ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಆಲ್ಬಂ ಹಾಡುಗಳು ಬರುತ್ತಿವೆ. ಪಾರ್ಟಿ ಸಾಂಗ್, ಫ್ರೀಕ್ ಸಾಂಗ್ ಹೀಗೆ ಹಲವಾರು ವೆರೈಟಿ ಸಾಂಗ್‌ಗಳನ್ನು ನೋಡಿದ್ದೇವೆ. ಈಗ ಮಕ್ಕಳಿಗಾಗಿ ಸಾಯಿ ಲಕ್ಷ್ಮಣ್ ‘ಸ್ಕೂಲೇ ನನ್ನ ಟೆಂಪಲ್’ ಎಂಬ ಆಲ್ಬಂ ಹಾಡನ್ನು ಸಿದ್ಧ ಪಡಿಸಿದ್ದಾರೆ.
ಹಿರಿಯ ನಿರ್ಮಾಪಕರಾದ ಎಸ್.ಎ.ಚಿನ್ನೇಗೌಡ ಅವರು ಈ ಆಲ್ಬಂ ಹಾಡನ್ನು ಬಿಡುಗಡಗೊಳಿಸಿ ತಂಡಕ್ಕೆ ಶುಭ ಕೋರಿದರು.
ಎಲ್ಲಾ ಮಕ್ಕಳಲ್ಲೂ ಪ್ರತಿಭೆಯಿರುತ್ತದೆ. ಆ ಪ್ರತಿಭೆಯನ್ನು ಅನಾವರಣ ಮಾಡುವ ಪ್ರಯತ್ನವೇ ಈ ಹಾಡು. ಕರೋನಾ ಅಂತ
ಹೆದರಬೇಡಿ, ಕರೋನಾ ಮುಗೀತು, ಶಾಲೆ ಆಟ ಪಾಠ ಶುರುವಾಯಿತು, ಹೋಗೋಣ ಎನ್ನುವ ಸಂದೇಶ ಈ ಹಾಡಿನಲ್ಲಿದೆ. ಕರೋನಾಗೆ ವ್ಯಾಕ್ಸಿನ್ ಬರಬಂದಿದೆ, ಆದರೆ ಮಕ್ಕಳಿಗೆ ನಮ್ಮ ಸಪೋರ್ಟ್ ಬೇಕು. ಮಕ್ಕಳು ಒಂದು ವರ್ಷದಿಂದ ಶಾಲೆಯನ್ನು ಮರೆತುಬಿಟ್ಟಿದ್ದಾರೆ.
ಈ ಹಾಡು ಮಕ್ಕಳಿಗೆ ಶಕ್ತಿ ತುಂಬುತ್ತದೆ ಎಂದು ನಿರ್ದೇಶಕ ಸಾಯಿ ಲಕ್ಷ್ಮಣ್ ಹೇಳಿದರು. ದಲ್ಬಂಜನ್ ಪ್ರೊಡಕ್ಷ್ಸ್ ಛನದಲ್ಲಿ ಸಂಜಯ್ ದಲ್ಬಂಜನ್ ಈ ಹಾಡನ್ನು ನಿರ್ಮಿಸಿದ್ದಾರೆ. ಶಿವರಾಮ್ ಬರೆದಿರುವ ಈ ಹಾಡನ್ನು ಗುರುಕಿರಣ್ ಹೆಗ್ಡೆ ಹಾಡಿದ್ದಾರೆ. ವಿನು ಮನಸು ಸಂಗೀತ, ವಿಘ್ನೇಶ್ ನೃತ್ಯ ನಿರ್ದೇಶನ ಈ ಹಾಡಿಗಿದೆ.
ಕ್ಷಣ ಕ್ಷಣದ ಸುದ್ದಿಗಳಿಗಾಗಿ ವಿಶ್ವವಾಣಿ ಫೇಸ್ ಬುಕ್ ಪೇಜ್ ಲೈಕ್ ಮಾಡಿ