Thursday, 12th December 2024

ಅಲ್ಲು ಜತೆ ಹೆಜ್ಜೆ ಹಾಕಿದ ಸಮಂತಾ

ಸಮಂತಾ ವಿಚ್ಚೇದನದ ಬಳಿಕ ಸಾಕಷ್ಟು ಚಿತ್ರಗಳಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ. ಮಾತ್ರವಲ್ಲ ಸ್ಟಾರ್ ನಟರ ಚಿತ್ರಗಳ ಹಾಡಿ ನಲ್ಲಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ವಿಶೇಷ ಎಂದರೆ ಪುಷ್ಪ ಚಿತ್ರತಂಡ ಸೇರಿರುವ ಸಮಂತಾ ಇದೇ ಮೊದಲ ಬಾರಿಗೆ ಐಟಂ ಸಾಂಗ್‌ವೊಂದರಲ್ಲಿ ಸೊಂಟ ಬಳುಕಿಸಿ ದ್ದಾರೆ.

ಸದ್ಯ ಸಮಂತಾ ಅವರ – ಲುಕ್ ರಿವಿಲ್ ಆಗಿದ್ದು, ಇದನ್ನು ನೋಡಿದ ಪ್ರೇಕ್ಷಕರು ಫಿದಾ ಆಗಿದ್ದಾರೆ. ಈ ಹಾಡಿಗಾಗಿಯೇ ಹೈದರಾ ಬಾದ್‌ನ ರಾಮೋಜಿ ಫಿಲ್ಮ ಸಿಟಿಯಲ್ಲಿ ಕೋಟಿ ರು. ವೆಚ್ಚದಲ್ಲಿ ಅದ್ಧೂರಿ ಸೆಟ್ ನಿರ್ಮಿಸಲಾಗಿದೆ. ಪೆಪ್ಪಿ ಹಾಡು ಇದಾಗಿದ್ದು ಗಣೇಶ್ ಆಚಾರ್ಯ ಮತ್ತು ದೇವಿ ಪ್ರಸಾದ್ ನೃತ್ಯ ಸಂಯೋ ಜಿಸಿದ್ದಾರೆ. ಪುಷ್ಪ ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು, ಅಲ್ಲುರ್ಜುನ್ ನಾಯಕನಾಗಿ ನಟಿಸುತ್ತಿದ್ದಾರೆ. ಅಲ್ಲುಗೆ ಜತೆಯಾಗಿ ರಶ್ಮಿಕಾ ಮಂದಣ್ಣ ಅಭಿನಯಿಸಿದ್ದಾರೆ.

ಈಗ ಸಮಂತಾ ಕೂಡ ಜತೆಯಾಗಿದ್ದು, ಚಿತ್ರದ ಬಗ್ಗೆ ಕುತೂಹಲ ಇಮ್ಮಡಿಗೊಂಡಿದೆ. ಪುಷ್ಪ ಎರಡು ಭಾಗದಲ್ಲಿ ಮೂಡಿಬರಲಿದೆ. ಮೊದಲ ಭಾಗ ಡಿಸೆಂಬರ್ 17 ರಂದು ತೆರೆಗೆ ಬರಲಿದೆ. ಆಂಧ್ರ ಪ್ರದೇಶದ ರಾಯಲ ಸೀಮಾ ಪ್ರದೇಶದ ಇಶಾಚಲಂ ಬೆಟ್ಟಗಳಲ್ಲಿನ
ಕೆಂಪು ಶ್ರೀಗಂಧ ಕಳ್ಳಸಾಗಾಣಿಕೆದಾರರ ಜೀವನದ ಕಥೆ ಪುಷ್ಪ ಚಿತ್ರದಲ್ಲಿದೆ. ಈ ಚಿತ್ರದಲ್ಲಿ ಜಗಪತಿ ಬಾಬು, ಪ್ರಕಾಶ್ ರಾಜ್, ಅನಸೂಯ ಭಾರದ್ವಾಜ್, ಧನಂಜಯ, ಸುನೀಲ, ಹರೀಶ್ ಉಥಮನ್, ವೆನ್ನೆಲಾ ಕಿಶೋರ್, ಶ್ರೀತೇಜ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿ ಕೊಂಡಿದ್ದಾರೆ.

ಶಕುಂತಲಂಗಾಗಿ ಕಾಯುತ್ತಿರುವ ಸಮಂತಾ ಸಮಂತಾ ಸದ್ಯ ಶಕುಂತಲಂ ಚಿತ್ರದ ಚಿತ್ರೀಕರಣ ಮುಗಿಸಿದ್ದಾರೆ. ಚಿತ್ರದ ಪೋಸ್ಟ್ ಪ್ರೊಡಕ್ಷನ್ಸ್ ಕೆಲಸಗಳು ನಡೆಯುತ್ತಿದ್ದು, ಚಿತ್ರದ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ನಿರ್ದೇಶಕ ಗುಣಶೇಖರ್ ಅವರ ನಿರ್ದೇಶನದಲ್ಲಿ ಶಕುಂತಲಂ ಮೂಡಿಬಂದಿದೆ. ಇದರ ಜತೆಗೆ ಸಮಂತಾ ಮೊದಲ ಅಂತಾರಾಷ್ಟ್ರೀಯ ಯೋಜನೆಗೆ ಸಹಿ ಹಾಕಿದ್ದಾರೆ. ಅರೇಂಜ್‌ಮೆಂಟ್ ಆಫ್ ಲವ್ ಶೀರ್ಷಿಕೆಯಲ್ಲಿ ಚಿತ್ರ ತಯಾ ರಾಗಲಿದೆ. ಈ ಚಿತ್ರವನ್ನು ಬಾಫ್ತಾ ವಿಜೇತ ನಿರ್ದೇಶಕ ಫಿಲಿಪ್ ಜಾನ್ ನಿರ್ದೇಶಿಸಲಿದ್ದಾರೆ .