Monday, 25th November 2024

ವಿಶ್ವ ಶಾಂತಿ ಸ್ತೂಪ

* ಮಂಜುನಾಥ. ಡಿ.ಎಸ್.

ಸುಮಾರು ಎರಡು ಸಾವಿರದ ಮುನ್ನೂರು ವರ್ಷಗಳ ಹಿಂದೆ ನಡೆದ ಕಳಿಂಗ ಯುದ್ಧದಲ್ಲಿಅಸಂಖ್ಯಾಾತ ಸೈನಿಕರು ಮರಣಿಸಿದ್ದು, ರಕ್ತಪಾತದಿಂದ ಅಶೋಕ ಚಕ್ರವರ್ತಿಯ ಮನಸ್ಸು ಪರಿವರ್ತನೆಗೊಂಡಿದ್ದು, ಪರಿಣಾಮವಾಗಿ ಅಶೋಕ ಅಹಿಂಸಾ ಮಾರ್ಗ ಹಿಡಿದು ಬೌದ್ಧ ಧರ್ಮವನ್ನು ಅಪ್ಪಿಿಕೊಂಡಿದ್ದು ಒಡಿಶಾ ರಾಜ್ಯದ ರಾಜಧಾನಿ ಭುವನೇಶ್ವರದಿಂದ ಸುಮಾರು ಎಂಟು ಕಿಲೋಮೀಟರ್ ದೂರದಲ್ಲಿರುವ ಧೌಲಿ ಅಥವ ಧವಳಗಿರಿ ಕಳಿಂಗ ಸಮರ ನಡೆದ ಸ್ಥಳವೆಂದು ಭಾವಿಸಲಾಗಿದೆ. ಸಾಮ್ರಾಾಟ್ ಅಶೋಕ ಶಸ್ತ್ರತ್ಯಾಾಗ ಮಾಡಿದ್ದು ಸಹ ಇಲ್ಲಿಯೇ ಅಂತೆ. ಹಾಗಾಗಿ, ಧರ್ಮ ವಿಜಯದ ಸಂಕೇತದಂತಿರುವ ವಿಶ್ವ ಶಾಂತಿ ಸ್ತೂಪ ದಯಾ ನದಿಯ ಸನಿಹದಲ್ಲಿರುವ ಈ ಗಿರಿಯಲ್ಲಿ ಸ್ಥಾಾಪನೆಗೊಂಡಿರುವುದು ಅರ್ಥಪೂರ್ಣವಾಗಿದೆ.

ಶಾಂತಿ ಪಗೋಡ ಎಂದೂ ಕರೆಯಲ್ಪಡುವ, ಶ್ವೇತ ವರ್ಣದ ಈ ಸ್ತೂಪ ವಿಶ್ವ ಶಾಂತಿಯನ್ನು ಪ್ರತಿನಿಧಿಸುವ ಸ್ಮಾಾರಕವೆನಿಸಿದೆ. ಬುದ್ಧ ಸಂಘ ಮತ್ತು ಒರಿಸ್ಸಾಾ ಸರ್ಕಾರ ಒಗ್ಗೂಡಿ ನಿರ್ಮಿಸಿದ ಈ ಸ್ತೂಪ 1972ರ ನವೆಂಬರ್ ಎಂಟರಂದು ಲೋಕಾರ್ಪಣೆಗೊಂಡಿತು. ಈ ಸ್ಮಾಾರಕ ಮುಂಬರುವ ಪೀಳಿಗೆಗಳಿಗೆ ಶಾಂತಿಯ ಪ್ರತೀಕವಾಗಲಿದೆ ಎಂದಿದ್ದಾರೆ ್ಯೂಜಿ ಗುರೂಜಿ. ಬಿಹಾರದ ರಾಜಗಿರಿಯ ಶಾಂತಿ ಸ್ತೂಪದ ನಂತರ ನಿರ್ಮಾಣಗೊಂಡ ಎರಡನೆಯ ಸ್ತೂಪ ಇದಾಗಿದೆ.

ಎರಡು ದೊಡ್ಡ ದ್ವಾಾರಗಳನ್ನು ಹೊಂದಿರುವ ಎರಡು ಮಜಲಿನ ವೃತ್ತಾಾಕಾರದ ಕಟ್ಟಡದ ಮೇಲ್ಭಾಾಗ ಗುಮ್ಮಟದಿಂದ ಕೂಡಿದೆ. ಗುಮ್ಮಟದ ಮೇಲಿ ಸ್ಥಾಾಪಿಸಿರುವ ಐದು ಛತ್ರಿಿಗಳು ಬೌದ್ಧ ಹಾಗು ಧರ್ಮಗಳಲ್ಲಿ ಉಲ್ಲೇಖಗೊಂಡಿರುವ ಪಂಚಭೂತಗಳನ್ನು ಪ್ರತಿನಿಧಿಸುತ್ತವಂತೆ. ಇಲ್ಲಿ ಬುದ್ಧನ ನಾಲ್ಕು ವಿಗ್ರಹಗಳಿವೆ. ಇವುಗಳಲ್ಲಿ ಎರಡು ಮೂರ್ತಿಗಳು ಧ್ಯಾಾನ ಮುದ್ರೆೆಯಲ್ಲಿವೆ. ಒಂದು ನಿಲುವು ಭಂಗಿಯಲ್ಲಿದ್ದರೆ ಮತ್ತೊೊಂದು ಮಲಗಿದ ಭಂಗಿಯಲ್ಲಿದೆ. ಸ್ಮಾಾರಕದ ಗೋಡೆಯ ಮೇಲೆ ಕಳಿಂಗ ಸಮರದ ಹಾಗು ಬೌದ್ಧ ಧರ್ಮಕ್ಕೆೆ ಸಂಬಂಧಿಸಿದ ಕಲಾತ್ಮಕ ಶಿಲ್ಪಗಳಿವೆ. ಬೋಧಿವೃಕ್ಷ, ಬುದ್ಧನಿಗೆ ಶರಣಾಗತನಾದ ಅಶೋಕ, ಪ್ರಖ್ಯಾಾತ ಅಶೋಕ ಚಕ್ರ, ಪಾದುಕೆಗಳಿಗೆ ನಮಿಸುತ್ತಿಿರುವ ಭಕ್ತರು, ಆನೆಗಳ ಸಾಲು, ಹೀಗೆ ಹತ್ತು ಹಲವು ಆಕರ್ಷಕ ಉಬ್ಬು ಶಿಲ್ಪಗಳನ್ನು ಇಲ್ಲಿ ನಾಲ್ಕೂ ದಿಕ್ಕುಗಳಲ್ಲಿರುವ ಪೀತ ವರ್ಣದ ಜೋಡಿ ಸಿಂಹಗಳ ಶಿಲ್ಪಗಳು ಗಮನಸೆಳೆಯುತ್ತವೆ.

ಧೌಲಿಯಲ್ಲಿ ಪ್ರಾಚೀನ ಚೈತ್ಯಗಳು ಮತ್ತು ಇತಿಹಾಸದ ಮೇಲೆ ಬೆಳಕುಚೆಲ್ಲುವ ಶಿಲಾಶಾಸನಗಳು ಸಹ ಇವೆ. ಧವಳಗಿರಿ ಹಾಗು ಇಲ್ಲಿನ ಪ್ರಶಾಂತವಾದ ಈ ಸ್ಮಾಾರಕ ಬೌದ್ಧರಿಗೆ ಮತ್ತುಶಾಂತಿಯರಸುವವರಿಗೆ ಪ್ರಿಯವೆನಿಸುವುದರಲ್ಲಿ ಸಂದೇಹವಿಲ್ಲ.