ನಮ್ಮ ಹಿಂದಿನವರ ಸಾಧನೆಯನ್ನು ನಮ್ಮದೇ ಎಂದು ಪ್ರಚಾರಕ್ಕೆ ತಂದು ಬೀಗುವುದು ಎಷ್ಟು ಅರ್ಥ ಹೀನ!
ನಾಗೇಶ್ ಜೆ. ನಾಯಕ ಉಡಿಕೇರಿ
ಜಗತ್ತಿನ ಆದಿ-ಅಂತ್ಯವನು ಕಂಡವರಿಲ್ಲ. ಹಾಗೆಯೇ ಇಲ್ಲಿ ಹುಟ್ಟಿದವರೆಷ್ಟೋ, ಸಾಧಿಸಿದವರೆಷ್ಟೋ, ಮಣ್ಣೊಳಗೆ ಮಣ್ಣಾಗಿ
ಹೋದವರೆಷ್ಟೋ ಇವೆಲ್ಲಕ್ಕೂ ಜಗತ್ತು ದಾಖಲೆಯನ್ನೇ ಇಟ್ಟಿಲ್ಲ. ಈ ಭೂಮಿಯ ಮೇಲೆ ಮೊಟ್ಟ ಮೊದಲು ಹೊಸ ಹೊಸ ವಸ್ತು ಗಳ ಬಳಕೆಯನ್ನು ಮಾಡಿಕೊಂಡವರು, ಜಗತ್ತಿಗೆ ಅವುಗಳನ್ನು ಪರಿಚಯಿಸಿದವರು ಯಾರು ಎಂಬುದೇ ನಮಗೆ ಗೊತ್ತಿಲ್ಲ. ತಿಳಿಯೋಣವೆಂದರೆ ಪ್ರಪಂಚದ ಪುಟದೊಳಗೆ ಅದರ ದಾಖಲೆಯೇ ಇಲ್ಲ.
ಇತ್ತೀಚೆಗೆ ಭೂಮಿಯ ಮೇಲೆ ಬಂದವರು ನಾವು. ಎಲ್ಲವೂ ನಮ್ಮ ಆವಿಷ್ಕಾರವೇ, ನಮ್ಮ ಸಂಶೋಧನೆಯೇ ಎಂದು ಬೀಗುತ್ತಿ ದ್ದೇವೆ. ಆದರೆ ಅದರ ಮುಂಚೆಯೇ ಅವುಗಳನ್ನೆಲ್ಲ ಕಂಡವರು ಮುಗುಮ್ಮಾಗಿಯೇ ಜಗತ್ತಿಗೆ ವಿದಾಯ ಹೇಳಿದರು. ಹಾಗಿದ್ದರೆ ಯಶಸ್ಸಿನ ವಾರಸುದಾರರು ನಾವಾಗುತ್ತೇವೆಯೇ? ಇಲ್ಲ. ಮನುಷ್ಯನ ಪ್ರಚಾರಪ್ರಿಯತೆ, ಯಶಸ್ಸಿನ ಅಮಲು ಇಂದು ಏನು ಬೇಕಾ ದರೂ ಮಾಡಲು ಸಿದ್ಧವಿದೆ. ಯಾರದೋ ಸಾಧನೆಯನ್ನು ತಮ್ಮದೆಂದು ಸಾರಿಕೊಳ್ಳುವ ಪ್ರಚಾರ ಪ್ರಿಯ ವ್ಯಕ್ತಿತ್ವದ ಜನರನ್ನು ನಾವಿಂದು ಕಾಣುತ್ತಿದ್ದೇವೆ.
ಅಕ್ಕಿಯಿಂದಲೇ ಅನ್ನವಾಗುವುದು ಎಂದು ಕಂಡುಹಿಡಿದವರು ಯಾರು? ಅಕ್ಷರಗಳ ಮೂಲಕ ಬರಹವನ್ನು ಮನುಕುಲಕ್ಕೆ ತಿಳಿಸಿಕೊಟ್ಟವರು ಯಾರು? ಊಹುಂ, ಅಂತಹ ಯಾವುದೇ ಸಂಗತಿಗಳ ಬಗ್ಗೆ ಜಗತ್ತು ಲೆಕ್ಕವನೇ ಇಟ್ಟಿಲ್ಲ. ಪರಿಚಯಿಸಿದವರಿಗೆ ಅದರ ಹಂಗು ಬೇಕಿಲ್ಲ. ಇಷ್ಟೆಲ್ಲ ತಿಳಿದೂ ಹೆಸರಿಗಾಗಿ ಹಂಬಲಿಸುವ, ಜಗತ್ತು ನನ್ನ ಗುರುತಿಸಲಿ ಎಂದು ಹಪಹಪಿಸುವ ಮಂದಿಗೆ ಯಶಸ್ಸು ಹೇಗೆ ತಾನೆ ದೊರೆತೀತು? ಸಾವಿರಾರು ಹಾಡುಗಳು ಜನರ ನಾಲಿಗೆಯ ಮೇಲೆ ನಲಿದಾಡುವಂತೆ ಮಾಡಿದ ಜನಪದೀ ಯರು ವೈಯಕ್ತಿಕವಾಗಿ ಗುರುತಿಸಿಕೊಳ್ಳಲೇ ಇಲ್ಲ. ಹಸಿರನ್ನು ಕಂಡ ಹಕ್ಕಿಯೊಂದು ಇಂಪಾಗಿ ಹಾಡಿದರೂ, ಅದಕ್ಕೆಲ್ಲಿದೆ ಪ್ರಚಾರದ ಹುಚ್ಚು? ಆದರೆ ಇಂದಿನ ದಿನಗಳಲ್ಲಿ ಅಲ್ಪಕಾರ್ಯಕ್ಕೆ ಅಪಾರ ಪ್ರಚಾರ ಪಡೆಯುವ, ತನ್ನಿಂದಲೇ ಇದು ಸಾಧ್ಯ ವಾಯಿತು ಎಂದು ಬಡಾಯಿ ಕೊಚ್ಚಿಕೊಳ್ಳುವ ಮಂದಿಗೇನೂ ಕಮ್ಮಿಯಿಲ್ಲ.
ನಾನೇ ಮಾಡಿದೆ, ನನ್ನಿಂದಲೇ ಎಲ್ಲ ಆಯಿತು, ನಾನೇ ಅದರ ನಿರ್ಮಾಪಕ ಎನ್ನುವುದು ಅಹಂಗೆ ಇಂಬು ಕೊಟ್ಟಂತೆ. ಜಗತ್ತು ನಮ್ಮಂಥ ಎಷ್ಟೋ ಜನರ ಸೃಷ್ಟಿಗೆ ಕಾರಣವಾಗಿದೆ. ನಾವೆಂದರೆ ನಮಗಿಂತ ಹತ್ತು ಪಟ್ಟು ಹೆಚ್ಚು ತಾಕತ್ತು, ಬುದ್ಧಿಮತ್ತೆ ಹೊಂದಿ ರುವವರು ಇಲ್ಲಿದ್ದಾರೆ. ಹಾಗಿದ್ದ ಮೇಲೆ ಯಶಸ್ಸು ನಮಗೇ ಸಿಗಲಿ ಎನ್ನುವುದು ಮೂರ್ಖತನವಾದೀತು. ‘ಮಾಡಿದೆ ನೆಂಬುದು ಮನದಲಿ ಹೊಳದೊಡೆ ಏಡಿಸಿ ಕಾಡಿತ್ತು ಶಿವನ ಢಂಗುರ’ ಎನ್ನುವ ಶರಣರ ನುಡಿ ಅನುಭವ ಜನ್ಯ. ಕಾರ್ಯಗಳ ಕೈಗೊಳ್ಳುವ ದಷ್ಟೇ ನಮ್ಮ ಪಾಲಿನ ಕೆಲಸ. ಫಲಾಫಲಗಳು ಅವನಿಗೆ ಬಿಟ್ಟಿದ್ದು.
ಯಶಸ್ಸು ನಮ್ಮನ್ನು ಹುಡುಕಿಕೊಂಡು ಬರುವ ಹಾಗೆ ನಮ್ಮ ಕೃತಿಗಳಿರಬೇಕು. ಇನ್ಯಾರದೋ ಶ್ರಮದ ಪಾಲು ನಮ್ಮ ಸ್ವತ್ತಾಗ ಬಾರದು. ನಿನ್ನದು ಒಳ್ಳೆಯ ಸಾಧನೆಯಾಗಿದ್ದರೆ ಜಗತ್ತು ನಿನ್ನನ್ನು ಗುರುತಿಸುತ್ತದೆ. ಅದಕ್ಕಾಗಿ ನೀನು ಅಡ್ಡದಾರಿ ಹಿಡಿಯುವದು ಸನ್ಮಾರ್ಗವಲ್ಲ. ನಾವೆಲ್ಲ ಒಳ್ಳೆಯ ಮಾರ್ಗದಲ್ಲಿ ನಡೆಯೋಣ. ಅಹಂಗೆ ಗುರಿಯಾಗದೇ ಇರೋಣ. ಜಗತ್ತಿಗೆ ನಮ್ಮ ಕೈಲಿಂದಾ ದಷ್ಟು ಕಾಣಿಕೆಯಿತ್ತು ಗೌರವದಿಂದ ತೆರಳೋಣವಲ್ಲವೇ?