸ್ತೆಯಲ್ಲಿ ನಾನಾ ರೀತಿಯ ಜಗಳಗಳನ್ನ ನಾವು ನೋಡುತ್ತೇವೆ. ಯಾರಾದರೂ ಅನಗತ್ಯವಾಗಿ ವಾಹನವನ್ನು ವೇಗವಾಗಿ ಚಲಾಯಿಸಿಕೊಂಡು ಹೋಗುತ್ತಾ ಮತ್ತ ಮತ್ತೊಬ್ಬರನ್ನು ತೊಂದರೆಗೆ ಇಡು ಮಾಡುತ್ತಾರೆ. ಅವರಿಗೆ ಬುದ್ಧಿ ಹೇಳಲು ಹೋದವರಿಗೆ ತಮ್ಮ ತಪ್ಪು ಒಪ್ಪಿಕೊಳ್ಳದೆ ಜೋರು ಮಾಡುತ್ತಾರೆ. ಅಲ್ಲಿ ಅಂತಹವರನ್ನು ತಿದ್ದುವ ಬದಲು ಅವರನ್ನು ಉಪೇಕ್ಷಿಸಿ ಮುಂದೆ ಹೋಗುವುದೇ ವಾಸಿ. ಅಥವಾ ಅವರನ್ನು ಸಂಬಂಧಪಟ್ಟ ಟ್ರಾಫಿಕ್ ಪೊಲೀಸರಿಗೆ ಒಪ್ಪಿಸಿಬಿಡಬೇಕು. ನಾವು ಅವರಿಗೆ ಬುದ್ಧಿ ಹೇಳಲು ಹೋದರೆ ಎಷ್ಟೋ ಬಾರಿ ಅದು ಜಗಳಕ್ಕೆ ತಿರುಗಿ ಕೆಲವೊಮ್ಮೆ ಸಿಟ್ಟಿದ ಭರದಲ್ಲಿ ಅವರು ದೈಹಿಕವಾಗಿ ಹಾನಿ ಮಾಡಲೂ ಹೇಸುವುದಿಲ್ಲ.

ಅಂತಹ ವಿಪತ್ತನ್ನು ಬರ ಮಾಡಿಕೊಳ್ಳುವ ಬದಲು, ಅಲ್ಲಿಂದ ಹೊರಟು ಬಿಡುವುದೇ ವಾಸಿ. ಅವರಿಗೆ ಬುದ್ಧಿ ಹೇಳಲು ಹೋದವರು ಸಹ ಯಾವುದೇ ಕಾರಣಕ್ಕೂ ಇಲ್ಲದೆ ಕೆಲವೊಮ್ಮೆ ಹಗೊಳಗಾಗುವ ಸಾಧ್ಯತೆ ಇದೆ. ಇಂದಿನ
ದಿನಗಳಲ್ಲಿ ಯಾರಿಗೂ ತಾಳ್ಮೆ ಇಲ್ಲ, ವಿವೇಚನೆ ಯಂತೂ ಮೊದಲೇ ಇಲ್ಲ. ಆದ್ದರಿಂದಲೇ ಅಂತಹವರ ಜೊತೆ ಅನಗತ್ಯವಾದ ವಿವಾದಕ್ಕೆ ಸಿಲುಕುವ ಬದಲು ಅಂತಹವರಿಂದ ದೂರವಿದ್ದರೆ ವಾಸಿ.

Leave a Reply

Your email address will not be published. Required fields are marked *