ಅಜಿತ್ ಜಯರಾಜ್ ನಟಿಸಿರುವ ಸೈಕಲಾಜಿಕಲ್ ಥ್ರಿಲ್ಲರ್ ಕಥಾಹಂದರದ ರೈಮ್ಸ್ ಚಿತ್ರ ಡಿಸೆಂಬರ್ ೧೦ಕ್ಕೆ ಬಿಡುಗಡೆಯಾಗುತ್ತಿದೆ. ಈ ಚಿತ್ರಕ್ಕೆ ಅಜಿತ್ಕುಮಾರ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಆಕ್ಷನ್ ಕಟ್ ಹೇಳಿ ದ್ದಾರೆ.
ನಟಿ ಶುಭಾ ಪೂಂಜಾ ಈ ಚಿತ್ರದಲ್ಲಿ ಕ್ರೈಂ ವರದಿಗಾರ್ತಿಯಾಗಿ ಕಾಣಿಸಿಕೊಂಡಿದ್ದಾರೆ. ಸೈಕಲಾಜಿಕಲ್ ಕ್ರೈಂ, ಥ್ರಿಲ್ಲರ್ ಕಥಾನಕ ಒಳಗೊಂಡಿರುವ ಈ ಚಿತ್ರದ ಟ್ರೈಲರ್ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಸರಣಿ ಕೊಲೆಗಳ ಹಿನ್ನೆಲೆಯನ್ನು ಬಯಲಿಗೆಳೆಯುವ ದಕ್ಷ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಅಜಿತ್ ಜಯರಾಜ್ ಕಾಣಿಸಿಕೊಂಡಿದ್ದಾರೆ. ಯಾವುದೇ ಸುಳಿವನ್ನು ನೀಡದೆ ಕೊಲೆ ಮಾಡುವ ಆ ಕೊಲೆಗಾರ ನಡೆಸುವ ಎಲ್ಲಾ ಕೊಲೆಗಳ ಹಿಂದೆ ಒಂದು ರೈಮ್ಸ್ ಇರುತ್ತದೆ. ಅದರ ಹಿನ್ನೆಲೆ ಏನು ಎಂಬುದು ಈ ಚಿತ್ರದ ಕ್ಲೈಮ್ಯಾಕ್ಸ್ನಲ್ಲಿ ತಿಳಿಯುತ್ತದೆ. ಈಗ ಜನ ಸಸ್ಪೆನ್ಸ್, ಕ್ರೈಂ ಜಾನರ್ ಚಿತ್ರಗಳನ್ನೇ ಹೆಚ್ಚು ಇಷ್ಟಪಡುತ್ತಿದ್ದಾರೆ, ಈ ಚಿತ್ರವೂ ಅದೇ ಜಾನರ್ನಲ್ಲಿ ಮೂಡಿಬಂದಿದೆ.
ಕನ್ನಡ ಚಿತ್ರರಂಗದಲ್ಲಿಯೇ ವಿಭಿನ್ನ ಕಥೆಯ ಸಿನಿಮಾವಿದು. ಚಿತ್ರದ ಕ್ಲೈಮ್ಯಾಕ್ಸ್ ಅನ್ನು ಯಾರೂ ಸಹ ಊಹಿಸಲು ಸಾಧ್ಯವಿಲ್ಲ. ಅಷ್ಟು ಕುತೂಹಲಕಾರಿಯಾಗಿ ಕ್ಲೈಮ್ಯಾಕ್ಸ್ ಅಲ್ಲದೆ ನನ್ನ ಪಾತ್ರದ ನರೇಶನ್ ನನಗೆ ತುಂಬಾನೇ ಇಷ್ಟವಾಯಿತು, ನನಗೆ ಖಂಡಿತಾ ಈ ಚಿತ್ರದಿಂದ ಒಂದು ಬ್ರೇಕ್ ಸಿಗುವ ನಿರೀಕ್ಷೆ ಇದೆ ಎನ್ನುತ್ತಾರೆ ಅಜಿತ್. ಚಿತ್ರದ ನಾಯಕಿಯಾಗಿ ಸುಷ್ಮಾ ನಾಯರ್ ಅಭಿನಯಿಸಿ ದ್ದಾರೆ. ಪೊಲೀಸ್ ಅಧಿಕಾರಿಯ ಮಡದಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಇನ್ನು ಅಭಿನಯ, ಮಿಮಿಕ್ರಿ ಗೋಪಿ, ಅಪರ್ಣ, ಚಿನ್ನರಾಜು ಮುಂತಾದವರು ರೈಮ್ಸ್ ಚಿತ್ರದ ಇತರೆ ಪಾತ್ರಗಳಲ್ಲಿದ್ದಾರೆ. ನಗರ ದಲ್ಲಿ ಹಲವಾರು ಮರ್ಡರ್ ಗಳು ನಡೆದಾಗ ಅದರ ಹಿನ್ನೆಲೆಯಲ್ಲಿ ರೈಮ್ಸ್ ಕಾಮನ್ ಕ್ಲೂ ಆಗಿರುತ್ತದೆ, ಸಾಮಾಜಿಕ ಜವಾಬ್ದಾರಿ ಇಟ್ಟುಕೊಂಡು ಒಂದೊಳ್ಳೇ ಕಂಟೆಂಟ್ ಇಟ್ಟುಕೊಂಡು ಈ ಸಿನಿಮಾ ನಿರ್ಮಾಣ ಮಾಡಿದ್ದೇವೆ. ಹೀರೋಯಿಸಂ ಇಲ್ಲದ ಚಿತ್ರವಿದು, ಮ್ಯೂಸಿಕ್ ಸಿನಿಮಾಟೋಗ್ರಫಿ ಹಾಗೂ ಎಡಿಟಿಂಗ್ ಚಿತ್ರದ ಮೂರು ಮುಖ್ಯ ಪಿಲ್ಲರ್ ಗಳು ಎನ್ನುತ್ತಾರೆ ನಿರ್ದೇಶಕ ಅಜಿತ್ಕುಮಾರ್ . ಈ ಚಿತ್ರವನ್ನು ಜ್ಞಾನಶೇಖರ್ ಸಿದ್ದಯ್ಯ, ಎಂ.ರಮೇಶ್ ಆರ್ಯ, ರವಿಕುಮಾರ್ ಮತ್ತು ಗಿರೀಶ್ಗೌಡ ಒಟ್ಟಾಗಿ ಸೇರಿ ನಿರ್ಮಾಣ ಮಾಡಿದ್ದಾರೆ. ಶಕ್ತಿ ಸಂಗೀತ ಸಂಯೋಜಿಸಿದ್ದಾರೆ.
***
ನಾನು ಒಂದಷ್ಟು ಬ್ರೇಕ್ ತೆಗೆದುಕೊಂಡಿದ್ದೆ. ಹಾಗಾಗಿ ಮನೆಯಲ್ಲಿಯೇ ಉಳಿದು ಹೊಸ ಕಥೆಗಳಿಗಾಗಿ ನಿರೀಕ್ಷಿಸುತ್ತಿದ್ದೆ. ಈ ವೇಳೆ ನಿರ್ದೇಶಕ ಅಜಿತ್ ಕರೆ ಮಾಡಿದರು. ಕಥೆಯ ಬಗ್ಗೆ ಹೇಳಿದರು. ಈ ಚಿತ್ರದಲ್ಲಿ ನನ್ನ ಪಾತ್ರ ಮೆಚ್ಚುಗೆಯಾಯಿತು. ನಟಿಸಲು ಒಪ್ಪಿಕೊಂಡೆ. ಈ ಚಿತ್ರದಲ್ಲಿ ನನ್ನದು ಪತ್ರಕರ್ತೆಯ ಪಾತ್ರ. ಇದು ಚಾಲೆಂಜಿಂಗ್ ಪಾತ್ರವೇ ಆಗಿದೆ.
-ಶುಭಾಪೂಂಜ ನಟಿ