Thursday, 19th September 2024

ಆನ್‌ಲೈನ್ ಬುಕಿಂಗ್ ನಿಷೇಧ

ಮನೆಗಳನ್ನು, ಕೊಠಡಿಗಳನ್ನು ಆನ್‌ಲೈನ್ ಮೂಲಕ ಬಾಡಿಗೆಗೆ ನೀಡುವ ಏರ್‌ಬಿಎನ್‌ಬಿ ಸಂಸ್ಥೆೆಯ ಹೆಸರನ್ನು ಕೇಳಿರಬಹುದು. ಬೆಂಗಳೂರು ಸೇರಿದಂತೆ, ಮನೆ ಅಥವಾ ಕೊಠಡಿಗಳನ್ನು ಜಗತ್ತಿಿನಾದ್ಯಂತ ಕಾಯ್ದಿಿರಿಸಲು ಈ ಸಂಸ್ಥೆೆ ಅನುವು ಮಾಡಿಕೊಡುತ್ತದೆ. ಅಮೆರಿಕಾದ ಸ್ಯಾಾನ್‌ಫ್ರಾಾನ್ಸಿಿಸ್ಕೋೋ ಹತ್ತಿಿರ, ಈ ರೀತಿ ಬಾಡಿಗೆಗೆ ಪಡೆದ ಮನೆಯೊಂದರಲ್ಲಿ ನಡೆದ ಹ್ಯಾಾಲೋವೀನ್ ಪಾರ್ಟಿಯಲ್ಲಿ, ವ್ಯಕ್ತಿಿಯೋರ್ವ ಗುಂಡಿನ ಮಳೆಗರೆದು ಐವರನ್ನು ಸಾಯಿಸಿದ. ಮಹಿಳೆಯೊಬ್ಬಳು ಈ ಮನೆಯನ್ನು ಬುಕ್ ಮಾಡುವಾಗ ಸುಮಾರು 12 ಜನ ಸೇರಿ, ಪುನರ್ಮಿಲನ ಪಾರ್ಟಿ ಮಾಡುವುದಾಗಿ ಹೇಳಿಕೊಂಡಿದ್ದಳು. ಆದರೆ, ವಾಸ್ತವವಾಗಿ ಸುಮಾರು 100 ಜನ ಸೇರಿ ಹ್ಯಾಾಲೋವೀನ್ ಪಾರ್ಟಿ ಮಾಡುತ್ತಿಿದ್ದರು. ಈ ಸಮಯದಲ್ಲಿ ಎದ್ದ ವಿವಾದದಿಂದಾಗಿ, ವ್ಯಕ್ತಿಿಯೊಬ್ಬ ಗುಂಡಿನ ಮಳೆ ಸುರಿಸಿ, ಐವರನ್ನು ಸಾಯಿಸಿ, ಹಲವರನ್ನು ಗಾಯಗೊಳಿಸಿದ. ಇನ್ನು ಮುಂದೆ ಪಾರ್ಟಿ ಉದ್ದೇಶಕ್ಕೆೆ ಮನೆಯನ್ನು ಬಾಡಿಗೆಗೆ ನೀಡುವುದನ್ನು ತಾನು ನಿಷೇಧಿಸುವುದಾಗಿ ಏರ್‌ಬಿಎನ್‌ಬಿ ಸಂಸ್ಥೆೆ ಹೇಳಿಕೆ ನೀಡಿದೆ.

Leave a Reply

Your email address will not be published. Required fields are marked *