Tuesday, 26th November 2024

ತೆರೆಯಲ್ಲಿ ನೀಲಿತಾರೆ ಶಕೀಲಾ ಜೀವನಚರಿತ್ರೆ

ಆಕೆ 90 ರ ದಶಕದ ಮಾದಕ ನಟಿ ಆದರೂ ಆಕೆಗೆ ಬಲು ಬೇಡಿಕೆ ಇತ್ತು. ಪಡ್ಡೆ ಹುಡುಗರಂತೂ ಆಕೆಯ ಚಿತ್ರ ತೆರೆಗೆ ಬರುವುದನ್ನೇ ಕಾದು ಕುಳಿತಿರುತ್ತಿದ್ದರು. ಕದ್ದುಮುಚ್ಚಿಯಾದರೂ ಚಿತ್ರ ಕಣ್ತುಂಬಿಕೊಳ್ಳುತ್ತಿದ್ದರು. ಹೀಗೆ ನೀಲಿ ಚಿತ್ರಗಳ ಮೂಲಕವೇ ಜನಪ್ರಿಯತೆ ಪಡೆದ ನಟಿ ಶಕೀಲಾ. ಮಲಯಾಳಂನಲ್ಲಂತೂ ಶಕೀಲಾ ಅಚ್ಚುಮೆಚ್ಚಾಗಿದ್ದರು. ಈಗ ಆಕೆಯ ಜೀವನಗಾಥೆ ಸಿನಿಮಾ ರೂಪದಲ್ಲಿ ತೆರೆಗೆ ಬರುತ್ತಿದೆ. ಕನ್ನಡ ಮಾತ್ರವಲ್ಲ ಹಿಂದಿ, ತಮಿಳು, ತೆಲುಗು ಭಾಷೆಗಳಲ್ಲೂ ಚಿತ್ರ ತೆರೆಗೆ ಬರಲಿದ್ದು, ಪ್ಯಾನ್ ಇಂಡಿಯಾ ಸಿನಿಮಾವಾಗಲಿದೆ. ಈಗಾಗಲೇ ಚಿತ್ರದ ಫಸ್ಟ್ ‌‌ಲುಕ್ ಹಾಗೂ ಟ್ರೇಲರ್ ಬಿಡುಗಡೆಯಾಗಿದ್ದು, ಡಿಸೆಂಬರ್ 25ರಂದು ಕ್ರಿಸ್‌ಮಸ್ ಹಬ್ಬದಂದೇ ‘ಶಕೀಲಾ’ ತೆರೆಗೆ ಬರಲಿದೆ.

ಹಿಂದಿ ಭಾಷೆಯಲ್ಲಿ ಶುರುವಾಗಿದ್ದ ಈ ಚಿತ್ರ, ಈಗ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸಾಗು ತ್ತಿದೆ. 1990 ರಿಂದ 2000ದವರೆಗೂ ಯಶಸ್ಸಿನ ಉತ್ತುಂಗದಲ್ಲಿದ್ದ ಶಕೀಲಾ, ಅತ್ಯಂತ ಜನಪ್ರಿಯ ನಟಿಯಾಗಿದ್ದರು. ಒಂದೇ ವರ್ಷದಲ್ಲಿ ಅವರು ನಟಿಸಿದ ಹತ್ತಾರು ಸಿನಿಮಾಗಳು ಬಿಡುಗಡೆ ಆಗುತ್ತಿದ್ದವು. ಹೀಗೆ ಸಾಲು ಸಾಲು ಚಿತ್ರಗಳು ರಿಲೀಸ್ ಆದರೂ, ಅವೆಲ್ಲವೂ ಅಷ್ಟೇ ಗಳಿಕೆ ಕಾಣು ತ್ತಿದ್ದವು. ಆರಂಭದಲ್ಲಿ ಈಕೆಯ ಬದುಕು ಅಷ್ಟು ಸುಲಭವಾಗಿರಲಿಲ್ಲ. ಸಿನಿಮಾಗಳಲ್ಲಿ ನೀಲಿ ತಾರೆಯಾಗಿ ಕಾಣಿಸಿಕೊಂಡರೂ ಶಕೀಲಾ ಬದುಕು ಅಷ್ಟೇ ಕಷ್ಟದಾಯಕವಾಗಿತ್ತು.

ಅವರು ಕೂಡ ಜೀವನದಲ್ಲಿ ಅನೇಕ ಏಳು-ಬೀಳುಗಳನ್ನು ಕಂಡಿದ್ದಾರೆ. ಕಷ್ಟ – ಸುಖಗಳನ್ನು ಅನುಭವಿಸಿದ್ದಾರೆ. ಅವರ ಹಿಂದಿನ ಬದುಕೇ ಈಗ ಸಿನಿಮಾ ರೂಪದಲ್ಲಿ ತೆರೆಗೆ ಬರುತ್ತಿದೆ. ಈ ಚಿತ್ರದಲ್ಲಿ ಶಕೀಲಾ ನಟಿಸುತ್ತಿಲ್ಲ. ಬದಲಾಗಿ ಅವರ ಪಾತ್ರದಲ್ಲಿ ರಿಚಾ ಚಡ್ಡಾ ಬಣ್ಣಹಚ್ಚು ತ್ತಿದ್ದಾರೆ. ನೀಲಿ ಚಿತ್ರದ ಬಗ್ಗೆೆ ಖುಷಿಯಿದೆ ನೀಲಿ ಚಿತ್ರಗಳನ್ನು ಮಾಡಿದ ಬಗ್ಗೆ ನನಗೆ ವಿಷಾದ ವಿಲ್ಲ. ಅದರ ಬಗ್ಗೆ ನನಗೆ ಖುಷಿ ಇದೆ.

ನಾನು ದೇವರ ಮಗಳು. ಇಂದು ನಾನು ನಿಮ್ಮ ಜತೆ ಮಾತನಾಡುತ್ತಿದ್ದೇನೆ, ಪ್ರೇಕ್ಷಕರು ಗುರುತಿ ಸುತ್ತಿದ್ದಾರೆ ಎಂದರೆ ಅದಕ್ಕೆ ನೀಲಿ ಚಿತ್ರಗಳೇ ಕಾರಣ. ನನ್ನ ಬಗ್ಗೆ ಸಿನಿಮಾ ಆಗುತ್ತಿದೆ ಎಂದರೆ ಅದಕ್ಕೆ ಆ ಸಿನಿಮಾಗಳೇ ಕಾರಣ. ನಾನೊಬ್ಬ ಪೋಷಕನಟಿ ಮಾತ್ರ ಆಗಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ ಎಂದು ನುಡಿಯುತ್ತಾರೆ ಶಕೀಲಾ. ಇಂದ್ರಜಿತ್ ನಿರ್ದೇಶನದ ‘ಲವ್ ಯು ಆಲಿಯಾ’ ಸಿನಿಮಾದಲ್ಲಿ ನಟಿಸುತ್ತಿರುವಾಗ ನಿರ್ದೇಶಕಿಯೊಬ್ಬರು ನನ್ನನ್ನು ಭೇಟಿಮಾಡಿ ನನ್ನ ಆತ್ಮಚರಿತ್ರೆೆಯನ್ನು ಸಿನಿಮಾ ಮಾಡ ಬೇಕೆಂದಿದ್ದೇನೆ ಎಂದರು. ಆ ವಿಷಯ ಇಂದ್ರಜಿತ್ ಅವರಿಗೂ ತಿಳಿಯಿತು. ಎರಡು ದಿನ ಸಮಯ ತೆಗೆದುಕೊಂಡು ಇಂದ್ರಜಿತ್ ಕೂಡ ನನ್ನ ಆತ್ಮಚರಿತ್ರೆಯನ್ನು ಓದಿದರು. ತಾವೇ ಈ ಚಿತ್ರ ಮಾಡುವುದಾಗಿ ತಿಳಿಸಿದರು.

ನನಗೂ ಖುಷಿ ಆಯಿತು. ನನ್ನ ಕಥೆಯನ್ನು ಅವರು ಚೆನ್ನಾಗಿ ತೆರೆ ಮೇಲೆ ತರುತ್ತಾರೆ ಎಂಬ ನಂಬಿಕೆಯಿತ್ತು. ನಾನು ಈ ಬಯೋಪಿಕ್ ಪುಸ್ತಕ ಬರೆದು 10 ವರ್ಷಗಳಾಗಿವೆ. ಆನಂತರ ಏನೆಲ್ಲ ನಡೆಯಿತು ಎಂಬುದನ್ನು ಈ ಸಿನಿಮಾದಲ್ಲಿ ವಿವರಿಸಲಾಗಿದೆ. ನನ್ನ ಹುಟ್ಟಿನಿಂದ ಹಿಡಿದು 42ನೇ ವಯಸ್ಸಿನವರೆಗೆ ಅನೇಕ ವಿಷಯಗಳ ಬಗ್ಗೆ ಈ ಚಿತ್ರ ಮಾತನಾಡುತ್ತದೆ ಎಂದೂ ಸಹ ಶಕೀಲಾ ಹೇಳಿದರು.

ನಾನು ದೇವರ ಮಗಳು 
ತನ್ನ ಯಶೋಗಾಥೆ ಸಿನಿಮಾ ರೂಪದಲ್ಲಿ ತೆರೆಗೆ ಬರುತ್ತಿರುವ ಬಗ್ಗೆ ಮನದಾಳ ಹಂಚಿಕೊಂಡ ಶಕೀಲಾ, ನಾನು ಬದುಕಿನಲ್ಲಿ ಎದುರಿಸಿದ ಕಷ್ಟ, ಸುಖದ ಕಥೆಯನ್ನು ಈ ಸಿನಿಮಾದಲ್ಲಿ ತೋರಿಸುತ್ತಿದ್ದಾರೆ. ಆರಂಭದಲ್ಲಿ ನಿರ್ದೇಶಕರು ನನ್ನ ಬಳಿ ಚರ್ಚಿಸಿ ಒಂದಷ್ಟು ಬದಲಾವಣೆ ಕೂಡ ಮಾಡಿಕೊಂಡಿದ್ದಾರೆ. ಸಿನಿಮಾದಲ್ಲಿ ಎಷ್ಟು ಕಾಲ್ಪನಿಕ, ಎಷ್ಟು ವಾಸ್ತವ ಇದೆ ಎಂಬು ದನ್ನು ಚಿತ್ರ ನೋಡಿದ ಮೇಲೆ ಪ್ರೇಕ್ಷಕರು ನಿರ್ಧರಿಸಲಿ. ಸಂಕಷ್ಟದ ಸಂಕೋಲೆಯಲ್ಲಿ ನಾನು ಬೆಂದು ಬಸವಳಿದಿದ್ದೇನೆ. ಈ ಸಂದರ್ಭದಲ್ಲಿ ನನ್ನ ಫ್ಯಾಮಿಲಿಯೇ ನನ್ನ ಜತೆಗಿಲ್ಲ. ಆದರೂ ನಾನು ಎಲ್ಲಿದ್ದೇನೆ, ಏನು ಮಾಡುತ್ತಿದ್ದೇನೆ ಎಂಬುದು ಅವರಿಗೆ ಗೊತ್ತಿದೆ. ಆದರೆ ನನ್ನ ಬಗ್ಗೆ ಯಾರಿಗೂ ಕಾಳಜಿ ಇಲ್ಲ. ನಾನು ನನ್ನ ಫ್ಯಾಮಿಲಿಗಾಗಿಯೇ ಇಷ್ಟೆಲ್ಲ ಮಾಡಿದೆ. ಆದರೆ ನನ್ನವರೇ ನನಗೆ ಮೋಸ, ದ್ರೋಹ ಮಾಡಿದರು ಎಂದು ಶಕೀಲಾ ಬೇಸರಗೊಂಡರು.

ಕೋಟ್‌

ಶಕೀಲಾ, ನಿಜವಾದ ಪ್ಯಾನ್ ಇಂಡಿಯಾ ಸಿನಿಮಾ. ಕನ್ನಡದ ಸುಚೇಂದ್ರ ಪ್ರಸಾದ್, ಸಂಗೀತ ನಿರ್ದೇಶಕ ವೀರಸಮರ್ಥ್ ಸೇರಿ ದಂತೆ ಎಲ್ಲಾ ಭಾಷೆಯ ತಂತ್ರಜ್ಞರು ಈ ಚಿತ್ರದಲ್ಲಿ ಕೆಲಸ ಮಾಡಿದ್ದಾರೆ. ಐದು ಭಾಷೆ ಸೇರಿ ಎರಡರಿಂದ ಎರಡೂವರೆ ಸಾವಿರ ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿದೆ. ಸಾಮಿ ನಾನ್ವಾನಿ ಹಾಗೂ ಶರವಣಪ್ರಸಾದ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಅಲ್ಲದೆ ನಟ, ನಿರ್ದೇಶಕ ಸಂದೀಪ್ ಮಲಾನಿ ಚಿತ್ರದ ಸಹ ನಿರ್ಮಾಪಕರಾಗಿದ್ದಾರೆ. ಸಂತೋಷ್ ರೈ ಪಾತಾಜೆ ಕ್ಯಾಮೆರಾವರ್ಕ್ ನಿಭಾಯಿಸಿ ದ್ದಾರೆ. ರಾಜೀವ್ ಪಿಳ್ಳೈ, ಸಮರ್ಜಿತ್ ಲಂಕೇಶ್, ಸಂದೀಪ್ ಮಲಾನಿ ಹಾಗೂ ಎಸ್ಟರ್ ನರೋನಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿ ಕೊಂಡಿದ್ದಾರೆ.

– ಇಂದ್ರಜಿತ್ ಲಂಕೇಶ್ ನಿರ್ದೇಶಕ