Thursday, 19th September 2024

ಆಂಬಟಿ ರಾಯುಡು 71: ಚೆನ್ನೈ ಸೂಪರ್ ಕಿಂಗ್ಸ್’ಗೆ ಐದು ವಿಕೆಟ್ ಗೆಲುವು

ಅಬುದಾಬಿ: ಶೇಖ್ ಜಾಯೆದ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್ ನ ಮೊದಲ ಪಂದ್ಯದಲ್ಲಿ ರೋಹಿತ್ ಶರ್ಮಾ ನೇತ್ರತ್ವದ ಮುಂಬೈ ಇಂಡಿಯನ್ಸ್ ನೀಡಿರುವ 162 ರನ್ ಗಳ ಗುರಿಯನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡ ಐದು ವಿಕೆಟ್ ನಷ್ಟದಲ್ಲಿ ಗೆಲುವು ಸಾಧಿಸಿತು.

ತಂಡದ ಮೊತ್ತ ಆರು ಆಗುವಷ್ಟರಲ್ಲಿ ಶೇನ್ ವಾಟ್ಸನ್ ಹಾಗೂ ಮುರಳಿ ವಿಜಯ್ ರನ್ನು ಕಳೆದುಕೊಂಡಿತು. ಬಳಿಕ ಫಾಪ್ ಡು ಪ್ಲೆಸಿಸ್ ಹಾಗೂ ಆಂಬಟಿ ರಾಯುಡು ತಂಡಕ್ಕೆ ಆಸರೆಯಾದರು. ಇವರಿಬ್ಬರು ಅರ್ಧಶತಕ ಸಿಡಿಸಿ, ತಂಡದ ಗೆಲುವಿನ ರೂವಾರಿಯಾದರು. ಫಾಫ್ ಡು ಪ್ಲೆಸಿಸ್ 58 ಅಜೇಯರಾಗುಳಿದರೆ, ಆಂಬಟಿ ರಾಯುಡು 71 ರನ್ ಸಿಡಿಸಿ ರಾಹುಲ್ ಚಹರ್’ಗೆ ಕಾಟ್ ಅಂಡ ಬೌಲ್ಡ್ ಆದರು. ಅಂತಿಮವಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಐದು ವಿಕೆಟ್ ನಷ್ಟದಲ್ಲಿ ಗೆಲುವು ಸಾಧಿಸಿತು.

ಮುಂಬೈ ಇಂಡಿಯನ್ಸ್ ಪರ ಐವರು ಬೌಲರುಗಳು ತಲಾ ಒಂದು ವಿಕೆಟ್ ಕಿತ್ತರು. ಆಂಬಟಿ ರಾಯುಡು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಇದಕ್ಕೂ ಮುನ್ನ ಟಾಸ್‌ ಸೋತು ಬ್ಯಾಟಿಂಗಿಗೆ ಇಳಿದ ಮುಂಬೈ ಇಂಡಿಯನ್ಸ್ ಪರ ಯಾರೂ ಅರ್ಧಶತಕ ಬಾರಿಸಲಿಲ್ಲ. ಸ್ಫೋಟಕ ಆಟಗಾರ ಸೌರಭ್ ತಿವಾರಿ ಮಾತ್ರ ಅತ್ಯಧಿಕ ೪೨ ರನ್ ಗಳಿಸಿದರು. ಲುಂಗಿ ಎನ್‌ಜಿಡಿ ಮೂರು ವಿಕೆಟ್ ಕಿತ್ತರು.

Leave a Reply

Your email address will not be published. Required fields are marked *