ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

CSK vs PBKS: ಸೋಲಿನ ಸುಳಿ ತಪ್ಪಿಸಲು ಚೆನ್ನೈ ಮೇಲಿದೆ ಒತ್ತಡ

ಇದುವರೆಗಿನ ಐಪಿಎಲ್‌ನಲ್ಲಿ ಪಂಜಾಬ್‌ ಕಿಂಗ್ಸ್‌ ಮತ್ತು ಚೆನ್ನೈ ಸೂಪರ್‌ ಕಿಂಗ್ಸ್‌ 31 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ಪೈಕಿ ಚೆನ್ನೈ 16 ಪಂದ್ಯ ಗೆದ್ದಿದ್ದರೆ, ಪಂಜಾಬ್‌ 15 ಪಂದ್ಯ ಜಯಿಸಿದೆ. ಹಾಲಿ ಆವೃತ್ತಿಯ ಮೊದಲ ಮುಖಾಮುಖಿಯಲ್ಲಿ ಪಂಜಾಬ್‌ ತಂಡ 18 ರನ್‌ ಅಂತರದ ಗೆಲುವು ಸಾಧಿಸಿತ್ತು.

ಸೋಲಿನ ಸುಳಿ ತಪ್ಪಿಸಲು ಚೆನ್ನೈ ಮೇಲಿದೆ ಒತ್ತಡ

Profile Abhilash BC Apr 29, 2025 11:44 AM

ಚೆನ್ನೈ: ಒಂದು ಕಾಲದಲ್ಲಿ ಬಲಿಷ್ಠ ತಂಡವಾಗಿದ್ದ ಚೆನ್ನೈ ಸೂಪರ್‌ ಕಿಂಗ್ಸ್‌ (CSK) 2025ರ ಐಪಿಎಲ್‌ (IPL 2025) ನಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿ ನಿರ್ಗಮನದ ಹಾದಿಯಲ್ಲಿದೆ. ಮಹೇಂದ್ರ ಸಿಂಗ್‌ ಧೋನಿ (Ms Dhoni) ನಾಯಕನಾಗಿ ಮರಳಿದರೂ ತಂಡ ಸೋಲಿನ ದವಡೆಯಿಂದ ಪಾರಾಗಿಲ್ಲ. ಚೆನ್ನೈ 9 ಪಂದ್ಯದಲ್ಲಿ ಕೇವಲ 2 ಪಂದ್ಯವನ್ನಷ್ಟೇ ಗೆದ್ದಿದ್ದು, ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಇದರಲ್ಲಿ ಸತತ 4 ಸೋಲು ತವರಿನಲ್ಲಿ ಎದುರಾಗಿದೆ. ಇದೀಗ ಬುಧವಾರ ನಡೆಯುವ ತವರಿನ ಪಂದ್ಯದಲ್ಲಿ ಚೆನ್ನೈ ತಂಡ ಬಲಿಷ್ಠ ಪಂಜಾಬ್‌ ಕಿಂಗ್ಸ್‌(CSK vs PBKS) ವಿರುದ್ಧ ಸೆಣಸಾಟ ನಡೆಸಲಿದೆ. ಸೋತರೆ ಟೂರ್ನಿಯಿಂದ ಅಧಿಕೃತವಾಗಿ ಹೊರಬೀಳಲಿದೆ.

ಪ್ಲೇ ಆಫ್‌ಗೆ ತೇರ್ಗಡೆ ಆಗುವ ಕ್ಷೀಣ ಅವಕಾಶ ಹೊಂದಿರುವ ಚೆನ್ನೈಗೆ ಪಂಜಾಬ್‌ ವಿರುದ್ಧ ಸೇರಿ ಮುಂದಿನ ಎಲ್ಲ ಪಂದ್ಯಗಳಲ್ಲಿ ದೊಡ್ಡ ಅಂತರದ ಗೆಲುವು ಅನಿವಾರ್ಯವಾಗಿದೆ. ಜತೆಗೆ ಇತರ ತಂಡಗಳ ಫಲಿತಾಂಶ ಕೂಡ ಮುಖ್ಯವಾಗಿದೆ. ಚೆನ್ನೈ ತಂಡ ಈ ಬಾರಿ ಬ್ಯಾಟಿಂಗ್‌, ಬೌಲಿಂಗ್‌ ಎಲ್ಲ ವಿಭಾಗದಲ್ಲಿಯೂ ವಿಫಲವಾಗಿದೆ. ಯಾರೊಬ್ಬರು ಸ್ಥಿರ ಪ್ರದರ್ಶನ ತೋರುತ್ತಿಲ್ಲ. ತಂಡದ ಮುಖ್ಯ ಕೋಚ್‌ ಸ್ಟೀಫನ್‌ ಪ್ಲೆಮಿಂಗ್‌ ಕೂಡ ಹರಾಜಿನಲ್ಲಿ ತಾವು ಎಡವಿದೆವು ಎಂದು ಹೇಳುವ ಮೂಲಕ ಆಟಗಾರರ ಪ್ರದರ್ಶನದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಪಂಜಾಬ್‌ ಬಲಿಷ್ಠ

ದೇಶೀಯ ಆಟಗಾರ ಪ್ರದರ್ಶನವನ್ನೇ ನೆಚ್ಚಿಕೊಂಡಿರುವ ಪಂಜಾಬ್‌ ಕಿಂಗ್ಸ್‌ ತಂಡ ಬ್ಯಾಟಿಂಗ್‌ ಮತ್ತು ಬೌಲಿಂಗ್‌ನಲ್ಲಿ ಬಲಿಷ್ಠಬವಾಗಿದೆ. ವಿದೇಶಿ ಆಟಗಾರರಾದ ಮ್ಯಾಕ್ಸ್‌ವೆಲ್‌, ಮಾರ್ಕಸ್‌ ಸ್ಟೋಯಿನಿಸ್‌ ಫಾರ್ಮ್‌ ಕಳೆದುಕೊಂಡರೂ ಚಿಂತೆ ಇಲ್ಲದೆ ಪಂಜಾಬ್‌ ಪಂದ್ಯ ಗೆಲ್ಲುತ್ತಿದೆ. ಇದಕ್ಕೆ ಕಾರಣ ಆರಂಭಿಕ ಯುವ ಆಟಗಾರರಾದ ಪ್ರಿಯಾಂಶ್ ಆರ್ಯ ಮತ್ತು ಪ್ರಭಸಿಮ್ರನ್ ಸಿಂಗ್ ಜೋಡಿಯ ಉತ್ತಮ ಆರಂಭ ಮತ್ತು ಮಧ್ಯಮ ಕ್ರಮಾಂಕದಲ್ಲಿ ನಾಯಕ ಶ್ರೇಯಸ್‌ ಅಯ್ಯರ್‌, ನೆಹಾಲ್ ವಧೇರಾ ಮತ್ತು ಶಶಾಂಕ್ ಸಿಂಗ್ ಜವಾಬ್ದಾರಿಯುತ ಬ್ಯಾಟಿಂಗ್‌. ಬೌಲಿಂಗ್‌ನಲ್ಲಿ ಯಜುವೇಂದ್ರ ಚಹಲ್‌, ಅರ್ಶ್‌ದೀಪ್‌ ಸಿಂಗ್‌ ಉತ್ತಮ ಲಯದಲ್ಲಿದ್ದಾರೆ. ಹೀಗಾಗಿ ಪಂಜಾಬ್‌ ಗೆಲುವಿನ ಫೇವರಿಟ್‌ ಎನಿಸಿಕೊಂಡಿದೆ.



ಮುಖಾಮುಖಿ

ಇದುವರೆಗಿನ ಐಪಿಎಲ್‌ನಲ್ಲಿ ಪಂಜಾಬ್‌ ಕಿಂಗ್ಸ್‌ ಮತ್ತು ಚೆನ್ನೈ ಸೂಪರ್‌ ಕಿಂಗ್ಸ್‌ 31 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ಪೈಕಿ ಚೆನ್ನೈ 16 ಪಂದ್ಯ ಗೆದ್ದಿದ್ದರೆ, ಪಂಜಾಬ್‌ 15 ಪಂದ್ಯ ಜಯಿಸಿದೆ. ಹಾಲಿ ಆವೃತ್ತಿಯ ಮೊದಲ ಮುಖಾಮುಖಿಯಲ್ಲಿ ಪಂಜಾಬ್‌ ತಂಡ 18 ರನ್‌ ಅಂತರದ ಗೆಲುವು ಸಾಧಿಸಿತ್ತು.

ಸಂಭಾವ್ಯ ತಂಡಗಳು

ಪಂಜಾಬ್‌ ಕಿಂಗ್ಸ್‌: ಪ್ರಿಯಾಂಶ್ ಆರ್ಯ, ಪ್ರಭುಸಿಮ್ರಾನ್ ಸಿಂಗ್, ಶ್ರೇಯಸ್ ಅಯ್ಯರ್ (ನಾಯಕ), ಜೋಶ್ ಇಂಗ್ಲಿಸ್ (ವಿ.ಕೀ.), ನೆಹಾಲ್ ವಧೇರಾ, ಶಶಾಂಕ್ ಸಿಂಗ್, ಗ್ಲೆನ್ ಮ್ಯಾಕ್ಸ್‌ವೆಲ್, ಅಜ್ಮತುಲ್ಲಾ ಒಮರ್ಜಾಯ್, ಮಾರ್ಕೊ ಜಾನ್ಸೆನ್, ಅರ್ಶ್‌ದೀಪ್ ಸಿಂಗ್, ಯುಜ್ವೇಂದ್ರ ಚಾಹಲ್.

ಚೆನ್ನೈ ಸೂಪರ್‌ ಕಿಂಗ್ಸ್‌: ಶೇಕ್ ರಶೀದ್, ಆಯುಷ್ ಮ್ಹಾತ್ರೆ, ದೀಪಕ್ ಹೂಡಾ, ಸ್ಯಾಮ್ ಕರ್ರಾನ್, ರವೀಂದ್ರ ಜಡೇಜಾ, ಡೆವಾಲ್ಡ್ ಬ್ರೆವಿಸ್, ಶಿವಂ ದುಬೆ, ಎಂಎಸ್ ಧೋನಿ (ನಾಯಕ), ನೂರ್ ಅಹ್ಮದ್, ಖಲೀಲ್ ಅಹ್ಮದ್, ಮಥೀಶ ಪತಿರಾನ.

ಇದನ್ನೂ ಓದಿ IPL 2025: ಸಚಿನ್‌ ತೆಂಡೂಲ್ಕರ್‌ ಐಪಿಎಲ್‌ ದಾಖಲೆ ಮುರಿದ ಜೈಸ್ವಾಲ್‌