Wednesday, 25th December 2024

Rajani Praveen: 120 ಕೆ.ಜಿ ಇದ್ದ ಸೀರಿಯಲ್ ನಟಿ ರಜನಿ ‘ಸ್ಲಿಮ್’ ಆಗಿದ್ದೇಗೆ? – ರಜನಿ ಪ್ರವೀಣ್ ಬಗ್ಗೆ ಇಲ್ಲಿದೆ ಆಸಕ್ತಿಕರ ಮಾಹಿತಿ

Rajani Praveen

ಬೆಂಗಳೂರು: ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ ಲಕ್ಷ್ಮೀ ಬಾರಮ್ಮ ಸೀರಿಯಲ್‌ನಲ್ಲಿ (Lakshmi Baramma Serial) ಸುಪ್ರೀತಾ ಪಾತ್ರದಲ್ಲಿ ಮಿಂಚುತ್ತಿರುವ ಸ್ಟೈಲಿಶ್ ನಟಿ ರಜನಿ ಪ್ರವೀಣ್ (Rajani Praveen). ಈ ಹಿಂದೆ ಲಕ್ಷ್ಮೀ ವಿರುದ್ಧ ಸಂಚು ರೂಪಿಸುತ್ತಿದ್ದ ಸುಪ್ರೀತಾ, ಇದೀಗ ಲಕ್ಷ್ಮಿಗೆ ಬೆಂಬಲವಾಗಿ ನಿಂತಿದ್ದಾರೆ.

​'ಭಾಗ್ಯಲಕ್ಷ್ಮೀ' ಧಾರಾವಾಹಿ ಸುಪ್ರೀತಾ ಪಾತ್ರಧಾರಿ ಕುರಿತ ಆಸಕ್ತಿಕರ ಸಂಗತಿಗಳು​ |  vijaykarnataka

ಸೀರಿಯಲ್‌ನಲ್ಲಿ ಸುಪ್ರೀತಾರ ಸ್ಟೈಲಿಶ್ ಲುಕ್ (stylish look) ನೋಡಿ ವೀಕ್ಷಕರು ಫಿದಾ ಆಗಿದ್ದು, ಅದು ಸೀರೆಯಾಗಿರಲಿ, ಸ್ಕರ್ಟ್ ಆಗಿರಲಿ ಅಥವಾ ಡ್ರೆಸ್ ಆಗಿರಲಿ, ಎಲ್ಲವನ್ನೂ ಸ್ಟೈಲಿಶ್ ಆಗಿ ಕ್ಯಾರಿ ಮಾಡುವಲ್ಲಿ ಯಾವಾಗಲೂ ಇವರು ಒಂದು ಹೆಜ್ಜೆ ಮುಂದೆ ಇರುತ್ತಾರೆ. ಹೀಗೆ ತಮ್ಮ ಸ್ಟೈಲಿಶ್ ಲುಕ್ ಹಾಗೂ ನಟನೆಯಿಂದ ಮನೆ ಮಾತಾಗಿರುವ ರಜನಿ ಪ್ರವೀಣ್ ಆಲಿಯಾಸ್ ಸುಪ್ರಿತಾ ಬಗ್ಗೆ ಕೆಲವು ಆಸಕ್ತಕರ ಮಾಹಿತಿ ಇಲ್ಲಿದೆ.

ಟೀಚರ್ ಆಗಿದ್ದ ರಜನಿ ಪ್ರವೀಣ್ ಮನೆಯಲ್ಲಿ ಸಿಕ್ಕಾಪಟ್ಟೆ ಸ್ಟ್ರಿಕ್ಟ್ ಅಂತೆ. ಓದುವಾಗ ಯಾವುದೇ ಚಟುವಟಿಕೆಗಳಲ್ಲೂ ಭಾಗಿಯಾಗದ ರಜನಿ ಅವರು ಓದು ಬಿಟ್ಟರೆ ಸ್ಪೋರ್ಟ್ಸ್ ನಲ್ಲಿ ಇದ್ದದ್ದಷ್ಟೇ ಅಂತೆ. ಆರ್ಥೊಡಕ್ಸ್ ಫ್ಯಾಮಿಲಿ ಆಗಿದ್ದರು ಕೂಡ ರಜನಿ ಅವರು ಟಾಮ್ ಬಾಯ್ ನಂತೆ ಇರುತ್ತಿದ್ದರಂತೆ. ಓದು ಮುಗಿಸಿ ಕೆಲಸದ ಬಗ್ಗೆ ಯೋಚಿಸುವಾಗ ಟೀಚಿಂಗ್ ಜಾಬ್ ಅನ್ನು ಒಪ್ಪಿಕೊಳ್ಳಬೇಕಾಯ್ತಂತೆ. ಟೀಚಿಂಗ್ ನಲ್ಲಿ ಸರ್ಕಾರಿ ಕೆಲಸ ಪಡೆದು ನೆಮ್ಮದಿಯಾಗಿರುವುದಷ್ಟೇ ಆಲೋಚನೆ ಇತ್ತಂತೆ. ಅಷ್ಟರಲ್ಲಿ ರಜನಿ ಅವರ ಮದುವೆಯೂ ನಡೆದು ಹೋಯಿತಂತೆ. ಮದುವೆಯಾದ ಬಳಿಕ ಇವರ ಪತಿ ರಜನಿ ಅವರಿಗೆ ಎಲ್ಲಾ ವಿಚಾರದಲ್ಲಿಯೂ ಫುಲ್ ಸಪೋರ್ಟ್ ನೀಡುತ್ತಾರೆ ಅಂತೆ ಅವರ ಪತಿ.

ಭಾಗ್ಯಲಕ್ಷ್ಮೀ' ಧಾರಾವಾಹಿ ಸುಪ್ರೀತಾ ಪಾತ್ರಧಾರಿ ಕುರಿತ ಆಸಕ್ತಿಕರ ಸಂಗತಿಗಳು​ |  vijaykarnataka

ಪತಿಯ ಸಹಕಾರದಿಂದ ನಟಿಸಲು ಸಾಧ್ಯ

ನಟಿ ರಜನಿ ಪ್ರವೀಣ್ ಅವರು ಉಷಾ ಭಂಡಾರಿ ಅವರ ನಟನಾ ಶಾಲೆಗೆ ಸೇರಿಕೊಂಡು ಕಾಂಟ್ಯಾಂಕ್ಟ್ ಬೆಳೆಸಿಕೊಂಡರು. ನಂತರ ರಂಗಭೂಮಿ ಮೂಲಕ ಆಡಿಷನ್ ಗಳನ್ನು ನೀಡಿ ಕಿರುತೆರೆಗೆ ಪಾದಾರ್ಪಣೆ ಮಾಡಿದರು. ಹರ ಹರ ಮಹಾದೇವ ಇವರ ನಟನೆಯ ಮೊದಲ ಧಾರಾವಾಹಿ. ಎಂದೂ ಒಬ್ಬರೇ ಮನೆಯಿಂದ ಆಚೆ ಹೋಗದ ರಜನಿ ಅವರು ಮೊದಲ ಬಾರಿಗೆ ಈ ಧಾರಾವಾಹಿಗಾಗಿ ಮುಂಬೈಗೆ ಶೂಟಿಂಗ್ ಗೆಂದು ಹೋಗಿದ್ದರಂತೆ. ರಜನಿ ಅವರ ಪತಿ ನಟನೆಗೂ ತುಂಬಾ ಸಪೋರ್ಟ್ ಮಾಡುತ್ತಾರಂತೆ ರಜನಿ ಅವರಿಗೂ ಸುಮ್ಮನೆ ಕೂಡುವುದು ಇಷ್ಟವಿಲ್ಲವಂತೆ ಹಾಗಾಗಿ ಶೂಟಿಂಗ್ ಇದ್ದರೆ, ಅವರಿಗೆ ಖುಷಿ ಜಾಸ್ತಿ.

ರಜನಿಗೆ ಮದುವೆಯಾಗಿ 10 ವರ್ಷವಾಗಿದ್ದು, 8 ವರ್ಷದ ಮಗ ಕೂಡ ಇದ್ದಾನೆ.. ಪ್ರೆಗ್ನೆನ್ಸಿಯಲ್ಲಿ 120 ಕೆಜಿ ಇದ್ದ ರಜನಿ ಅವರು ವರ್ಕೌಟ್ ಮಾಡಿ ಈಗ ಸ್ಲಿಮ್ ಲುಕ್ ಗೆ ಬಂದರಂತೆ. ರಜನಿ ಅವರಿಗೆ ವರ್ಕೌಟ್ ಮಾಡುವುದು, ಬಾಡಿ ಫಿಟ್ ಆಗಿರುವುದು, ತಮ್ಮ ಆರೋಗ್ಯಕ್ಕಾಗಿ ಡಯಟ್ ಮಾಡುವುದು ಎಂದರೆ ಇಷ್ಟವಂತೆ.

ಈ ಸುದ್ದಿಯನ್ನೂ ಓದಿ: TV Serials: ಶೂಟಿಂಗ್‌ ನಿಲ್ಲಿಸಿ ಕಿರುತೆರೆ ಕಾರ್ಮಿಕರ ಪ್ರತಿಭಟನೆ, ಸೀರಿಯಲ್‌ಗಳಿಗೆ ಸ್ಥಗಿತದ ಆತಂಕ