ವೀರೇಶ್ ಎನ್.ಪಿ. ದೇವರಬೆಳಕೆರೆ
ಯಾರೋ ಒಬ್ಬರು ನಮ್ಮನ್ನು ಅವರ ಅವಶ್ಯಕತೆಗೆ ತಕ್ಕಂತೆ ಬಳಸಿಕೊಂಡು ನಂತರ ದೂರ ತಳ್ಳಿದರು ಎಂದು ಕೊರಗಬಾರದು. ಅವರಿಗೆ ನಮ್ಮ ಅವಶ್ಯಕತೆ ಮುಗಿಯಿತು ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕಾದ ಸಂದರ್ಭವಷ್ಟೆ. ನಮ್ಮ ಯೋಗ್ಯತೆ
ಯನ್ನು ನಾವೇ ಹಳಿದುಕೊಂಡು, ಬಿಟ್ಟು ಹೋದವರ ಬಗ್ಗೆ ನಾವು ಕೊರಗುವುರಿಂದ ಯಾವ ಪ್ರಯೋಜನವಿಲ್ಲ.
ಯಾವುದೇ ನೋವಿನ ನಂತರ ನಮ್ಮ ಬದಲಾವಣೆ ಹೇಗಿರಬೇಕೆಂದರೆ, ನಮಗೆ ನಂಬಿಕೆ ದ್ರೋಹ ಬಗೆದವರೂ ಕೂಡ ನಮ್ಮ ಪ್ರಗತಿ ಕಂಡು ಅಚ್ಚರಿ ಪಡುವಂತಿರಬೇಕು. ನಮ್ಮಲ್ಲಿ ಇಲ್ಲದರ ಬಗ್ಗೆ ಕೊರಗುವ ಬದಲು ಬೇರೆಯವರಲ್ಲಿ ಇಲ್ಲದ ವಿಶೇಷ ಸಂಗತಿ ನಮ್ಮಲ್ಲಿ ಇದ್ದಾಗ, ಅದರ ಬಗ್ಗೆ ಹೆಮ್ಮೆ ಪಡುವ ಮನಸ್ಥಿತಿ ನಮ್ಮದಾಗಬೇಕು.
ಜೀವನದಲ್ಲಿ ತಿಳಿದುಕೊಂಡಿರಬೇಕಾದ ಪಾಠವೆಂದರೆ ಅದು, ಒಬ್ಬರನ್ನು ತುಳಿದು ಎಂದಿಗೂ ಮಹಾನ್ ಆಗಿ ಬೆಳೆಯಲು ಸಾಧ್ಯ ವಿಲ್ಲ. ಸತ್ಯ, ನಿಷ್ಠೆ, ಪ್ರಾಮಾಣಿಕತೆಗೆ ಎಂದಿಗೂ ಜಯವಿದೆ. ಬದುಕು ಸದಾ ನಾವು ಅಂದುಕೊಂಡಂತೆಯೇ ನಡೆಯುವುದು ಅಸಾಧ್ಯ. ಅಂದುಕೊಂಡದ್ದು ಆಗಲಿಲ್ಲ ಎಂದು ಕೊರಗಿದರೂ ಅದರಿಂದ ಏನೂ ಪ್ರಯೋಜನ ದೊರೆಯದು. ಜೀವನದ ಕಷ್ಟ
ಲ್ಲೂ ಕುಗ್ಗದೇ, ಕೊರಗದೇ ಬಂದ ಕಷ್ಟವನ್ನು ಎದುರಿಸಿ ಬದುಕನ್ನು ಮತ್ತೆ ಕಟ್ಟಿಕೊಳ್ಳಲು ಯತ್ನಿಸುತ್ತಾರೋ ಅವರನ್ನು ಅವರು ಬಂದ ದಾರಿಯೇ ಕೈ ಹಿಡಿಯುತ್ತದೆ.
ಕೆಲವೊಮ್ಮೆ ನಾವು ಅಂದು ಕೊಂಡದ್ದಕ್ಕಿಂತ ಹೆಚ್ಚೇ ನಮ್ಮ ಪಾಲಿಗೆ ಸಿಗಲೂಬಹುದು. ಆಗಲೂ ಕೂಡ ಹಿಗ್ಗದೇ, ಬಂದ ದಾರಿ
ಮರೆಯದೇ ಮುನ್ನಡೆಯುವುದು ಉತ್ತಮ.
ಸಾಮರಸ್ಯ ಅಗತ್ಯ: ವ್ಯಕ್ತಿಗಳು ಬರಬಹುದು, ನಮ್ಮ ಜತೆ ಇರಬಹುದು. ನಂತರ ಯಾವುದೋ ಸಂದರ್ಭದ ಒತ್ತಡಕ್ಕೆ ಸಿಕ್ಕು ನಮ್ಮಿಂದ ದೂರವಾಗಲೂ ಬಹುದು. ಎಲ್ಲದಕ್ಕೂ ಇನ್ನೊಬ್ಬರನ್ನೇ ಹೊಣೆ ಮಾಡುವ ಬದಲು, ನಮ್ಮಿಂದ ಏನಾದರೂ ತಪ್ಪಾ ಯಿತೇ ಎಂಬುದನ್ನೂ ನಾವು ಪರೀಕ್ಷಿಸಿಕೊಳ್ಳುವುದು ಉತ್ತಮ. ಬದುಕಿನಲ್ಲಿ ಯಾರೂ ಯಾರನ್ನು ನಂಬಿ ಬಂದಿಲ್ಲ. ನಂಬಿಕೆ ಇಲ್ಲದೇ ಬದುಕು ಕೂಡ ಇಲ್ಲ. ಕಾಯಲು ಮೇಲೊಬ್ಬನಿರುವಾಗ, ಕಾಯಕವಿಲ್ಲದವರ ಕೊಂಕು ಮಾತಿಗೆ ನಾವು ಕೊರಗುವುದೇಕೆ? ನಮಗೆ ಗೊತ್ತಿದ್ದೋ, ಗೊತ್ತಿಲ್ಲದೆಯೋ ತಪ್ಪು ಮಾಡ್ದಿರುತ್ತೇವೆ. ಆದರದು ನಮ್ಮ ಅರಿವಿಗೆ ಬಾರದೇ ಇನ್ನೊಬ್ಬರ ಬಗ್ಗೆ ನಾವೇ ತಪ್ಪು ತಿಳಿದುಕೊಂಡಿರುತ್ತೇವೆ.
ಹೀಗಾಗಿ, ಮನಸ್ತಾಪ ಅಥವಾ ಜಗಳಗಳು ಆದಾಗ, ಸಾಧ್ಯವಾದರೆ ಮಾತನಾಡಿ ಬಗೆಹರಿಸಿಕೊಳ್ಳಬಹುದು. ಯಾರೂ ಯಾರನ್ನೂ ವಿನಾಕಾರಣ ಬಿಟ್ಟು ಹೋಗಲಾರರು. ಆದರೂ ಬಿಟ್ಟುಹೋಗಿದ್ದಾರೆ ಎಂದರೆ ನಮ್ಮಿಂದ ಏನಾದರೂ ತಪ್ಪಾಯಿತೇ ಎಂಬುದನ್ನು ವಿಮರ್ಶೆ ಮಾಡಿಕೊಳ್ಳಲೇಬೇಕು. ಬದುಕನ್ನು ಒಂದು ಸುಂದರ ಪ್ರಯಾಣವಾಗಿ, ನಮ್ಮ ಜತೆಗಿರುವವರು ನಮ್ಮ ಸಹಪ್ರಯಾಣಿಕ ರಾಗಿ ನೋಡೋಣ. ನಮ್ಮ ನಿಲ್ದಾಣ ಬಂದಾಗ ನಾವೇ ಇಳದುಹೋಗುತ್ತೇವೆ, ಅವರ ನಿಲ್ದಾಣ ಬಂದರೆ ಅವರು ಇಳಿದು ಹೋಗು ತ್ತಾರೆ. ಈ ಮಧ್ಯೆ ಇಲ್ಲಸಲ್ಲದ ವ್ಯಥೆಗಳೇಕೆ?