Sunday, 8th September 2024

ಜೋಗಕ್ಕೆ ಜೀವಕಳೆ

* ರಕೀಬ್ ಆರ್

ಪ್ರಕೃತಿ ರಮಣೀಯ, ಹಸಿರನ್ನು ಹೊದ್ದು ನಿಂತಿರುವ ಬೆಟ್ಟಗಳು , ನಳನಳಿಸುವ ಝರಿಗಳು, ಭಯಾನಕ ಕಾಡುಗಳು, ಕಲ್ಪನೆಗೆ ತರಲಾಗದಷ್ಟು ಪ್ರಕೃತಿ ಸೌಂದರ್ಯ. ಅಬ್ಬಾಾ! ಈಗಲೂ ಮೈ ಜುಮ್ಮೆೆನಿಸುತ್ತದೆ. ಅಂದು ಭಾನುವಾರ ಮುಂಜಾನೆ ಸೂರ್ಯ ಹುಟ್ಟುವ ಮುನ್ನವೇ ಮನೆಯಿಂದ ಹೊರಟಿದ್ದೆವು. ಮಂದವಾಗಿ ಸುರಿಯುತ್ತಿಿದ್ದ ಇಬ್ಬನಿ ಭುವಿಯನ್ನು ಮುತ್ತಿಿಕ್ಕುತ್ತಿಿದ್ದರೆ, ಸಂಚರಿಸುತ್ತಿಿದ್ದ ಕಾರು ಮಂದ ಬೆಳಕಿನೊಂದಿಗೆ ಮುನ್ನುಗ್ಗುತ್ತಿಿತ್ತು. ನಿದ್ದೆ ನೀರಲ್ಲಾಯಿತು ಎಂಬ ಕೊರಗು ಮನದಲ್ಲಿದ್ದರೂ, ಅದಕ್ಕಿಿಂತ ಮಿಗಿಲಾಗಿ ಬಹಳ ವರ್ಷದ ಕನಸು ನನಸಾಗುವ ಸಮಯವು ಸಮೀಪಿಸಿದೆ ಎಂಬ ಸಂತೋಷವಿತ್ತು.

ಸೂರ್ಯನು ಯಾರ ಅಡೆ-ತಡೆಯು ಇಲ್ಲದೆ ಮೆಲ್ಲಮೆಲ್ಲನೆ ಮೇಲೇರತೊಡಗಿದ್ದಾನೆ. ಮಳೆಗಾಲವಾದ ಕಾರಣ ತುಂತುರು ಮಳೆ ಅದಾಗಲೆ ಸುರಿಯತೊಡಗಿದೆ. ರೈತರು ದನ-ಕರುಗಳೊಡನೆ ದಿನನಿತ್ಯ ಚಟುವಟಿಕೆಯತ್ತ ಧಾವಿಸುತ್ತಿಿದ್ದರೆ, ಹೆಂಗಳೆಯರು ಗೋಣಿ ಚೀಲವನ್ನು ಹೊತ್ತುಕೊಂಡು ಗದ್ದೆಯತ್ತ ಚಲಿಸುವ ಅವಸರದಲಿದ್ದಾರೆ. ಸೂರ್ಯ ನೆತ್ತಿಿಗೇರುವ ಮುನ್ನ ಜೋಗದ ಮಣ್ಣಿಿಗೆ ಕಾಲೂರಿದೆವು. ಅದಾಗಲೇ ಸಮಯ 10 ದಾಟಿದ್ದರೂ ಮುಂಜಾನೆಯ ಅನುಭವ. ವಾಹನ ನಿಲ್ಲಿಸಲು ಕೂಡಾ ಸ್ಥಳಾವಕಾಶ ಇಲ್ಲ. ಅಷ್ಟೊೊಂದು ಪ್ರವಾಸಿಗರು.

ಕಾರನ್ನು ಕಿ.ಮೀ ಗಳಷ್ಟು ದೂರ ನಿಲ್ಲಿಸಿ ಮೆಲ್ಲನೆ ನಡೆಯತೊಡಗಿದೆವು. ಅಲ್ಲಿನ ವಾತಾವರಣಕ್ಕೆೆ ಹೊಂದಿಕೊಳ್ಳದೆ ಮೈ ನಡುಕ ಆರಂಭವಾಗಿತ್ತು. ಬಿಸಿಬಿಸಿ ಟೀ ಕುಡಿದರೂ ಸಾಲದೆನಿಸಿತು. ಹಿಮದಿಂದ ಕವಿದಿದ್ದ ಗಾಳಿಯ ರಭಸಕ್ಕೆೆ ಮಾಯುವುದು, ಮತ್ತೆೆ ಅದೇ ರೀತಿ ಕವಿಯುವುದು ಆಟವಾಗಿ ಮಾರ್ಪಟ್ಟಿಿತ್ತು. ಅದೆಷ್ಟು ಸುಂದರ ಜಲಪಾತ. ರಾಜ, ರಾಣಿ, ರೋರರ್ , ರಾಕೆಟ್ ವಿಭಾಗಗಳಾಗಿ ಜಿಗಿಯುತ್ತಿಿರುವುದನ್ನು ಕಂಡು ಗೆಳೆಯ ಮಲೆನಾಡಿನ ಕುರಿತಿರುವ ಕಥೆ, ಕವನಗಳು. ಲೇಖನಗಳು ಯಾವುದೂ ಕೂಡಾ ಕಲ್ಪನಾ ಶಕ್ತಿಿಯಿಂದ ಉದ್ಭವಿಸಿದಲ್ಲ, ಬದಲಾಗಿ ಅದೆಲ್ಲ ಬರಹಗಾರರ ಅನುಭವವೇ ಸರಿ.

ನಯನ ಮನೋಹರ ಜೋಗ ಜಲಪಾತ ಏಷ್ಯಾಾ ಖಂಡದಲ್ಲೇ ಅತೀ ಎತ್ತರದಿಂದ ಧುಮುಕುವ ಜಲಪಾತಗಳ ಪೈಕಿ ಎರಡನೇ ಸ್ಥಾಾನವನ್ನು ಅದಲ್ಲದೇ ದೇಶದಾದ್ಯಂತ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿಿದೆ. ಮಲೆನಾಡಿನ ಜನತೆಗೆ ಆಸರೆಯಾಗಿ ಮಾರ್ಪಟ್ಟಿಿದೆ. ಜೋಗ ಜಲಪಾತದ ನೈಜರೂಪವನ್ನು ದರ್ಶಿಸಲು ಮಳೆಗಾಲವೇ ಸೂಕ್ತಸಮಯ. ಕನ್ನಡಿಗರಾದ ಪ್ರತಿಯೊಬ್ಬರು ದರ್ಶಿಸಲೇ ಬೇಕಾದ ಸ್ಥಳಗಳ ಪೈಕಿ ಇದು ಕೂಡಾ ಒಂದು.

Leave a Reply

Your email address will not be published. Required fields are marked *

error: Content is protected !!