Vishwavani Editorial: ಇದು ಸ್ವಾಗತಾರ್ಹ ಬೆಳವಣಿಗೆ
ಉಗ್ರರ ಜತೆಗೆ ಕೆಲವು ಸ್ಥಳೀಯರೂ ಕೈಜೋಡಿಸಿರುವುದರಿಂದ ಈ ಕಣಿವೆ ಪ್ರದೇಶದ ರಮ್ಯನೋಟ ವನ್ನು ಇನ್ನು ಮುಂದೆ ಕಣ್ತುಂಬಿಕೊಳ್ಳುವುದು ಕನಸೇ ಎಂದುಕೊಂಡಿದ್ದವರಿಗೆ ಕೂಡ ಈ ಬೆಳವಣಿಗೆ ಸಮಾಧಾ ನವನ್ನು ತಂದಿದೆ. ಹಾಗೆಂದ ಮಾತ್ರಕ್ಕೆ ಜನರಾಗಲೀ, ಕೇಂದ್ರ ಮತ್ತು ರಾಜ್ಯದ ಆಳುಗ ವ್ಯವಸ್ಥೆಗಳಾಗಲೀ ಮೈಮರೆತು ಕೂರುವಂತಿಲ್ಲ.


ಕಾಶ್ಮೀರಕ್ಕೆ ಹಿಡಿದಿದ್ದ ಗ್ರಹಣ ಒಂದು ಮಟ್ಟಿಗಾದರೂ ಬಿಟ್ಟಿದೆ. ಇದಕ್ಕೆ ಕಾರಣವಾಗಿರುವುದು, ಉಗ್ರರ ಪೈಶಾಚಿಕ ಕೃತ್ಯಕ್ಕೆ ಸಾಕ್ಷಿಯಾಗಿದ್ದ ಪಹಲ್ಗಾಮ್ ಪ್ರದೇಶದಲ್ಲಿ ಮತ್ತೆ ಪ್ರವಾಸಿಗರ ಜಮಾವಣೆ ಯಾಗಿರುವುದು. ‘ನಮ್ಮದೇ ದೇಶದ ಅವಿಭಾಜ್ಯ ಅಂಗವಾಗಿರುವ ಕಾಶ್ಮೀರದಲ್ಲಿ ಈಗ ಭಯ ಪಡು ವಂಥದ್ದೇನೂ ಇಲ್ಲ, ಎಲ್ಲವೂ ಸಹಜ ಸ್ಥಿತಿಗೆ ಮರಳಿದೆ’ ಎಂಬ ವಿಶ್ವಾಸವನ್ನು ಜನರ ಮನದಲ್ಲಿ ಮೂಡಿಸುವ ನಿಟ್ಟಿನಲ್ಲಿ ಇಂಥ ಬೆಳವಣಿಗೆಯು ಮಹತ್ತರ ಕೊಡುಗೆಯನ್ನು ನೀಡಬಲ್ಲದು.
ಉಗ್ರರ ಜತೆಗೆ ಕೆಲವು ಸ್ಥಳೀಯರೂ ಕೈಜೋಡಿಸಿರುವುದರಿಂದ ಈ ಕಣಿವೆ ಪ್ರದೇಶದ ರಮ್ಯನೋಟ ವನ್ನು ಇನ್ನು ಮುಂದೆ ಕಣ್ತುಂಬಿಕೊಳ್ಳುವುದು ಕನಸೇ ಎಂದುಕೊಂಡಿದ್ದವರಿಗೆ ಕೂಡ ಈ ಬೆಳವಣಿಗೆ ಸಮಾಧಾನವನ್ನು ತಂದಿದೆ. ಹಾಗೆಂದ ಮಾತ್ರಕ್ಕೆ ಜನರಾಗಲೀ, ಕೇಂದ್ರ ಮತ್ತು ರಾಜ್ಯದ ಆಳುಗ ವ್ಯವಸ್ಥೆಗಳಾಗಲೀ ಮೈಮರೆತು ಕೂರುವಂತಿಲ್ಲ.
ಇದನ್ನೂ ಓದಿ: Vishwavani Editorial: ಬೇಲಿಯೇ ಹೊಲವನ್ನು ಮೇಯ್ದರೆ...
ಏಕೆಂದರೆ ‘ಉಗ್ರವಾದ’ ಎಂಬ ಕುತ್ಸಿತ ಸಿದ್ಧಾಂತವನ್ನು ಮತ್ತು ಅದನ್ನು ನೆಚ್ಚಿಕೊಂಡಿರುವ ‘ಉಗ್ರವಾದಿ’ಗಳನ್ನು ದಮನ ಮಾಡುವುದು ಅಂದುಕೊಂಡಷ್ಟು ಸಲೀಸು ಕಾರ್ಯವಲ್ಲ; ತಮ್ಮ ಕುಯುಕ್ತಿಗಳನ್ನು ಕಾರ್ಯರೂಪಕ್ಕೆ ತಂದು ಹಿತಾಸಕ್ತಿಗಳನ್ನು ನೆರವೇರಿಸಿಕೊಳ್ಳಲಿಕ್ಕೆ ಉಗ್ರವಾದಿ ಗಳು ಕೆಲ ಕಾಲದ ನಂತರವಾದರೂ ಮತ್ತೆ ಮತ್ತೆ ಯತ್ನಿಸುವ ಸಾಧ್ಯತೆ ಇರುತ್ತದೆ.
ಆದ್ದರಿಂದ, ಈಗಾಗಲೇ ಪಹಲ್ಗಾಮ್‌ನಲ್ಲಿ ಪೈಶಾಚಿಕ ಕೃತ್ಯವೆಸಗಿ ಜಗದ ದಿಗಿಲಿಗೆ ಕಾರಣವಾಗಿರುವ ಖೂಳ ಭಯೋತ್ಪಾದಕರನ್ನು, ಅವರನ್ನು ಪೋಷಿಸುತ್ತಿರುವ ಬಾಹ್ಯ ಶಕ್ತಿಗಳನ್ನು ಹಾಗೂ ಒತ್ತಾಸೆಯಾಗಿ ನಿಂತಿರುವ ಸ್ಥಳೀಯರನ್ನು ತಲಾಶೆ ಮಾಡಿ ಬೇಟೆಯಾಡುವುದರ ಜತೆಜತೆಗೆ, ನೆರೆರಾಷ್ಟ್ರದ ಈ ಸಂಚನ್ನು ಅಂತಾರಾಷ್ಟ್ರೀಯ ಸಮುದಾಯದೆದುರು ಬಯಲುಮಾಡ ಬೇಕಿದೆ ಹಾಗೂ ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನವನ್ನು ಮೂಲೆಗುಂಪು ಮಾಡಬೇಕಿದೆ. ಈ ಭೂಮಿಯನ್ನು ಶಾಂತಿ ಮತ್ತು ನೆಮ್ಮದಿಗಳ ನೆಲೆವೀಡಾಗಿ ಸುವ ನಿಟ್ಟಿನಲ್ಲಿ, ವಿಶ್ವದ ಮಿಕ್ಕ ಶಾಂತಿಪ್ರಿಯ ರಾಷ್ಟ್ರ ಗಳೂ ಭಾರತದ ಈ ಸಂಕಲ್ಪಕ್ಕೆ ಕೈಜೋಡಿಸಬೇಕಿದೆ. ಅದು ಬಹುಜನರ ನಿರೀಕ್ಷೆಯೂ ಹೌದು, ಆಶಯವೂ ಹೌದು.