Thursday, 12th December 2024

ಕನಸು, ವಾಸ್ತವದ ನಡುವೆ ಬಿಡದೆ ಕಾಡಲಿದೆ ಬ್ಲಾಂಕ್

ವಿಭಿನ್ನ ಶೀರ್ಷಿಕೆಯ ಬ್ಲಾಂಕ್ ಸಿನಿಪ್ರಿಯ ನಿರೀಕ್ಷೆ ಹೆಚ್ಚಿಸಿದೆ. ಚಿತ್ರದ ಟ್ರೇಲರ್ ಕುತೂಹಲವನ್ನು ದುಪ್ಪಟ್ಟಾಗಿಸಿದೆ. ಚಿತ್ರದ ಟೈಟಲ್ ಕೇಳಲು ಪಂಚಿಂಗ್ ಆಗಿದೆ. ಅಂತೆಯೇ, ಇದುವರೆಗೂ ತೆರೆಯಲ್ಲಿ ಕಾಣದ ಕಥೆಯನ್ನು ಬ್ಲಾಂಕ್ ಹೊತ್ತು ಬಂದಿದೆ.

ಸಿನಿಮಾದಲ್ಲಿ ಮನರಂಜನೆಗಿಂತ ಕಾಡುವ ಕಥೆಯೇ ಅಡಕವಾಗಿದೆ. ಪ್ರತಿಕ್ಷಣವೂ ಕುತೂಹಲ ಕೆರಳಿಸುತ್ತಾ ಸಾಗುವ ಬ್ಲಾಂಕ್, ಚಿತ್ರಮಂದಿರದಿಂದ ಹೊರ ಬಂದ ಮೇಲೂ ಬಿಡದೆ ಕಾಡುತ್ತದೆ. ಮಂಜುನಾಥ ಪ್ರಸನ್ನ ನಿರ್ಮಾಣ ಮಾಡಿರುವ ಈ ಚಿತ್ರ ರಾಜ್ಯಾದ್ಯಂತ ತೆರೆಗೆ ಬಂದಿದೆ. ಬ್ಲಾಂಕ್ ವಾಸ್ತವ ಹಾಗೂ ಕನಸುಗಳ ನಡುವೆ ನಡೆಯುವ ಚಿತ್ರಣವಾಗಿದೆ. ಸಾಮಾನ್ಯವಾಗಿ ಎಲ್ಲರೂ ಕನಸು ಕಾಣುತ್ತಾರೆ. ರಾತ್ರಿ ಕಂಡ ಕನಸು ನಮ್ಮನ್ನು ಭ್ರಮಲೋಕ್ಕಕೆ ಕರೆದೊಯ್ಯುತ್ತದೆ. ಅದೇ ಮುಂಜಾನೆ ಎಚ್ಚರವಾದಾಗ ಆ ಕನಸು ಎರಡರಿಂದ ಮೂರು ನಿಮಿಷಗಳು ಕಾಲ ಕಾಡಿದರೆ ಹೆಚ್ಚು. ಆದರೆ ಅದೇ ಕನಸು ದಿನವಿಡೀ ಕಾಡಿದರೆ ನಮ್ಮ ಮನಸ್ಥಿತಿ ಹೇಗಾಗ ಬಹುದು. ಭ್ರಮಲೋಕ ಮತ್ತು ವಾಸ್ತವಿಕತೆಯ ತೊಳಲಾಟ ನಮ್ಮ ವರ್ತನೆಯನ್ನು ಹೇಗೆ ಬದಲಿಸಬಹುದು ಎಂಬುದೇ ಚಿತ್ರದ ಕಥೆ ಬೋಲ್ಡ್ ಲುಕ್‌ನಲ್ಲಿ ಕೃಷಿ ಕೃಷಿ ತಾಪಂಡ ಈ ಹಿಂದಿನ ಸಿನಿಮಾಗಳಲ್ಲಿ ಗ್ಲಾಮರಸ್ ಲುಕ್‌ನಲ್ಲಿ ಮಿಂಚಿದ್ದಾರೆ.

ಎಲ್ಲರನ್ನೂ ರಂಜಿಸಿದ್ದಾರೆ. ಈ ಚಿತ್ರದಲ್ಲಿ ಕೃಷಿ ಬೋಲ್ಡ್ ಆಗಿ ಕಂಗೊಳಿಸಿದ್ದಾರೆ. ಭ್ರಮೆ ಮತ್ತು ವಾಸ್ತವತೆಯ ನಡುವಿನ ತೊಳಲಾಟಕ್ಕೆ ಸಿಲುಕಿ ಪರದಾಡುವ ಕೃಷಿ, ಮೂರು ವಿಭಿನ್ನ ಗೆಟಪ್‌ನಲ್ಲಿ ಕಂಗೊಳಿಸಿದ್ದಾರೆ. ಅಷ್ಟೇ ಅಲ್ಲ, ಗತ್ತಾಗಿ ಧಮ್ ಹೊಡೆದು ನೋಡುಗರನ್ನು ನಿಬ್ಬೆರಗಾಗಿಸಿದ್ದಾರೆ. ಚಿತ್ರದಲ್ಲಿ ಪ್ರತಿ ಕ್ಷಣಕ್ಕೂ ತಿರುವು ನೀಡುವ ಪಾತ್ರ ಇವರದ್ದಾಗಿದೆ.

ಪೂರ್ಣಚಂದ್ರ ಮೈಸೂರು, ಚಿತ್ರದ ಮತ್ತೊಂದು ಪ್ರಮುಖ ಪಾತ್ರದಲ್ಲಿ ಕಾಣಿಸಿ ಕೊಂಡಿದ್ದು, ಡಿಫರೆಂಟ್ ಗೆಟಪ್‌ನಲ್ಲಿ ಮಿಂಚಿದ್ದಾರೆ. ಉಳಿದಂತೆ ಪ್ರಶಾಂತ್ ಸಿದ್ದಿ, ಸುಚೇಂದ್ರ ಪ್ರಸಾದ್, ಭರತ್ ಹಾಸನ್ ಮತ್ತಿತರರು ಚಿತ್ರದ ತಾರಾಬಳಗದಲ್ಲಿದ್ದಾರೆ.

ಹದಿಮೂರನೆ ಮಹಡಿಯ ರಹಸ್ಯ
ಕೆಲವೆಡೆ ದೊಡ್ಡ ದೊಡ್ಡ ಕಟ್ಟಡಗಳಲ್ಲಿ ಹದಿಮೂರನೇ ಮಹಡಿ ಇರುವುದಿಲ್ಲ. ಅಲ್ಲಿ ಆ ಜಾಗವನ್ನು ಖಾಲಿ ಬಿಟ್ಟು ಹದಿನಾಲ್ಕನೇ ಕಟ್ಟಡವನ್ನು ಕಟ್ಟು ತ್ತಾರೆ. ಅಷ್ಟುಕ್ಕೂ ಯಾಕೆ ಈ ಹದಿಮೂರನೇ ಸಂಖ್ಯೆ ಬಹುತೇಕರಿಗೆ ಅಶುಭವಾಗಿರುತ್ತದೆ. ಅದರಿಂದ ಎದುರಾಗುವ ಕೆಡಕಾದರೂ ಏನು ಎಂಬ ಪ್ರಶ್ನೆಗೆ ಚಿತ್ರದಲ್ಲಿಯೇ ಉತ್ತರ ಸಿಗಲಿದೆ.

ಡ್ರಗ್ಸ್ ತಂದೊಡ್ಡವ ಆಪತ್ತು
ಬ್ಲಾಂಕ್ ಚಿತ್ರದಲ್ಲಿ ಡ್ರಗ್ಸ್‌ನಿಂದಾಗುವ ಕೆಡಕುಗಳ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನ ಮಾಡಲಾಗಿದೆ. ಇಲ್ಲಿ ಐವರು ಸ್ನೇಹಿತರು ಡ್ರಗ್ಸ್ ತೆಗೆದುಕೊಂಡಾಗ ಅವರ ವರ್ತನೆ ಹೇಗಿರುತ್ತದೆ. ಆ ಕ್ಷಣದಲ್ಲಿ ಅವರು ತಮ್ಮ ಸ್ನೇಹಿತರನ್ನು ಹೇಗೆ ನೋಡುತ್ತಾರೆ. ತಮ್ಮನ್ನು ತಾವು ಹೇಗೆ ಕಂಡುಕೊಳ್ಳುತ್ತಾರೆ. ಡ್ರಗ್ಸ್ ಸೇವನೆ ಯಿಂದ ನಮ್ಮ ಜೀವಕ್ಕೆ ಹೇಗೆ ಆಪತ್ತು ಬರುತ್ತದೆ ಎಂಬುದನ್ನು ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕರು. ಎಸ್.ಜೆ ನಿರ್ದೇಶನಲ್ಲಿ ಬ್ಲಾಂಕ್ ಮೂಡಿಬಂದಿದೆ. ಶ್ರೀಶಾಸ್ತ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.