Thursday, 19th September 2024

ಭಾರತ-ಬಾಂಗ್ಲಾ ಮೊದಲ ಟೆಸ್‌ಟ್‌

ಗೆಲುವಿನ ವಿಶ್ವಾಾಸದಲ್ಲಿ ಟೀಮ್ ಇಂಡಿಯಾ ಪ್ರವಾಸಿಗರಿಗೆ ಅನುಭವಿಗಳ ಕೊರತೆ ತಂಡಕ್ಕೆೆ ಮರಳಿದ ನಿಯಮಿತ ನಾಯಕ ಕೊಹ್ಲಿಿ

ದಕ್ಷಿಣ ಆಫ್ರಿಿಕಾ ವಿರುದ್ಧ ಮೂರು ಪಂದ್ಯಗಳ ಟೆಸ್‌ಟ್‌ ಸರಣಿ ಕ್ಲೀನ್ ಸ್ವೀಪ್ ಮಾಡಿಕೊಂಡು ವಿಶ್ವಾಾಸದಲ್ಲಿರುವ ಭಾರತ ತಂಡ, ಬಾಂಗ್ಲಾಾದೇಶ ವಿರುದ್ಧ ಆರಂಭವಾಗುವ ಎರಡು ಪಂದ್ಯಗಳ ಟೆಸ್‌ಟ್‌ ಸರಣಿಗೆ ಸಜ್ಜಾಾಗಿದೆ. ಉಭಯ ತಂಡಗಳ ನಡುವಿನ ಮೊದಲನೇ ಹಣಾಹಣಿ ಇಲ್ಲಿನ ಹೋಳ್ಕರ್ ಕ್ರೀಡಾಂಗಣದಲ್ಲಿ ಇಂದು ಆರಂಭವಾಗಲಿದೆ.

ಐಸಿಸಿ ಟೆಸ್‌ಟ್‌ ಶ್ರೇಯಾಂಕದಲ್ಲಿ ಅಗ್ರ ಸ್ಥಾಾನದಲ್ಲಿರುವ ಟೀಮ್ ಇಂಡಿಯಾ, ಬಾಂಗ್ಲಾಾ ವಿರುದ್ಧ ಟೆಸ್‌ಟ್‌ ಸರಣಿಯನ್ನು ಯಶಸ್ವಿಿಯಾಗಿ ಮುಗಿಸಿ ವಿಶ್ವ ಟೆಸ್‌ಟ್‌ ಚಾಂಪಿಯನ್‌ಶಿಪ್ ಪಟ್ಟಿಿಯಲ್ಲಿ ಪ್ರಾಾಬಲ್ಯ ಮುಂದುವರಿಸುವ ಯೋಜನೆ ಹಾಕಿಕೊಂಡಿದೆ. ಭಾರತ ಹಾಗೂ ಬಾಂಗ್ಲಾಾದೇಶ ನಡುವಿನ ಟೆಸ್‌ಟ್‌ ಸರಣಿಯಲ್ಲಿ ಪಿಂಕ್ ಚೆಂಡಿನಲ್ಲಿ ನಡೆಯುವ ಹೊನಲು ಬೆಳಕಿನ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿಿದೆ. ಆದರೆ, ಇಂದಿನ ಪಂದ್ಯದಲ್ಲಿ ಉಭಯ ತಂಡಗಳು ಸಾಮಾನ್ಯವಾಗಿ ಕೆಂಪು ಚೆಂಡು ಮೂಲಕವೇ ಟೆಸ್‌ಟ್‌ ಸರಣಿ ಆರಂಭಿಸಲಿವೆ. ಟೆಸ್‌ಟ್‌ ಚಾಂಪಿಯನ್‌ಶಿಪ್ ಅಂಕಪಟ್ಟಿಿಯಲ್ಲಿ ಭಾರತ 240 ಅಂಕ ಕಲೆಹಾಕುವ ಮೂಲಕ ಅಗ್ರ ಸ್ಥಾಾನದಲ್ಲಿದೆ.

ಪ್ರವಾಸಿ ಬಾಂಗ್ಲಾಾ ವಿರುದ್ಧ ಚುಟುಕು ಸರಣಿಗೆ ವಿಶ್ರಾಾಂತಿ ಪಡೆದಿದ್ದ ನಾಯಕ ವಿರಾಟ್ ಕೊಹ್ಲಿಿ ತಂಡಕ್ಕೆೆ ಮರಳಿದ್ದಾರೆ. ಕಳೆದ ಒಂದು ತಿಂಗಳು ಹಿಂದೆ ಹರಿಣಗಳ ವಿರುದ್ಧದ ಸರಣಿಯಲ್ಲಿ ಕೊಹ್ಲಿಿ ಎರಡು ಶತಕ ಸಿಡಿಸಿದ್ದರು.
ಕಳೆದ ಸರಣಿಯಂತೆ ರೋಹಿತ್ ಶರ್ಮಾ ಹಾಗೂ ಮಯಾಂಕ ಅಗರ್ವಾಲ್ ಇನಿಂಗ್ಸ್ ಆರಂಭಿಸಲಿದ್ದು, ಈ ಜೋಡಿ ಆಫ್ರಿಿಕಾ ವಿರುದ್ಧದ ಸರಣಿಯಲ್ಲಿ 829 ರನ್ ಜತೆಯಾಟವಾಡಿತ್ತು. ಇದೀಗ, ಬಾಂಗ್ಲಾಾ ವಿರುದ್ಧವೂ ಅದೇ ಲಯ ಮುಂದುವರಿಸುವ ತುಡಿತದಲ್ಲಿದೆ.

ಉಪ ನಾಯಕ ಅಜಿಂಕ್ಯಾಾ ರಹಾನೆ ಹಾಗೂ ಚೇತೇಶ್ವರ ಪೂಜಾರ ಅವರು ಕೂಡ ಉತ್ತಮ ಲಯದಲ್ಲಿ ಇದ್ದಾರೆ. ಬಲಿಷ್ಟ ಬ್ಯಾಾಟಿಂಗ್ ಲೈನ್ ಇರುವ ಭಾರತದ ಒತ್ತಡ ಹೇರುವುದು ಬಾಂಗ್ಲಾಾ ಬೌಲರ್ಗಳಿಗೆ ಕಷ್ಟವಾಗಬಹುದು. ರಿಷಭ್ ಪಂತ್ ಬದಲು ವೃದ್ದಿಮನ್ ಸಾಹ ಅವರೇ ವಿಕೆಟ್ ಕೀಪರ್ ಜವಾಬ್ದಾಾರಿ ನಿರ್ವಹಿಸಲಿದ್ದಾರೆ.

ಎದುರಾಳಿ ಬಾಂಗ್ಲಾಾದೇಶಕ್ಕೆೆ ತವರು ನೆಲದಲ್ಲಿ ಭಾರತದ ವಿರುದ್ಧ ಕಠಿಣ ಸವಾಲು ಎದುರಾಗಲಿದೆ. ಅನುಭವಿಗಳಾದ ಶಕಿಬ್ ಅಲ್ ಹಸನ್ ಹಾಗೂ ತಮೀಮ್ ಇಕ್ಬಾಾಲ್ ಅವರ ಅನುಪಸ್ಥಿಿಯಲ್ಲಿ ಆಡಲಿದ್ದು, ಬಹುತೇಕ ಯುವ ಆಟಗಾರರಿಗೆ ಮಣೆ ಹಾಕಲಾಗಿದೆ. ಟಿ-20 ಸರಣಿಯಲ್ಲಿ ಭಾರತಕ್ಕೆೆ ಕಠಿಣ ಪೈಪೋಟಿ ನೀಡಿದ್ದ ಬಾಂಗ್ಲಾಾದೇಶ ತಂಡ ಟೆಸ್‌ಟ್‌ ಸರಣಿಯಲ್ಲಿ ಮೊಮಿನುಲ್ ಹಕ್ ಅವರ ಸಾರಥ್ಯದಲ್ಲಿ ಉತ್ತಮ ಸವಾಲು ನೀಡುವ ಯೋಜನೆಯಲ್ಲಿದೆ. ಕಳೆದ ವರ್ಷ ಮೊಮಿನುಲ್ ಹಕ್ ಅವರು 15 ಇನಿಂಗ್‌ಸ್‌‌ಗಳಲ್ಲಿ 673 ರನ್ ಗಳಿಸಿದ್ದರು. ಇದರಲ್ಲಿ ನಾಲ್ಕು ಶತಕಗಳನ್ನು ಸಿಡಿಸಿದ್ದರು.

ಬಾಂಗ್ಲಾಾ ತಂಡದಲ್ಲಿ ಅನುಭವಿ ಮುಷ್ಪಿಿಕರ್ ರಹೀಮ್ ಅವರ ಮೇಲೂ ಹೆಚ್ಚಿಿನ ಜವಾಬ್ದಾಾರಿ ಇದೆ. ಬ್ಯಾಾಟಿಂಗ್ ಹಾಗೂ ವಿಕೆಟ್ ಕೀಪಿಂಗ್ ನಿರ್ವಹಿಸುವ ಜತೆಗೆ, ನಾಯಕ ಮೊಮಿನುಲ್‌ಗೆ ಸಾಥ್ ನೀಡುವ ಹೊಣೆಗಾರಿಕೆ ಇದೆ.

ಸಂಭಾವ್ಯ ಆಟಗಾರರು
ಭಾರತ:
ರೋಹಿತ್ ಶರ್ಮಾ, ಮಯಾಂಕ್ ಅಗರ್ವಾಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿಿ (ನಾಯಕ), ಅಜಿಂಕ್ಯಾಾ ರಹಾನೆ, ವೃದ್ದಿಮನ್ ಸಾಹ (ವಿ.ಕೀ), ರವೀಂದ್ರ ಜಡೇಜಾ, ಆರ್.ಅಶ್ವಿಿನ್, ಮೊಹಮ್ಮದ್ ಶಮಿ, ಉಮೇಶ್ ಯಾದವ್, ಇಶಾಂತ್ ಶರ್ಮಾ

ಬಾಂಗ್ಲಾಾದೇಶ:
ಮೊಮಿನುಲ್ ಹಕ್ (ನಾಯಕ), ಶದ್ಮನ್ ಇಸ್ಲಾಾಮ್, ಲಿಟನ್ ದಾಸ್, ಇಮ್ರುಲ್ ಕಾಯೆಸ್, ಸೈಫ್ ಹಸನ್, ಮುಷ್ಫಿಿಕರ್ ರಹೀಮ್, (ವಿ.ಕೀ), ಮಹ್ಮೂದುಲ್ಲ, ಮೆಹ್ದಿಿ ಹಸನ್ ಮಿರಾಝ್, ತೈಜುಲ್ ಇಸ್ಲಾಾಮ್, ಮುಸ್ತಾಾಫಿಝುರ್ ರೆಹಮನ್, ಅಬು ಝಾಯೆದ್.

ಸಮಯ: ಇಂದು ಬೆಳಗ್ಗೆೆ 09:00
ಸ್ಥಳ: ಹೋಲ್ಕರ್ ಕ್ರೀಡಾಂಗಣ, ಇಂದೋರ್

ಮುಖಾಮುಖಿ ಸಾಧನೆ
ಭಾರತ 7
ಬಾಂಗ್ಲಾಾದೇಶ 0
ರದ್ದು: 2
ಒಟ್ಟು ಪಂದ್ಯಗಳು 9

ರ್ಯಾಾಕಿಂಗ್
ಭಾರತ: 1
ಬಾಂಗ್ಲಾಾದೇಶ: 9

ಸಾಮಾನ್ಯವಾಗಿ ಟೆಸ್‌ಟ್‌ ನಲ್ಲಿ ಕೆಂಪು ಚೆಂಡಿನೊಂದಿಗೆ ಆಡಿದ್ದೇವೆ. ಆದರೆ, ಪಿಂಕ್ ಚೆಂಡಿನಲ್ಲಿ ಇಂದಿಗೂ ಆಡಲೇ ಇಲ್ಲ. ಈ ಚೆಂಡಿನ ವರ್ತನೆ ಹೇಗೆ ಇರಲಿದೆ ಎಂಬ ಬಗ್ಗೆೆ ತೀವ್ರ ಕುತೂಹಲ ಇದೆ. ಹಾಗಾಗಿ, ಎರಡನೇ ಪಂದ್ಯ ನಮಗೆ ಹೊಸ ಅನುಭವ ನೀಡಲಿದೆ.
ವಿರಾಟ್ ಕೊಹ್ಲಿಿ, ಭಾರತ ತಂಡದ ನಾಯಕ

ಸ್ಟಾರ್ ಆಲ್‌ರೌಂಡರ್ ಶಕೀಬ್ ಅಲ್ ಹಸನ್, ಇಬ್ಬರು ಆಟಗಾರರಿಗೆ ಸಮ. ಶಕೀಬ್ ಹಾಗೂ ತಮೀಮ್ ಇಕ್ಬಾಾಲ್ ಅವರ ಅನುಪಸ್ಥಿಿತಿ ತಂಡಕ್ಕೆ ಹಿನ್ನಡೆ ಆಗದಂತೆ ನೋಡಿಕೊಳ್ಳುತ್ತೇವೆ. ಇವರ ಅನುಪಸ್ಥಿಿತಿಯ ಲಾಭ ಬಳಿಸಿಕೊಂಡು ಅಬ್ಬರಿಸಲು ಯುವ ಆಟಗಾರರು ಕಾತುರರಾಗಿದ್ದಾರೆ.
ಮೊಮಿನುಲ್ ಹಕ್, ಬಾಂಗ್ಲಾಾದೇಶ ನಾಯಕ

Leave a Reply

Your email address will not be published. Required fields are marked *