ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2025: 2000 ಐಪಿಎಲ್‌ ರನ್‌ ಪೂರ್ಣಗೊಳಿಸಿ ವಿಶೇಷ ದಾಖಲೆ ಬರೆದ ನಿಕೋಲಸ್‌ ಪೂರನ್‌!

Nicholas Pooran completed 2000 runs: ಕೋಲ್ಕತಾ ನೈಟ್‌ ರೈಡರ್ಸ್‌ ವಿರುದ್ದ ಸ್ಪೋಟಕ ಬ್ಯಾಟಿಂಗ್‌ ನಡೆಸುವ ಮೂಲಕ ಲಖನೌ ಸೂಪರ್‌ ಜಯಂಟ್ಸ್‌ ತಂಡದ ಬ್ಯಾಟ್ಸ್‌ಮನ್‌ ನಿಕೋಲಸ್‌ ಪೂರನ್‌, 87 ರನ್‌ಗಳನ್ನು ಸಿಡಿಸಿದರು. ಆ ಮೂಲಕ ಐಪಿಎಲ್‌ ಟೂರ್ನಿಯಲ್ಲಿ ವೇಗವಾಗಿ 2000 ರನ್‌ಗಳನ್ನು ಪೂರ್ಣಗೊಳಿಸಿದ ಎರಡನೇ ಬ್ಯಾಟ್ಸ್‌ಮನ್‌ ಎನಿಸಿಕೊಂಡರು.

IPL 2025: 2000 ಐಪಿಎಲ್‌ ರನ್‌ ಪೂರ್ಣಗೊಳಿಸಿದ ನಿಕೋಲಸ್‌ ಪೂರನ್‌!

ಐಪಿಎಲ್‌ ಟೂರ್ನಿಯಲ್ಲಿ 2000 ರನ್‌ಗಳನ್ನು ಪೂರ್ಣಗೊಳಿಸಿದ ನಿಕೋಲಸ್‌ ಪೂರನ್‌.

Profile Ramesh Kote Apr 9, 2025 10:06 AM

ಕೋಲ್ಕತಾ: ಕೋಲ್ಕತಾ ನೈಟ್‌ ರೈಡರ್ಸ್‌ ( Kolkata Knight Riders) ವಿರುದ್ದ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯ ಪಂದ್ಯದಲ್ಲಿ ಸ್ಪೋಟಕ ಬ್ಯಾಟ್‌ ಮಾಡಿದ ಲಖನೌ ಸೂಪರ್‌ ಜಯಂಟ್ಸ್‌ ಬ್ಯಾಟ್ಸ್‌ಮನ್‌ ನಿಕೋಲಸ್‌ ಪೂರನ್‌ (Nicholad Pooran) ಕೇವಲ 36 ಎಸೆತಗಳಲ್ಲಿ ಅಜೇಯ 87 ರನ್‌ಗಳನ್ನು ಬಾರಿಸಿದ್ದರು. ಆ ಮೂಲಕ ಎಲಕ್‌ಎಸ್‌ಜಿ ತಂಡದ ನಾಲ್ಕು ರನ್‌ ರೋಚಕ ಗೆಲುವಿಗೆ ನೆರವು ನೀಡಿದ್ದರು. ಅಂದ ಹಾಗೆ ತಮ್ಮ ಅರ್ಧಶತಕದ ಮೂಲಕ ನಿಕೋಲಸ್‌ ಪೂರನ್‌ ಐಪಿಎಲ್‌ ಟೂರ್ನಿಯಲ್ಲಿ ವೇಗವಾಗಿ 2000 ರನ್‌ಗಳನು ಪೂರ್ಣಗೊಳಿಸಿದ ಎರಡನೇ ಬ್ಯಾಟ್ಸ್‌ಮನ್‌ ಎನಿಸಿಕೊಂಡಿದ್ದಾರೆ.

ಕೆಕೆಆರ್‌ ವಿರುದ್ದದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ಲಖನೌ ಸೂಪರ್‌ ಜಯಂಟ್ಸ್‌ ಪರ ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದಿದ್ದ ನಿಕೋಲಸ್‌ ಪೂರನ್‌ ಸ್ಪೋಟಕ ಬ್ಯಾಟ್‌ ಮಾಡಿದ್ದರು. ಅದರಲ್ಲಿಯೂ ವಿಶೇಷವಾಗಿ ಅವರು 18ನೇ ಓವರ್‌ನಲ್ಲಿ ಆಂಡ್ರೆ ರಸೆಲ್‌ಗೆ 24 ರನ್‌ಗಳನ್ನು ಸಿಡಿಸಿದ್ದರು. ಇದರಲ್ಲಿ ಅವರು ಎರಡು ಸಿಕ್ಸರ್‌ ಹಾಗೂ ಮೂರು ಬೌಂಡರಿಗಳನ್ನು ಬಾರಿಸಿದ್ದರು. ಅಂದ ಹಾಗೆ ಐಪಿಎಲ್‌ ಟೂರ್ನಿಯಲ್ಲಿ ವೇಗವಾಗಿ 2000 ರನ್‌ಗಳನ್ನು ಪೂರ್ಣಗೊಳಿಸಿದ ಮೊದಲ ಬ್ಯಾಟ್ಸ್‌ಮನ್‌ ಎಂಬ ದಾಖಲೆ ನಿಕೋಲಸ್‌ ಪೂರನ್‌ ಅವರ ಹೆಸರಿನಲ್ಲಿದೆ.

IPL 2025: ʻಸ್ಪಿನ್ನರ್‌ಗಳಿಗೆ ನೆರವು ಸಿಕ್ಕಿಲ್ಲʼ-ಪಿಚ್‌ ಕ್ಯುರೇಟರ್‌ಗಳನ್ನು ದೂರಿದ ಅಜಿಂಕ್ಯ ರಹಾನೆ!

ಆಂಡ್ರೆ ರಸೆಲ್‌ ಅವರು ಐಪಿಎಲ್‌ ಟೂರ್ನಿಯಲ್ಲಿ 2000 ರನ್‌ಗಳನ್ನು ಪೂರ್ಣಗೊಳಿಸಲು 1120 ಎಸೆತಗಳನ್ನು ತೆಗೆದುಕೊಂಡಿದ್ದರು. ಆದರೆ, ಇವರ ವೆಸ್ಟ್‌ ಇಂಡೀಸ್‌ ಸಹ ಆಟಗಾರ ನಿಕೋಲಸ್‌ ಪೂರನ್‌ ಅವರು 1198 ಎಸೆತಗಳಲ್ಲಿ 2000 ರನ್‌ಗಳನ್ನು ಪೂರ್ಣಗೊಳಿಸಿದ್ದಾರೆ. ಆ ಮೂಲಕ ವೇಗವಾಗಿ ಐಪಿಎಲ್‌ ಟೂರ್ನಿಯಲ್ಲಿ 2000 ರನ್‌ಗಳನ್ನು ಪೂರ್ಣಗೊಳಿಸಿದ ಎರಡನೇ ಬ್ಯಾಟ್ಸ್‌ಮನ್‌ ಎನಿಸಿಕೊಂಡಿದ್ದಾರೆ ನಿಕೋಲಸ್‌ ಪೂರನ್‌.

ಇಲ್ಲಿಯತನಕ ತಮ್ಮ ಐಪಿಎಲ್‌ ವೃತ್ತಿ ಜೀವನದಲ್ಲಿ 81 ಪಂದ್ಯಗಳ 78 ಇನಿಂಗ್ಸ್‌ಗಳಿಂದ ನಿಕೋಲಸ್‌ ಪೂರನ್‌ ಅವರು 2057 ರನ್‌ಗಳನ್ನು ಪೂರ್ಣಗೊಳಿಸಿದ್ದಾರೆ. ಇದರಲ್ಲಿ ಅವರು 12 ಅರ್ಧಶತಕಗಳನ್ನು ಬಾರಿಸಿದ್ದಾರೆ. ಐಪಿಎಲ್‌ ಟೂರ್ನಿಯಲ್ಲಿ ವೇಗವಾಗಿ 2000 ರನ್‌ಗಳನ್ನು ಪೂರ್ಣಗೊಳಿಸಿದ ಭಾರತೀಯ ಆಟಗಾರರ ಪಟ್ಟಿಯಲ್ಲಿ ವೀರೇಂದ್ರ ಸೆಹ್ವಾಗ್‌ ಅಗ್ರ ಸ್ಥಾನದಲ್ಲಿದ್ದಾರೆ. ಇವರು 1211 ಎಸೆತಗಳಲ್ಲಿ 2000 ರನ್‌ಗಳನ್ನು ಪೂರೈಸಿದ್ದರು.



2025ರ ಐಪಿಎಲ್‌ ಟೂರ್ನಿಯಲ್ಲಿ ಭರ್ಜರಿ ಫಾರ್ಮ್‌ನಲ್ಲಿರುವ ನಿಕೋಲಸ್‌ ಪೂರನ್‌

ಪ್ರಸ್ತುತ ನಡೆಯುತ್ತಿರುವ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ನಿಕೋಲಸ್‌ ಪೂರನ್‌ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಇಲ್ಲಿಯತನಕ ಆಡಿದ 5 ಪಂದ್ಯಗಳಿಂದ 72ರ ಸರಾಸರಿ ಹಾಗೂ 225ರ ಸ್ಟೈಕ್‌ ರೇಟ್‌ನಲ್ಲಿ 288 ರನ್‌ಗಳನ್ನು ಬಾರಿಸಿದ್ದಾರೆ. ಇದರಲ್ಲಿ ಅವರು 24 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಆ ಮೂಲಕ ಸದ್ಯ ಅತಿ ಹೆಚ್ಚು ರನ್‌ ಗಳಿಸಿದ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ.

ಲಖನೌ ಸೂಪರ್‌ ಜಯಂಟ್ಸ್‌ ಪರ ಅತಿ ಹೆಚ್ಚು ರನ್‌ ಗಳಿಸಿದ ಎರಡನೇ ಬ್ಯಾಟ್ಸ್‌ಮನ್‌ ಎನಿಸಿಕೊಂಡಿದ್ದಾರೆ ನಿಕೋಲಸ್‌ ಪೂರನ್‌. ಇವರು ಇಲ್ಲಿಯವರೆಗೂ ಲಖನೌ ಪರ ಆಡಿದ 34 ಪಂದ್ಯಗಳಿಂದ 47.70ರ ಸರಾಸರಿ ಮತ್ತು 186ಕ್ಕೂ ಅಧಿಕ ಸ್ಟ್ರೈಕ್‌ ರೇಟ್‌ನಲ್ಲಿ 1145 ರನ್‌ಗಳನ್ನು ಬಾರಿಸಿದ್ದಾರೆ.



238 ರನ್‌ ಕಲೆ ಹಾಕಿದ್ದ ಲಖನೌ

ಮಂಗಳವಾರದ ಪಂದ್ಯದಲ್ಲಿ ಏಡೆನ್‌ ಮಾರ್ಕ್ರಮ್‌ 28 ಎಸೆತಗಳಲ್ಲಿ 47 ರನ್‌ ಸಿಡಿಸಿ ವಿಕೆಟ್‌ ಒಪ್ಪಿಸಿದ್ದರು. ಮಿಚೆಲ್‌ ಮಾರ್ಷ್‌ ಅವರು ಸ್ಪೋಟಕ ಬ್ಯಾಟ್‌ ಮಾಡಿ 48 ಎಸೆತಗಳಲ್ಲಿ 81ರನ್‌ ಸಿಡಿಸಿದ್ದರು. ಈ ಜೋಡಿ ಮುರಿಯದ ಮೊದಲನೇ ವಿಕೆಟ್‌ಗೆ 99 ರನ್‌ಗಳನ್ನು ಕಲೆ ಹಾಕಿ ಲಖನೌ ತಂಡಕ್ಕೆ ಸ್ಪೋಟಕ ಆರಂಭ ತಂದುಕೊಟ್ಟಿತ್ತು. ನಂತರ ನಿಕೋಲಸಗ್‌ ಪೂರನ್‌ ಸ್ಪೋಟಕ ಬ್ಯಾಟ್‌ ಮಾಡಿ 87 ರನ್‌ ಚಚ್ಚಿದ್ದರು ಹಾಗೂ ಮಿಚೆಲ್‌ ಮಾರ್ಷ್‌ ಜೊತೆ 71 ರನ್‌ಗಳ ಜೊತೆಯಾಟವನ್ನು ಆಡಿದ್ದರು. ಆ ಮೂಲಕ ಲಖನೌ ಸೂಪರ್‌ ಜಯಂಟ್ಸ್‌ ತನ್ನ ಪಾಲಿನ 20 ಓವರ್‌ಗಳಿಗೆ 3 ವಿಕೆಟ್‌ ನಷ್ಟಕ್ಕೆ 238 ರನ್‌ಗಳನ್ನು ದಾಖಲಿಸಿತ್ತು.