Monday, 25th November 2024

ಪ್ರೀತಿಯ ಆರಾಧನೆ ಪ್ರೇಮಂ ಪೂಜ್ಯಂ

ಲವ್ಲಿ ಸ್ಟಾರ್ ಪ್ರೇಮ್ ಅಭಿನಯದ ಪ್ರೇಮಂ ಪೂಜ್ಯ ನವೆಂಬರ್ 12ರಂದು ತೆರೆಗೆ ಬರಲಿದೆ.

ಪ್ರೇಮಂ ಪೂಜ್ಯಂ, ಪ್ರೇಮ್ ಅಭಿನಯದ 25ನೇ ಚಿತ್ರ ಎನ್ನುವುದು ವಿಶೇಷ. ಚಿತ್ರದ ಶೀರ್ಷಿಕೆಯೇ ಹೇಳುವಂತೆ ಇದು ಪ್ರೇಮಕಥೆಯ ಚಿತ್ರವಾಗಿದೆ. ಹಾಗಂತ ಇದು ಮಾಮುಲಿ ಸಿನಿಮಾಗಳಂತೆ ಮರ ಸುತ್ತುವ, ಪ್ರೀತಿಸಿದ ಹುಡಗಿಯನ್ನೇ ಕೈ ಹಿಡಿಯುವ ಕಥೆಗೆ ಮಾತ್ರ ಚಿತ್ರ ಸೀಮಿತವಾಗಿಲ್ಲ. ಬದಲಾಗಿ ಪ್ರೇಮವನ್ನು ದೇವರಂತೆ ಆರಾಧಿಸಬೇಕು ಎಂಬು ದನ್ನು ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಲಾಗಿದೆ.

ವೈದ್ಯರ ಹೃದಯದಲ್ಲೂ ಒಬ್ಬ ಸಂಗೀತಗಾರ, ಕವಿಯಿದ್ದಾನೆ, ಅದ್ಭುತ ಪ್ರೇಮಕಾವ್ಯ ಮೂಡಿಸುವ ನಿರ್ದೇಶಕನೂ ಇರುತ್ತಾನೆ ಎಂಬುದನ್ನು ಪ್ರೇಮಂಪೂಜ್ಯಂ ಚಿತ್ರದ ಮೂಲಕ ತೋರಿಸಿಕೊಟ್ಟಿದ್ದಾರೆ ಡಾ.ಬಿ.ಎಸ್.ರಾಘವೇಂದ್ರ. ಪ್ರೇಮ್ ಈ ಚಿತ್ರದಲ್ಲಿ ಏಳು ಗೆಟಪ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಕ, ಪ್ರೇಯಸಿಯನ್ನು ಇಡೀ ಚಿತ್ರದಲ್ಲಿ ಟಚ್ ಮಾಡುವುದೇ ಇಲ್ಲ. ಇದೇ ಪ್ರೇಮಂ ಪೂಜ್ಯಂನ ವಿಶೇಷ. ನನ್ನ 25 ಚಿತ್ರಗಳಲ್ಲಿ ಇಂಥ ಕಥೆ ಸಿಕ್ಕಿರುವುದು ಇದೇ ಮೊದಲು. ಪ್ರೀತಿ ಎನ್ನುವ ಪದಕ್ಕೆ ದೈವಿಕ ಭಾವನೆ, ಹೊಸ ವ್ಯಾಖ್ಯಾನ ಕೊಡುವ ಸಿನಿಮಾವಿದು.

ಈಗಾಗಲೇ ಕಲ್ಕತ್ತಾ, ಕೊಚ್ಚಿನ್‌ನಿಂದ ರೀಮೇಕ್‌ಗೆ ಬೇಡಿಕೆ ಬಂದಿದೆ. ಸಬ್ ಟೈಟಲ್ ಹಾಕಿ ಕೇರಳದಲ್ಲೂ ಚಿತ್ರವನ್ನು ರಿಲೀಸ್ ಮಾಡುವ ಯೋಚನೆಯಿದೆ. ಈಗಿನ ಬೆಳವಣಿಗೆ ನೋಡಿದರೆ ಎಲ್ಲ ಭಾಷೆಗಳಲ್ಲೂ ಪ್ರೇಮಂ ಪೂಜ್ಯಂ ಚಿತ್ರವನ್ನು ರಿಲೀಸ್
ಮಾಡುವ ನಿರೀಕ್ಷೆಯಿದೆ ಎನ್ನುತ್ತಾರೆ ಪ್ರೇಮ್. ಬೃಂದಾ ಆಚಾರ್ಯ ಚಿತ್ರದ ನಾಯಕಿಯಾಗಿ ನಟಿಸಿದ್ದಾರೆ. ಮಾಸ್ಟರ್ ಆನಂದ್ ಚಿತ್ರ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕರ್ನಾಟಕ, ಧರ್ಮಶಾಲಾ, ಊಟಿ, ವಿಯೇಟ್ನಂನ ಸುಂದರ ತಾಣಗಳಲ್ಲಿ ಚಿತ್ರದ ಚಿತ್ರೀಕರಣ ನಡೆದಿದೆ.

***

ಓಟಿಟಿ ಕಡೆಯಿಂದ ನಮಗೆ ಹಲವು ಆಫರ್‌ಗಳು ಬಂದವು. ಆದರೆ ಚಿತ್ರಮಂದಿರಗಳಲ್ಲಿಯೇ ಸಿನಿಮಾ ಬಿಡುಗಡೆ ಮಾಡಬೇಕು ಎಂಬುದು ನಮ್ಮ ಧೃಡ ನಿರ್ಧಾರವಾಗಿತ್ತು. ಅದಕ್ಕಾಗಿಯೇಇಷ್ಟು ದಿನ ಕಾಯ್ದಿದ್ದೇವೆ. ನವೆಂಬರ್‌ನಲ್ಲಿ ಚಿತ್ರ ವಿಶ್ವದಾದ್ಯಂತ ತೆರೆಗೆ ಬರಲಿದೆ. ಉತ್ತಮ ಕಥೆ, ಸಂಗೀತ, ಸಾಹಿತ್ಯ, ಛಾಯಾಗ್ರಹಣ ಪ್ರೇಕ್ಷಕರಿಗೆ ಹೊಸ ಅನುಭವ ನೀಡಲಿದೆ. ಲೈವ್ ಇನ್‌ ಸ್ಟ್ರುಮೆಂಟ್ಸ್ ಬಳಸಿ ಚಿತ್ರಕ್ಕೆ ಸಂಗೀತ ನೀಡಿದ್ದು, ಕೇಳಲು ಇಂಪಾಗಿದೆ. ಮಂಡ್ಯದಿಂದ ವಿಯಟ್ನಾಂವರೆಗೂ ತೆರಳಿ ಚಿತ್ರವನ್ನು ಶೂಟ್ ಮಾಡಿದ್ದೇವೆ. ಪ್ರೇಮಿಗಳು, ತಂದೆ-ತಾಯಿ, ಸ್ನೇಹಿತರು ಈ ಎಲ್ಲ ಸಂಬಂಧಗಳಲ್ಲೂ ಪೂಜನೀಯ ಭಾವನೆ ಇರ ಬೇಕೆಂದನ್ನು ಪ್ರೇಮಂ ಪೂಜ್ಯಂ ಚಿತ್ರದ ಮೂಲಕ ಹೇಳ ಹೊರಟಿದ್ದೇನೆ.

-ಡಾ.ರಾಘವೇಂದ್ರ ನಿರ್ದೇಶಕ