ಇತ್ತೀಚಿನ ದಿನಗಳಲ್ಲಿ ಸಿನಿಮಾರಂಗಕ್ಕೆ ಬರುವವರಿಗೆ ಆಲ್ಬಂ, ಷಾರ್ಟ್ ಫಿಲ್ಮ್ ಮೇಕಿಂಗ್ ಒಂದು ವೇದಿಕೆ ಆಗುತ್ತಿದೆ.
ಇತ್ತೀಚೆಗಷ್ಟೇ ‘ಪಬ್ಲಿಕ್ ಟಾಯ್ಲೆಟ್’ ಕಿರುಚಿತ್ರ ನಿರ್ಮಿಸಿದ ಭಾನವಿ ಕ್ಯಾಪ್ಚರ್ ಸಂಸ್ಥೆ ಇದೀಗ ‘ಪಾರಿವಾಳ’ ಎಂಬ ಆಲ್ಬಂ ವೀಡಿಯೋ ಸಾಂಗನ್ನು ಸಿದ್ಧಪಡಿಸಿದೆ. ಚಿನ್ನಿಪ್ರಕಾಶ್ ಅವರ ಶಿಷ್ಯ, ಮೂಲತ: ನೃತ್ಯ ಸಂಯೋಜಕರಾದ ರಾಮ್‌ಕಿರಣ್ ಈ ಹಾಡಿನಲ್ಲಿ ಅಭಿನಯಿಸುವುದರ ಜತೆಗೆ ತಾವೇ ನೃತ್ಯ ಸಂಯೋಜನೆ ಮಾಡಿದ್ದಾರೆ. ವಿಶೇಷವಾಗಿ ಈ ಹಾಡನ್ನು ಸಿಂಗಲ್
ಟೇಕ್ ನಲ್ಲಿ ಛಾಯಾಗ್ರಾಹಕ ಅಭಿಷೇಕ್ ಜಿ.ಕಾಸರಗೋಡು ಸೆರೆಹಿಡಿದಿದ್ದಾರೆ.
ಅಗಸ್ತ್ಯಯ ಸಂತೋಷ್ ಸಾಹಿತ್ಯ ರಚಿಸಿ, ರಾಗ ಸಂಯೋಜನೆ ಮಾಡಿದ್ದಾರೆ.
ಕನ್ನಡ, ತಮಿಳು, ತೆಲುಗು, ಹಿಂದಿ ಹಾಗೂ ಮಲಯಾಳಂ ಸೇರಿದಂತೆ 5 ಭಾಷೆಗಳಲ್ಲಿ ಈ ‘ಪಾರಿವಾಳ’ದ ಹಾಡು ಬಿಡುಗಡೆಯಾಗಲಿದ್ದು, ಸದ್ಯ ಕನ್ನಡ ಸಾಂಗ್ ಮಾತ್ರ ರಿಲೀಸ್ ಆಗಿದೆ. ಹಿರಿಯ ನೃತ್ಯನಿರ್ದೇಶಕ ಚಿನ್ನಿಪ್ರಕಾಶ್ ಈ ವೀಡಿಯೋ ಆಲ್ಬಂ ಹಾಡನ್ನು ಬಿಡುಗಡೆ ಮಾಡಿ ಶುಭ ಹಾರೈಸಿ ದರು.
ಮುಂದಿನ ದಿನಗಳಲ್ಲಿ ಪ್ರತಿವಾರ ಒಂದೊಂದು ಭಾಷೆಯ ಹಾಡನ್ನು ರಿಲೀಸ್ ಮಾಡುವ ಯೋಜನೆಯನ್ನು ಈ ತಂಡ ಹಮ್ಮಿ ಕೊಂಡಿದೆ. ಕನ್ನಡ ಸೇರಿದಂತೆ ಪಂಚ ಛಾಷೆಯಲ್ಲೂ ಗಾಯಕ ಶಶಾಂಕ್ ಶೇಷಗಿರಿ ಅವರೇ ಹಾಡಿದ್ದಾರೆ. ನಾಯಕ ರಾಮ್‌ಕಿರಣ್ ಹಾಗೂ ನಾಯಕಿ ತೇಜಸ್ವಿನಿ ಶರ್ಮ ಅಭಿನಯಿಸಿರುವ ಈ ಹಾಡಿನಲ್ಲಿ ಭಗ್ನಪ್ರೇಮಿಯೊಬ್ಬನ ಮನದ ವಿರಹ ವೇದನೆಯನ್ನು ಹೇಳುವ ಪ್ರಯತ್ನ ಮಾಡಲಾಗಿದೆ.
ನಾವೆಲ್ಲ ಸೇರಿ ಏನಾದರೂ ಡಿಫರೆಂಟಾಗಿ ಟ್ರೈಮಾಡಬೇಕು ಎಂದು ಹೊರಟಾಗ ಈ ಕಾನ್ಸೆ್ಟೆ್‌ೃ ಹೊಳೆಯಿತು. ಆಗಲೇ ಆರು ಚಿತ್ರಗಳಲ್ಲಿ ಕೆಲಸ ಮಾಡಿದ್ದ ಅಭಿಷೇಕ್, ವಿಭಿನ್ನ ಪ್ರಯತ್ನವಾಗಿ ಒಂದೇ ಟೇಕ್‌ನಲ್ಲಿ ಈ ಹಾಡನ್ನು ಸೆರೆಹಿಡಿದಿದ್ದಾರೆ. ಮೋಹನ್ ಬಿ.ಕೆರೆ ಸ್ಟುಡಿಯೋದಲ್ಲಿ ಒಂದೇ ರಾತ್ರಿ ಈ ಹಾಡನ್ನು ಚಿತ್ರೀಕರಿಸಿದ್ದೇವೆ ಎಂದು ತಮ್ಮ ಪ್ರಯತ್ನವನ್ನು ಬಿಚ್ಚಿಟ್ಟರು ರಾಮ್ ಕಿರಣ್.