‘ಅಟ್ಟಯ್ಯ’ ಸಿನಿಮಾ ಮೂಲಕ ಪ್ರಸಿದ್ಧಿ ಪಡೆದಿದ್ದ, ನಿರ್ದೇಶಕ ಲೋಕೇಂದ್ರ ಸೂರ್ಯ ಈಗ ‘ಹಾಫ್ಗ್’ ಚಿತ್ರವನ್ನು ನಿರ್ದೇಶಿಸು ತ್ತಿದ್ದಾರೆ. ಅಷ್ಟೇ ಅಲ್ಲ, ನಾಯಕನಾಗಿಯೂ ನಟಿಸುತ್ತಿದ್ದಾರೆ. ‘ಹಾಫ್’ ಈಗ ಮೊದಲ ಹಂತದ ಶೂಟಿಂಗ್ ಮುಕ್ತಾಯಗೊಳಿಸಿದೆ. ಈ ಹಂತದಲ್ಲಿ ಥ್ರಿಲ್ಲರ್ ಮಂಜು ಅವರ ಸಾಹಸ ಸಂಯೋಜನೆಯಲ್ಲಿ ಒಂದು ಫೈಟ್ ಕೂಡಾ ಚಿತ್ರೀಕರಣಗೊಂಡಿದೆ.
ಬೆಂಗಳೂರು ಮತ್ತು ಮೈಸೂರಿನಲ್ಲಿ ನಡೆದ ಹದಿನೈದು ದಿನಗಳ ಕಾಲದ ಈ ಶೆಡ್ಯೂಲ್ನಲ್ಲಿ ಚಿತ್ರದ ಪ್ರಮುಖ ದೃಶ್ಯಗಳನ್ನು ಸೆರೆ ಹಿಡಿಯಲಾಗಿದೆ. ನಾಯಕಿ ಬೇಗಂ ಅನ್ನು ಕಿಡ್ನಾಪ್ ಮಾಡಿದ ಕಾರಣಕ್ಕೆ ನಡೆಯುವ ರೋಚಕ ಸಾಹಸ ಸನ್ನಿವೇಶವನ್ನು ಥ್ರಿಲ್ಲರ್ ಮಂಜು ಬಿಭಿನ್ನ ರೀತಿಯಲ್ಲಿ ಚಿತ್ರೀಕರಿಸಿ ದ್ದಾರೆ. ಈ ಸಂದರ್ಭದಲ್ಲಿ ಸಹ ಕಲಾವಿದರು ಮತ್ತು ಸಾಹಸ ಕಲಾವಿದರು ಸೇರಿ ನೂರೈವತ್ತಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು.
ಒಂದು ದಿನಕ್ಕೆ ಐವತ್ತೆರಡು ಓಕೆ ಟೇಕ್ಗಳನ್ನು ಶೂಟ್ ಮಾಡಿದ್ದೇನೆ. ಹೊಸದಾಗಿ ಚಿತ್ರರಂಗಕ್ಕೆ ಬಂದಿ ರುವವರಿಂದ ಈ ಮಟ್ಟಿಗಿನ ಕೆಲಸ ತೆಗೆಸಿಕೊಳ್ಳುವುದು ನಿಜಕ್ಕೂ ದಾಖಲೆಯೇ ಸರಿ ಎಂದು ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ‘ಹಾಫ್’ ತಂಡವನ್ನು ಹೊಗಳಿದ್ದಾರೆ.
ವರ್ಡ್ ಬುಕ್ ಆಫ್ ರೆಕಾರ್ಡ್ನಲ್ಲಿ ‘ರೆಡ್ ಅಂಡ್ ವೈಟ್ ಮ್ಯಾನ್’ ಎಂದು ದಾಖಲೆ ನಿರ್ಮಿಸಿರುವ ರೆಡ್ ಅಂಡ್ ವೈಟ್ ಸವೆನ್ ರಾಜ್ ಮತ್ತು ರಾಜು ಕಲ್ಕುಣಿ, ಖಳನಟರಾಗಿ ಈ ಚಿತ್ರದಲ್ಲಿ ಅಭಿನಯಿಸು ತ್ತಿದ್ದಾರೆ. ಪ್ರಭಾಕರ್ ರೆಡ್ಡಿ ನಿರ್ಮಿಸುತ್ತಿರುವ ಚಿತ್ರಕ್ಕೆ. ಬಿ.ಆರ್.ಮಲ್ಲಿಕಾರ್ಜುನ್ ಛಾಯಾಗ್ರಹಣ, ಯುಡಿವಿ ವೆಂಕಿ ಸಂಕಲನ, ರಾಕಿ ಸೋನು ಸಂಗೀತ, ಹಿನ್ನೆಲೆ ಸಂಗೀತ, ಋತು ಚೈತ್ರ ಅವರ ವಸ್ತ್ರಾಲಂಕಾರವಿದೆ.
ಆಸಿಯಾ, ಅಥಿರಾ, ರಾಜು ಕಲ್ಕುಣಿ, ಡಾ. ಪವಿತ್ರಾ ಆರ್. ಪ್ರಭಾಕರ್ ರೆಡ್ಡಿ, ರಕ್ಷಾ, ರೆಡ್ ಅಂಡ್ ವೈಟ್ ಸವೆನ್ ರಾಜ್, ಸಿವಿಜಿ ಚಂದ್ರು, ರೋಹಿಣಿ ಕೆ. ರಾಜ್, ಮೋಹನ್ ನೆನಪಿರಲಿ ಮುಂತಾದವರ ತಾರಾಗಣವಿದೆ.