ಟಾಲಿವುಡ್ನಲ್ಲಿ ತೆರೆಗೆ ಬಂದ ಗೀತ ಗೋವಿಂದಂ ಸಿನಿಮಾ, ಸೂಪರ್ ಹಿಟ್ ಆಯಿತು. ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ಈ ಚಿತ್ರ ಯುವಜನರ ಮನಸೂರೆಗೊಂಡಿತು.
ಲವ್ ಸ್ಟೋರಿಯ ಜತೆಗೆ ಕೌಟುಂಬಿಕ ಕಥೆಯ ಈ ಚಿತ್ರ, ಪ್ರೇಕ್ಷಕರನ್ನು ಸೆಳೆಯುವಲ್ಲಿಯೂ ಯಶಸ್ವಿಯಾಯಿತು. ಆ ಬಳಿಕ ಇದೇ ಜೋಡಿ ಕಾಮ್ರೆಡ್ ಚಿತ್ರದಲ್ಲಿ ಜತೆಯಾಗಿ ನಟಿಸಿತು. ಆದರೆ ಆ ಸಿನಿಮಾ ಅಷ್ಟಾಗಿ ಸದ್ಧು ಮಾಡಲೇ ಇಲ್ಲ. ಈಗ ಮತ್ತೊಮ್ಮೆ ಈ ಜೋಡಿ ತೆರೆಯಲ್ಲಿ ಒಂದಾಗಲಿದೆ. ಸದ್ಯ ರಶ್ಮಿಕಾ ಅಭಿನಯದ ಪುಷ್ಪ ಚಿತ್ರ ರಿಲೀಸ್ ಆಗಿದ್ದು, ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈ ಚಿತ್ರದಲ್ಲಿ ರಶ್ಮಿಕಾ, ಶ್ರೀವಲ್ಲಿಯ ಪಾತ್ರದಲ್ಲಿ ನಟಿಸಿದ್ದು, ಚಿತ್ರ ದುದ್ದಕ್ಕೂ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.
ಇನ್ನು ವಿಜಯ್ ಲೈಗರ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಲೈಗರ್ ಕೂಡ ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು ಬಿಡುಗಡೆಗೂ ಮೊದಲೇ ಕುತೂಹಲ ಮೂಡಿಸಿದೆ. ಈ ನಡುವೆ ರಶ್ಮಿಕಾ ಹಾಗೂ ವಿಜಯ್ ಚಿತ್ರೀಕರಣದ ನಡುವೆ ಬಿಡುವು ಮಾಡಿಕೊಂಡು ಹೈದರಾಬಾದ್ನಲ್ಲಿ ಭೇಟಿಯಾಗಿದ್ದರು. ಇಬ್ಬರೂ ಒಟ್ಟಿಗೆ ಊಟ ಸವಿದು, ಮಾತುಕತೆ ನಡೆಸಿದ್ದಾರೆ. ಇದನ್ನು ನೋಡಿದ ಸಿನಿಪ್ರಿಯರು ವಿಜಯ್ ಹಾಗೂ ರಶ್ಮಿಕಾ ಇಬ್ಬರು ಒಟ್ಟಿಗೆ ಸಿನಿಮಾದಲ್ಲಿ ಕಾಣಿಸಿಕೊಳ್ಳಬಹುದೇ ಎಂದುಕೊಂಡಿದ್ದಾರೆ.
ಅಂದುಕೊಂಡಂತೆ. ಈ ಜೋಡಿಯನ್ನು ಮತ್ತೆ ಒಟ್ಟಿಗೆ ತೆರೆಗೆ ತರಲು ಕೆಲವು ನಿರ್ದೇಶಕರು ಈಗಾಗಲೇ ಕಥೆ ಹೇಣೆದಿದ್ದಾರೆ. ದೊಡ್ಡ ದೊಡ್ಡ ನಿರ್ಮಾ ಪಕರು ಚಿತ್ರ ನಿರ್ಮಾಣಕ್ಕೆ ಬಂಡವಾಳ ಹೂಡಲು ಸಿದ್ಧವಾಗಿದ್ದಾರೆ. ರಶ್ಮಿಕಾ ಹಿಂದಿ ಚಿತ್ರರಂಗದಲ್ಲಿ ಬ್ಯುಸಿ ಯಾಗಿದ್ದಾರೆ. ಇತ್ತ ವಿಜಯ್ ಲೈಗರ್ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಇಬ್ಬರು ಈಗ ಒಪ್ಪಿಕೊಂಡಿರುವ ಪ್ರೊಜೆಕ್ಟ್ಗಳನ್ನು ಮುಗಿಸಿದ ಮೇಲೆ, ಒಂದೇ ಚಿತ್ರದಲ್ಲಿ ನಟಿಸಲಿದ್ದಾರೆ.