Monday, 25th November 2024

ಹರಿ-ಹರನ ಕಥೆ ಹೇಳಲು ವೃಷಭ ವಾಹನದಲ್ಲಿ ಬಂದ ಶೆಟ್ರು

ಒಂದು ಮೊಟ್ಟೆಯ ಕಥೆ ಹೇಳಿ ನಗಿಸಿದ ರಾಜ್ ಬಿ ಶೆಟ್ಟಿ, ಬಳಿಕ ಗುಬ್ಬಿಯ ಮೇಲೆ ಬ್ರಹ್ಮಾಸ ಪ್ರಯೋಗಿಸಿ, ಮಯಾಬಜಾರ್ ನಲ್ಲೂ ಮೋಡಿ ಮಾಡಿದರು. ಈಗ ಬಹು ದಿನಗಳ ಬಳಿಕ ಹೊಸ ಅವತಾರದಲ್ಲಿ ತೆರೆಗೆ ಬಂದಿದ್ದಾರೆ.

ಗರುಡ ಗಮನ ವೃಷಭ ವಾಹನದಲ್ಲಿ ಭರ್ಜರಿಯಾಗಿ ಯೇ ಎಂಟ್ರಿಕೊಟ್ಟಿದ್ದಾರೆ. ಪೌರಾಣಿಕ ಶೀರ್ಷಿಕೆಯ ಮೂಲಕ ಹರಿ-ಹರನ ಕಥೆ ಹೇಳಿದ್ದಾರೆ. ರಿಷಬ್ ಶೆಟ್ಟಿಯನ್ನು ಜತೆಯಲ್ಲಿಯೇ ಕರೆತಂದಿದ್ದು,ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ರಾಜ್ ಬಿ ಶೆಟ್ಟಿ ನಿರ್ದೇಶನದ ಸಿನಿಮಾ ಎಂದ ಮೇಲೆ ಏನಾದರು ವಿಶೇಷ ಇದ್ದೇ ಇರುತ್ತದೆ. ಅಂತೆಯೇ ಗರುಡ ಗಮನ ವೃಷಭ ವಾಹನದಲ್ಲಿ ಪಂಚೆ ಉಟ್ಟು, ಚಾಕು ಹಿಡಿದ ಅಬ್ಬರಿಸುತ್ತಿರುವ ರಾಜ್ ಶೆಟ್ಟಿಯನ್ನು ಟ್ರೇಲರ್‌ನಲ್ಲಿ ನೋಡಿದ ಮೇಲೆ ಸಿನಿಮಾ ಕುತೂಹಲ ಕೆರಳಿಸಿದೆ. ಈ ಚಿತ್ರ ಪ್ರೇಕ್ಷಕರಲ್ಲಿಯೂ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ತಮ್ಮ ಚಿತ್ರದ ಬಗ್ಗೆ ರಾಜ್ ಶೆಟ್ಟಿ ವಿ.ಸಿನಿಮಾಸ್‌ನೊಂದಿಗೆ ಇಂಟ್ರೆಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ವಿ.ಸಿನಿಮಾಸ್: ಶೀರ್ಷಿಕೆಯಲ್ಲಿಯೇ ಕುತೂಹ ಲವಿದೆ? ಇದು ಪೌರಾಣಿಕ ಕಥೆಯೇ ಎಂದೆನಿಸು ತ್ತದೆ? ಏನಿದು ಗರುಡ ಗಮನ ವೃಷಭ ವಾಹನ?
ರಾಜ್ ಶೆಟ್ಟಿ : ಗರುಡ ವಿಷ್ಣವಿನ ಅವತಾರವನ್ನು, ವೃಷಭ ಶಿವನ ಅವತಾರವನ್ನು ಸೂಚಿಸುತ್ತದೆ. ಚಿತ್ರದಲ್ಲಿ ರಿಷಬ್ ಶೆಟ್ಟಿ ಗರುಡನಾಗಿ, ನಾನು ವೃಷಭ ಎಂದರೆ ಶಿವನಾಗಿ ಕಾಣಿಸಿಕೊಳ್ಳುತ್ತಿದ್ದೇನೆ. ಒಬ್ಬ ಸೃಷ್ಟಿ ಕರ್ತನಾದರೆ ಮತ್ತೊಬ್ಬ ಲಯಕಾರಕ. ಒಂದೇ ಮಾತಿನಲ್ಲಿ ಹೇಳು ವುದಾದರೆ ಇದು ಹರಿ-ಹರನ ಕಥೆ. ರೆಟ್ರೋ ಲುಕ್‌ನಲ್ಲಿ ಆರಂಭವಾಗುವ ಸಿನಿಮಾ, ಪ್ರಸ್ತುತ ಕಾಲಘ ಟ್ಟದಲ್ಲಿ ಸಾಗುತ್ತದೆ. ಇಲ್ಲಿ ಕಾಮಿಡಿಗೆ ಹೆಚ್ಚು ಒತ್ತು ನೀಡಲಾಗಿದೆ. ಅಂತೆಯೇ ಒಂದಷ್ಟು ಸಸ್ಪೆನ್ಸ್, ಥ್ರಿಲ್ಲರ್ ಅಂಶಗಳು ಚಿತ್ರ ದಲ್ಲಿವೆ. ಚಿತ್ರದಲ್ಲಿ ಬಹಳಷ್ಟು ಟ್ವಿಸ್ಟ್‌ಗಳಿವೆ. ಅವೆಲ್ಲವನ್ನೂ ತೆರೆಯಲ್ಲಿ ನೋಡುತ್ತಿದ್ದರೆ ಸಿನಿಮಾ ಥ್ರಿಲ್ ಎನ್ನಿಸುತ್ತದೆ. ಪ್ರೇಕ್ಷಕರಿಗೆ ಹೊಸ ಅನುಭವ ನೀಡುತ್ತದೆ.

ವಿ.ಸಿ : ಈ ಸಿನಿಮಾದಲ್ಲಿ ಯಾವ ವಿಶೇಷತೆಯನ್ನು ಕಾಣಬಹುದು?
ರಾಜ್ ಶೆಟ್ಟಿ : ಪ್ರೇಕ್ಷಕರಿಗೆ ಏನಾದರೂ ಒಂದು ವಿಷೇಷತೆ ನೀಡಲೇಬೇಕು ಎಂದು ಚಿತ್ರ ನಿರ್ದೇಶಿಸುತ್ತೇವೆ. ನಟಿಸುತ್ತೇವೆ. ಈ ಚಿತ್ರವೂ ಕೂಡ ಹಾಗೆ. ಅಂದು ಕೊಂಡಂತೆ ಚಿತ್ರ ಪೂರ್ಣಗೊಳಿಸಿದ ತೃಪ್ತಿ ನಮಗಿದೆ. ಚಿತ್ರದ ಪ್ರತಿ ಪಾತ್ರಗಳು ವಿಶೇಷವಾ ಗಿವೆ. ಇಲ್ಲಿ ಸಂದೇಶಕ್ಕಿಂತ ಮನ ರಂಜನೆಯೇ ಮುಖ್ಯ ವಾಗಿದೆ. ಪ್ರತಿ ಸನ್ನಿವೇಶವೂ ಪ್ರೇಕ್ಷಕರನ್ನು ನಗಿಸುತ್ತದೆ. ಗಮನಸೆಳೆಯುತ್ತದೆ. ಗರುಡ ಗಮನ ವೃಷಭ ವಾಹನ ಇಡೀ ಕುಟುಂಬ ಒಟ್ಟಿಗೆ ಕುಳಿತು ನೋಡುವ ಚಿತ್ರ ಎಂಬುದು ಈಗಾಗಲೇ ಖಾತ್ರಿಯಾಗಿದೆ. ನಮ್ಮ ಚಿತ್ರ ಹಾಡುಗಳಿಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಅದಕ್ಕೂ ಮಿಗಿಲಾಗಿ ರಕ್ಷಿತ್ ಶೆಟ್ಟಿ ಚಿತ್ರ ನೋಡಿ ಮೆಚ್ಚಿದ್ದು, ತಮ್ಮ ಪ್ರಣವ್ ಪಿಕ್ಚರ‍್ಸ್‌ನಲ್ಲಿ ಚಿತ್ರವನ್ನು ಅರ್ಪಿಸುತ್ತಿದ್ದಾರೆ. ಇದು ಚಿತ್ರತಂಡಕ್ಕೆ ಸಂತಸ ತಂದಿದೆ.

ವಿ.ಸಿ: ಚಿತ್ರದ ಒನ್ ಲೈನ್ ಸ್ಟೋರಿ ಹೇಳುವುದಾದರೆ ?
ರಾಜ್ ಶೆಟ್ಟಿ : ಇದು ಮೂವತ್ತು ವರ್ಷದ ಹಿಂದಿನ ಕಾಲಘಟ್ಟದ ಕಥೆ. ಇಲ್ಲಿ ಇಬ್ಬರು ನಾಯಕರು. ಮೊದಲ ಹೇಳಿದಂತೆ ಒಬ್ಬ ಸೃಷಿಕರ್ತನಾದರೆ ಮತ್ತೊಬ್ಬ ಲಯಕಾರಕ. ಹಾಗಂತ ಇಲ್ಲಿ ಯಾರೂ ಖಳನಾಯಕರಿಲ್ಲ. ಆದರೆ ಸಂದರ್ಭ ಹೇಗೆ ಮನುಷ್ಯನನ್ನು ಬದಲಾಯಿಸುತ್ತದೆ ಎಂಬುದೇ ಚಿತ್ರದ ಸ್ಟೋರಿ. ಅದನ್ನು ಎಲ್ಲರೂ ಮೆಚ್ಚುವಂತೆ ತೆರೆಯಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಿ ದ್ದೇವೆ. ಕಾಲ್ಪನಿಕವಾಗಿಯೇ ಚಿತ್ರದ ಕಥೆ ಹೆಣೆದು ಅದಕ್ಕೆ ಮನರಂಜನೆಯ ಅಂಶಗಳನ್ನು ಬೆರೆಸಲಾಗಿದೆ.

ವಿ.ಸಿ: ಚಿತ್ರದ ತಾರಾಬಳಗದ ಬಗ್ಗೆ ಹೇಳುವುದಾದರೆ ?
ರಾಜ್ ಶೆಟ್ಟಿ : ಚಿತ್ರದಲ್ಲಿ ಕಥೆಯೇ ಪ್ರಧಾನವಾಗಿದೆ. ಕಥೆಗೆ ತಕ್ಕಂತೆ ಪಾತ್ರಗಳು ಚಿತ್ರದಲ್ಲಿವೆ. ಇಲ್ಲಿ ಎಮೋಷನ್ಸ್ ಇದೆ. ಕಾಮಿಡಿಯ ಜತೆಗೆ ಬಾಂಧವ್ಯದ ಕಥೆಯೂ ಇದೆ. ಡ್ಯುಯೆಟ್ ಇಲ್ಲ. ಹಾಗಾಗಿ ಚಿತ್ರದಲ್ಲಿ ನಾಯಕಿ ಅಂತ ಯಾರೂ ಇಲ್ಲ. ಪ್ರತಿ ಪಾತ್ರವೂ ಅಚ್ಚುಕಟ್ಟಾಗಿ ಮೂಡಿಬಂದಿವೆ. ಪ್ರಕಾಶ್ ತುಮ್ಮಿನಾಡ್, ವಿನತ್ ಮುಂತಾದವರು ಚಿತ್ರದಲ್ಲಿ ನಟಿಸಿದ್ದಾರೆ. ಕರಾವಳಿ ಸುತ್ತಮುತ್ತ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಹಾಗಾಗಿ ಚಿತ್ರದಲ್ಲಿ ಕರಾವಳಿ ಸೊಬಗು ಕಣ್ಣಿಗೆ ಕಟ್ಟುವಂತಿದೆ.