ಮನಸಾಗಿದೆ ಸಿನಿಮಾ ಯುವ ಪ್ರೇಮಿಗಳ ಹೃದಯ ಬಡಿತ ಹೆಚ್ಚಿಸಿದೆ. ಹೌದು, ನವ ನಟ ಅಭಯ್ ಈ ಚಿತ್ರದ ನಾಯಕನಾಗಿ ನಟಿಸುತ್ತಿದ್ದಾರೆ. ಮನಸಾಗಿದೆ ಎಂಬ ಚಿತ್ರದ ಶಿರ್ಷಿಕೆಯೇ ಮನಸೆಳೆಯುತ್ತಿದೆ. ಅದಕ್ಕೆ ತಕ್ಕಂತೆ ಸಿನಿಮಾದ ಹಾಡುಗಳು ಸಂಗೀತ ಪ್ರಿಯರ ಮನನಗೆದ್ದಿವೆ. ಮನಸಾಗಿದೆ ತ್ರಿಕೋನ ಪ್ರೇಮ ಕಥೆಯ ಸಿನಿಮಾ.
ಹಾಗಂತ ಈ ಚಿತ್ರ ಲವ್ ಸ್ಟೋರಿಗೆ ಸೀಮಿತವಾಗಿಲ್ಲ. ಇಲ್ಲಿ ಎಮೋಷನ್ಸ್ ಇದೆ. ಅದಕ್ಕೂ ಮಿಗಿಲಾಗಿ ಕೌಟುಂಬಿಕ ಕಥೆಯೂ ಇದೆ. ಚಿತ್ರದ ಮೂಲಕ ಇಂದಿನ ಯುವ ಜನತೆಗೆ ಒಳ್ಳೆಯ ಸಂದೇಶವನ್ನು ನೀಡಲಾಗಿದೆ. ನಿರ್ಮಾಪಕ ಎಸ್.ಚಂದ್ರಶೇಖರ್ ಚಿತ್ರ ನಿರ್ಮಾಣಕ್ಕೆ ಬಂಡವಾಳ ಹೂಡಿದ್ದಾರೆ. ಮಾತ್ರವಲ್ಲ ಅದ್ಭುತವಾದ ಕಥೆಯನ್ನು ರಚಿಸಿದ್ದಾರೆ. ಇಂದಿನ ದಿನಗಳಿಗೆ ಪೂರಕವಾಗುವ, ಯುವಜನರಿಗೆ ಅಗತ್ಯವಾಗುವ ಅಂಶಗಳು ಕಥೆಯಲ್ಲಿ ಮಿಳಿತವಾಗಿವೆ. ಯುವ ಪ್ರೇಮಿಗಳ ಜಗತ್ತಿನಲ್ಲಿ ಪ್ರೀತಿ ಎಷ್ಟು ಮುಖ್ಯ ಎಂಬ ಸಂದೇಶ ಈ ಸಿನಿಮಾ ದಲ್ಲಿದೆ.
ಚಂದನವನಕ್ಕೆ ಬಂದ ಅಭಯ್
ಈ ಸಿನಿಮಾದ ಮೂಲಕ ನಟ ಅಭಯ್ ಚಂದನವನಕ್ಕೆ ಪರಿಚಿತರಾಗುತ್ತಿದ್ದಾರೆ. ತನ್ನ ಮಗನಿಗಾಗಿಯೇ ನಿರ್ಮಾ ಪಕ ಚಂದ್ರಶೇಖರ್ ಸಿನಿಮಾ ನಿರ್ಮಾಣಕ್ಕೆ ಬಂಡವಾಳ ಹೂಡಿದ್ದಾರೆ. ಅಭಯ್‌ಗೆ ಇದು ಮೊದಲ ಚಿತ್ರವಾ ದರೂ, ಎಲ್ಲಿಯೂ ನವ ನಟ ಎಂದು ಭಾಸವಾಗುವುದೇ ಇಲ್ಲ. ಯಾಕೆಂದರೆ ಕಥೆಗೆ ತಕ್ಕಂತೆ ತಯಾರಿ ನಡೆಸಿದ್ದು, ಮೆಚ್ಚುವಂತೆ ನಟಿಸಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಟ್ರೇಲರ್‌ನಲ್ಲಿ ಅದು ಸ್ಪಷ್ಟವಾಗಿದೆ. ಅಭಯ್ ಡ್ಯಾನ್ಸ್ ಗೂ ಸೈ, ಆಕ್ಷನ್‌ಗೂ ಸೈ ಎನಿಸಿಕೊಂಡಿದ್ದಾರೆ. ಅಭಯ್‌ಗೆ ಜತೆಯಾಗಿ ಮೇಘಶ್ರೀ ಹಾಗೂ ಅಥಿರಾ ನಟಿಸಿದ್ದಾರೆ.
ಮಧುರ ಗಾನ
ಮನಸಾಗಿದೆ ಸಿನಿಮಾ ಗಮನಸೆಳೆಯುತ್ತಿರುವುದೇ ಹಾಡುಗಳಿಂದ. ಕಥೆಗೆ ಪೂರಕವಾಗುವಂತೆ ಚಿತ್ರದ ಹಾಡುಗಳು ಮೂಡಿಬಂದಿವೆ. ಪ್ರೀತಿಯ ಕಥೆಗೆ ಸರಿ ಹೊಂದುವ ಡ್ಯುಯೆಟ್ ಸಾಂಗ್ ಒಂದಿದೆ. ಕೆ.ಕಲ್ಯಾಣ್ ಸಾಹಿತ್ಯದಲ್ಲಿ ಮೂಡಿ ಬಂದಿರುವ ಈ ಗೀತೆ ಅದ್ಭುತವಾಗಿ ಮೂಡಿಬಂದಿದೆ. ಸಂಗೀತ ಪ್ರಿಯರನ್ನು ಸೆಳೆದಿದೆ. ಈ ಹಾಡು ಐದು ಲಕ್ಷಕ್ಕೂ ಹೆಚ್ಚು ವೀಕ್ಷಣೆ ಕಂಡಿದೆ. ಇನ್ನು ಟಪ್ಪಾಂಗುಚಿ ಹಾಡೊಂದಿದ್ದು, ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯದಲ್ಲಿ ಸಿದ್ಧ ವಾಗಿದೆ. ಈ ಹಾಡಿನಲ್ಲಿ ಅಭಯ್ ಭರ್ಜರಿಯಾಗಿ ಸ್ಟೆಪ್ ಹಾಕಿದ್ದಾರೆ. ಮಜಾಟಾಕೀಸ್ ಖ್ಯಾತಿಯ ರೆಮೊ ಕೂಡ ಹಾಡೊಂದಕ್ಕೆ ಸಾಹಿತ್ಯ ರಚಿಸಿದ್ದಾರೆ.
ಥ್ರಿಲ್ಲರ್ ಆಕ್ಷನ್
ಮನಸಾಗಿದೆ, ಆಕ್ಷನ್ ದೃಶ್ಯಗಳಲ್ಲೂ ಗಮನಸೆಳೆಯುತ್ತಿದೆ. ಚಿತ್ರದಲ್ಲಿ ಎರಡು ಅದ್ಭುತ ಸಾಹಸ ದೃಶ್ಯಗಳಿವೆ. ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ ಮಾಡಿದ್ದಾರೆ ಎಂಬುದು ಈ ಚಿತ್ರದ ಮತ್ತೊಂದು ವಿಶೇಷ. ಬೈಕ್ ರೇಸ್‌ನಲ್ಲಿ ನಡೆಯುವ ಫೈಟ್ ಒಂದಿದೆ. ಇದು ಕಣ್ಣಿಗೆ ಕಟ್ಟುವಂತೆ ಮೂಡಿಬಂದಿದೆ.