Monday, 25th November 2024

ಕಾಯುವ ಸುಖದಲ್ಲಿ ಈ ಪ್ರೀತಿ

ಪವನ್ ಕುಮಾರ್ ಎಂ.ರಿಪ್ಪನ್ ಪೇಟೆ

ಪ್ರೀತಿ ಎಂದರೆ ಏನೆಂದು ವಿವರಿಸಲಿ! ಯಾಕೆಂದರೆ ವಿವರಿಸಲು ಆಗದ ಅನುಭವ ಅದು. ಎರಡು ಪುಟ್ಟ ಮನಸ್ಸುಗಳು ಇಬ್ಬರ ಭಾವನೆಗಳಿಗೆ ಸ್ಪಂದಿಸಿ ಗೊತ್ತಿದ್ದೋ ಗೊತ್ತಿಲ್ಲದೆಯೋ ಲವ್ ಎಂಬ ಕನಸಿನ ಮರ ಚಿಗುರೊಡೆದಿರುತ್ತದೆ. ಆ ಪ್ರೀತಿನ ಮನದೊಳಗೆ ಇಟ್ಟುಕೊಂಡರೆ ನಮ್ಮಲ್ಲೇ ಕಸಿವಿಸಿ. ಹೊರ ಹಾಕೋಣ ಅಂದರೆ ಭಯ. ಇನ್ನು ಎರಡು ಮನಸ್ಸುಗಳಿಂದಲೂ ಗ್ರೀನ್ ಸಿಗ್ನಲ್ ಸಿಕ್ಕರೆ ಸಾಕು ಹೊಸ ಪ್ರಪಂಚ ತೆರೆದುಕೊಂಡ ಅನುಭವ. ಇದೇ ಪ್ರೀತಿಯು ಅತಿರೇಕಕ್ಕೆ ಹೋಗಿ ಎಷ್ಟೋ ಸಲ ಪ್ರೇಮಿಗಳು ಮುನಿಸಿಕೊಡಿರುವ ಸಾಕಷ್ಟು ಉದಾಹರಣೆಗಳಿವೆ.

ಅಷ್ಟು ಮಾತ್ರ ಅಲ್ಲ ಅದೆಷ್ಟೋ ಬ್ರೇಕಪ್‌ಗಳು ಸಹ ಆಗಿ ಹೋಗಿವೆ. ಚಂಚಲದ ಮನಸ್ಸು, ನಮ್ಮವರ ಮೇಲೆ ನನಗಿಲ್ಲದ ನಂಬಿಕೆ, ಇಟ್ಟ ಅದೆ ನಂಬಿಕೆಯನ್ನ ನನ್ನದೆ ಅಂದುಕೊಂಡ ಮತ್ತೊಂದು ಜೀವ ಅದನ್ನ ಹುಸಿಕೊಳಿಸಿದರೆ ಹೀಗೆ ಪ್ರತಿಯೊಂದು ಕ್ಷಣವೂ  ಹೃದಯ ನಮಗೆ ಗೊತ್ತಿಲ್ಲದಂತೆ ಹರಿಯುತ್ತಿರುತ್ತದೆ. ಆಗಾಗ ನೆಮ್ಮದಿ ಅನ್ನೋ ಸೂಜಿಗೆ ಎಷ್ಟೆ ಆದರೂ ನನ್ನವರೆ ಎಂಬ ದಾರವ ಪೋಣಿಸಿ ನನ್ನವರ ಉಳಿಸಿಕೊಳ್ಳಲು ಹರಿದ ಹಾರ್ಟನ್ನು ಹೊಲಿಯುತ್ತಿರುತ್ತೇವೆ. ಲವ್ ಮಾಡುವುದಕ್ಕಿಂತ ಮುಂಚೆ ಲವ್ ಅನ್ನೋ ವಿಷಯಕ್ಕೆ ಕಾಯೋ ಪ್ರಾಬ್ಲಮ್ ಇರಲ್ಲ. ಇದ್ರು ಅದನ್ನ ಹೇಳಿಕೊಳ್ಳೊಕಾದರೂ ಆಗುತ್ತಾ..!

ಯಾಕಂದ್ರೆ ಆವಾಗ ನಮ್ದು ಒನ್ ಸೈಡ್ ಲವ್. ಹಾಗಾಗಿ ಚಾನ್ಸ್‌ ತುಂಬಾ ಕಡಿಮೆ. ಇನ್ನಾ ಲವ್ ಅನ್ನೋ ಪ್ರಪಂಕ್ಕೆ ಇಳಿದ ಮೇಲೆ ಈ ಪ್ರಾಬ್ಲಮ್ ಗಳಿಗೆ ಮಿತಿಯೇ ಇಲ್ಲ ಅನ್ಸುತ್ತೆ. ಯಾಕಂದ್ರೆ ನಮ್ಮವರು ಹೇಳಿದ ಸಮಯಕ್ಕೆ ಬರಲಿಲ್ಲವಲ್ಲ ಅನ್ನೋೋ ಬೇಜಾರು ಮನದ ಮೂಲೆಯಲ್ಲಿ ಬೇರೂರಿ ನಮ್ಮವರು ಬರುವವರೆಗೂ ಬೆಳೆಯುತ್ತಲೇ ಇರುತ್ತದೆ.

ಚಾಟಿಂಗ್ ಮೀಟಿಂಗ್

ಪ್ರೀತಿ ಅನ್ನೋದು ಆಳವಾಗಿ ಬೇರೂರುತ್ತಿದ್ದಂತೆ ಮೀಟಿಂಗ್, ಚಾಟಿಂಗ್, ಮನೆಯವರ ಕಣ್ಣು ತಪ್ಪಿಸಿ ಹೋಗೋ ಜಾಲಿ ರೈಡಿಂಗ್, ಮಿಡ್ ನೈಟ್ ನಲ್ಲೂ ಎಡಬಿಡದೆ ಮಾಡೋ ಚಾಟಿಂಗ್‌ಗಳು ಜೋರು. ನಾವು ಪ್ರೀತಿ ಮಾಡೋರನ್ನ ಒಂದು ಕ್ಷಣವೂ ಬಿಟ್ಟಿರಲು
ಸಾಧ್ಯವಿಲ್ಲ ಅನ್ಸುತ್ತೆ. ಪ್ರತಿ ಕ್ಷಣ ನನ್ನ ಪ್ರೀತಿಯನ್ನ ನೋಡ್ತಾನೆ ಇರಬೇಕು ಅನ್ಸುತ್ತೆ. ಅದೆಷ್ಟೋ ಸಲ ನನ್ನವರನ್ನ ನೋಡಲೆಂದು ದಿನವನ್ನ ಹಾಗೂ ಸಮಯವನ್ನು ನಿಗದಿ ಪಡಿಸಿಕೊಂಡು ಆ ಕ್ಷಣಕ್ಕಾಗಿ ಕಾಯುತ್ತಿರುತ್ತೇವೆ. ಅದೇ ಸುಂದರ ಕ್ಷಣಕ್ಕೆ ಮನ ಹಾತೊರೆಯುತ್ತಿರುತ್ತದೆ. ಕನಸು ಮನಸಿನಲ್ಲೂ ಆ ದಿನದ್ದೆ ಧ್ಯಾನ. ಅಂತೂ ಆ ದಿನ ಬಂದೆ ಬಿಡುತ್ತೆ. ಹಿಂದಿನ ದಿನವಂತೂ ನಾಳೆ ಏನೆಲ್ಲಾ ಮಾತಾಡಬಹುದು, ನಾಳೆ ಯಾವ್ ಡ್ರೆಸ್ ಹಾಕ್ಕೊಂಡು ಹೋಗ್ಲಿ ಹೀಗೆ ಹತ್ತು ಕನಸುಗಳು ನಮ್ಮ ಮುಂದೆ ಬಂದು
ನಿಲ್ಲುತ್ತದೆ.

ಮೀಟ್ ಮಾಡೋ ದಿನ ಫುಲ್ ಫ್ರೆಶ್ ಆಗಿ ನೆಚ್ಚಿನ ಬಟ್ಟೆ ಹಾಕಿಕೊಂಡು ಕನ್ನಡಿಗೆ ಮುಖವೊಡ್ಡಿ ನನ್ನವರ ನೋಡುವ ಕಾತರ ದಿಂದಲೇ ಅಲ್ಲಿಂದ ಕಾಲು ಕೀಳುತ್ತೇವೆ. ಈ ನಡುವೆ ಅದೆಷ್ಟು ಸಲ ಕನ್ನಡಿಗೆ ಮುಖವೊಡ್ಡಿ ಹೇರ್‌ಸ್ಟೈಲ್ ಬದಲಾಯಿಸಿರುತ್ತೆವೊ
ಗೊತ್ತಿರುವುದಿಲ್ಲ.

ಕಾಯುವ ಕಾತುರ

ಅಂತೂ ಮೀಟ್ ಮಾಡೋ ಸ್ಥಳಕ್ಕೆ ಟೈಮ್ ಆಗೊಕ್ಕಿಂತ ಮುಂಚೆಯೇ ಬಂದು ನಮ್ಮರಿಗಾಗಿ ಕಾದು ಕುಳಿತಿರುತ್ತೇವೆ. ಅಪ್ಪಿ ತಪ್ಪಿ ನಮ್ಮವರು ಬರುವುದು ಒಂದು ಕ್ಷಣ ತಡವಾದರೂ ಹೃದಯ ಬಡಿತ ಏರುತ್ತಲೆ ಇರುತ್ತದೆ. ಅವತ್ತೇನಾದರೂ ನಮ್ಮವರು
ಬರುವುದಿಲ್ಲ ಅಂತ ಗೊತ್ತಾದರೆ ಸಾಕು ಮನದ ಮೂಲೆ ಮೂಲೆಯಲ್ಲೂ ಕೋಪ ಚಿಗುರೊಡೆಯುತ್ತದೆ. ಕಣ್ಣೀರು ಮುಖದ ಮೇಲೆ ದಾರಿ ಮಾಡ್ಕೊಂಡು ಕೆಳಗಿಳಿಯಲು ಪ್ರಾರಂಭಿಸುತ್ತದೆ. ಇದಾಗಿ ಒಂದೆರೆಡು ದಿನ ಎಷ್ಟು ಮೆಸೇಜ್ ಮಾಡಿದ್ರು ರಿಪ್ಲೈ ಬರಲ್ಲ
ಫೋನ್ ಮಾಡಿದ್ರೆ ಫೋನ್ ಸಹ ಎತ್ತುವುದಿಲ್ಲ. ಮತ್ತೆ ರೆಪ್ಲೇ ಮಾಡ್ಬೇಕಾದ್ರೆ ಅದೆಷ್ಟು ಸಲ ಸಾರಿ ಕೇಳಿರುತ್ತೇವೊ ಏನೋ. ಅಂತೂ ಕೊನೆಗೆ ನಮ್ಮವರ ಫೇವರೇಟ್ ಚಾಕಲೇಟ್ ಅಥವಾ ಇನ್ನಾವುದೋ ಗಿಫ್ಟ್ ಕೊಟ್ಟು ಸಮಾಧಾನ ಪಡಿಸುವಷ್ಟರಲ್ಲಿ ಸಾಕಾಗುತ್ತದೆ.

ಹಾಗಂತ ಇದು ಇದೊಂದೇ ವಿಷಯಕ್ಕೆ ಅಂತ ಅಲ್ಲ. ಪ್ರೀತಿಸುವವರ ಪ್ರತಿ ವಿಷಯದಲ್ಲೂ ಇದೆ ತರಹ. ನಮ್ ಹುಡ್ಗಿ ಆನ್ಲೈನ್ ಗೆ ಬಂದಿದಾಳಾ, ಯಾಕೆ ಆನ್ಲೈನ್ ನಲ್ಲಿ ಇದ್ರು ಮೆಸೇಜ್ ಮಾಡ್ತಿಲ್ಲ, ಇನ್ನೊಂದ್ ಸ್ವಲ್ಪ ಹೊತ್ತು ಕಾಯೋಣ ಮಾಡ್ಬೋದು,
ಇವತ್ ಯಾಕ್ ಇನ್ನೂ ಆನ್ಲೈನ್ ಗೆ ಬಂದಿಲ್ಲ, ಮೆಸೇಜ್ ನೋಡಿದ್ರೂ ರಿಪ್ಲೈ ಮಾಡ್ಲಲ್ಲ ಎಲ್ಲೋದ್ಲು ಕೋತಿ, ಒಂದ್ ಕಾಲ್ ಮಾಡ್ಬೇಕು ಅಂತಾ ಗೊತ್ತಾಗಲ್ವಾ, ಹೀಗೆ ಹತ್ತು ಹಲವು ಪ್ರಶ್ನೆಗಳು ಕಾಯುತ್ತಿರುತ್ತವೆ.

ಲವ್ ಶುರುವಾಗುವಾಗ ಮನದಾಳದ ಪ್ರೀತಿಯ ಬಚ್ಚಿಟ್ಟಿದೆ ಅಂದು, ನನಗೆ ಗೊತ್ತಿಲ್ಲದಂತೆ ಅದನ್ನು ನೀಡುತ್ತಿರುವೆ ನಿನಗಿಂದು, ಮನದಾಳದಿಂದ ಕೇಳುವೆ ನಿನಗೊಂದು, ಕೊಡುವೆಯ ಪ್ರೀತಿಯ ನನಗೆ ಎಂದೆಂದೂ ಎಂದು ಪ್ರಾರಂಭವಾಗಿ ಅಪ್ಪಿ ತಪ್ಪಿ ಬ್ರೇಕಪ್ ಆಗೊ ಪರಿಸ್ಥಿತಿ ಬಂದಾಗ ಬದುಕಿನ ಕೆಲವು ಸುಂದರ ಕ್ಷಣಗಳನ್ನ ದಾಖಲಿಸಿ ಕೊಳ್ಳುವಷ್ಟಲ್ಲಿ ಬದುಕಿನ ಕುಷಿಯ ಕ್ಷಣವೇ ಮುಗಿಯುತ್ತದೆ ಎಂದು ನಾ.. ಭಾವಿಸಿರಲಿಲ್ಲ ಅನ್ನೋ ವಾಟ್ಸಪ್ ಸ್ಟೇಟಸ್ ಹಾಕೊಂಡು ಅವಳು ನೋಡಿದ್ಲಾ ಇಲ್ವಾ ಅಂತಾ ಕಾಯ್ತಾ ಇರುತ್ತೇವೆ.

ಬ್ರೇಕಪ್ ಆದ್ಮೇಲೆ ನಮ್ ಹುಡ್ಗಿ ಅಥವಾ ನಾನ್ ಹುಡುಗ ವಾಪಾಸ್ ಬಂದೆ ಬರ್ತಾಳೆ ಅಂತ ಅದೆಷ್ಟೋ ಜೀವಗಳು ಕಾಯ್ತಾ ಇರ್ತಾವೆ. ಹೀಗೆ ಪ್ರೀತಿಯಲ್ಲಿ ಪ್ರತಿ ಕ್ಷಣವೂ ಕಾಯುವಿಕೆ ಇದ್ದೇ ಇರುತ್ತದೆ. ಕಾಯುವಿಕೆಯ ಕ್ಷಣ ಹೆಚ್ಚಾದಂತೆ ನಿಮ್ಮಿಂದ ನಿಮ್ಮ ವರು ದೂರ ಹೋಗ್ತಾ ಇರ್ತಾರೆ. ಹಾಗಾಗಿ ಲೈಫ್‌ನಲ್ಲಿ ಯಾರನ್ನೂ ಸರಿಯಾದ ಕಾರಣ ಇಲ್ಲದೆ ಕಾಯಿಸಬೇಡಿ. ಯಾರನ್ನೇ ಆದರೂ ಅರ್ಥ ಮಾಡ್ಕೊಂಡು ಪ್ರೀತಿ ಮಾಡಿ. ಪ್ರೀತಿ ಮಾಡಿದ ಮೇಲೆ ಮೋಸ ಮಾಡ್ಬೇಡಿ. ನಿಮ್ಮ ಪ್ರೀತಿಗೋಸ್ಕರ ಅದೆಷ್ಟೋ ಜನರನ್ನ ತ್ಯಾಗ ಮಾಡಿರುತ್ತಿರ. ಆ ತ್ಯಾಗಕ್ಕೆ ಒಂದು ಅರ್ಥವನ್ನು ಕೊಡೋಣ ಅಲ್ವಾ. ಆಗ ಲೈಫ್ ಕಲರ್ ಫುಲ್ ಆಗಿರುತ್ತೆ.