Thursday, 12th December 2024

ಮೇ.6ಕ್ಕೆ ವೀರಂ

ನಟ ಪ್ರಜ್ವಲ್ ದೇವರಾಜ್ ಕನ್ನಡ ಬೇಡಿಕೆಯ ನಟರಾಗಿ ಹೊರಹೊಮ್ಮಿದ್ದಾರೆ. ಡೈನಾಮಿಕ್ ಪ್ರಿನ್ಸ್ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ.

ಈಗಾಗಲೇ ಹಲವು ಚಿತ್ರಗಳ ಚಿತ್ರೀಕರಣ ಮುಗಿಸಿದ್ದಾರೆ. ಅದರಲ್ಲಿ ವೀರಂ ಚಿತ್ರವೂ ಒಂದು. ಈ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್, ಸಾಹಸಸಿಂಹ ವಿಷ್ಣು ವರ್ಧನ್ ಅಭಿಮಾನಿಯಾಗಿ ಎರಡು ವಿಭಿನ್ನ ಶೇಡ್‌ನಲ್ಲಿ ಕಾಣಿಸಿ ಕೊಂಡಿದ್ದಾರೆ.

ವೀರಂ ತೆರೆಗೆ ಸಿದ್ಧವಾಗಿದ್ದು, ಮೇ ರಂದು ರಾಜ್ಯಾದ್ಯಂತ ತೆರೆಗೆ ಬರಲಿದೆ. ಈ ಬಗ್ಗೆ ನಿರ್ಮಾಪಕ ಕೆ.ಎಂ.ಶಶಿಧರ್ ಅಧಿಕೃತವಾಗಿ ಘೋಷಿಸಿದ್ದಾರೆ. ಶಶಿಧರ್ ಸ್ಟುಡಿಯೋಸ್ ಪ್ರೊಡಕ್ಷನ್ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ ಈ ಚಿತ್ರದಲ್ಲಿ ಎಮೋಷನಲ್ ಥ್ರಿಲ್ಲರ್ ಕಥಾಹಂದರ ವಿದೆ. ಚಿತ್ರದ ವಿಶೇಷ ಪಾತ್ರದಲ್ಲಿ ಶ್ರೀನಗರ ಕಿಟ್ಟಿ ನಟಿಸಿದ್ದಾರೆ. ಶಿಷ್ಯ ಖ್ಯಾತಿಯ ದೀಪಕ್ ಮೊದಲ ಬಾರಿಗೆ ಖಳನಾಯಕನಾಗಿ ಕಾಣಿಸಿಕೊಂಡಿ ದ್ದಾರೆ. ವಿಷ್ಣು ಅವರ ಪಾತ್ರ ವನ್ನಿಟ್ಟುಕೊಂಡೇ ಚಿತ್ರದ ಕಥೆ ಹೆಣೆಯಲಾಗಿದೆ.

ಹಾಗಾಗಿ ವಿಷ್ಣುವಷರ್ಧನ್ ಅವರ ಅಭಿಮಾನಿಗಳು ಖಂಡಿತ ನಮ್ಮ ಚಿತ್ರವನ್ನು ಇಷ್ಟಪಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ ನಿರ್ಮಾಪಕ ಶಶಿಧರ್. ಪ್ರಜ್ವಲ್ ದೇವರಾಜ್‌ಗೆ ನಾಯಕಿಯಾಗಿ, ರಚಿತಾ ರಾಮ್ ಬಣ್ಣಹಚ್ಚಿದ್ದಾರೆ. ಉಳಿದಂತೆ ಹಿರಿಯ ನಟಿ ಶ್ರುತಿ, ಅಚ್ಯುತ್ ಕುಮಾರ್, ಗಿರಿ, ಚಿರಾಗ್ ಜಾನಿ, ಬಲರಾಜ್ವಾಡಿ, ಮೈಕೋ ನಾಗರಾಜ್, ಗಿರೀಶ್ ಜತ್ತಿ, ಸ್ವಾತಿ, ಪ್ರದೀಪ್ ಪೂಜಾರಿ, ವಿ.ನಾಗೇಂದ್ರ ಪ್ರಸಾದ್, ನಟನ ಪ್ರಶಾಂತ್, ರಮೇಶ್ ಪಂಡಿತ್, ಜೋಸೈಮನ್ ಮತ್ತಿತರರು ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಕುಮಾರ್.ಎಸ್.ರಾಜ್ ನಿರ್ದೇಶಿಸಿರುವ ವೀರಂ ಚಿತ್ರಕ್ಕೆ ಅನೂಪ್ ಸೀಳನ್ ಸಂಗೀತ, ಲವಿತ್ ಛಾಯಾಗ್ರಹಣವಿದೆ.