Sunday, 8th September 2024

ವಿದ್ಯುತ್ ಚಾಲಿತ ಕಾರು ಮುಂದಿರುವ ಸವಾಲು

* ವಸಂತ ಗ ಭಟ್

2030ರ ಮುಂಚೆ ನಮ್ಮ ದೇಶದಲ್ಲಿ ಚಲಿಸುವ ಎಲ್ಲಾಾ ವಾಹನಗಳು ವಿದ್ಯುತ್ ಚಾಲಿತವಾಗಿರಬೇಕು ಎಂಬ ಮಹತ್ವಾಾಕಾಂಕ್ಷೆೆಯ ಪ್ರಸ್ತಾಾಪವನ್ನು ಕೇಂದ್ರ ಸರಕಾರ ಘೋಷಿಸಿದೆ. ಇಷ್ಟೊೊಂದು ಜನಸಂಖ್ಯೆೆ ಇರುವ ಈ ದೇಶದಲ್ಲಿ ಈ ಒಂದು ಯೋಜನೆಯನ್ನು ಜಾರಿಗೆ ತರಲು ಇರುವ ತೊಡಕುಗಳೇನು?

ಕಳೆದ ಕೆಲ ತಿಂಗಳುಗಳಿಂದ ಭಾರತದಲ್ಲಿ ವಾಹನಗಳ ಮಾರಾಟ ಕಡಿಮೆಯಾಗಿದೆ, ಇದರಿಂದಾಗಿ ಸಾವಿರಾರು ಕಾರ್ಮಿಕರು ಮತ್ತು ವ್ಯಾಾಪಾರಿಗಳಿಗೆ ನಷ್ಟ ಅನುಭವಿಸುತ್ತಿಿರುವುದು ತಿಳಿದಿರುವಂತಹ ವಿಷಯ. ವಾಹನಗಳ ವ್ಯಾಾಪಾರ, ಅದರಲ್ಲೂ ಮುಖ್ಯವಾಗಿ ಕಾರುಗಳ ವ್ಯಾಾಪಾರ ಕಡಿಮೆಯಾಗಲು ಒಂದು ಮುಖ್ಯ ಕಾರಣ ವಿದ್ಯುತ್ ಚಾಲಿತ ವಾಹನಗಳಿಗಾಗಿ ಕಾಯುತ್ತಿಿರುವ ಜನ ಸಮೂಹ. ಈ ಕೂಡಲೇ ಕಾರು ಖರಿದಿಸಿ ಇನ್ನೊೊಂದೆರಡು ವರ್ಷದಲ್ಲಿ ವಿದ್ಯುತ್ ಚಾಲಿತ ವಾಹನಗಳು ಮಾರುಕಟ್ಟೆೆಯನ್ನು ಪ್ರವೇಶಿಸಿ ತಾವು ಕೊಂಡ ಪೆಟ್ರೋೋಲ್ ಅಥವಾ ಡೀಸೆಲ್ ಚಾಲಿತ ಕಾರನ್ನು ಮರು ಮಾರಾಟ ಮಾಡಲಾಗದಿದ್ದರೆ ಎಂಬ ಆತಂಕ ಅವರದ್ದು.

ವಿದ್ಯುತ್ ಚಾಲಿತ ವಾಹನ ಖರೀದಿಯಿಂದ ವಾತಾವರಣಕ್ಕೆೆ ಸೇರುವ ವಿಷಾನಿಲಗಳು ಸ್ವಲ್ಪ ಮಟ್ಟಿಿಗಾದರೂ ಕಡಿಮೆಯಾಗುತ್ತದೆ ಎನ್ನುವ ಸದುದ್ದೇಶವೂ ಇದರಲ್ಲಿ ಅಡಕವಾಗಿದೆ. ಅಮೇರಿಕ ಇತ್ತೀಚೆಗೆ ಬಿಡುಗಡೆ ಮಾಡಿದ ಒಂದು ಸಮೀಕ್ಷೆಯ ಪ್ರಕಾರ ಭಾರತ 2027 ರೊಳಗೆ ಚೈನಾವನ್ನು ಹಿಂದಿಕ್ಕಿಿ ಜಗಿತ್ತಿಿನ ಅತಿ ಹೆಚ್ಚು ಜನಸಂಖ್ಯೆೆ ಹೊಂದಿದ ದೇಶವಾಗಿ ಹೊರಹೊಮ್ಮಲಿದೆ ಮತ್ತು ಈ ಶತಮಾನ ಕಳೆಯುವ ವರೆಗೂ ಅದೇ ಸ್ಥಾಾನದಲ್ಲಿ ಮುಂದುವರೆಯಲಿದೆ. ಈ ಹೆಚ್ಚಿಿನ ಜನಸಂಖ್ಯೆೆಯ ಮುಖ್ಯ ಅಗತ್ಯತೆಯೆಂದರೆ ಅದು ಆಹಾರ ಮತ್ತು ಸಾರಿಗೆ. ಸಧ್ಯ ಆಹಾರ ಕ್ಷೇತ್ರದಲ್ಲಿ ಬಹಳಷ್ಟು ಸ್ವಾಾವಲಂಬನೆ ಸಾಧಿಸಿರುವ ಭಾರತಕ್ಕೆೆ ಮುಖ್ಯ ಸವಾಲು ಸಾರಿಗೆ. ಏಕೆಂದರೆ ಸಧ್ಯ ಭಾರತದಲ್ಲಿ ಬಳಕೆಯಾಗುತ್ತಿಿರುವ 80 ಪ್ರತಿಶತದಷ್ಟೂ ಪೆಟ್ರೋೋಲಿಯಂ ಉತ್ಪನ್ನಗಳು ಹೊರದೇಶದಿಂದ ಆಮದಾಗುತ್ತದೆ. ಈ ಕ್ಷೇತ್ರದಲ್ಲಿ ಸ್ವಾಾವಲಂಬನೆ ಸಾಧಿಸಬೇಕೆಂದರೆ ವಿದ್ಯುತ್ ಚಾಲಿತ ವಾಹನಗಳ ಅವಶ್ಯಕತೆ

ಭಾರತಕ್ಕೆೆ ಬಹಳವಾಗಿದೆ.

ನೀತಿ ಆಯೋಗ 2017 ರಲ್ಲಿ ಒಂದು ಘೋಷಣೆಯನ್ನು ಮಾಡಿದೆ. ಅಂದೇನೆಂದರೆ 2030 ರ ಒಳಗೆ ಭಾರತದಲ್ಲಿ ಓಡಾಡುವ ಎಲ್ಲ ವಾಹನಗಳು ಸಂಪೂರ್ಣ ವಿದ್ಯುತ್ ಚಾಲಿತ ವಾಹನಗಳಾಗಿರಬೇಕು ಎಂಬುದು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಈ ಘೋಷಣೆ ಬರಿ ಕಾರುಗಳಿಗೆ ಮಾತ್ರ ಸೀಮಿತವಾಗಿದೆ ದ್ವಿಿಚಕ್ರ ವಾಹನ, ಲಾರಿ, ಟ್ರಕ್ ಗಳಿಗೂ ಅನ್ವಯಿಸುತ್ತವೆ. ಘೋಷಣೆಯಾಗಿ ಎರಡು ವರ್ಷ ಕಳೆದರೂ ಈ ನಿಟ್ಟಿಿನಲ್ಲಿ ಸರಕಾರ ಕೈ ಗೊಂಡ ಯಾವ ಕಾರ್ಯಗಳು ಕಣ್ಣಿಿಗೆ ಗೋಚರಿಸುತ್ತಿಿಲ್ಲ. ಹಾಗಂತ ಇದೇನು ಮಾಡಲು ಅಸಾಧ್ಯವಾದ ಕೆಲಸವೇನಲ್ಲ ! ಆದರೆ ಇಲ್ಲಿ ಹಲವಾರು ಸವಾಲುಗಳಿವೆ.

ಒಂದು ವೇಳೆ ಭಾರತದ ಎಲ್ಲ ವಾಹನಗಳು ಸಂಪೂರ್ಣ ವಿದ್ಯುತ್ ಚಾಲಿತವಾದವು ಎಂದುಕೊಳ್ಳೊೊಣ. ಅವುಗಳಿಗೆ ಅವಶ್ಯವಿರುವ ವಿದ್ಯುತ್‌ಅನ್ನು ಉತ್ಪಾಾದಿಸಲು ನಾವು ಶಕ್ತರಾಗಿದ್ದೇವೆಯೇ ? ಇದು ಮೊದಲ ಸವಾಲು. ಜನರ ನಿತ್ಯ ಬಳಕೆಗೆ 24 ಗಂಟೆ ವಿದ್ಯುತ್‌ನ್ನು ನೀಡಲು ಭಾರತದ ಹೆಚ್ಚಿಿನ ರಾಜ್ಯಗಳಿಗೆ ಇನ್ನೂ ಸಾಧ್ಯವಾಗಿಲ್ಲ. ಎಲ್ಲ ವಾಹನಗಳು ವಿದ್ಯುತ್ ಚಾಲಿತವಾಗಬೇಕೆಂದರೆ ಈಗ ಉತ್ಪಾಾದನೆ ಯಾಗುತ್ತಿಿರುವ ವಿದ್ಯುತ್ ಕನಿಷ್ಠ ಎರಡರಿಂದ ಮೂರು ಪಾಲು ಜಾಸ್ತಿಿಯಾಗಬೇಕು. ಉತ್ಪಾಾದನೆ ಜಾಸ್ತಿಿಯಾಯಿತು ಎಂದುಕೊಳ್ಳೋೋಣ. ಅದು ಯಾವ ಮೂಲದಿಂದ ಎನ್ನುವ ಇನ್ನೊೊಂದು ಪ್ರಶ್ನೆೆ ಉದ್ಭವಿಸುತ್ತದೆ. ಸಧ್ಯ ಭಾರತದಲ್ಲಿ ಉತ್ಪಾಾದನೆಯಾಗುವ 70 ಪ್ರತಿಶದದಷ್ಟೂ ವಿದ್ಯುತ್ ನೇರವಾಗಿ ಕಲ್ಲಿದ್ದಲ ಮೂಲದಿಂದ ಬರುವಂತಹುದು. ಕಲ್ಲಿದ್ದಲ ಗಣಿಗಾರಿಕೆ ಮತ್ತು ಅದರಿಂದ ವಿದ್ಯುತ್ ಉತ್ಪಾಾದಿಸಲು ಪ್ರಕ್ರಿಿಯೆ ವಾತಾವರಣವನ್ನು ಬಹಳಷ್ಟು ಕಲುಷಿತಗೊಳಿಸುತ್ತದೆ. ಈ ರೀತಿಯಲ್ಲಿ ವಿದ್ಯುತ್ ಉತ್ಪಾಾದಿಸಿ ನಾವು ಅದನ್ನು ವಾಹನಗಳಿಗೆ ಸರಬರಾಜು ಮಾಡಿ ಹಸಿರು ವಾಹನ, ಯಾವುದೇ ವಿಷಾನಿಲಗಳನ್ನು ವಾತಾವರಣಕ್ಕೆೆ ಬಿಡುವುದಿಲ್ಲ ಎಂದು ಸಂತೋಷ ಪಟ್ಟುಕೊಂಡರೆ ಅದು ಮೂರ್ಖತನ ಎನಿಸೀತು.

ಇನ್ನೊೊಂದು ಸಮಸ್ಯೆೆಯೆಂದರೆ ಅದು ಚಾರ್ಜಿಂಗ್ ಕೇಂದ್ರಗಳದ್ದು. ಖಂಡಿತವಾಗಿಯೂ ಮಾರುಕಟ್ಟೆೆಗೆ ಬರುತ್ತಿಿರುವ ಎಲ್ಲ ಹೊಸ ಕಾರುಗಳು ಒಮ್ಮೆೆ ಚಾರ್ಜ್ ಮಾಡಿದರೆ ನೂರಾರು ಕಿಲೋಮೀಟರ್ ಓಡುವ ಕ್ಷಮತೆ ಇರುವಂತಹವೇ. ಆದರೆ ಅವುಗಳನ್ನು ಎಲ್ಲಿಯಾದರೂ ಚಾರ್ಜ್ ಮಾಡಲೇ ಬೇಕಲ್ಲವೇ? ಸ್ವಂತ ಮನೆ ಮತ್ತು ವಾಹನ ನಿಲುಗಡೆಗೆ ಸ್ಥಳವಿರುವವರು ಹೇಗೋ ಚಾರ್ಜ್ ಮಾಡಬಹುದು. ಆದರೆ ಸ್ವಂತ ಪಾರ್ಕಿಂಗ್ ಸ್ಥಳ ಇರದವರು ಚಾರ್ಜ್ ಮಾಡಲು ಬಹಳ ಕಷ್ಟ ಅನುಭವಿಸಬೇಕಾಗುತ್ತದೆ; ಇತ್ತೀಚೆಗೆ ನಾಗ್ಪುರದಲ್ಲಿ ಓಲಾ ವಿದ್ಯುತ್ ಚಾಲಿತ ಕಾರುಗಳನ್ನು ರಸ್ತೆೆಗೆ ಬಿಡುವ ಪ್ರಯತ್ನ ಮಾಡಿತ್ತು. ಆದರೆ ವಿದ್ಯುತ್ ಚಾಲಿತ ಕಾರುಗಳು ಚಾಲಕರಿಗೆ ಪೆಟ್ರೋೋಲ್/ಡೀಸೆಲ್ ಚಾಲಿತ ಕಾರುಗಳ ಅನುಭವ ನೀಡಲು ಸಂಪೂರ್ಣ ವಿಫಲವಾದವು.

ಅಲ್ಲದೆ ಚಾರ್ಜ್ ಮಾಡಲು ಗಂಟೆ ಗಟ್ಟಲೆ ಕಾಯಬೇಕಾದಂತಹ ಪರಿಸ್ಥಿಿತಿಯಿಂದಾಗಿ ಇಂದು ಹೆಚ್ಚಿಿನ ಚಾಲಕರು ಮತ್ತೆೆ ಪೆಟ್ರೋೋಲ್ ಅಥವಾ ಡೀಸೆಲ್ ಕಾರುಗಳತ್ತ ಮುಖಮಾಡಿದ್ದಾರೆ. ಪೆಟ್ರೋೋಲ್ ಬಂಕ್‌ಗಳ ರೀತಿಯಲ್ಲಿ ವಿದ್ಯುತ್ ಚಾರ್ಜಿಂಗ್ ಕೇಂದ್ರಗಳು ಭಾರತದಲ್ಲಿರುವುದು ಕಡಿಮೆ. ವಿದ್ಯುತ್ ಚಾಲಿತ ವಾಹನಗಳು ದೇಶವಿಡೀ ಓಡಾಡಬೇಕೆಂದರೆ ಎಲ್ಲೆಡೆ ತ್ವರಿತವಾಗಿ ಚಾರ್ಜ್ ಮಾಡುವ ಪಾಯಿಂಟ್‌ಗಳ ನಿರ್ಮಾಣವಾಗಬೇಕು. ಮತ್ತು ಅದರಲ್ಲಿ ಯಾವಾಗಲೂ ಅವಶ್ಯಕ ವಿದ್ಯುತ್ ಇರುವಂತೆ ನೋಡಿಕೊಳ್ಳಬೇಕು. ಈ ರೀತಿಯ ಕೇಂದ್ರವನ್ನು ತೆರೆಯಲಿಚ್ಚಿಿಸುವ ವ್ಯಕ್ತಿಿ ಅಥವಾ ಸಂಸ್ಥೆೆಗೆ ಸರ್ಕಾರ ಸಬ್ಸಿಿಡಿಯನ್ನು ಸಹ ನೀಡಬೇಕು.

ದುಬಾರಿ ವೆಚ್ಚದ ಕಾರುಗಳು
ವಿದ್ಯುತ್ ಚಾಲಿತ ವಾಹನಗಳು ಭಾರತದಲ್ಲಿ ಪ್ರಾಾಮುಖ್ಯತೆಗಳಿಸಲು ಇರುವ ಇನ್ನೊೊಂದು ಸವಾಲೆಂದರೆ ಅದು ವಿದ್ಯುತ್ ಚಾಲಿತ ವಾಹನಗಳ ಬೆಲೆ. ಸಾಮಾನ್ಯವಾಗಿ ಪೆಟ್ರೋೋಲ್ ಅಥವಾ ಡೀಸೆಲ್ ವಾಹನಗಳನ್ನು ಚಲಾಯಿಸುವ ಚಾಲಕರು ಅದೇ ರೀತಿಯ ಅನುಭವವನ್ನು ವಿದ್ಯುತ್ ಚಾಲಿತ ವಾಹನಗಳಿಂದಲೂ ಅಪೇಕ್ಷಿಸುತ್ತಾಾರೆ. ಅದೇ ರೀತಿಯ ಕಾರ್ಯಕ್ಷಮತೆಯನ್ನು ವಿದ್ಯುತ್ ಚಾಲಿತ ವಾಹನಗಳಲ್ಲಿ ನೀಡಬೇಕೆಂದರೆ ತಯಾರಕರು ಬಹಳಷ್ಟು ಶ್ರಮವಹಿಸಬೇಕಾಗುತ್ತದೆ ಮತ್ತು ಅದರಿಂದಾಗಿ ಕಾರಿನ ಬೆಲೆ ಕೂಡ ಹೆಚ್ಚಾಾಗುತ್ತದೆ. ಇದೇ ಜೂನ್‌ನಲ್ಲಿ ಭಾರತದಲ್ಲಿ ಬಿಡುಗಡೆಯಾದ ಸಂಪೂರ್ಣ ವಿದ್ಯುತ್ ಚಾಲಿತ ಹುಂಡೈ ನ ಕೋನ ಕಾರು ಹೆಚ್ಚು ಕಡಿಮೆ ಪೆಟ್ರೋೋಲ್ ಅಥವಾ ಡೀಸೆಲ್ ಕಾರಿನ ಅನುಭವನ್ನೇ ಕೊಡುತ್ತದೆ. ಒಮ್ಮೆೆ ಚಾರ್ಜ್ ಆದರೆ ಕಾರು ಸುಮಾರು 450 -500 ಕಿಲೋಮೀಟರ್ ವರೆಗೂ ಆರಾಮವಾಗಿ ಓಡುತ್ತದೆ. ವಿದ್ಯುತ್ ಅನ್ನು ವ್ಯವಸ್ಥಿಿತವಾಗಿ ವ್ಯಯಿಸಲು ಸಹ ಹಲವಾರು ಆಯ್ಕೆೆಗಳಿವೆ. ಆದರೆ ಇದರ ಬೆಲೆ ಆರಂಭಿಕ ಬೆಲೆ ಸುಮಾರು 28 ಲಕ್ಷ ರೂಪಾಯಿ. ಮಧ್ಯಮ ವರ್ಗದ

ಭಾರತೀಯನಿಗೆ ಇದು ಖಂಡಿತ ದುಬಾರಿ.
ಇಷ್ಟೆೆಲ್ಲ ಸವಾಲುಗಳು ನಮ್ಮ ಮುಂದಿವೆ ಎಂದು ನಾವು ಧೃತಿಗೆಡುವ ಅವಶ್ಯಕತೆ ಇಲ್ಲ. 2025 ರೊಳಗೆ ಭಾರತದಲ್ಲಿ ಉತ್ಪಾಾದನೆಯಾಗುವ 60 ಪ್ರತಿಶತದಷ್ಟೂ ವಿದ್ಯುತ್ ಅನ್ನು ನವೀಕರಿಸಬಹುದಾದಂತಹ ಮೂಲಗಳಾದ ಸೌರಶಕ್ತಿಿ, ಪವನಶಕ್ತಿಿ, ಸಮುದ್ರದ ಅಲೆಗಳ ಶಕ್ತಿಿ ಇತ್ಯಾಾದಿ ಮೂಲದಿಂದ ಉತ್ಪಾಾದಿಸಬೇಕು ಎಂದು ಕೇಂದ್ರ ಸರ್ಕಾರ ನಿಶ್ಚಯಿಸಿದೆ. ಇದು ಅಲ್ಲಲ್ಲಿ ಸ್ವಲ್ಪ ಮಟ್ಟಿಿಗೆ ಕಾರ್ಯಗತ ಕೂಡ ಆಗುತ್ತಿಿದೆ. ವಿಶ್ವದ ಅತಿ ದೊಡ್ಡ ಐದು ಸೌರ ವಿದ್ಯುತ್ ಪಾರ್ಕ್ ಗಳಲ್ಲಿ 3 ಭಾರತದಲ್ಲಿವೆ. ಅದರಲ್ಲಿ ಒಂದು ನಮ್ಮ ರಾಜ್ಯದ ಪಾವಗಡ ಸೋಲಾರ್ ಪಾರ್ಕ್ ಎಂಬುದು ಖಂಡಿತ ನಾವೆಲ್ಲರು ಹೆಮ್ಮೆೆ

ಪಡುವ ವಿಷಯ.
ಇನ್ನೂ ವಿದ್ಯುತ್ ಕಾರುಗಳು ವಾತಾವರಣವನ್ನು ರಕ್ಷಿಸುವುದರ ಜತೆ, ಅವುಗಳ ನಿರ್ವಹಣೆ ಖರ್ಚು ಕೂಡ ಪೆಟ್ರೋೋಲ್ ಅಥವಾ ಡೀಸೆಲ್ ಚಾಲಿತ ಕಾರುಗಳಿಗಿಂತ ಕಡಿಮೆಯಿಯಾಗಿರುತ್ತದೆ. ಸಧ್ಯ ಭಾರತದಲ್ಲಿರುವ ಎರಡು ಮುಖ್ಯ ವಿದ್ಯುತ್ ಚಾಲಿತ ಕಾರುಗಳದ ಮಹೀಂದ್ರ ಈ2ಒ ಮತ್ತು ಮಹೀಂದ್ರ ಈ-ವೇರಿಟೋ ಈ ಎರಡು ಕಾರುಗಳು ಒಂದು ಕಿಲೋಮೀಟರ್ ಓಡಿಸಲು ಖರ್ಚಾಗುವುದು ಕೇವಲ 1 ರೂಪಾಯಿ. ಅಂದರೆ ನೀವು 100 ಕಿಲೋಮೀಟರ್ ಅನ್ನು ಕೇವಲ 100 ರೂಪಾಯಿಯ ಒಳಗೆ ಓಡಿಸಬಹುದು. ಅದೇ ಪೆಟ್ರೋೋಲ್ ಅಥವಾ ಡೀಸೆಲ್ ಅನ್ನು ಬಳಸಿದರೆ ಕನಿಷ್ಟ 350-400 ರೂಪಾಯಿಗಳಗುತ್ತವೆ.

ನೀವು ಸದ್ಯ ಕಾರನ್ನು ಖರೀದಿಸಬೇಕು ಎಂದು ಯೋಚಿಸಿ ವಿದ್ಯುತ್ ಚಾಲಿತ ಕಾರುಗಳಿಗಾಗಿ ಕಾಯುತ್ತಿಿದ್ದರೆ ಅವಶ್ಯ ವಿರುವ ವಾತಾವರಣ ಸ್ರಷ್ಟಿಿಯಾಗಲು ನೀವು ಕನಿಷ್ಠ 5-10 ವರ್ಷ ಕಾಯಬೇಕಾಗುತ್ತದೆ. ಹಾಗಾಗಿ ನಿಮ್ಮ ಕಾರಿನ ಅವಶ್ಯಕತೆ ತುರ್ತಿನದಾಗಿದ್ದರೆ ನೀವು ಕೇವಲ ಪೆಟ್ರೋೋಲ್ ಅಥವಾ ಡೀಸೆಲ್ ಕಾರುಗಳನ್ನು ಖರೀದಿಸುವ ಬದಲು, ಹೈಬ್ರಿಿಡ್ ಮಾದರಿಯ ಕಾರುಗಳನ್ನು ಖರೀದಿಸುವುದು ಸೂಕ್ತ. ಆ ಕಾರುಗಳು ಕೆಲವು ಕಾರ್ಯಗಳಿಗೆ ಪೆಟ್ರೋೋಲಿಯಂ ಉತ್ಪನ್ನಗಳ ಬದಲು ವಿದ್ಯುತ್ ಉಪಯೋಗಿಸುವುದರಿಂದ ಪೆಟ್ರೋೋಲಿಯಂ ಉತ್ಪನ್ನಗಳ ಬಳಕೆ ಕಡಿಮೆಯಾಗುತ್ತದೆ ಮತ್ತು ಈ ರೀತಿಯ ಕಾರುಗಳ ಮೌಲ್ಯ ವಿದ್ಯುತ್ ಚಾಲಿತ ಕಾರುಗಳಿಗಿಂತ ಬಹಳಷ್ಟು ಕಡಿಮೆ.

Leave a Reply

Your email address will not be published. Required fields are marked *

error: Content is protected !!